ತುಮಕೂರು: ಕ್ಷುಲ್ಲಕ ಕಾರಣಕ್ಕೆ ಮಾಜಿ ಉಪಮೇಯರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮೆಳೆಕೋಟೆಯಲ್ಲಿ ನಡೆದಿದೆ.
ತಡರಾತ್ರಿಯಾದರೂ ಅನಗತ್ಯವಾಗಿ ಓಡಾಡುತ್ತ ಜನರಿಗೆ ಕಿರಿಕಿರಿ ಮಾಡುತಿದ್ದ ಯುವಕರ ಗುಂಪನ್ನು ತಡೆದು ಮಾಜಿ ಉಪಮೇಯರ್ ವೆಂಕಟೇಶ್ ಪ್ರಶ್ನಿಸಿದ್ದರು. ಈ ವೇಳೆ ಕೋಪಗೊಂಡ ಯುವಕರ ಗುಂಪು ಆ ಕ್ಷಣ ಸುಮ್ಮನಾಗಿ ಮನೆಗೆ ಹೋದಂತೆ ನಟಿಸಿ ಮಚ್ಚು ತಂದು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ವೇಳೆ ವೆಂಕಟೇಶ್ ತಲೆಗೆ ಗಾಯಗಳಾಗಿವೆ. ಗಾಯಗೊಂಡ ವೆಂಕಟೇಶ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ತಿಲಕ್ ಪಾಕ್೯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.