ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ 60 ಮನೆ ಮುಂದೆ ವಾಮಾಚಾರ; ಗ್ರಾಮಸ್ಥರ ಆರೋಪ
ಸುಮಾರು 60ಕ್ಕೂ ಹೆಚ್ಚು ಮನೆ ಮುಂದೆ ಅರಿಶಿಣ-ಕುಂಕುಮ ಕಂಡುಬಂದಿದ್ದು, ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಈ ರೀತಿ ವಾಮಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ತಾಲೂಕಿನ ಓತಿಘಟ್ಟ ಗ್ರಾಮದ ಮನೆಯ ಮುಂದೆ ಅರಿಶಿಣ-ಕುಂಕುಮ ಪತ್ತೆಯಾಗಿದ್ದು, ವಾಮಾಚಾರ ಮಾಡಿರುವುದಾಗಿ ಗ್ರಾಮಸ್ಥರಿಂದ ಆರೋಪ ಕೇಳಿಬಂದಿದೆ.
ಸುಮಾರು 60ಕ್ಕೂ ಹೆಚ್ಚು ಮನೆ ಮುಂದೆ ಅರಿಶಿಣ-ಕುಂಕುಮ ಕಂಡುಬಂದಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಈ ರೀತಿ ವಾಮಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ 22ರಂದು ನಡೆಯುವ ಚುನಾವಣೆ ಹಿನ್ನೆಲೆ ಸೊಗಾನೆ ಗ್ರಾಮ ಪಂಚಾಯಿತಿಗೆ 9 ಜನ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹೀಗಾಗಿ ಈ ರೀತಿಯ ಮಾಟಗಾರಿಕೆ ಮಾಡಿದ್ದಾರೆಂದು ಗ್ರಾಮಸ್ಥರಿಂದ ತಿಳಿದುಬಂದಿದೆ.
ಗ್ರಾಮಸ್ಥರ ಆರೋಪ
ಚುನಾವಣಾ ಆಯೋಗಕ್ಕೆ ಡೋಂಟ್ ಕೇರ್! ಗ್ರಾ. ಪಂ. ಸದಸ್ಯ ಸ್ಥಾನ ಹರಾಜು, ಪ್ರಜಾಪ್ರಭುತ್ವದ ಮಾನವೂ ಹರಾಜು