NRI Tax ಬಗ್ಗೆ ತೆರಿಗೆದಾರರ ಆತಂಕಕ್ಕೆ ಪ್ರತಿಕ್ರಿಯಿಸುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಸುಪ್ರೀಂಕೋರ್ಟ್ ಸೂಚನೆ
NRI Tax: ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ ಹೆಚ್ಚು ಕಾಲ ಉಳಿದುಕೊಂಡಿದ್ದಕ್ಕಾಗಿ, ಎನ್‌ಆರ್‌ಐ ತೆರಿಗೆಯಡಿಯಲ್ಲಿ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿ ಬಂದುದನ್ನು ಪ್ರಶ್ನಿಸಿ ದಕ್ಷಿಣ ಭಾರತದ ಅತಿದೊಡ್ಡ ರೆಸ್ಟೋರೆಂಟ್ ಸರವಣ ಭವನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ
ಮುಂಬೈ: ಕೇಂದ್ರ ಬಜೆಟ್ನಲ್ಲಿ ಉಲ್ಲೇಖವಾಗದಿರುವ ಅನಿವಾಸಿ ಭಾರತೀಯರು (NRI) ಎದುರಿಸುತ್ತಿರುವ ತೆರಿಗೆ ಅನಿಶ್ಚಿತತೆ ಮತ್ತು ಆದಾಯ ತೆರಿಗೆ ಇತ್ಯರ್ಥ ಆಯೋಗವನ್ನು (ಐಟಿಎಸ್‌ಸಿ) ರದ್ದು ಪಡಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ ಹೆಚ್ಚು ಕಾಲ ಉಳಿದುಕೊಂಡಿದ್ದಕ್ಕಾಗಿ, ಎನ್‌ಆರ್‌ಐ ತೆರಿಗೆಯಡಿಯಲ್ಲಿ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿ ಬಂದುದನ್ನು ಪ್ರಶ್ನಿಸಿ ದಕ್ಷಿಣ ಭಾರತದ ಅತಿದೊಡ್ಡ ರೆಸ್ಟೋರೆಂಟ್ ಸರವಣ ಭವನ್ ಮದ್ರಾಸ್ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿ, ತಮ್ಮ ತೆರಿಗೆ ವಿವಾದವನ್ನು ಇತ್ಯರ್ಥಗೊಳಿಸುವ ಅರ್ಜಿ ಸ್ವೀಕರಿಸಲು ಐಟಿಎಸ್‌ಸಿಗೆ ನಿರ್ದೇಶಿಸುವಂತೆ ಕೋರಿತ್ತು. ಇದರ ಬೆನ್ನಲ್ಲೇ ಎನ್ಆರ್ಐಗಳ ತೆರಿಗೆ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸುವಂತೆ ಬುಧವಾರ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (CBTD) ನಿರ್ದೇಶಿಸಿದೆ
ಎನ್‌ಆರ್‌ಐ vs ಭಾರತ ಸರ್ಕಾರ
ಭಾರತದಲ್ಲಿ ಹೆಚ್ಚು ಕಾಲ ಉಳಿದುಕೊಂಡಿದ್ದ ದುಬೈ ಮೂಲದ ಅನಿವಾಸಿ ಭಾರತೀಯ ಗೌರವ್ ಬೈದ್ ಅವರ ರಿಟ್ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಮೂರು ವಾರಗಳೊಳಗೆ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಸಿಬಿಡಿಟಿಗೆ ನಿರ್ದೇಶಿಸಿದೆ. 2019-20 ಆರ್ಥಿಕ ವರ್ಷದಲ್ಲಿ ಎನ್‌ಆರ್‌ಐ ಆಗಿ ತೆರಿಗೆ ಸಲ್ಲಿಸಿದ್ದ ತನಗೆ 2020-21 ಆರ್ಥಿಕ ವರ್ಷದಲ್ಲಿಯೂ ಎನ್‌ಆರ್‌ಐ ಆಗಿಯೇ ಪರಿಗಣಿಸಿ ತೆರಿಗೆ ಸಲ್ಲಿಸಲು ಅವಕಾಶ ನೀಡಬೇಕು. ಕೋವಿಡ್ ಸಾಂಕ್ರಾಮಿಕದ ಹೊತ್ತಿನಲ್ಲಿ ಭಾರತದಲ್ಲಿ ಕಳೆದ ದಿನಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬಾರದು ಎಂದು ಬೈದ್ ಮನವಿ ಮಾಡಿದ್ದರು.
ಪ್ರಸ್ತುತ ನಿಯಮಗಳ ಪ್ರಕಾರ, ಭಾರತದಲ್ಲಿ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯುವ ಅನಿವಾಸಿ ಭಾರತೀಯರು ತಮ್ಮ ಒಟ್ಟು ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಅದೇ ವೇಳೆ ಭಾರತದಿಂದ ಬರುವ ಆದಾಯ ₹ 15 ಲಕ್ಷವನ್ನು ಮೀರಿದ್ದರೆ, ಭಾರತದಲ್ಲಿ 120 ದಿನಗಳು ಅಥವಾ ಅದಕ್ಕಿಂತ ಹೆಚ್ಚು (ಆದರೆ 182 ದಿನಗಳಿಗಿಂತ ಕಡಿಮೆ) ಕಾಲ ನೆಲೆಸಿದ ಅನಿವಾಸಿ ಭಾರತೀಯರು ಒಟ್ಟು ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Budget 2021 Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?
ಕಳೆದ ವರ್ಷ ಸರ್ಕಾರ ಲಾಕ್ಡೌನ್ ಘೋಷಿಸಿದ ಕೂಡಲೇ ಅನಿವಾಸಿ ಭಾರತೀಯರು ಭಾರತದಲ್ಲಿ ನೆಲೆಸಿರುವ ಕಾಲಾವಧಿಯಲ್ಲಿ ಸಡಿಲಿಕೆ ಮಾಡಿತ್ತು. 2019-20 ಹಣಕಾಸು ವರ್ಷದಲ್ಲಿ 2020 ಮಾರ್ಚ್ 22ರಿಂದ 2020 ಮಾರ್ಚ್ 31ರ ಅವಧಿಯಲ್ಲಿ ಭಾರತದಿಂದ ವಿದೇಶಕ್ಕೆ ಹೋಗಲಾರದೆ ಉಳಿದ ಅನಿವಾಸಿ ಭಾರತೀಯರಿಗೆ ಈ ವಿನಾಯಿತಿಯನ್ನು ಸರ್ಕಾರ ನೀಡಿತ್ತು.
ಭಾರತದಲ್ಲಿ ಉಳಿದುಕೊಂಡ ಎನ್‌ಆರ್‌ಐಗಳಿಗೆ ಸರ್ಕಾರವು ಆರ್ಥಿಕ ವರ್ಷ-2019-20ರಂದು ಸ್ಪಷ್ಟೀಕರಣ ಮತ್ತು ಸಡಿಲಿಕೆ ನೀಡಿದ್ದರೂ ಪ್ರಸ್ತುತ ಹಣಕಾಸು ವರ್ಷದ ಬಗ್ಗೆ ಯಾವುದೇ ಸ್ಪಷ್ಟೀಕರಣ ಅಥವಾ ಸಡಿಲಿಕೆ ನೀಡಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು ಎಂದು ಇನ್ನೋವಾಟಸ್ ಲಾ, ಪಾಲುದಾರ ಅಮಿಶ್ ಟಂಡನ್ ಹೇಳಿದ್ದಾರೆ. ಬೈದ್ ಅವರ ಪರವಾಗಿ ಇವರು ವಾದಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2021 ರಲ್ಲಿ ಈ ಬಗ್ಗೆ ಏನೂ ಪ್ರಸ್ತಾಪವಾಗದೇ ಇರುವ ಕಾರಣ ಅನಿವಾಸಿ ಭಾರತೀಯರು ಆತಂಕಕ್ಕೊಳಗಾಗಿದ್ದರು. ಕೆಲವರು ತಾವು ಇರುವ ದೇಶದಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದರೆ ಇನ್ನು ಕೆಲವರು ಕಡಿಮೆ ತೆರಿಗೆ ಅಥವಾ ತೆರಿಗೆಯನ್ನು ಪಾವತಿ ಮಾಡಲೇ ಇಲ್ಲ. ಬಜೆಟ್ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದ ಕಾರಣ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕಾಗಿ ಬರುವುದೇ ಎಂಬ ಭಯ ಮೂಡಿತ್ತು ಎಂದು ಚೋಕ್ಷಿ ಆ್ಯಂಡ್ ಚೋಕ್ಷಿ ಪಾಲುದಾರ ಮಿತಿಲ್ ಚೋಕ್ಷಿ ಹೇಳಿದ್ದಾರೆ.
ಇದನ್ನೂ ಓದಿ: #NRIappealDay: ನಮ್ಮ ಬೇಡಿಕೆಯನ್ನು ಈಡೇರಿಸಿ; ರಾಜ್ಯ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರ ಒಕ್ಕೊರಲಿನ ಕೂಗು
ಏನಿದು ಸರವಣ ಭವನ ಪ್ರಕರಣ? ಸರವಣ ಭವನದ ಪಾಲುದಾರ ಪಿಚೈ ರಾಜಗೋಪಾಲ್ ಶಿವ ಕುಮಾರ್ ಸಲ್ಲಿಸಿದ ಅರ್ಜಿ ಪ್ರಕಾರ, ತಮ್ಮ ಕಂಪನಿಯು ಫೆಬ್ರುವರಿ 1, 2021ಕ್ಕಿಂತ ಮುನ್ನ ಐಟಿಎಸ್‌ಸಿ (ITSC )ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಹಣಕಾಸು ಮಸೂದೆಯ ಷರತ್ತು ಪ್ರಕಾರ ಐಟಿಎಸ್‌ಸಿ ಅರ್ಜಿ ನೋಂದಣಿ ಮಾಡಲು ನಿರಾಕರಿಸಿದೆ. ಫೆಬ್ರವರಿ 1, 2021 ರಿಂದ ಐಟಿಎಸ್‌ಸಿಯನ್ನು ತಕ್ಷಣದಿಂದ ರದ್ದು ಮಾಡಲು ಹಣಕಾಸು ಮಸೂದೆ ಪ್ರಸ್ತಾಪಿಸಿತ್ತು. ಅದೇ ವೇಳೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಐಟಿಎಸ್‌ಸಿಗೆ ಮುಂಚಿತವಾಗಿ ವಿಲೇವಾರಿ ಮಾಡಲು ಮಧ್ಯಂತರ ಮಂಡಳಿಯನ್ನು ರಚಿಸಲಾಗುವುದು. ಪ್ರಸ್ತಾವಿತ ಮಧ್ಯಂತರ ಮಂಡಳಿಯು ಯಾವುದೇ ಹೊಸ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಪಿಚೈ ರಾಜಗೋಪಾಲ್ ಶಿವ ಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚುವರಿ ಆದಾಯದ ಮೇಲಿರುವ ತೆರಿಗೆಯನ್ನು ನಾನು ಪೂರ್ತಿ ಪಾವತಿ ಮಾಡಿದ್ದೇನೆ ಎಂದು ಅರ್ಜಿದಾರ ಶಿವಕುಮಾರ್ ಹೇಳಿದ್ದಾರೆ. ಹಣಕಾಸು ಮಸೂದೆ 2021ಯು ಸದ್ಯ ಕರಡು ರೂಪದಲ್ಲಿದ್ದು ಅದು ಇನ್ನೂ ಕಾಯ್ದೆ ಆಗಿಲ್ಲ. ಹೀಗಿರುವಾಗ ಆದಾಯ ತೆರಿಗೆ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಯನ್ನಾಧರಿಸಿ ಐಟಿಎಸ್‌ಸಿ ನಮ್ಮ ಅರ್ಜಿಯನ್ನು ನಿರಾಕರಿಸುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ಅರ್ಜಿಯನ್ನು ಸ್ವೀಕರಿಸದೇ ಇದ್ದರೆ ತೆರಿಗೆದಾರರು ಕಷ್ಟ ಅನುಭವಿಸಬೇಕಾಗುತ್ತದೆ. ನೋಟಿಸ್ಗೆ ವಿವರವಾಗಿ ಉತ್ತರಿಸಬೇಕು ಮತ್ತು ವಶಪಡಿಸಿಕೊಂಡಿರುವ ದಾಖಲೆ ಬಗ್ಗೆ ಮಾರ್ಚ್ 31, 2021ರೊಳಗೆ ವಿವರಣೆ ಸಲ್ಲಿಸಬೇಕು. ಐಟಿಎಸ್‌ಸಿಗೆ ಮುಂಚಿತವಾಗಿ ಹಂಚಿಕೊಂಡ ವಿಷಯಗಳ ಆಧಾರದ ಮೇಲೆ ಹೆಚ್ಚುವರಿ ಆದಾಯವನ್ನು ಪರಿಗಣಿಸಲಾಗುತ್ತದೆ. ಕಂಪನಿಯು ತನ್ನ ಅರ್ಜಿಯನ್ನು ಐಟಿಎಸ್‌ಸಿಗೆ ಸಲ್ಲಿಸಲು ತಯಾರಿ ನಡೆಸುತ್ತಿರುವುದರಿಂದ ತೆರಿಗೆಗಳನ್ನು ಸಹ ಪಾವತಿಸಲಾಗಿದೆ. ಪಾವತಿಸಿದ ತೆರಿಗೆಗಳ ಬಗ್ಗೆ ತೆರಿಗೆದಾರರು ವಿವರಣೆ ಸಲ್ಲಿಸಬೇಕಾಗುತ್ತದೆ. ಆದರೆ ಐಟಿಎಸ್‌ಸಿ ಮುಂದೆ ಇದನ್ನು ಸಲ್ಲಿಸಲು ಸಾಧ್ಯವಾಗದೇ ಇದ್ದರೆ ಮತ್ತು ಹೆಚ್ಚುವರಿ ಆದಾಯವನ್ನು ರಿಟರ್ನ್ಸ್ನಲ್ಲಿ ತೋರಿಸದಿದ್ದರೆ, ಅದು ದಂಡ ಪಾವತಿ ಮಾಡಬೇಕಾಗಿ ಬರುತ್ತದೆ ಎಂದು ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ದಿಲೀಪ್ ಲಖಾನಿ ಹೇಳಿದ್ದಾರೆ.
ಇದನ್ನೂ ಓದಿ : Budget 2021 Explainer | ಆದಾಯ ತೆರಿಗೆ ಉಳಿಸಲು ಇಷ್ಟೆಲ್ಲಾ ಮಾರ್ಗಗಳಿವೆ
ಜನವರಿ 2019ರಲ್ಲಿ ಆದಾಯ ತೆರಿಗೆ ಇಲಾಖೆಯು ಸರವಣ ಭವನ್ನ ವಿವಿಧ ಶಾಖೆಗಳಲ್ಲಿ ಮತ್ತು ಅರ್ಜಿದಾರರ ವಸತಿ ಮೇಲೆ ದಾಳಿ ನಡೆಸಿತ್ತು.
Published On - 1:10 pm, Thu, 11 February 21