ಮಂಜಿನ ನಾಡಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಬರ್ತ್​ ಡೇ ಸಂಭ್ರಮದ ಝಲಕ್! Photos

ಕೊಡಗು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಇರುವ ಆರೋಪ ಕೇಳಿಬರುತ್ತಿದ್ದಂತೆ ಇಡೀ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಬ್ಬರು ನಟಿಯರ ಬಂಧನ ಮತ್ತು ಕೆಲವು ನಟ-ನಟಿಯರ ಹಾಗೂ ನಿರೂಪಕರ ವಿಚಾರಣೆ ಚಿತ್ರರಂಗಕ್ಕೆ ಸಾಕಷ್ಟು ಆಘಾತ ಉಂಟುಮಾಡಿದೆ. ಇತ್ತ, ಇವೆಲ್ಲದರ ಗೋಜು ಬೇಡವೇ ಬೇಡ ಎಂಬುವಂತೆ ರಿಯಲ್​ ಸ್ಟಾರ್ ಉಪೇಂದ್ರ​ ಸಿಲಿಕಾನ್ ಸಿಟಿ ಬೆಂಗಳೂರನ್ನು ತೊರೆದು ಮಂಜಿನ ನಾಡು ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ರೆಸಾರ್ಟ್ ಒಂದರಲ್ಲಿ ಸೆಪ್ಟೆಂಬರ್ 18 ರಂದು ಪತ್ನಿ ಪ್ರಿಯಾಂಕಾ, […]

ಮಂಜಿನ ನಾಡಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಬರ್ತ್​ ಡೇ ಸಂಭ್ರಮದ ಝಲಕ್! Photos
Follow us
ಆಯೇಷಾ ಬಾನು
| Updated By: KUSHAL V

Updated on: Sep 20, 2020 | 12:25 PM

ಕೊಡಗು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಇರುವ ಆರೋಪ ಕೇಳಿಬರುತ್ತಿದ್ದಂತೆ ಇಡೀ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಬ್ಬರು ನಟಿಯರ ಬಂಧನ ಮತ್ತು ಕೆಲವು ನಟ-ನಟಿಯರ ಹಾಗೂ ನಿರೂಪಕರ ವಿಚಾರಣೆ ಚಿತ್ರರಂಗಕ್ಕೆ ಸಾಕಷ್ಟು ಆಘಾತ ಉಂಟುಮಾಡಿದೆ.

ಇತ್ತ, ಇವೆಲ್ಲದರ ಗೋಜು ಬೇಡವೇ ಬೇಡ ಎಂಬುವಂತೆ ರಿಯಲ್​ ಸ್ಟಾರ್ ಉಪೇಂದ್ರ​ ಸಿಲಿಕಾನ್ ಸಿಟಿ ಬೆಂಗಳೂರನ್ನು ತೊರೆದು ಮಂಜಿನ ನಾಡು ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ರೆಸಾರ್ಟ್ ಒಂದರಲ್ಲಿ ಸೆಪ್ಟೆಂಬರ್ 18 ರಂದು ಪತ್ನಿ ಪ್ರಿಯಾಂಕಾ, ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಉಪ್ಪಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬರ್ತ್​ ಡೇ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ನಟನ ಇತರೆ ಸ್ನೇಹಿತರು ಸಹ ಭಾಗಿಯಾಗಿದ್ದರು. ಉಪ್ಪಿ ಜಿಲ್ಲೆಯ ಸುಂದರ ತಾಣಗಳಲ್ಲಿ ಮೋಜು ಮಸ್ತಿ ಮಾಡಿರುವ ಜೊತೆಗೆ ತಮ್ಮ ಕುಟುಂಬದವರೊಂದಿಗೆ ಸೇರಿ ಸಿಸಿಯೊಂದನ್ನು ಸಹ ನೆಟ್ಟು ಮಜಾ ಮಾಡಿದ್ದಾರೆ.