ಲಾಲುಗೆ ಈ ವರ್ಷವೂ ಜೈಲೇ ಗತಿ; ಜಾಮೀನು ಪಡೆಯಲು ಇನ್ನೂ 8 ತಿಂಗಳು ಜೈಲಲ್ಲೇ ಕಳೆಯಬೇಕು!

ಮೂರು ಮೇವು ಹಗರಣದಲ್ಲಿ ಲಾಲು ಶಿಕ್ಷೆಗೆ ಒಳಗಾಗಿದ್ದಾರೆ. ಎರಡು ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಆದರೆ, ದುಮಕಾ ಖಜಾನೆ ಪ್ರಕರಣದಲ್ಲಿ ಲಾಲುಗೆ ಜಾಮೀನು ಸಿಕ್ಕಿಲ್ಲ.

  • Rajesh Duggumane
  • Published On - 14:30 PM, 11 Dec 2020
ಲಾಲುಗೆ ಈ ವರ್ಷವೂ ಜೈಲೇ ಗತಿ; ಜಾಮೀನು ಪಡೆಯಲು ಇನ್ನೂ 8 ತಿಂಗಳು ಜೈಲಲ್ಲೇ ಕಳೆಯಬೇಕು!
ಲಾಲು ಪ್ರಸಾದ್​ ಯಾದವ್ (ಫೈಲ್​ ಫೋಟೋ)

ನವದೆಹಲಿ: ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್​ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಜಾಮೀನು ಅರ್ಜಿ ವಿಚಾರಣೆಯನ್ನು ಜಾರ್ಖಂಡ  ಹೈಕೋರ್ಟ್​​ 6 ವಾರ ಮುಂದೂಡಿದೆ. ಈ ಮೂಲಕ ಈ ವರ್ಷವೂ ಲಾಲುಗೆ ಜಾಮೀನು ಅಲಭ್ಯವಾಗಿದೆ.

ಮೂರು ಮೇವು ಹಗರಣದಲ್ಲಿ ಲಾಲು ಶಿಕ್ಷೆಗೆ ಒಳಗಾಗಿದ್ದಾರೆ. ಎರಡು ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಆದರೆ, ದುಮಕಾ ಖಜಾನೆ ಪ್ರಕರಣದಲ್ಲಿ ಲಾಲುಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಇನ್ನೂ ಒಂದುವರೆ ತಿಂಗಳು ಜೈಲಿನಲ್ಲೇ ಇರುವುದು ಅನಿವಾರ್ಯ ಆಗಿದೆ.

ದುಮಕಾ ಖಜಾನೆ ಹಗರಣದಲ್ಲಿ ಲಾಲುಗೆ 7 ಏಳು ವರ್ಷ ಶಿಕ್ಷೆ ಆಗಿದೆ. ಈ ಪ್ರಕರಣದಲ್ಲಿ ಅರ್ಧ ಶಿಕ್ಷೆ ಅಂದರೆ 42 ತಿಂಗಳು 28 ದಿನ ಪೂರೈಕೆ ಮಾಡಿದ್ದೇನೆ. ಹೀಗಾಗಿ ಜಾಮೀನು ನೀಡಿ ಎಂದು ಲಾಲು ಕೋರ್ಟ್​ಗೆ ಕೇಳಿದ್ದರು. ಆದರೆ, ಲಾಲು 34 ತಿಂಗಳು ಶಿಕ್ಷೆ ಮಾತ್ರ ಪೂರೈಸಿದ್ದಾರೆ. ಹೀಗಾಗಿ ಅರ್ಧ ಶಿಕ್ಷೆ ಪೂರೈಕೆ ಮಾಡಲು ಇನ್ನೂ 8 ತಿಂಗಳು ಆಗಬೇಕಿದೆ ಎಂದು ಸಿಬಿಐ ತಿಳಿಸಿತ್ತು.

ಆರು ವಾರ ಸಮಯಾವಕಾಶ ಕೇಳಿದ ವಕೀಲ:

ನಮ್ಮ ಲೆಕ್ಕಾಚಾರದ ಪ್ರಕಾರ ಲಾಲು 42 ತಿಂಗಳು ಜೈಲಿನಲ್ಲಿ ಇದ್ದರು. ಅವರು ಜೈಲಿನಲ್ಲಿ ಎಷ್ಟು ಸಮಯ ಕಳೆದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು  ದಾಖಲೆ ಸಮೇತ ಸಲ್ಲಿಕೆ ಮಾಡಲು ನಮಗೆ 8 ವಾರ ಸಮಯಾವಕಾಶ ಬೇಕು ಎಂದು ಲಾಲು ಪರ ವಕೀಲರು ಕೋರ್ಟ್​​ಗೆ ಕೇಳಿದರು. ಹೀಗಾಗಿ, ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ 8 ವಾರಗಳ ಕಾಲ ಮುಂದೂಡಿದೆ.

ಏನಿದು ಪ್ರಕರಣ?:

ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ಲಾಲು ಬಹುದೊಡ್ಡ ಮೇವು ಹಗರಣ ಮಾಡಿದ್ದರು. ದುಮಕಾ ಖಜಾನೆಯಿಂದ ಲಾಲು 1995 ಡಿಸೆಂಬರ್​ ಹಾಗೂ 1996 ಜನವರಿ ತಿಂಗಳಲ್ಲಿ 3.76 ಕೋಟಿ ಹಣ ತೆಗೆದಿದ್ದರು. ಈ ಪ್ರಕರಣದಲ್ಲಿ ಲಾಲುಗೆ 7 ವರ್ಷ ಜೈಲು ಶಿಕ್ಷೆಯಾಗಿತ್ತು.

‘ದೋ ಹಜಾರ್ ಬೀಸ್-ಹಠಾವೋ ನಿತೀಶ್’ ಜೈಲಿಂದಲೇ ಲಾಲು ಪ್ರಸಾದ್ ಟ್ವೀಟ್