Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 27ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 27ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 27ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮನೆಯಲ್ಲಿ ಆಗುವಂತಹ ಕೆಲವು ಬೆಳವಣಿಗಗಳು, ಕುಟುಂಬ ಸದಸ್ಯರ ಮಾತಿನಿಂದ ನಿಮ್ಮ ಮನಸ್ಸಿಗೆ ಬೇಸರ ಆಗಬಹುದು. ನೀವು ಯಾವ ಕೆಲಸವನ್ನು ಸದ್ಯಕ್ಕೆ ಬೇಡ ಅಂದುಕೊಂಡಿರುತ್ತೀರೋ ಅದನ್ನೇ ಮಾಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ನಿಮ್ಮಲ್ಲಿ ಕೆಲವರಿಗೆ ಚೀಟಿ, ಹಣಕಾಸು ವ್ಯವಹಾರದಲ್ಲಿ ಮನಸ್ತಾಪಗಳು ಎದುರಾಗಬಹುದು. ನಿಮ್ಮದಲ್ಲದ ತಪ್ಪಿಗೆ ನಿಂದೆ, ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಈ ದಿನ ದೇವರು- ಭಕ್ತಿ, ಅಧ್ಯಾತ್ಮದ ವಿಚಾರದಲ್ಲಿ ನಂಬಿಕೆ ಕಡಿಮೆ ಆಗಬಹುದು. ಅಥವಾ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಲಿದೆ. ಇತರರ ಮೇಲೆ ತುಂಬ ನಂಬಿಕೆಯಿಟ್ಟು ಮಾಡಿದ ಕೆಲಸದಿಂದಾಗಿ ನಷ್ಟ ಅನುಭವಿಸುವಂತಾಗುತ್ತದೆ. ವ್ಯಾಪಾರ- ವ್ಯವಹಾರ ಮಾಡುವಂಥವರು ಈ ಹಿಂದೆ ಮಾಡಿದ್ದ ಹೂಡಿಕೆಯಲ್ಲಿ ನಷ್ಟ ಅನುಭವಿಸಿ, ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಮನಸಿಗೆ ಬೇಸರ ಆಗುವಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇತರರಿಗಾಗಿ ಬಹಳ ಶ್ರಮಪಟ್ಟು, ಕೈಯಿಂದ ಹಣ ಹಾಕಿ ಕೆಲಸ ಮಾಡಿಕೊಟ್ಟ ಮೇಲೂ ನೀವು ಏನು ಮಾಡಿಕೊಟ್ಟಿಲ್ಲವೇನೋ ಎಂಬ ಧಾಟಿಯಲ್ಲಿ ಜನರು ವರ್ತಿಸಲಿದ್ದಾರೆ. ಮಾಂಸಾಹಾರ ಸೇವನೆ ಮಾಡುವಂಥವರು ಆಹಾರ ಸೇವನೆ ಬಗ್ಗೆ ಬಹಳ ಎಚ್ಚರಿಕೆಯನ್ನು ವಹಿಸುವುದು ಮುಖ್ಯ. ಇಲ್ಲದಿದ್ದರೆ ಫುಡ್ ಪಾಯಿಸನ್ ನಿಂದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ವೈದ್ಯರಾಗಿ ವೃತ್ತಿಯನ್ನು ಮಾಡುತ್ತಿರುವವರು ಸ್ವಂತ ಆಸ್ಪತ್ರೆ ಅಥವಾ ಕ್ಲಿನಿಕ್ ತೆರೆಯುವ ಬಗ್ಗೆ ತೀರ್ಮಾನವನ್ನು ಮಾಡಲಿದ್ದೀರಿ. ಹೊಸದಾಗಿ ಪರಿಚಯ ಆಗುವವರ ಬಣ್ಣದ ಮಾತಿಗೆ ಮರುಳಾಗಿ, ಕೈಯಿಂದ ಹಣ ಕಳೆದುಕೊಳ್ಳಬಹುದು. ಅಥವಾ ನಿಮ್ಮ ಹೆಸರಿಗೆ ಅಥವಾ ಇಮೇಜಿಗೆ ಮಸಿ ಬಳಿಯುವಂಥ ಪ್ರಯತ್ನಗಳಾಗಬಹುದು, ಜಾಗ್ರತೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ದೇವತಾ ಆರಾಧನೆ, ದೇವತಾ ಕಾರ್ಯಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂಥ ಯೋಗ ಕಂಡುಬರುತ್ತಿದೆ. ಶುಭ ಕಾರ್ಯಗಳು, ಅಂದರೆ ಮದುವೆ, ಗೃಹಪ್ರವೇಶ ಮೊದಲಾದವುಗಳಿಗೆ ನೀವು ಓಡಾಟ ಮಾಡಬೇಕಾಗಬಹುದು ಎಂಬುದು ನಿಮಗೆ ತಿಳಿದುಬರಲಿದೆ. ಕುಟುಂಬದಲ್ಲಿ ನಿಮ್ಮ ನಿರ್ಧಾರಗಳಿಗೆ ಬೆಂಬಲ ದೊರೆಯಲಿದೆ. ನೀವು ಈಗಾಗಲೇ ಪ್ರೀತಿ-ಪ್ರೇಮದಲ್ಲಿ ಇದ್ದು, ಈ ವಿಚಾರವನ್ನು ಮನೆಯಲ್ಲಿ ಪ್ರಸ್ತಾವ ಮಾಡಬೇಕು ಎಂದಿದ್ದಲ್ಲಿ ಅದಕ್ಕೆ ಬೇಕಾದ ವಾತಾವರಣ ಈ ದಿನ ನಿರ್ಮಾಣ ಆಗಲಿದೆ. ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಿಜೊಳ್ಳಬೇಕು ಎಂದುಕೊಂಡು, ಅಂಥ ಆಸ್ತಿಯನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ಅಂಥದ್ದು ದೊರೆಯುವ ಸಾಧ್ಯತೆಗಳಿವೆ. ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅವರಿಗೆ ಹಣಕಾಸಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಸಂಗಾತಿಯ ಕಡೆ ಸಂಬಂಧಿಕರು ಕೆಲವು ವ್ಯವಹಾರದ ಪ್ರಸ್ತಾವಗಳನ್ನು ತರುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಯವಾಗಿ ಮಾಡಿ ಮುಗಿಸಿಕೊಂಡು ಬಿಡೋಣ ಅಂದುಕೊಂಡ ಕೆಲಸ ಈ ದಿನ ಎಲ್ಲರಿಗೂ ತಿಳಿದು ಸಮಸ್ಯೆ ಆಗುವ ಸಾಧ್ಯತೆ ಇದೆ. ಪದೇ ಪದೇ ಅನಿಶ್ಚಿತತೆಯನ್ನು ಕಾಣಲಿದ್ದೀರಿ. ಹೆಚ್ಚೇನು ಖರ್ಚಾಗಲಾರದು, ಸಲೀಸಾಗಿ ಮಾಡಿಕೊಂಡು ಬಿಡೋಣ ಅಂದುಕೊಂಡಿರುತ್ತೀರಿ. ಅಂಥದ್ದಕ್ಕಾಗಿ ತುಂಬಾ ದೊಡ್ಡ ಮೊತ್ತವನ್ನು ನೀಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೀರಿ ಎಂದಾದರೆ ಈ ದಿನ ಸಾಧ್ಯವಾದಷ್ಟು ಅಂಥದ್ದರಿಂದ ದೂರವಿದ್ದರೆ ಕ್ಷೇಮ. ನಿಮ್ಮಲ್ಲಿ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಹ ಯೋಗ ಇದೆ. ಸಣ್ಣಪುಟ್ಟ ವ್ಯಾಜ್ಯ ಅಥವಾ ಭಿನ್ನಾಭಿಪ್ರಾಯಗಳು ಕಂಡುಬಂದಲ್ಲಿ ಅದನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ನಿಮಗಿಂತ ಸಣ್ಣ ವಯಸ್ಸಿನವರ ಜೊತೆ ಮಾತನಾಡುತ್ತಿದ್ದೀರಿ ಅಂತಾದಲ್ಲಿ ಆಯ್ಕೆ ಮಾಡಿಕೊಳ್ಳುವ ಪದಗಳ ವಿಚಾರದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ಹರಿವು ಆಗಲಿದೆ. ನೀವು ಕೇಳದೆಯೇ ಕೆಲವರು ನಿಮಗೆ ನೆರವನ್ನು ನೀಡಬಹುದು. ಈ ಹಿಂದೆ ನೀವು ಮಾಡಿದ ಸಹಾಯದ ಉಪಕಾರ ಸ್ಮರಣೆಯನ್ನು ಮಾಡಿಕೊಂಡು ಕೆಲವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ರುಚಿಕಟ್ಟಾದ ಊಟ ತಿಂಡಿ ಸವಿಯುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವವರು ಯಾವುದನ್ನು ಖರೀದಿ ಮಾಡಬೇಕು ಎಂಬ ಬಗ್ಗೆ ಅಂತಿಮವಾದ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಬೆಳ್ಳಿ ಅಥವಾ ಬಂಗಾರದ ವಸ್ತುವನ್ನು ಕೊಳ್ಳುವಂತಹ ಸಾಧ್ಯತೆ ಇದೆ. ಮಕ್ಕಳ ಪ್ರತಿಭೆ ಹಾಗೂ ಅವರ ಸಾಮರ್ಥ್ಯವನ್ನು ಕಂಡು ಒಂದು ಬಗೆಯ ಸಮಾಧಾನ ಈ ದಿನ ನಿಮ್ಮಲ್ಲಿ ಮೂಡಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಆತಂಕಗಳು ದೂರವಾಗಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ದಿನ ನಿಮ್ಮ ಆರೋಗ್ಯದ ವಿಚಾರ ಪ್ರಾಮುಖ್ಯ ಪಡೆಯಲಿದೆ. ದೇಹದ ತೂಕ ಇಳಿಸಿಕೊಳ್ಳಬೇಕು, ಚರ್ಮ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು ಇಂಥದ್ದಕ್ಕೆ ನೀವು ಈ ದಿನ ಹೆಚ್ಚಿನ ಲಕ್ಷ್ಯ ನೀಡಲಿದ್ದೀರಿ. ಸ್ವಂತ ಉದ್ಯಮ, ವ್ಯವಹಾರ ಅಥವಾ ವ್ಯಾಪಾರ ಮಾಡುತ್ತಿರುವವರಿಗೆ ಅಂದುಕೊಂಡ ಪ್ರಮಾಣದಲ್ಲಿ ಆದಾಯ ಬರಲಾರದು. ನೀವು ಯಾವ ವ್ಯಕ್ತಿಯನ್ನು ಭೇಟಿ ಆಗಬಾರದು ಅಂದುಕೊಂಡಿರುತ್ತೀರೋ ಅಂಥವರ ಜೊತೆಗೆ ಹೆಚ್ಚಿನ ಸಮಯ ಕಲಿಯಬೇಕಾದಂತಹ ಅನಿವಾರ್ಯ ಸೃಷ್ಟಿ ಆಗಬಹುದು. ದೂರ ಪ್ರಯಾಣ ಮಾಡುತ್ತಿರುವಂತಹವರು ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಳ್ಳುವುದು ಉತ್ತಮ. ಇತರರ ವೈಯಕ್ತಿಕ ವಿಚಾರಗಳಲ್ಲಿ ನೀವು ಮೂಗು ತೂರಿಸಲು ಹೋಗಬೇಡಿ. ನಿಮಗೆ ಗೊತ್ತಿಲ್ಲದ ವಿಚಾರವಾಗಲಿ ಅಥವಾ ಅರ್ಧಂಬರ್ಧ ತಿಳಿದಂತಹ ಸಂಗತಿಯನ್ನಾಗಲಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಕ್ಕೆ ಸಹ ಹೋಗಬೇಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮನೆಯಲ್ಲಿ ದೇವತಾರಾಧನೆಯನ್ನು ಆಯೋಜಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ತಂದೆ, ತಾಯಿಯ ಆಶೀರ್ವಾದ ಸಹ ದೊರೆಯಲಿದೆ. ಈ ಹಿಂದೆ ಪ್ರಯತ್ನವೇ ಪಟ್ಟಿರದಂತಹ ಒಂದು ಕೆಲಸವನ್ನು ಮಾಡಿ, ಅದರಲ್ಲಿ ಯಶಸ್ಸು ಪಡೆಯಲಿದ್ದೀರಿ, ಇದರಿಂದ ನಿಮ್ಮ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ತುಂಬಾ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ . ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ.ಅದರಲ್ಲಿಯೂ ಅಲ್ಪ ಸಮಯಕ್ಕಾದರೂ ವಿದೇಶಗಳಿಗೆ ಪ್ರಯಾಣ ಮಾಡಬೇಕಾದಂತಹ ಅವಕಾಶ ನಿಮಗೆ ದೊರೆಯಬಹುದು ಎಂಬ ಸುಳಿವು ಸಿಗಲಿದೆ . ಯಾವುದಾದರೂ ಒಂದು ವಿಚಾರದಲ್ಲಿ ಭವಿಷ್ಯದಲ್ಲಿ ಏನಾಗಬಹುದು ಎಂಬ ಚಿಂತೆ ಕಾಡುತ್ತಿರುವವರಿಗೆ ಅದರ ನಿವಾರಣೆ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮಗೆ ಬರಬೇಕಾದ ಹಣ ಇದ್ದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸರಿಯಾದ ಶಬ್ದಗಳನ್ನು ಬಳಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ರಾಜಕಾರಣದಲ್ಲಿ ಇರುವಂತಹವರಿಗೆ ಬಹು ದಿನಗಳ ಕನಸು ಇಂದು ನನಸಾಗುವ ಸಾಧ್ಯತೆಗಳಿವೆ. ಈ ದಿನದ ಯಾವುದೇ ಕೆಲಸವನ್ನು ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ. ಕುಟುಂಬ ಸದಸ್ಯರು, ಸಂಗಾತಿ ನೀಡುವಂತಹ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ವಿದೇಶದಲ್ಲಿ ಉದ್ಯೋಗಕ್ಕಾಗಿಯೋ ಅಥವಾ ವ್ಯಾಸಂಗಕ್ಕಾಗಿಯೋ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಇಂಟರ್ ವ್ಯೂನಲ್ಲಿ ಭಾಗವಹಿಸುವಂಥವರು ಈ ದಿನ ಬಿಳಿ ಬಟ್ಟೆಯನ್ನು ಧರಿಸಿ. ವರಾಹ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಯಾವುದೇ ಮುಖ್ಯ ಕೆಲಸದಲ್ಲಿ ತೊಡಗಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮಗೆ ಒಂದು ಬಗೆಯ ವಿಚಿತ್ರ ಭ್ರಮೆ ಮೂಡಲಿದೆ. ಬಜೆಟ್ ಲೆಕ್ಕಾಚಾರಗಳು ಅಂದುಕೊಂಡಂತೆ ಸಾಗುವುದಿಲ್ಲ. ಯಾರನ್ನು ನಂಬುವುದು- ಯಾರನ್ನು ಬಿಡುವುದು ಎಂಬ ಬಗ್ಗೆ ಗೊಂದಲ ಇರುತ್ತದೆ. ಆದಾಯ ಅಥವಾ ಹಣಕಾಸಿನ ಮೂಲವನ್ನು ಜಾಸ್ತಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಕ್ಕು ಬೀಳುತ್ತೀರಿ. ನೀವು ಸರಿಯಾದ ಬಡ್ಡಿಯನ್ನೇ ಕಟ್ಟುತ್ತಿದ್ದರೂ ಹಾಗೂ ತಿಂಗಳ ತಿಂಗಳು ಹಣವನ್ನು ಸರಿಯಾಗಿ ಕಟ್ಟುತ್ತಿದ್ದರೂ ಈಗಿಂದೀಗಲೇ ಸಾಲವನ್ನು ಹಿಂತಿರುಗಿಸುವಂತೆ ಕೇಳಲಿದ್ದಾರೆ. ನಿಮ್ಮಲ್ಲಿ ಕೆಲವರು ಚಿನ್ನವನ್ನು ಅಡಮಾನ ಮಾಡಿ ಸಾಲ ಪಡೆಯಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಯಾವ ವಿಚಾರವನ್ನು ಸಣ್ಣದು ಎಂದು ಭಾವಿಸಿರುತ್ತೀರಾ ಅಂಥದ್ದು ಕುತ್ತಿಗೆಗೆ ಬರುವಂತಹ ಸಾಧ್ಯತೆ ಇದೆ. ಯಾರದೋ ಮೇಲಿನ ಪ್ರತಿಷ್ಠೆಗೆ ಬಿದ್ದು ಒಡವೆ, ವಸ್ತ್ರಗಳನ್ನು ಖರೀದಿಸಲು ಹೋಗಬೇಡಿ. ಈ ದಿನ ದುರ್ಗಾ ದೇವಿಯ ಆರಾಧನೆಯನ್ನು ಮಾಡಿ.
ಲೇಖನ- ಎನ್.ಕೆ.ಸ್ವಾತಿ