ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕುಟುಂಬಕ್ಕೆ ಡಬಲ್​ ’Shock’.. ಭುಗಿಲೆದ್ದ ಗ್ರಾಮಸ್ಥರ ಆಕ್ರೋಶ

ಗದಗ: ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಸಾವಿನ ಸುದ್ದಿ ಕೇಳಿ ಯುವಕನ ಚಿಕ್ಕಪ್ಪ ಸಹ ಮೃತಪಟ್ಟಿರುವ ಮನಕಲುಕುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಸ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ತಗಲಿ 29 ವರ್ಷದ ಯುವಕ ಪ್ರವೀಣ್ ಮೃತಪಟ್ಟಿದ್ದನು. ಇತ್ತ ಪ್ರವೀಣ್ ಸಾವಿನ ಸುದ್ದಿ ಕೇಳಿದ ಆತನ ಚಿಕ್ಕಪ್ಪ ಕುಬೇರಪ್ಪ(60) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಪ್ರವಾಹದಿಂದಾಗಿ ಗ್ರಾಮಸ್ಥರು ಹೊಸ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಹೊಸ ಗಾಡಗೋಳಿ ಗ್ರಾಮಕ್ಕೆ ಜಿಲ್ಲಾಡಳಿತವು ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ. ಹೀಗಾಗಿ, […]

ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕುಟುಂಬಕ್ಕೆ ಡಬಲ್​ ’Shock’.. ಭುಗಿಲೆದ್ದ ಗ್ರಾಮಸ್ಥರ ಆಕ್ರೋಶ
Follow us
ಆಯೇಷಾ ಬಾನು
| Updated By: KUSHAL V

Updated on: Sep 20, 2020 | 11:45 AM

ಗದಗ: ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಸಾವಿನ ಸುದ್ದಿ ಕೇಳಿ ಯುವಕನ ಚಿಕ್ಕಪ್ಪ ಸಹ ಮೃತಪಟ್ಟಿರುವ ಮನಕಲುಕುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಸ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ತಗಲಿ 29 ವರ್ಷದ ಯುವಕ ಪ್ರವೀಣ್ ಮೃತಪಟ್ಟಿದ್ದನು. ಇತ್ತ ಪ್ರವೀಣ್ ಸಾವಿನ ಸುದ್ದಿ ಕೇಳಿದ ಆತನ ಚಿಕ್ಕಪ್ಪ ಕುಬೇರಪ್ಪ(60) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಪ್ರವಾಹದಿಂದಾಗಿ ಗ್ರಾಮಸ್ಥರು ಹೊಸ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಹೊಸ ಗಾಡಗೋಳಿ ಗ್ರಾಮಕ್ಕೆ ಜಿಲ್ಲಾಡಳಿತವು ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ. ಹೀಗಾಗಿ, ಈ ವಿದ್ಯುತ್​ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.