ಗುರು ಅರ್ಜುನ್ ದೇವ್ ಸಿಖ್ರ ಐದನೇ ಗುರು ಹಾಗೂ ಸಿಖ್ ನಂಬಿಕೆಯಲ್ಲಿ ಹುತಾತ್ಮರಾದ ಇಬ್ಬರು ಗುರುಗಳಲ್ಲಿ ಮೊದಲನೇಯವರು. ಅವರ ಹುತಾತ್ಮ ದಿನವನ್ನು 1606 ಜೂನ್ 14ರಂದು ಆಚರಿಸಲಾಗುತ್ತದೆ. ಸಿಖ್ ಸಮುದಾಯಕ್ಕೆ ಸೇರಿದ ಜನರು ನೆನಪಿನ ಸಂಕೇತವಾಗಿ ಅವರ ಹುತಾತ್ಮ ದಿನವನ್ನು ಚಬೀಲ್ ದಿನವೆಂದು ಆಚರಿಸುತ್ತಾರೆ. ಹಾಗೂ ಬೇಸಿಗೆಯಲ್ಲಿ ಬಿಸಿಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಗುಲಾಬಿ ಹಾಲನ್ನು ನೀಡುವ ಪದ್ಧತಿ ರೂಢಿಯಲ್ಲಿದೆ.
ಗುರು ಅರ್ಜುನ್ ದೇವ್ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು * 1563ರಲ್ಲಿ ಗುರು ಅರ್ಜುನ್ ದೇವ್ ಅವರು ಜನಿಸಿದರು. ಅವರ ಅಜ್ಜ ಗುರು ಅಮರ್ ದಾಸ್ ಮತ್ತು ಅವರ ತಂದೆ ಗುರು ರಾಮದಾಸ್. ಕ್ರಮವಾಗಿ ಸಿಖ್ರ ಮೂರನೇ ಮತ್ತು ನಾಲ್ಕನೇ ಗುರು
* ಅವರ ಮಗ ಹರ್ಗೋಬಿಂದ್ ಸಿಂಗ್. ಇವರು ಸಿಖ್ರ ಆರನೇ ಗುರುಗಳಾದರು
* ಗುರು ಅರ್ಜುನ್ ದೇವ್ ಅವರು ಗೋಲ್ಡನ್ ಟೆಂಪಲ್ ಅಡಿಪಾಯವನ್ನು ಹಾಕಿದರು. ಹಾಗೂ ಈ ದೇವಾಲಯದ ನಕ್ಷೆಯನ್ನು ತಯಾರಿಸಿದರು
* ಆಧ್ಯಾತ್ಮಿಕ ಕಾವ್ಯ ಮತ್ತು ಸಂಗೀತ ರಾಗಗಳನ್ನು ಒಳಗೊಂಡ ಸಿಖ್ರ ಧಾರ್ಮಿಕ ಗ್ರಂಥ ಆದಿ ಗ್ರಂಥವನ್ನು ಇವರು ರಚಿಸಿದರು. ಇದನ್ನು ಹರ್ಮಂದಿರ್ ಸಾಹಿಬ್ನಲ್ಲಿ ಸ್ಥಾಪಿಸಲಾಯಿತು
* ಸಿಖ್ ಧರ್ಮದ ಕುರಿತಾಗಿ ಜನರಲ್ಲಿ ಹೆಚ್ಚುತ್ತಿರುವ ಪ್ರಭಾವನ್ನು ಕಂಡ ಮೊಘಲ್ ಚಕ್ರವತ್ರಿ ಜಹಾಂಗೀರ್, ಗುರು ಅರ್ಜುನ್ ದೇವ್ ಅವರನ್ನು ಸೆರೆಹಿಡಿದು ಲಾಹೋರ್ ಕೋಟೆಯಲ್ಲಿ ಬಂಧಿಸಿದನು
*ಲಾಹೋರ್ನಲ್ಲಿ ಜೂನ್ ತಿಂಗಳಿನಲ್ಲಿ ಗುರು ಅರ್ಜುನ್ ದೇವ್ ಅವರು ಮೊಘಲರ ಚಿತ್ರಹಿಂಸೆ ತಾಳಲಾರದೆ ಹುತಾತ್ಮರಾದರು
*ಗುರು ಅರ್ಜುನ್ ದೇವ್ ಅವರ ಹುತಾತ್ಮ ದಿನದಂದು ಜನರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಶ್ರೀ ಗುರು ಗ್ರಂಥ ಸಾಹಿಬ್ಅನ್ನು ಓದುತ್ತಾರೆ. ಆದರೆ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ.
ಇದನ್ನೂ ಓದಿ:
ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಏನಿದೆ ಗೊತ್ತಾ?