ದೇವಸ್ಥಾನ ಮುಚ್ಚಿದ್ರೂ ಬಾಗಿಲ ಬಳಿಯೇ ಭಕ್ತರ ಪೂಜೆ.. ಏಕೆ?
ಕಲಬುರಗಿ: ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಶರಣಬಸವೇಶ್ವರ ದೇಗುಲ ಬಳಿ ಜನಜಂಗುಳಿ ಕಂಡು ಬಂದಿದೆ. ಜನ ಅಂತರವನ್ನು ಮರೆತು ದೇಗುಲದ ಮುಂದೆ ಜಮಾಹಿಸಿದ್ದಾರೆ. ಇಂದು ಶ್ರಾವಣ ಸೋಮವಾರ ಹೀಗಾಗಿ ದೇವರ ದರ್ಶನ ಪಡೆಯಲು ನೂರಾರು ಜನ ಸೇರಿದ್ದಾರೆ. ಆದರೆ ಕೊರೊನಾ ಭೀತಿಯಿಂದಾಗಿ ಇನ್ನು ದೇಗುಲ ಮುಚ್ಚಿದೆ. ಆದರೂ ಇಲ್ಲಿನ ಜನ ಬಾಗಿಲು ಬಳಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಕೊರೊನಾ ಭೀತಿ ನಡುವೆಯೇ ಸಂಪೂರ್ಣ ನಿರ್ಲಕ್ಷ್ಯವಹಿಸುತ್ತಿದ್ದಾರೆ. ದೇವಾಲಯದ ಬಾಗಿಲ ಬಳಿ ನೂರಾರು ಜನರು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. […]

ಕಲಬುರಗಿ: ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಶರಣಬಸವೇಶ್ವರ ದೇಗುಲ ಬಳಿ ಜನಜಂಗುಳಿ ಕಂಡು ಬಂದಿದೆ. ಜನ ಅಂತರವನ್ನು ಮರೆತು ದೇಗುಲದ ಮುಂದೆ ಜಮಾಹಿಸಿದ್ದಾರೆ.
ಇಂದು ಶ್ರಾವಣ ಸೋಮವಾರ ಹೀಗಾಗಿ ದೇವರ ದರ್ಶನ ಪಡೆಯಲು ನೂರಾರು ಜನ ಸೇರಿದ್ದಾರೆ. ಆದರೆ ಕೊರೊನಾ ಭೀತಿಯಿಂದಾಗಿ ಇನ್ನು ದೇಗುಲ ಮುಚ್ಚಿದೆ. ಆದರೂ ಇಲ್ಲಿನ ಜನ ಬಾಗಿಲು ಬಳಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ.
ಕೊರೊನಾ ಭೀತಿ ನಡುವೆಯೇ ಸಂಪೂರ್ಣ ನಿರ್ಲಕ್ಷ್ಯವಹಿಸುತ್ತಿದ್ದಾರೆ. ದೇವಾಲಯದ ಬಾಗಿಲ ಬಳಿ ನೂರಾರು ಜನರು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಈ ವೇಳೆ ಭಕ್ತರು ದೈಹಿಕ ಅಂತರ, ಮಾಸ್ಕ್ ಮರೆತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಪುನಸ್ಕಾರದಿಂದ ಸಂಭ್ರಮಿಸುತ್ತಿದ್ದಾರೆ.

