ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಚತುರ್ದಶಿ ತಿಥಿ, ಬುಧವಾರ, ಜನವರಿ 27, 2021. ಪುನರ್ವಸು ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 12.28 ರಿಂದ ಇಂದು ಮಧ್ಯಾಹ್ನ 1.52. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49.
ಸೂರ್ಯಾಸ್ತ: ಸಂಜೆ 6.8
ತಾ.27-01-2021 ರ ಬುಧವಾರದ ರಾಶಿಭವಿಷ್ಯ
ಮೇಷ: ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ. ಒಳ್ಳೆಯ ಸ್ವಭಾವ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ. ಆಸಕ್ತಿಗೆ ತಕ್ಕಂತೆ ಅವಕಾಶಗಳು ದೊರಕುವವು. ಶುಭ ಸಂಖ್ಯೆ: 6
ವೃಷಭ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 7
ಮಿಥುನ: ದೀರ್ಘಕಾಲದ ಸಮಸ್ಯಗಳಿಗೆ ಪರಿಹಾರ ದೊರೆಯುವುದು. ಕೋರ್ಟ್ನಲ್ಲಿ ಇರುವ ನ್ಯಾಯ ಬಗೆಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವುದು. ಶುಭ ಸಂಖ್ಯೆ: 4
ಕಟಕ: ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು. ಶುಭ ಸಂಖ್ಯೆ: 2
ಸಿಂಹ: ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇರಲಿ. ಶುಭ ಸಂಖ್ಯೆ: 1
ಕನ್ಯಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 6
ತುಲಾ: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 3
ವೃಶ್ಚಿಕ: ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬುದ್ದಿಯಿಂದ ತಾಳ್ಮೆಕಳೆದುಕೊಳ್ಳದೇ ಮುಂದುವರೆಯಿರಿ. ಶುಭ ಸಂಖ್ಯೆ: 9
ಧನು: ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಶುಭ ಸಂಖ್ಯೆ: 5
ಮಕರ: ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ನೆಮ್ಮದಿಯ ವಾತಾವರಣ ಇರುವುದು. ಶುಭ ಸಂಖ್ಯೆ: 7
ಕುಂಭ: ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಶುಭ ಸಂಖ್ಯೆ: 2
ಮೀನ: ವಿಶೇಷ ರೀತಿಯ ಕಾರ್ಯ ಒದಗಿ ಬಂದು ಸಂತಸ ಉಂಟಾಗುತ್ತದೆ. ಸ್ಥಾನಮಾನಗಳಿಗೂ ಕೊರತೆ ಇಲ್ಲ. ವಿಶೇಷ ವಸ್ತು ಸಂಗ್ರಹ. ಅನಾರೋಗ್ಯ ತೋರಿ ಬಂದು ಕಿರಿಕಿರಿ ಎನಿಸಬಹುದು. ಶುಭ ಸಂಖ್ಯೆ: 8
ಡಾ. ಬಸವರಾಜ್ ಗುರೂಜಿ