TRAI Guidelines: ಟ್ರಾಯ್ ಹೊಸ ನಿಯಮ; ಓಟಿಪಿ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಇ-ಕಾಮರ್ಸ್ ಸೈಟ್ಗಳ ಗ್ರಾಹಕರು
The Telecom Regulatory Authority of India (Trai) guidelines: ನಿನ್ನೆಯಿಂದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್ನಲ್ಲಿನ ವಿಷಯವನ್ನು ಪರಿಶೀಲನೆ ಮಾಡದಿದ್ದರೆ ಈ ಮೆಸೇಜ್ಗಳನ್ನು ಅನಧಿಕೃತ ಮತ್ತು ನೋಂದಾವಣೆ ಹೊಂದಿಲ್ಲದ ಮೆಸೇಜ್ ಎಂದು ಪರಿಗಣಿಸಲಾಗುತ್ತಿದೆ. ಅಂತಹ ಮೆಸೇಜ್ಗಳನ್ನು ಬ್ಲಾಕ್ ಮಾಡುವ ಅನಿವಾರ್ಯತೆಗೆ ಟೆಲಿಕಾಂ ಕಂಪನಿಗಳು ಸಿಲುಕಿವೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (The Telecom Regulatory Authority of India (TRAI) guidelines) ಹೊರಡಿಸಿದ ನೂತನ ನಿಯಮಾವಳಿಯಿಂದ ದೇಶಾದ್ಯಂತ ಪಾವತಿ ಸೇವೆಗಳಲ್ಲಿ ಬಳಸುವ ಓಟಿಪಿ ರವಾನೆಯಲ್ಲಿ (OTP) ಭಾರಿ ವ್ಯತ್ಯಯ ಕಂಡುಬಂದಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಜಾಲತಾಣ ವರದಿ ಮಾಡಿದೆ. ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್ನಲ್ಲಿನ ವಿಷಯವನ್ನು ಪರಿಶೀಲನೆ ಮಾಡಬೇಕು ಎಂಬ ಹೊಸ ನಿಯಮವೇ ಈ ತೊಂದರೆಗೆ ಕಾರಣವಾಗಿದೆ. ಸ್ಕ್ರಬ್ಬಿಂಗ್ (Scrubbing) ಎಂದು ಕರೆಯಲಾಗಿರುವ ಈ ಪ್ರಕ್ರಿಯೆ ನಿನ್ನೆಯಿಂದ ಜಾರಿಯಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಈ ಮುನ್ನವೇ ನೂತನ ನಿಯಮವನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿತ್ತು. ಅಲ್ಲದೇ ಹಲವು ಬಾರಿ ಅನುಷ್ಠಾನಕ್ಕೂ ಮುಂದಾಗಿತ್ತು. ಆದರೂ ಸ್ಕ್ರಬ್ಬಿಂಗ್ ಪ್ರಕ್ರಿಯೆ ಜಾರಿಯಾಗಿರಲಿಲ್ಲ. ಅಂತೂ ನಿನ್ನೆಯಿಂದ ಈ ಪ್ರಕ್ರಿಯ ಅನುಸರಿಸಿಯೇ ಟೆಲಿಕಾಂ ಕಂಪನಿಗಳು ಕಾರ್ಯನಿರ್ವಹಿಸಬೇಕಿದ್ದು, ಇ-ಕಾಮರ್ಸ್ ಸೈಟ್ ಮತ್ತು ಇತರ ಪಾವತಿ ಸೇವೆಗಳಲ್ಲಿನ ಓಟಿಪಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ನಿನ್ನೆಯಿಂದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್ನಲ್ಲಿನ ವಿಷಯವನ್ನು ಪರಿಶೀಲನೆ ಮಾಡದಿದ್ದರೆ ಈ ಮೆಸೇಜ್ಗಳನ್ನು ಅನಧಿಕೃತ ಮತ್ತು ನೋಂದಾವಣೆ ಹೊಂದಿಲ್ಲದ ಮೆಸೇಜ್ ಎಂದು ಪರಿಗಣಿಸಲಾಗುತ್ತಿದೆ. ಅಂತಹ ಮೆಸೇಜ್ಗಳನ್ನು ಬ್ಲಾಕ್ ಮಾಡುವ ಅನಿವಾರ್ಯತೆಗೆ ಟೆಲಿಕಾಂ ಕಂಪನಿಗಳು ಸಿಲುಕಿವೆ.
ವಹಿವಾಟಿಗೆ ಸಂಬಂಧಿಸಿದ ಮೆಸೇಜ್ಗಳಲ್ಲಿ ಯಾವುದೇ ಕಂಪೆನಿ, ಉತ್ಪನ್ನಗಳನ್ನು ಪ್ರಚಾರ ಮಾಡುವಂತಹ ಮಾಹಿತಿ, ಜಾಹೀರಾತುಗಳು ಸೇರದೇ ಇರಲು ಈ ನಿಯಮ ಜಾರಿಗೊಳಿಸಿದ್ದೇವೆ ಎಂದು ಟ್ರಾಯ್ ತಿಳಿಸಿದೆ.
ನೂತನ ನಿಯಮದಿಂದಾದ ತೊಂದರೆಯಿಂದ ಇ-ಕಾಮರ್ಸ್ ಉಪಯೋಗಿಸುವ ಗ್ರಾಹಕರು ಓಟಿಪಿ ಬಂದಿಲ್ಲ ಎಂದು ದೂರಿ ಬ್ಯಾಂಕ್ಗಳ ಸಹಹಾಯವಾಣಿಗೆ ದೂರು ನೀಡುತ್ತಿದ್ದಾರೆ. ಇಂತಹ ದೂರುಗಳನ್ನು ಪರಿಹರಿಸುವ ಕಾರ್ಯದಲ್ಲೇ ಇಡೀ ದಿನ ವ್ಯಯವಾಗುತ್ತಿದೆ. ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್ನಲ್ಲಿನ ವಿಷಯವನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಿಲ್ಲ. ಸೂಕ್ತ ಕ್ರಮಗಳನ್ನು ಅನುಸರಿಸದೇ ಸ್ಕ್ರಬ್ಬಿಂಗ್ ಅನ್ನು ಜಾರಿಗೊಳಿಸಲಾಗಿದೆ ಎಂದು ಬ್ಯಾಂಕ್ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ. ಈ ಕುರಿತು ಆಂಗ್ಲ ಪತ್ರಿಕೆಯ ಜಾಲತಾಣವೊಂದು ವರದಿ ಮಾಡಿದ ಪ್ರಕಾರ ‘ಇ-ಕಾಮರ್ಸ್ ಸೈಟ್ನಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದೆ. ಆದರೆ, ಓಟಿಪಿ ಬರಲೇ ಇಲ್ಲ. ಹೀಗಾಗಿ ಖರೀದಿ ಮಾಡಲು ಸಾಧ್ಯವಾಗಲಿಲ್ಲ’ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ. ಇಂತಹ ಹಲವು ಗ್ರಾಹಕರು ಬ್ಯಾಂಕ್ ಸಹಾಯವಾಣಿಯ ಮೊರೆ ಹೋಗುತ್ತಿದ್ದಾರೆ.
ಈ ತೊಂದರೆಗೆ ಕಾರಣವಾದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್ನಲ್ಲಿನ ವಿಷಯವನ್ನು ಪರಿಶೀಲನೆ ಮಾಡಬೇಕು ಎಂಬ ನಿಯಮವನ್ನು ಸಮರ್ಪಕ ಅನುಷ್ಠಾನಗೊಳಿಸಬೇಕು. ಅಂದಾಗ ಮಾತ್ರ ಈ ತೊಂದರೆ ಪರಿಹಾರ ಸಾಧ್ಯವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: Reliance Jio Phone Prepaid Plan: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ; ರೂ. 22 ಕನಿಷ್ಠ
Published On - 1:19 pm, Tue, 9 March 21