ಸಂಕಷ್ಟಗಳ ಸುಳಿಗಾಳಿ! ಶಾಖೋತ್ಪನ್ನ ವಿದ್ಯುತ್​ ಮೇಲೆ ತಣ್ಣೀರೆರಚಿದ ಅಂಫಾನ್

ಸಾಧು ಶ್ರೀನಾಥ್​

|

Updated on:May 20, 2020 | 3:14 PM

ರಾಜ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನ ಘಟಕಗಳಿಗೆ ಕರ್ನಾಟಕ ವಿದ್ಯುತ್ ನಿಗಮ ವಿಶ್ರಾಂತಿ ನೀಡಿದೆ. ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪವನ ವಿದ್ಯುತ್ ಉತ್ಪಾದನೆ ಹೇರಳವಾಗಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ಶಕ್ತಿ ನಗರದಲ್ಲಿರುವ ಆರ್.ಟಿ.ಪಿ.ಎಸ್. (ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ) ದಲ್ಲಿನ ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಎಂಟನೇ ಘಟಕ ತಾಂತ್ರಿಕ ದೋಷದಿಂದ ಈಗಾಗಲೇ ಸ್ಥಗಿತವಾಗಿದೆ. ಇನ್ನು ಒಂದು ಘಟಕದಲ್ಲಿ ಕೇವಲ 286 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗ್ತಿದೆ. ಅಲ್ಲದೇ ವೈಟಿಪಿಎಸ್ ಘಟಕದಲ್ಲಿ ಒಂದು ಘಟಕದಲ್ಲಿ […]

ಸಂಕಷ್ಟಗಳ ಸುಳಿಗಾಳಿ! ಶಾಖೋತ್ಪನ್ನ ವಿದ್ಯುತ್​ ಮೇಲೆ ತಣ್ಣೀರೆರಚಿದ ಅಂಫಾನ್

ರಾಜ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನ ಘಟಕಗಳಿಗೆ ಕರ್ನಾಟಕ ವಿದ್ಯುತ್ ನಿಗಮ ವಿಶ್ರಾಂತಿ ನೀಡಿದೆ. ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪವನ ವಿದ್ಯುತ್ ಉತ್ಪಾದನೆ ಹೇರಳವಾಗಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ಶಕ್ತಿ ನಗರದಲ್ಲಿರುವ ಆರ್.ಟಿ.ಪಿ.ಎಸ್. (ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ) ದಲ್ಲಿನ ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಎಂಟನೇ ಘಟಕ ತಾಂತ್ರಿಕ ದೋಷದಿಂದ ಈಗಾಗಲೇ ಸ್ಥಗಿತವಾಗಿದೆ. ಇನ್ನು ಒಂದು ಘಟಕದಲ್ಲಿ ಕೇವಲ 286 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗ್ತಿದೆ. ಅಲ್ಲದೇ ವೈಟಿಪಿಎಸ್ ಘಟಕದಲ್ಲಿ ಒಂದು ಘಟಕದಲ್ಲಿ 408 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಕಳೆದ 50 ದಿನಗಳಿಂದ ಲಾಕ್ ಡೌನ್ ಅವಧಿ ವೇಳೆಯಲ್ಲಿ ವಾಣಿಜ್ಯ ವಿದ್ಯುತ್ ಬಳಕೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಸಾಮಾನ್ಯವಾಗಿ ನಿತ್ಯವೂ 12,000 ಮೆಗಾವ್ಯಾಟಿನಷ್ಟು ವಿದ್ಯುತ್ ಬೇಡಿಕೆ ಇರುತ್ತಿತ್ತು. ಕಳೆದ ಒಂದು ವಾರದಿಂದ 8 ರಿಂದ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಇನ್ನು ಲಾಕ್ ಡೌನ್ ಸಡಿಲಿಕೆಯಾದ ನಂತರ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚಾಗಿತ್ತು. ಈ ಹಿನ್ನೆಯಲ್ಲಿ ರಾಜ್ಯದ ಕಲ್ಲಿದ್ದಲು ವಿದ್ಯುತ್ ಉತ್ಪಾದನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿತ್ತು. ಆದ್ರೆ ಈದೀಗ ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪವನ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಇನ್ನು ಬಳ್ಳಾರಿಯ ಬಿಟಿಪಿಎಸ್ ಕಲ್ಲಿದ್ದಲು ಘಟಕದಲ್ಲಿ ಕೇವಲ ಒಂದು ಘಟಕದಲ್ಲಿ 117 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಇನ್ನು 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ರಾಯಚೂರಿನ ಯರಮರಸ ಬಳಿ ಇರುವ ವೈಟಿಪಿಎಸ್ ವಿದ್ಯುತ್ ಉತ್ಪಾದನ ಘಟಕದಲ್ಲಿನ ಎರಡನೇ ವಿದ್ಯುತ್ ಉತ್ಪಾದನ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿಲ್ಲ. ಇನ್ನು ಒಂದನೆ ಘಟಕದಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಕಡಿಮೆ ಪ್ರಮಾಣದ 408 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸದ್ಯ ವಿಶ್ರಾಂತಿ ದೊರಕಿದೆ. YTPS ಖಾಸಗಿ ತೆಕ್ಕೆಗೆ: ಇದೆಲ್ಲದರ ಮಧ್ಯೆ ರಾಯಚೂರಿನ ವೈಟಿಪಿಎಸ್ ಘಟಕದಲ್ಲಿ ವಿದ್ಯುತ್ ಉತ್ಪಾದನೆಯ ಸಂಪೂರ್ಣ ಹೊಣೆಯನ್ನ ಆಂಧ್ರ ಮೂಲದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪವರ್ ಮೆಕ್ ಕಂಪನಿಗೆ ಗುತ್ತಿಗೆ ನೀಡಿದ್ದರಿಂದ ಸದ್ಯ ವೈಟಿಪಿಎಸ್​ನಲ್ಲಿ ಕೆಲಸ ಮಾಡ್ತಿರುವ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಆತಂಕ ಸೃಷ್ಟಿಯಾಗಿದೆ. ಇನ್ನು 14,000 ಕೋಟಿ ವೆಚ್ಚದಲ್ಲಿ ಸರ್ಕಾರ ನಿರ್ಮಿಸಿದ ವೈಟಿಪಿಎಸ್ ಘಟಕದ ಸಂಪೂರ್ಣ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗೆ ವಹಿಸಿದ್ದಕ್ಕೆ ಕಾರ್ಮಿಕರು ಭಾರಿ ಆಕ್ರೋಶ ವ್ಯಕ್ತಪಡಿಸ್ತಿದಾರೆ. ಕರ್ನಾಟಕ ವಿದ್ಯುತ್ ನಿಗಮದ ಈ ನಿರ್ಧಾರದ ವಿರುದ್ದ ಕಾರ್ಮಿಕರು ಸಿಡಿದೆದ್ದಿದ್ದಾರೆ. ಈಗಾಗಲೇ ನಿಗಮದ ನಿರ್ಧಾರ ವಾಪಸ್ ಪಡೆಯದೇ ಇದ್ರೆ ಹೋರಾಟ ನಡೆಸೋದಾಗಿಯೂ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ವೈಟಿಪಿಎಸ್​ನಲ್ಲಿ ವಿದ್ಯುತ್ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ರಾಜ್ಯದ ಒಟ್ಟಾರೆ ವಿದ್ಯುತ್ ಬೇಡಿಕೆಯ ಪ್ರಮಾಣದ ಶೇ. 40 ರಷ್ಟ ವಿದ್ಯುತ್ ರಾಯಚೂರಿನ ಶಕ್ತಿನಗರದ ಆರಟಿಪಿಎಸ್​ನಲ್ಲೆ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ವೈಟಿಪಿಎಸ್ ಘಟಕದಲ್ಲಿ ನಿತ್ಯ 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಕಳೆದ ಎರಡು ವರ್ಷದಿಂದಲೂ ಶತ ಪ್ರಯತ್ನ ನಡೆಸುತ್ತಿದೆ. ಆದ್ರೆ ಇದುವರೆಗೂ ಸರ್ಕಾರಕ್ಕೆ ಈ ವಿಚಾರದಲ್ಲಿ ನಿರೀಕ್ಷಿತ ಯಶಸ್ಸು ದೊರಕಿಲ್ಲ. ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ವೈಟಿಪಿಎಸ್ ಘಟಕದ ಸಂಪೂರ್ಣ ನಿರ್ವಹಣೆಯನ್ನ ಖಾಸಗಿ ತೆಕ್ಕೆಗೆ ನೀಡಿದ್ದು ಮುಂಬರುವ ದಿನಗಳಲ್ಲಿ ನಿಗದಿತ ಪ್ರಮಾಣದಷ್ಟು ವಿದ್ಯುತ್ ಉತ್ಪಾದನೆ ಮಾಡುವ ನಿರೀಕ್ಷೆಯಲ್ಲಿದೆ. ಅದರೆ ಇದೆಲ್ಲವೂ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದು ಕಾದು ನೋಡಬೇಕಷ್ಟೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada