AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ರೀತಿಯ ಜೀವನಶೈಲಿಗೆ ಇಲ್ಲಿವೆ 8 ಜಪಾನಿ ಸಲಹೆಗಳು

ನಿಮ್ಮ ಆರೋಗ್ಯ ಮತ್ತು ಜೀವನವನ್ನು ಬದಲಾಯಿಸಬಲ್ಲ ಅತ್ಯುತ್ತಮ ಜಪಾನಿ ಪರಿಕಲ್ಪನೆಗಳು ನಿಮ್ಮನ್ನು ಬದಲಾಯಿಸುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದು ಅವುಗಳನ್ನು ಅನುಸರಿಸಿ ಫಲಿತಾಂಶ ಕಾಣಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.

ಉತ್ತಮ ರೀತಿಯ ಜೀವನಶೈಲಿಗೆ ಇಲ್ಲಿವೆ 8 ಜಪಾನಿ ಸಲಹೆಗಳು
Japanese Lifestyle
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:May 23, 2023 | 3:45 PM

Share

ಜಪಾನ್ ದೇಶದ ಜನರು (Japanese) ತಂತ್ರಜ್ಞಾನದಲ್ಲಿನ (Technology) ಉತ್ಕೃಷ್ಟತೆ ಮತ್ತು ಬಹುತೇಕ ಪರಿಪೂರ್ಣ ಜೀವನ ವಿಧಾನಕ್ಕೆ (Lifestyle) ಹೆಸರು ವಾಸಿಯಾಗಿದ್ದಾರೆ ಎಂಬುದು ತಿಳಿದಿರುವ ವಿಚಾರ. ಅವರ ಜೀವನಶೈಲಿ ತುಂಬಾ ಸೂಕ್ಷ್ಮ. ಅಲ್ಲದೆ ಅವರ ಜೀವನ ಸಾಗಿಸುವ ವಿಧಾನ ಬದುಕಿನಲ್ಲಿ ನೊಂದವರಿಗೆ ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆ. ನೀವೂ ಸಹ ಉತ್ತಮ ಜೀವನವನ್ನು ನಡೆಸಲು ಬಯಸಿದರೆ ಈ ಜಪಾನಿ ವಿಧಾನಗಳನ್ನು (Lifestyle concepts)  ಕಾರ್ಯಗತಗೊಳಿಸಿ ಮತ್ತು ಶೀಘ್ರದಲ್ಲೇ ನಿಮ್ಮಲ್ಲಿ ವ್ಯತ್ಯಾಸವನ್ನು ನೋಡಬಹುದು. ಈ ಬಗ್ಗೆ ಅನೇಕ ಸಂಶೋಧನೆಗಳು ನಡೆಸಿದ್ದು ಇಂತಹ ಪರಿಕಲ್ಪನೆಗಳಿಂದ ಜನರ ಜೀವನ ಬದಲಾಗಿದೆ ಎಂಬುದನ್ನು ತಿಳಿಸಿದೆ.

ಹಿಂದೆ ಈ ವಿಷಯದ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಕೆಲವು ಸಲಹೆಗಳು ತುಂಬಾ ಪರಿಣಾಮಕಾರಿಯಾಗಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

-ಇಕಿಗೈ ಜಪಾನಿನಲ್ಲಿ ‘ಇಕಿ’ ಎಂದರೆ ಜೀವನ ಮತ್ತು ‘ಗೈ’ ಎಂದರೆ ಮೌಲ್ಯ ಅಥವಾ ಮೌಲ್ಯವನ್ನು ವಿವರಿಸುವುದು. ಹಾಗಾಗಿ ಇಕಿಗೈ ಪರಿಕಲ್ಪನೆಯು ಸ್ವಯಂ ವಿವರಣಾತ್ಮಕವಾಗಿದೆ. ಅಂದರೆ ಮೊದಲು ನಿಮಗೆ ನಿಮ್ಮ ಜೀವನದ ಬಗ್ಗೆ ಮತ್ತು ನಾನೇನು ಮಾಡಬೇಕು ಎಂಬ ಬಗ್ಗೆ ಅರಿವಿರಬೇಕು. ಜೀವನದಲ್ಲಿ ನಿಮ್ಮ ಉದ್ದೇಶವೇನು? ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆ ನಿರ್ಧಾರ ನಿಮ್ಮನ್ನು ಪ್ರತಿದಿನ ಎಚ್ಚರಿಸಬೇಕು. ಅಂದರೆ ಅದು ಅಷ್ಟು ಗಟ್ಟಿ ಮತ್ತು ಪ್ರಬಲವಾಗಿರಬೇಕು. ಜಪಾನೀಯರು ತಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ಇಕಿಗೈ ಮನ್ನಣೆ ನೀಡುತ್ತಾರೆ ಮತ್ತು ಪ್ರತಿದಿನ ತಮ್ಮ ಜೀವನಕ್ಕೆ ಮೌಲ್ಯವನ್ನು ಸೇರಿಸುವ, ಪ್ರಪಂಚದ ಅಗತ್ಯಗಳಿಗೆ ಹೊಂದಿಕೆಯಾಗುವ ಏನನ್ನಾದರೂ ಮಾಡಲು ಇದು ತುಂಬಾ ಸಹಕಾರಿಯಾಗಿದೆ.

-ಕೈಜೆನ್ ಜಪಾನಿನ ತತ್ವಶಾಸ್ತ್ರ ಎಂದು ಕರೆಯಲ್ಪಡುವ ಕೈಜೆನ್ ಪ್ರಕ್ರಿಯೆಗಳು ತಮ್ಮ ವ್ಯವಸ್ಥೆಯಲ್ಲಿ ನಿರಂತರ ಸುಧಾರಣೆಯ ಮಾಡುವುದನ್ನು ಆಧರಿಸಿದೆ. ಬದಲಾವಣೆಗಳು ಅಪೇಕ್ಷಿತ ಪರಿಣಾಮವನ್ನು ಹೊಂದಿವೆಯೇ ಎಂದು ನಿರ್ಧರಿಸಲು, ಅಂದರೆ ಉದಾಹರಣೆಗೆ ನಿಮ್ಮ ಜೀವನದಲ್ಲಿ ಚಿಕ್ಕ ಘಟನೆಗಳು ಕೂಡ ನಿಮ್ಮ ಜೀವನವನ್ನು ಸುಧಾರಣೆ ಮಾಡುತ್ತದೆ ಎಂಬುದನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ಬದಲಾವಣೆ ಆದಾಗ ಅದ್ಕಕೆ ತಲೆಕೆಡಿಸಿಕೊಳ್ಳದೆ ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಬೇಕು ನಂತರ ಫಲಿತಾಂಶಗಳನ್ನು ನಿರ್ಣಯಿಸುವುದು ಅವಶ್ಯಕ.

ಕೈಜೆನ್ ಈ ಕೆಳಗಿನ ತತ್ವಗಳನ್ನು ಆಧರಿಸಿದೆ:

-ಕೈಜೆನ್ ನಲ್ಲಿ, ಜನರನ್ನು ಗೌರವಿಸಲಾಗುತ್ತದೆ ಮತ್ತು ಅವರ ಆಲೋಚನೆಗಳು ಮತ್ತು ಕೊಡುಗೆಗಳನ್ನು ಮೌಲ್ಯೀಕರಿಸಲಾಗುತ್ತದೆ. -ಇದರಲ್ಲಿ ನಿರಂತರ, ಹೆಚ್ಚುತ್ತಿರುವ ಸುಧಾರಣೆಗೆ ಒತ್ತು ನೀಡಬೇಕು ಎನ್ನಲಾಗುತ್ತದೆ. -ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಲು ವೈಯಕ್ತಿಕ ಪ್ರಯತ್ನವನ್ನು ಅವಲಂಬಿಸುವ ಬದಲು, ತಂಡವಾಗಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಒತ್ತಿ ಹೇಳಲಾಗುತ್ತದೆ. -ಸ್ಪಷ್ಟ, ಸ್ಥಿರವಾದ ಪ್ರಕ್ರಿಯೆಗಳು ಮತ್ತು ಮಾನದಂಡಗಳನ್ನು ರಚಿಸುವುದು ಕೈಜೆನ್ ನ ಕಡ್ಡಾಯ ಭಾಗವಾಗಿದೆ.

ಪೊಮೊಡೊರೊ ಟೆಕ್ನಿಕ್ ಪೊಮೊಡೊರೊ ತಂತ್ರ ನಿಮ್ಮ ಬದುಕಿಗೆ ತುಂಬಾ ಸಹಕಾರಿಯಾಗಿದೆ. ಇದೇನೆಂದರೆ ನೀವು ಕೆಲಸ ಮಾಡುತ್ತೀರುವ ಸಮಯದಲ್ಲಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಬಳಿಕ ಮತ್ತೆ ಕೆಲಸ ಮಾಡುವುದು. ಉದಾಹರಣೆಗೆ 25 ನಿಮಿಷ ಕೆಲಸ ಮಾಡಿ ಬಳಿಕ 5 ನಿಮಿಷ ವಿರಾಮ ಹೀಗೆ ಇದನ್ನು ಪುನರಾವರ್ತಿಸಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸಕ್ಕೆ ಗೇಮ್ ಚೇಂಜರ್ ಆಗುವುದರಲ್ಲಿ ಸಂಶಯವಿಲ್ಲ.ಕೆಲಸ ಮಾಡುವಾಗ ಈ ವಿಧಾನ ಬಳಸುವುದರಿಂದ ನಮ್ಮ ಚಂಚಲತೆ ಕಡಿಮೆ ಯಾಗುತ್ತದೆ. ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಿಶ್ರಾಂತಿ ಬಳಿಕ ನೀವು ಮತ್ತೆ ರೀಚಾರ್ಜ್ ಆಗುತ್ತೀರಿ.

-ಹರ ಹಚಿ ಬು ಇದು ಜಪಾನಿನ ಪ್ರಸಿದ್ಧ ಆಡು ಮಾತು. ಅಂದರೆ ನೀವು 80% ಹೊಟ್ಟೆ ತುಂಬಿದಾಗ ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಇಲ್ಲಿನವರು ಕ್ಯಾಲೊರಿ ಗಮನದಲ್ಲಿಟ್ಟುಕೊಂಡು ಎಷ್ಟು ತಿನ್ನಬೇಕು ಎಂಬುದನ್ನು ಯೋಚಿಸುತ್ತಾರೆ. ಇದರಿಂದಾಗಿ ಜಪಾನಿನ ಒಕಿನಾವಾ ಎನ್ನುವ ಪ್ರದೇಶದಲ್ಲಿ ವಿಶ್ವದ ಬೇರೆಡೆಗಿಂತ ಹೆಚ್ಚಿನ ಶೇಕಡಾವಾರು ಶತಾಯುಷಿಗಳನ್ನು ಹೊಂದಿರುವ ಒಂದು ಭಾಗವಾಗಿದೆ ಎಂದು ವರದಿಗಳು ತಿಳಿಸಿದೆ. ಈ ಸಾಂಸ್ಕೃತಿಕ ಅಭ್ಯಾಸವು ತೂಕ ಕಾಪಾಡುವುದರ ಜೊತೆಗೆ ಹೊಟ್ಟೆ ಬಿರಿಯುವಷ್ಟು ತಿನ್ನವುದನ್ನು ಕೂಡ ತಡೆಯುತ್ತದೆ. ಹರ ಹಚಿ ಬು ಎಂಬ ಮಾತನ್ನು ಊಟ ಮಾಡುವ ಮೊದಲು ಅಲ್ಲಿನ ಜನ ಬಳಸುತ್ತಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

-ಶೋಶಿನ್ ಝೆನ್ ಬೌದ್ಧ ಧರ್ಮದಲ್ಲಿ ಶೋಶಿನ್ ಎಂದು ಕರೆಯಲ್ಪಡುವ ಒಂದು ಪರಿಕಲ್ಪನೆಯಿದೆ. ಇದರರ್ಥ “ಆರಂಭಿಕ ಮನಸ್ಸು” “ದಿ ಬಿಗಿನರ್ಸ್ ಮೈಂಡ್”. ಅಂದರೆ ಒಂದು ವಿಷಯವನ್ನು ಅಧ್ಯಯನ ಮಾಡುವಾಗ ನಿಮ್ಮ ಪೂರ್ವಗ್ರಹಿಕೆಗಳನ್ನು ಬಿಟ್ಟು, ಮುಕ್ತ ಮನೋಭಾವವನ್ನು ಹೊಂದಿರಬೇಕು ಎಂಬುದನ್ನು ಸೂಚಿಸುತ್ತದೆ. ಕಲಿಯಲು ನೀವು ಆರಂಭಿಕರಾದಾಗ, ನಿಮ್ಮ ಮನಸ್ಸು ಖಾಲಿ ಮತ್ತು ತೆರೆದಿಟ್ಟ ಪುಸ್ತಕವಾಗಿರುತ್ತದೆ. ಮಗು ಮೊದಲ ಬಾರಿಗೆ ಏನನ್ನಾದರೂ ಕಲಿಯಲು ಹೇಗೆ ಸಿದ್ಧವಿರುತ್ತದೆಯೋ ಹಾಗೇ, ಕಲಿಯುವ ತುಡಿತ ಸದಾ ಜಾಗೃತವಾಗಿರಬೇಕು. ಏನಾದರೂ ಹೊಸತನ್ನು ತಿಳಿದುಕೊಳ್ಳಬೇಕೆಂದಾಗ ಮೊದಲು ಚಿಕ್ಕವರು ದೊಡ್ಡವರು ಎನ್ನದೆಯೇ ನಿಮಗೆ ತಿಳಿಯದಿರುವುದನ್ನು ಕೇಳಬೇಕು. ಬಳಿಕ ಕಲಿಯಬೇಕು. ನಿಮ್ಮ ಅಹಂಕಾರ ಕಲಿಕೆಯ ವಿಷಯದಲ್ಲಿ ಸಲ್ಲ.

ಇದನ್ನೂ ಓದಿ: ಮಕ್ಕಳ ಕೈಗೆ ಸ್ಮಾರ್ಟ್​ಫೋನ್ ಕೊಟ್ಟೀರಿ ಜೋಕೆ ಎಂದ ಶವೋಮಿ ಇಂಡಿಯಾ ಸಿಇಒ; ಏನಾಗುತ್ತೆ ಮೊಬೈಲ್ ನೋಡೋದ್ರಿಂದ?

-ವಾಬಿ ಸಾಬಿ ಈ ಪ್ರಾಚೀನ ಜಪಾನಿನ ತತ್ವಶಾಸ್ತ್ರವು ಮೂಲತಃ ಜೀವನದಲ್ಲಿನ ಅಪರಿಪೂರ್ಣತೆಗಳನ್ನು ಸ್ವೀಕರಿಸುವುದು ಎಂದರ್ಥ. ಪರಿಪೂರ್ಣತೆ ಅಥವಾ ಅದಕ್ಕಿಂತ ಹೆಚ್ಚಿನದಕ್ಕಾಗಿ ಹಂಬಲಿಸುವ ಬದಲು ನಿಮ್ಮನ್ನು ಮತ್ತು ಜೀವನವನ್ನು ಹೇಗಿದೆಯೋ ಹಾಗೆಯೇ ತೆಗೆದುಕೊಳ್ಳುವ ಬಗ್ಗೆ ಇದು ಸೂಚಿಸುತ್ತದೆ. ಅದೆಷ್ಟೋ ಭಾರಿ ನಿಮಗೆ ಅನಿಸಿರಬಹುದು ನಮ್ಮ ಜೀವನ ಅಪರಿಪೂರ್ಣವಾಗಿದೆ. ಆ ರೀತಿಯ ಯೋಚನೆ ಬಂದರೆ ಬರಲಿ. ಬದುಕಿನಲ್ಲಿ ಎಲ್ಲವೂ ಸರಿ ಇರಬೇಕು ಎಂಬುದು ಎಲ್ಲಿಯೂ ಇಲ್ಲ. ಪರಿಪೂರ್ಣ ಮನುಷ್ಯ ಎಂಬ ಪರಿಕಲ್ಪನೆ ಇಂದಿಗೂ ಸತ್ಯವಾಗಿಲ್ಲ. ಏಕೆಂದರೆ ಲೋಪ ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಆದರೆ ಅದರಿಂದ ಪ್ರತಿದಿನ ಕೊರಗದೆ ಅದನ್ನೇ ನಮ್ಮ ಶಕ್ತಿಯಾಗಿ ಮಾರ್ಪಡಿಸಿಕೊಂಡು ಬದುಕುವುದು ನಿಜವಾಗಿಯೂ ಅದೊಂದು ಕಲೆ.

– ಕಾಡಿನಲ್ಲಿ ಸಮಯ ಕಳೆಯಿರಿ( ಫಾರೆಸ್ಟ್ ಬಾಥಿಂಗ್) ಪ್ರಕೃತಿಯಲ್ಲಿ ಮಿಂದೆಳಿ ಎಂಬ ಮಾತನ್ನು ನೀವು ಕೇಳಿರಬಹುದು. ಇದನ್ನು ಜಪಾನಿಗರೂ ಅನುಸರಿಸುತ್ತಾರೆ. ಕಾಡಿನಲ್ಲಿ ಒಂದು ದಿನ ಕಳೆಯುವುದರಿಂದ ನಿಮ್ಮ ಒತ್ತಡ, ಹತಾಶೆ ಎಲ್ಲವೂ ಕಡಿಮೆಯಾಗುತ್ತದೆ. ಇದು ಸಂಶೋಧನೆಗಳಿಂದಲೂ ಬಹಿರಂಗ ಗೊಂಡಿದೆ. ನಿಮಗೆ ಎಷ್ಟೇ ಒತ್ತಡ ವಿದ್ದರೂ ಅದನ್ನು ಕಡಿಮೆ ಮಾಡಿ ನಿಮ್ಮ ಸಮಯವನ್ನು ಉಲ್ಲಾಸಭರಿತ ವಾಗಿಸುತ್ತದೆ. ಕಾಡು ಸುತ್ತುವುದು ರೂಢಿ ಇಲ್ಲವಾದಲ್ಲಿ ಪಾರ್ಕ್ ನಲ್ಲಿ ಒಂದು ಸುತ್ತು ಹಾಕಿ ಬನ್ನಿ, ಶುದ್ಧ ಗಾಳಿ ಬರುವಲ್ಲಿ ಕುಳಿತು ಚೆನ್ನಾಗಿ ಉಸಿರಾಡಿ ಆಗ ಪ್ರಕೃತಿಯೇ ನಿಮ್ಮನ್ನು ರಿಚಾರ್ಜ್ ಮಾಡುತ್ತದೆ.

– ಕಕೀಬೊ ಕಕೀಬೊ ಎಂದು ಕರೆಯಲ್ಪಡುವ ಜಪಾನಿನ ಬಜೆಟ್ ಉಳಿಸುವ ವಿಧಾನವು ವಿಶ್ವಪ್ರಸಿದ್ಧವಾಗಿದೆ. ಇದನ್ನು ಅನೇಕ ಜನರು ಅನುಸರಿಸುತ್ತಾರೆ. “ಕಹ್-ಕೆಹ್-ಬೋಹ್” ಎಂದು ಉಚ್ಚರಿಸಲಾಗುವ ಕಕೀಬೊ, “ಮನೆಯ ಹಣಕಾಸಿನ ಲೆಡ್ಜರ್” ಎಂದು ಕೂಡ ಹೇಳಲಾಗುತ್ತದೆ. ಇದನ್ನು ಹನಿ ಮೊಟೊಕೊ ಎಂಬ ಜಪಾನ್ ನ ಮೊದಲ ಮಹಿಳಾ ಪತ್ರಕರ್ತೆ ಕಂಡು ಹಿಡಿದರು ಎನ್ನಲಾಗುತ್ತದೆ. ಇದು ಹಣ ನಿರ್ವಹಣೆಗೆ ಸರಳ ಮತ್ತು ಯಾವುದೇ ಅಡೆತಡೆಯಿಲ್ಲದ ವಿಧಾನವಾಗಿದೆ. ಈ ವಿಧಾನದಲ್ಲಿ, ನಿಮಾಗೇ ಬರುವ ಹಣ ಮತ್ತು ನೀವು ಖರ್ಚು ಮಾಡುವ ಹಣ ಎರಡನ್ನು ಉಲ್ಲೇಖಿಸುವ ಲೆಡ್ಜರ್ ಅನ್ನು ನೀವು ಇಟ್ಟುಕೊಳ್ಳಬೇಕು. ಜೊತೆಗೆ ಪುಸ್ತಕದಲ್ಲಿ ಕೈಯಿಂದ ಬರೆಯುವುದರಿಂದ ನೀವು ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬುದು ತಿಳಿಯುತ್ತದೆ. ಎಲ್ಲಿ ಖರ್ಚು ಮಾಡಬಾರದಿತ್ತು ಎಂಬುದು ಕೂಡ ತಿಳಿಯುತ್ತದೆ.

ಇದನ್ನೂ ಓದಿ: ಒತ್ತಡದಿಂದ ಹೊರಬರಲು ಈ ಆಹಾರ ಸೇವಿಸಿ: ಡಾ ರವಿಕಿರಣ ಪಟವರ್ಧನ ಶಿರಸಿ

ಈ ವಿಧಾನದಲ್ಲಿ ನೀವು ಯಾವುದೇ ಅನಿವಾರ್ಯವಲ್ಲದ ವಸ್ತುವನ್ನು ಖರೀದಿಸುವ ಮೊದಲು ಈ ಕೆಳಗಿನ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಬೇಕಾಗುತ್ತದೆ: -ಅದು ಇಲ್ಲದೆ ನಾನು ಬದುಕಬಹುದೇ? -ನಾನು ಅದನ್ನು ಭರಿಸಬಹುದೇ? -ಇದರಿಂದ ಏನಾದರೂ ಪ್ರಯೋಜನವಿದೆಯೇ? -ಅದಕ್ಕಾಗಿ ನನ್ನ ಬಳಿ ಜಾಗವಿದೆಯೇ? -ನಾನು ಅದನ್ನು ಖರೀದಿಸಿದ ಮೇಲೆ ನನ್ನ ಭಾವನೆ ಹೇಗಿರಬಹುದು? ಈ ವಿಧಾನವು ನಿಮ್ಮ “ಅಗತ್ಯಗಳು” ಮತ್ತು “ಬಯಕೆಗಳ” ಬಗ್ಗೆ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಹಠಾತ್ ಖರೀದಿ ಮಾಡುವುದರಿಂದ ನಿಮ್ಮನ್ನು ತಡೆಯುತ್ತದೆ. ಮೊದಲಿಗಿಂತ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುತ್ತದೆ

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:41 pm, Tue, 23 May 23

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್