ಸಂಕ್ರಾಂತಿ ಫಲಾಫಲ ದ್ವಾದಶ ರಾಶಿ ಭವಿಷ್ಯ: ಎಸ್.ಕೆ.ಜೈನ್
ಮಕರ ಸಂಕ್ರಮಣದಂದು ಸೂರ್ಯನ ಪಥ ದಕ್ಷಿಣಾಯಣ ಮುಗಿಸಿ, ಉತ್ತರಾಯಣ ಪ್ರವೇಶಿಸಲಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಶುಭ ಸಮಯ, ಬೆಳಗ್ಗೆ 8.15 ನಿಮಿಷ. ಸಂಕ್ರಾಂತಿ, ಅಯ್ಯಪ್ಪ ಸ್ವಾಮಿ ಭಕ್ತರಿಗೂ ಪುಣ್ಯಕಾಲ.

ಮಕರ ಸಂಕ್ರಮಣದಂದು ಸೂರ್ಯನ ಪಥ ದಕ್ಷಿಣಾಯಣ ಮುಗಿಸಿ, ಉತ್ತರಾಯಣ ಪ್ರವೇಶಿಸಲಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಶುಭ ಸಮಯ, ಬೆಳಗ್ಗೆ 8.15 ನಿಮಿಷ. ಸಂಕ್ರಾಂತಿ, ಅಯ್ಯಪ್ಪ ಸ್ವಾಮಿ ಭಕ್ತರಿಗೂ ಪುಣ್ಯಕಾಲ. ಚಳಿಗಾಲ ಮುಗಿಸಿ, ಉಷ್ಣಕಾಲ ಆರಂಭವಾಗುವ ದಿನ. ಆ ದಿನದಿಂದ ಸೂರ್ಯನಾರಾಯಣ ಪಥ ಬದಲಿಸಿ ಉತ್ತರಾಯಣ ಪ್ರವೇಶಿಸುತ್ತಾನೆ. ಸಂಕ್ರಾಂತಿಯ ಕಾಲದಲ್ಲಿ ಎಲ್ಲರಿಗೂ ಒಳಿತನ್ನು ಹಾರೈಸೋಣ.
ಮೇಷ: ರಾಜಕಾರಣದಲ್ಲಿ ಉಜ್ವಲ ಭವಿಷ್ಯ ಸಿಗಲಿದೆ. ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ದೂರದೇಶ ಪ್ರಯಾಣ ಅವಕಾಶ ಲಭ್ಯವಾಗಲಿದೆ. ಆರ್ಥಿಕ ವೃದ್ಧಿ ಆಗುತ್ತದೆ. ಸಾಲ ತೀರಿಸಲು ಸಕಾಲವಾಗಲಿದೆ. ಈವರೆಗೆ ಪಟ್ಟ ಕಷ್ಟಕ್ಕೆ ಸುಖ ಸಿಗುತ್ತದೆ. ಕೆಂಪು ಹವಳ ಬಳಸುವುದರಿಂದ ಶುಭವಾಗಲಿದೆ.
ವೃಷಭ: ನಷ್ಟ ಸಾಧ್ಯತೆ ಇದೆ. ಇತರರನ್ನು ನಂಬಿ ಕೆಡಬೇಡಿ. ಜಾಗ್ರತರಾಗಿರಿ. ನಂಬಿಕೆ ಇಲ್ಲದವರಿಗೆ ಹಣ ಕೊಡಬೇಡಿ. ದೆಶೆ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ಸಾಗಲಿದೆ. ದೇವರನಾಮ ಜಪಿಸಿ. ಸಂಕಟಗಳು ದೂರವಾಗಲಿವೆ. ವಜ್ರ ಧಾರಣೆಯಿಂದ ಒಳಿತಾಗಲಿದೆ.
ಮಿಥುನ: ಆರೋಗ್ಯದ ಕಡೆಗೆ ಗಮನ ಕೊಡಿ. ಮಧುಮೇಹ, ರಕ್ತದೊತ್ತಡ ಇರುವವರು ಜೋಪಾನವಾಗಿರಿ. ಗುರು ಬಲ ಇದೆ. ಎಂಬಿಎ, ಎಂಸಿಎ, ಕಂಪ್ಯೂಟರ್ ಕೆಲಸಗಾರರಿಗೆ ಒಳಿತಾಗಲಿದೆ. ಅವಳಿ ಮಕ್ಕಳು ಇರುವವರಿಗೆ ಶುಭವಾಗಲಿದೆ. ಶಾಂತಿ ಜಪದಿಂದ ನೆಮ್ಮದಿ ಸಿಗಲಿದೆ.
ಕರ್ಕ: ವಿವಾಹ, ಶುಭಕಾರ್ಯ ಸಾಧ್ಯವಾಗಲಿದೆ. ಗುರುಬಲವಿದೆ. ಹನುಮಾನ್ ಚಾಲೀಸ ಓದಿರಿ. ಆಂಜನೇಯನನ್ನು ತಾಯಿ ಅಂಜನಾದೇವಿ ಜೊತೆ ಜಪಿಸಿ. ಒಳ್ಳೆಯದಾಗಲಿದೆ. ಈಶಾನ್ಯ ದಿಕ್ಕಿಗೆ ಪ್ರಯಾಣದಿಂದ ಒಳಿತಾಗಲಿದೆ.
ಸಿಂಹ: ಈ ರಾಶಿಗೆ ಉತ್ತರಾಯಣದಲ್ಲಿ ಶುಭವಾಗಲಿದೆ. ಏಪ್ರಿಲ್ 6ರ ನಂತರ ಗುರುಬಲವಿದೆ. ಆದರೆ, ಸಿಂಹ ರಾಶಿಯ ರಾಜಕಾರಣಿಗಳು ಜಾಗ್ರತರಾಗಿರಬೇಕು. ಏಪ್ರಿಲ್ 14 ನಂತರ ಭಾಗ್ಯೋದಯವಾಗಲಿದೆ. ಸರ್ಕಾರಿ ನೌಕರಿಗೆ ಒಳ್ಳೆಯದಾಗಲಿದೆ. ಉತ್ತರಕ್ಕೆ ಪ್ರಯಾಣ ಆಗಬಹುದು. ಮಾಣಿಕ್ಯ ಧಾರಣೆ ಒಳ್ಳೆಯದು.
ಕನ್ಯಾ: ಗುರುಬಲ ಇದೆ. ಧ್ಯಾನ ಮಾಡಿರಿ. ದೇವರನಾಮ ಸ್ಮರಣೆ ಒಳ್ಳೆಯದು. ವಿವಾಹ, ಸಂತಾನ ಭಾಗ್ಯ ಸಿಗಲಿದೆ. ಫೆಬ್ರವರಿ ಬಳಿಕ ಹಾಗೂ ಏಪ್ರಿಲ್ ಬಳಿಕ ಇನ್ನೂ ಸಂತೃಪ್ತಿ ದೊರಕಬಹುದು. ಸೂರ್ಯನಾರಾಯಣನ ಕೃಪೆ ನಿಮಗೆ ಇರಲಿದೆ. ಸೂರ್ಯನಮಸ್ಕಾರ ಮಾಡಿ.
ತುಲಾ: 6 ಏಪ್ರಿಲ್ ಬಳಿಕ ಗುರುಬಲ ಬರುವುದು. ಸಂಕಟಗಳು ದೂರವಾಗಲಿವೆ. ಭೂಮಿ ವ್ಯವಹಾರ ಸುಲಭವಾಗುತ್ತದೆ. ಸಂಕಟಗಳ ಬಳಿಕ ಶುಭಫಲ ಸಿಗುತ್ತದೆ. ಸಿನಿಮಾ ಕೆಲಸಗಾರರಿಗೆ ಒಳ್ಳೆಯದಾಗಲಿದೆ. ಒಳ್ಳೆಯವರ ಸಂಘ ಮಾಡಿದಷ್ಟು ಒಳಿತಾಗಲಿದೆ.
ವೃಶ್ಚಿಕ: ಖಾಯಿಲೆಗಳು ಮಾಯವಾಗುತ್ತದೆ. ದೇವರ ಪೂಜೆ ಮಾಡಿದರೆ, ಸರ್ಪಶಾಂತಿ ಮಾಡಿದರೆ ಒಳ್ಳೆಯದು. ಆರೋಗ್ಯ ವೃದ್ಧಿಯಾಗಲಿದೆ.
ಧನು: ಗುರುಬಲ ಇದೆ. ವಿವಾಹ ಇತ್ಯಾದಿ ಶುಭಕಾರ್ಯ ಆಗುತ್ತದೆ. ಶನಿಶಾಂತಿ ಮಾಡಿ, ಎಳ್ಳೆಣ್ಣೆ ಸ್ನಾನ ಮಾಡಿದರೆ ಒಳ್ಳೆಯದು. ಆರೋಗ್ಯ, ಆರ್ಥಿಕ ವೃದ್ಧಿ ಆಗಲಿದೆ. ಪೊಲೀಸ್, ಸೈನಿಕರಿಗೆ ತುಂಬಾ ಒಳ್ಳೆಯದು. ಸಾಲ ತೀರಿಸಲು ಸಕಾಲ. ಜಪತಪ ಮಾಡಿದರೆ ಶಾಂತಿ ಲಭಿಸಲಿದೆ.
ಮಕರ: ಶನಿಶಾಂತಿ ಮಾಡಿದರೆ ಒಳ್ಳೆಯದು. ಎಳ್ಳೆಣ್ಣೆ ಸ್ನಾನ ಮಾಡಿದರೆ ಒಳಿತಾಗಲಿದೆ. ಅಲ್ಪಸ್ವಲ್ಪ ಕಷ್ಟಗಳು ಎದುರಾದರೂ ದೃಢಮನಸಿನಿಂದ ಎದುರಿಸುವಿರಿ. ಮೊದಲಿಗೆ ಆರೋಗ್ಯ ಸಮಸ್ಯೆಗಳು ಬಂದರೂ ನಂತರ ಒಳ್ಳೆಯದಾಗಲಿದೆ.
ಕುಂಭ: ಏಳರಾಟ ಶನಿ ಇದೆ. ಆದರೆ, ದೆಶೆ ಚೆನ್ನಾಗಿದೆ. ಆತುರಪಟ್ಟು ನಿರ್ಧಾರ ಕೈಗೊಳ್ಳಬೇಡಿ. ರೈತರಿಗೂ ನಷ್ಟ ಆಗಬಹುದು. ಜಾಗೃತರಾಗಿ ಕೆಲಸ ಮಾಡಿ. ಹೆದರಿಕೊಂಡು ಇರಬೇಡಿ. ನಷ್ಟ ಆಗದಂತೆ ಜಾಗೃತರಾಗಿರಿ.
ಮೀನ: ಚಿನ್ನ ಕೊಳ್ಳಲು ಒಳ್ಳೆಯ ಕಾಲ. ಆಕಾಂಕ್ಷೆ ಪೂರ್ಣವಾಗುತ್ತದೆ. ಆರ್ಥಿಕ ವೃದ್ಧಿ ಆಗುತ್ತದೆ. ಲಾಟರಿ ಕೂಡ ಸಿಗಬಹುದು. ಹಳದಿ ಬಣ್ಣ, ಹಳದಿ ರತ್ನ ಬಳಸಿ.
(ಎಸ್.ಕೆ.ಜೈನ್ ಸಂಪರ್ಕ ಸಂಖ್ಯೆ 9880 459923)
Published On - 11:05 am, Wed, 13 January 21




