ಸೈನಸೈಟಿಸ್‌ನಿಂದ ಬಳಲುತ್ತಿದ್ದೀರಾ?; ಈ 7 ಆಹಾರಗಳನ್ನು ಸೇವಿಸಬೇಡಿ

ಸೈನಸ್‌ಗಳ ಒಳಪದರವು ಊದಿಕೊಂಡಾಗ ಅಥವಾ ಊತಗೊಂಡಾಗ ಸೈನಸೈಟಿಸ್ ಉಂಟಾಗುತ್ತದೆ. ಇದು ಉರಿಯೂತದ ಪ್ರತಿಕ್ರಿಯೆ ಅಥವಾ ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದಿಂದ ಸೋಂಕಿನ ಪರಿಣಾಮವಾಗಿ ಸಂಭವಿಸುತ್ತದೆ. ಸೈನಸೈಟಿಸ್​ ಸಮಸ್ಯೆ ಇದ್ದಾಗ ಈ 7 ಆಹಾರಗಳನ್ನು ಸೇವಿಸುವುದನ್ನು ಅವಾಯ್ಡ್ ಮಾಡಬೇಕು.

ಸೈನಸೈಟಿಸ್‌ನಿಂದ ಬಳಲುತ್ತಿದ್ದೀರಾ?; ಈ 7 ಆಹಾರಗಳನ್ನು ಸೇವಿಸಬೇಡಿ
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 27, 2024 | 6:19 PM

ಸೈನಸ್ ಸಮಸ್ಯೆ ಶುರುವಾದರೆ ಅದರಿಂದ ಮುಕ್ತಿ ಪಡೆಯುವುದು ಕಷ್ಟ. ಇದು ಸೈಲೆಂಟ್ ಆಗಿ ನಮ್ಮ ಆರೋಗ್ಯ, ಮೂಡ್​ಗೆ ತೊಂದರೆ ಉಂಟುಮಾಡುತ್ತದೆ. ಸೈನಸೈಟಿಸ್ ಎನ್ನುವುದು ನಿಮ್ಮ ಸೈನಸ್‌ಗಳನ್ನು ಆವರಿಸುವ ಅಂಗಾಂಶದ ಉರಿಯೂತವಾಗಿದೆ. ಬ್ಯಾಕ್ಟೀರಿಯಾದ ಸೋಂಕುಗಳು, ವೈರಲ್ ಸೋಂಕುಗಳು ಮತ್ತು ಅಲರ್ಜಿಗಳು ಸೈನಸ್ ಅನ್ನು ಕೆರಳಿಸಬಹುದು. ಸೈನಸ್‌ಗಳ ಒಳಪದರವು ಊದಿಕೊಂಡಾಗ ಅಥವಾ ಊತಗೊಂಡಾಗ ಸೈನಸೈಟಿಸ್ ಉಂಟಾಗುತ್ತದೆ. ಇದು ಉರಿಯೂತದ ಪ್ರತಿಕ್ರಿಯೆ ಅಥವಾ ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದಿಂದ ಸೋಂಕಿನ ಪರಿಣಾಮವಾಗಿ ಸಂಭವಿಸುತ್ತದೆ.

ಸೈನಸೈಟಿಸ್ ಎನ್ನುವುದು ಸೈನಸ್‌ಗಳ ಉರಿಯೂತವಾಗಿದ್ದು, ಮೂಗಿನ ಮಾರ್ಗಗಳ ಸುತ್ತ ಗಾಳಿಯಿಂದ ತುಂಬಿದ ಕುಳಿಗಳು, ಆಗಾಗ ಮೂಗು ಬ್ಲಾಕ್ ಆಗುವುದು, ಮುಖದ ನೋವು ಮತ್ತು ಮೂಗಿನಲ್ಲಿ ನೀರು ಸುರಿಯುವುದು ಮುಂತಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಸೈನಸೈಟಿಸ್​ ಸಮಸ್ಯೆ ಇದ್ದಾಗ ಈ 7 ಆಹಾರಗಳನ್ನು ಸೇವಿಸುವುದನ್ನು ಅವಾಯ್ಡ್ ಮಾಡಬೇಕು.

ಹಾಲಿನ ಉತ್ಪನ್ನಗಳು:

ಡೈರಿ ಉತ್ಪನ್ನಗಳು ಲೋಳೆಯನ್ನು ದಪ್ಪವಾಗಿಸುತ್ತದೆ. ಸೈನಸೈಟಿಸ್ ಸಮಸ್ಯೆ ಇರುವವರು ಹಾಲು, ಮೊಸರು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿ: Cold Home Remedies: ವಿಪರೀತ ಶೀತ ಆಗಿದೆಯೇ? ಇಲ್ಲಿದೆ ಮನೆಮದ್ದು

ಸಕ್ಕರೆ ಬಳಕೆ:

ಅತಿಯಾದ ಸಕ್ಕರೆ ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಸಕ್ಕರೆಭರಿತ ಆಹಾರಗಳು ಮತ್ತು ಪಾನೀಯಗಳ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ.

ಸಂಸ್ಕರಿಸಿದ ಆಹಾರಗಳು:

ಸಂಸ್ಕರಿಸಿದ ಆಹಾರಗಳು ಹೆಚ್ಚಾಗಿ ಸಂರಕ್ಷಕಗಳು ಮತ್ತು ಕೃತಕ ಪದಾರ್ಥಗಳನ್ನು ಹೊಂದಿರುತ್ತವೆ. ಅದು ಉರಿಯೂತಕ್ಕೆ ಕಾರಣವಾಗುತ್ತದೆ. ಹಾಗೇ, ಇದು ಸೈನಸ್​ನ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ, ಆದಷ್ಟೂ ಸಂಪೂರ್ಣ, ಸಂಸ್ಕರಿಸದ ಆಹಾರಗಳನ್ನು ಆರಿಸಿಕೊಳ್ಳಿ.

ಕರಿದ ಮತ್ತು ಕೊಬ್ಬಿನಂಶವಿರುವ ಆಹಾರ:

ಹೆಚ್ಚಿನ ಕೊಬ್ಬು ಮತ್ತು ಕರಿದ ಆಹಾರಗಳು ಉರಿಯೂತವನ್ನು ಹೆಚ್ಚಿಸಬಹುದು. ಇದು ಸೈನಸೈಟಿಸ್ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಆರೋಗ್ಯಕರ ಅಡುಗೆ ವಿಧಾನಗಳನ್ನು ಆರಿಸಿಕೊಳ್ಳುವುದು ಮತ್ತು ಮೀನು ಮುಂತಾದ ಹೆಚ್ಚಿನ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.

ಕೆಫೀನ್ ಮತ್ತು ಆಲ್ಕೋಹಾಲ್:

ಕೆಫೀನ್ ಮತ್ತು ಆಲ್ಕೋಹಾಲ್ ಎರಡೂ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಸೈನಸ್ ದಟ್ಟಣೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಆದ್ದರಿಂದ ಕೆಫೀನ್ ಮತ್ತು ಆಲ್ಕೊಹಾಲ್​ಯುಕ್ತ ಪಾನೀಯಗಳ ಸೇವನೆಯನ್ನು ಮಿತಗೊಳಿಸುವುದು ಉತ್ತಮ.

ಮಸಾಲೆಯುಕ್ತ ಆಹಾರ:

ಮಸಾಲೆಯುಕ್ತ ಆಹಾರಗಳು ಸೈನಸ್‌ ಅನ್ನು ಕೆರಳಿಸಬಹುದು. ಇದು ಉರಿಯೂತವನ್ನು ಉಲ್ಬಣಗೊಳಿಸಬಹುದು. ಹೀಗಾಗಿ, ಸೈನಸೈಟಿಸ್ ಉಲ್ಬಣಗೊಳ್ಳುವ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ಅವಾಯ್ಡ್​ ಮಾಡಿದರೆ ಪರಿಹಾರ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?

ಸಿಟ್ರಸ್ ಹಣ್ಣುಗಳು:

ರೋಗನಿರೋಧಕ ಶಕ್ತಿಗೆ ವಿಟಮಿನ್ ಸಿ ಅತ್ಯಗತ್ಯವಾದರೂ ಸೈನಸೈಟಿಸ್ ಸಮಸ್ಯೆ ಹೊಂದಿರುವವರು ಆಮ್ಲೀಯ ಹಣ್ಣುಗಳಾದ ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣುಗಳನ್ನು ಬಳಸುವುದನ್ನು ಅವಾಯ್ಡ್​ ಮಾಡುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ