Budget 2021 | ಕೊರೊನಾ ಕಾಲದಲ್ಲಿ ಜನರ ನೆರವಿಗೆ ಬಂದ ಯೋಜನೆಗಳಿವು

ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ದೇಶದಲ್ಲಿನ ಜನರ ಬಳಲಾಟಕ್ಕೆ ಸರ್ಕಾರ ಕೊರೊನಾ ಪ್ರಾಕೇಜ್​ಗಳನ್ನು ನೀಡಲಾರಂಭಿಸಿತು. ಇದು ಎಷ್ಟರ ಮಟ್ಟಿಗೆ ಸಹಾಯಕವಾಗಿದೆ. ವಲಸೆ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು? ಸ್ವಯಂ ಉದ್ಯೋಗದಲ್ಲಿ ಜನರು ಹೇಗೆ ತೊಡಗಿಕೊಂಡಿದ್ದರು? ಪ್ರವಾಸೋದ್ಯಮ ಹಾಗೂ ಹೋಟೆಲ್​ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದವರ ಪರಿಸ್ಥಿತಿ ಏನಾಗಿತ್ತು?

Budget 2021 | ಕೊರೊನಾ ಕಾಲದಲ್ಲಿ ಜನರ ನೆರವಿಗೆ ಬಂದ ಯೋಜನೆಗಳಿವು
ತಮ್ಮ ಊರುಗಳಿಗೆ ಹಿಂದಿರುಗಲು ಕಾದಿರುವ ವಲಸೆ ಕಾರ್ಮಿಕರು
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 29, 2021 | 12:06 PM

Covid 19 ಸಾಂಕ್ರಾಮಿಕ ರೋಗದ ಭೀತಿ ದೇಶವನ್ನು ಆವರಿಸಿದ್ದಾಗ ಕೇಂದ್ರ ಸರ್ಕಾರ ಹಲವು ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸಿತ್ತು. ಕೊರೊನಾ ಪ್ಯಾಕೇಜ್​ ರೂಪದಲ್ಲಿ ಜನರಿಗೆ ತುರ್ತು ನೆರವು ಲಭಿಸಿ. ಸರ್ಕಾರ ಘೋಷಿಸಿದ ಕೊರೊನಾ ಪ್ಯಾಕೇಜ್​ಗಳನ್ನು ನೆನಪಿಸುವ ಪ್ರಯತ್ನ ಇಲ್ಲಿದೆ.

ಸರ್ಕಾರ ಕೊಟ್ಟ ಕೊರೊನಾ ಪ್ಯಾಕೇಜ್ ಮಾಹಿತಿ – ಬಡವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ₹ 1.7 ಲಕ್ಷ ಕೋಟಿ ಮೊತ್ತದ ಪ್ಯಾಕೆಜ್ ಘೋಷಿಸಿತ್ತು. ನೇರ ನಗದು ವರ್ಗಾವಣೆ ಮತ್ತು ಆಹಾರ ಪೂರೈಕೆಗೆ ಈ ಮೊತ್ತ ಬಳಸುವ ಉದ್ದೇಶ ಹೊಂದಿತ್ತು.

– ನರ್ಸ್​ಗಳು, ಸಫಾಯಿ ಕರ್ಮಚಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ₹ 50 ಲಕ್ಷ ಆರೊಗ್ಯವಿಮೆ ಘೋಷಿಸಲಾಯಿತು.

– ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 80 ಕೋಟಿ ಪಡಿತರ ಚೀಟಿದಾರರಿಗೆ 5 ಕೆ.ಜಿ ಗೋಧಿ ಹಾಗೂ ಅಕ್ಕಿ 3 ತಿಂಗಳವರೆಗೆ ನೀಡಲಾಗಿದೆ.

– ಜನಧನ ಖಾತೆಯನ್ನು ಹೊಂದಿರುವ 20 ಕೋಟಿ ಮಹಿಳೆಯರಿಗೆ ತಿಂಗಳಿಗೆ ₹ 500 ನೀಡಲಾಯಿತು.

– ಉಜ್ವಲಾ ಯೋಜನೆಯಡಿಯಲ್ಲಿ 3 ತಿಂಗಳು ಉಚಿತ ಅಡುಗೆ ಅನಿಲ ಪೂರೈಕೆಯನ್ನು 8.3 ಕೋಟಿ ಜನರಿಗೆ ತಲುಪಿಸಲಾಯಿತು.

– ನಗರಗಳಿಂದ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದ ಹಿನ್ನೆಲೆಯಲ್ಲಿ ನರೇಗಾ ಯೋಜನೆಗೆ ಹೆಚ್ಚು ಒತ್ತು ನೀಡುವ ಮೂಲಕ ಅವರಿಗೆ ಕೆಲಸ ಕೊಡಿಸಲು ₹ 202 ಕೋಟಿ ಮಂಜೂರು ಮಾಡಲಾಯಿತು.

– ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 6000 ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಯಿತು.

– ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ತಿಂಗಳಿಗೆ ₹ 1000ದಂತೆ 3 ತಿಂಗಳು ಹೆಚ್ಚುವರಿ ಪಿಂಚಣಿ ನೀಡಲಾಯಿತು.

– 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿನ ಉದ್ಯೋಗಿಗಳು ತಮ್ಮ ಇಪಿಎಫ್​ನಲ್ಲಿ ಶೇ 75 ರಷ್ಟು ಅಥವಾ ₹ 1 ಲಕ್ಷದವರೆಗಿನ ಮೊತ್ತ ಹಿಂಪಡೆಯಲು ಅವಕಾಶ ಕಲ್ಪಿಸಲಾಯಿತು.

– ಕಾರ್ಮಿಕ ಕಲ್ಯಾಣ ನಿಧಿಯ ಮೂಲಕ ₹ 31,000 ಕೋಟಿಯಷ್ಟು ಮೊತ್ತವನ್ನು 3.5 ಕೋಟಿ ಕಟ್ಟಡ ಕಾರ್ಮಿಕರಿಗೆ ಮತ್ತು ಗಣಿ ಕಾರ್ಮಿಕರ ಅನುಕೂಲಕ್ಕೆ ಬಳಸಲಾಯಿತು.

Budget 2021 ನಿರೀಕ್ಷೆ | ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ