ಬನಶಂಕರಿ ದೇವಸ್ಥಾನದಲ್ಲಿ ದೈನಂದಿನ ಪೂಜೆ: ದೇವಿಯ ದರ್ಶನಕ್ಕೆ ಮಾತ್ರ ಅವಕಾಶ
ಬೆಂಗಳೂರು: ಕೊರೊನಾ ವೈರಸ್ ವಿಉದ್ಧದ ಹೋರಾಟದ ಅಂಗವಾಗಿ ಜಾರಿಗೆ ತಂದಿದ್ದ ಲಾಕ್ ಡೌನ್ ನಿಯಮ ತುಸು ಸಡಿಲಿಕೆಯಾಗಿದ್ದು, ಸಾಮಾಣ್ಯ ಚಟುವಟಿಕೆಗಳು ಗರಿಗೆದರಿವೆ. ಆದ್ರೆ ಇನ್ನೂ ಪೂರ್ಣಪ್ರಮಾಣದಲ್ಲಿ ಜನಜೀವನ ಎಂದಿನ ಸಹಜ ಲಯಕ್ಕೆ ಮರಳಿಲ್ಲ. ಈ ಮಧ್ಯೆ, ಲಾಕ್ ಡೌನ್ ನಿಯಮ ಸಡಿಲಿಕೆಯ ಬಳಿಕ ಮೊದಲ ವಿಕೇಂಡ್ ಹಿನ್ನೆಲೆ ಬನಶಂಕರಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯ ನಡೆಯುತ್ತಿದೆ. ಸಕಲ ಹೂಗಳಿಂದ ಕಂಗೊಳಿಸ್ತಿರೋ ಬನಶಂಕರಿ ಅಮ್ಮ. ಶಕ್ತಿದೇವತೆ ದರ್ಶನಕ್ಕಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಬನಶಂಕರಿಯಲ್ಲಿರೋ […]
ಬೆಂಗಳೂರು: ಕೊರೊನಾ ವೈರಸ್ ವಿಉದ್ಧದ ಹೋರಾಟದ ಅಂಗವಾಗಿ ಜಾರಿಗೆ ತಂದಿದ್ದ ಲಾಕ್ ಡೌನ್ ನಿಯಮ ತುಸು ಸಡಿಲಿಕೆಯಾಗಿದ್ದು, ಸಾಮಾಣ್ಯ ಚಟುವಟಿಕೆಗಳು ಗರಿಗೆದರಿವೆ. ಆದ್ರೆ ಇನ್ನೂ ಪೂರ್ಣಪ್ರಮಾಣದಲ್ಲಿ ಜನಜೀವನ ಎಂದಿನ ಸಹಜ ಲಯಕ್ಕೆ ಮರಳಿಲ್ಲ. ಈ ಮಧ್ಯೆ, ಲಾಕ್ ಡೌನ್ ನಿಯಮ ಸಡಿಲಿಕೆಯ ಬಳಿಕ ಮೊದಲ ವಿಕೇಂಡ್ ಹಿನ್ನೆಲೆ ಬನಶಂಕರಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯ ನಡೆಯುತ್ತಿದೆ.
ಸಕಲ ಹೂಗಳಿಂದ ಕಂಗೊಳಿಸ್ತಿರೋ ಬನಶಂಕರಿ ಅಮ್ಮ. ಶಕ್ತಿದೇವತೆ ದರ್ಶನಕ್ಕಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಬನಶಂಕರಿಯಲ್ಲಿರೋ ಶಕ್ತಿದೇವತೆ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ವಿಶೇಷ ಪೂಜೆ ಇಲ್ಲವಾಗಿದ್ದು, ಕೇವಲ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
Published On - 8:27 am, Sun, 14 June 20