ಇಂದಿನ ವಹಿವಾಟಿನಲ್ಲಿ ನಿಫ್ಟಿಯ ಎಲ್ಲ ಸೆಗ್ಮೆಂಟ್ಗಳಲ್ಲೂ ತಾಂತ್ರಿಕ ದೋಷ ಕಂಡುಬಂದ ಕಾರಣಕ್ಕೆ ಕೆಲ ಕಾಲ ವ್ಯವಹಾರ ಸ್ಥಗಿತಗೊಂಡಿತ್ತು. ಆ ನಂತರ ಭರ್ಜರಿಯಾಗಿ ಏರಿಕೆ ಕಂಡಿತು. ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ತಲಾ 4 ಪರ್ಸೆಂಟ್ ಹೆಚ್ಚಳವಾದವು. ನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕ 3 ಪರ್ಸೆಂಟ್ ಏರಿಕೆ ಕಂಡಿತು. ಮಾಧ್ಯಮ ಮತ್ತು ಲೋಹ ಸೂಚ್ಯಂಕಗಳು ಕೂಡ ಹೆಚ್ಚಳ ದಾಖಲಿಸಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಕೋಲ್ ಇಂಡಿಯಾ- ಶೇ 4.97
ಎಚ್ಡಿಎಫ್ಸಿ ಬ್ಯಾಂಕ್- ಶೇ 4.63
ಆಕ್ಸಿಸ್ ಬ್ಯಾಂಕ್- ಶೇ 3.78
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- ಶೇ 3.65
ಐಸಿಐಸಿಐ ಬ್ಯಾಂಕ್- ಶೇ 3.59
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಯುಪಿಎಲ್- ಶೇ 1.62
ಟಿಸಿಎಸ್- ಶೇ 1.02
ಡಾ. ರೆಡ್ಡೀಸ್ ಲ್ಯಾಬ್ಸ್- ಶೇ 0.94
ಗೇಲ್- ಶೇ 0.81
ಪವರ್ ಗ್ರಿಡ್ ಕಾರ್ಪೊರೇಷನ್- ಶೇ 0.55
ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕಗಳು ಶೇ 0.77 ಮತ್ತು ಸ್ಮಾಲ್ ಕ್ಯಾಪ್ ಶೇ 1.08 ಏರಿಕೆ ದಾಖಲಿಸಿದವು. ಫೆಬ್ರವರಿ ತಿಂಗಳ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಒಪ್ಪಂದ ಕೊನೆಯಾಗುವ ದಿನ ಹತ್ತಿರ ಇರುವುದರಿಂದ ಗುರುವಾರ ಮತ್ತು ಶುಕ್ರವಾರ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಾಣುವ ಸಾಧ್ಯತೆ ಇದ್ದು, ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವುದರಿಂದ ದೂರ ಇರುವುದು ಉತ್ತಮ ಎಂದು ವಿಶ್ಲೇಷಕರು ಸಲಹೆ ಮಾಡುತ್ತಾರೆ.
ಇದನ್ನೂ ಓದಿ: NSE Nifty Glitches: ತಾಂತ್ರಿಕ ಸಮಸ್ಯೆಯಿಂದ ನಿಫ್ಟಿ ವಹಿವಾಟು ಸ್ಥಗಿತ