Emotional Maturity: ನೀವು ನಿಜವಾಗಿಯೂ ಭಾವನಾತ್ಮಕವಾಗಿ ಪ್ರಬುದ್ಧರಾಗಿದ್ದೀರಾ, ಈ 6 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ
ನಾವು ಪ್ರತಿದಿನ ಬಹಳಷ್ಟು ಮಂದಿಯನ್ನು ನೋಡುತ್ತಿರುತ್ತೇವೆ ಪ್ರತಿಯೊಬ್ಬರ ಉಡುಪು, ಆಲೋಚನೆ ಮಾಡುವ ರೀತಿ ಎಲ್ಲವೂ ಭಿನ್ನವಾಗಿರುತ್ತದೆ. ಅದೇ ಸಮಯದಲ್ಲಿ, ಇತರರ ಮಾತನ್ನು ಕೇಳುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಜನರೂ ಇದ್ದಾರೆ.

ನಾವು ಪ್ರತಿದಿನ ಬಹಳಷ್ಟು ಮಂದಿಯನ್ನು ನೋಡುತ್ತಿರುತ್ತೇವೆ ಪ್ರತಿಯೊಬ್ಬರ ಉಡುಪು, ಆಲೋಚನೆ ಮಾಡುವ ರೀತಿ ಎಲ್ಲವೂ ಭಿನ್ನವಾಗಿರುತ್ತದೆ. ಅದೇ ಸಮಯದಲ್ಲಿ, ಇತರರ ಮಾತನ್ನು ಕೇಳುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಜನರೂ ಇದ್ದಾರೆ. ಅಂತಹ ಜನರು ನಡವಳಿಕೆಯಲ್ಲಿ ಸಂವೇದನಾಶೀಲರಾಗಿರುತ್ತಾರೆ, ಅವರ ಜೀವನದಲ್ಲಿನ ಏರಿಳಿತಗಳು ಮತ್ತು ಜನರೊಂದಿಗೆ ಸಂವಹನವು ಅವರನ್ನು ಇತರರಿಂದ ಭಿನ್ನವಾಗಿರುಸುತ್ತದೆ.
ಈ ಕಾರಣಕ್ಕಾಗಿ ಅಂತವರನ್ನು ಭಾವನಾತ್ಮಕವಾಗಿ ಪ್ರಬುದ್ಧರು ಎಂದು ಕರೆಯಲಾಗುತ್ತದೆ. ಭಾವನಾತ್ಮಕ ಪ್ರಬುದ್ಧತೆ ಎಂದರೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ ಈ ನಿಟ್ಟಿನಲ್ಲಿ, ತನ್ನ ಭಾವನೆಗಳನ್ನು ಸರಿಯಾದ ಅಥವಾ ಉನ್ನತ ರೀತಿಯಲ್ಲಿ ನಿಯಂತ್ರಿಸಬಲ್ಲ ವ್ಯಕ್ತಿಯು ಸಂಪೂರ್ಣವಾಗಿ ಭಾವನಾತ್ಮಕವಾಗಿ ಪ್ರಬುದ್ಧನಾಗಿರುತ್ತಾನೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಹಲ್ದ್ವಾನಿಯ ಮನಶ್ಶಾಸ್ತ್ರಜ್ಞ ಡಾ.ಯುವರಾಜ್ ಪಂತ್ ಹೇಳುತ್ತಾರೆ.
ಮತ್ತಷ್ಟು ಓದಿ: Emotional Numbness: ಭಾವನಾತ್ಮಕ ಜಡತ್ವ ಎಂದರೇನು, ನೀವು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?
ತಮ್ಮ ಭಾವನೆಗಳನ್ನು ಸರಳ ಮತ್ತು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿರದ ಜನರನ್ನು ಭಾವನಾತ್ಮಕವಾಗಿ ಪ್ರಬುದ್ಧರ ವರ್ಗಕ್ಕೆ ಸೇರಿಸಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಬಾಲ್ಯದಿಂದಲೇ ಇದನ್ನು ಆರಂಭಿಸಬೇಕು. ಈ ಕಾರಣದಿಂದಾಗಿ, ನಿಮ್ಮ ಆಲೋಚನೆ ಮತ್ತು ತಿಳಿವಳಿಕೆ ಹೆಚ್ಚಾಗುತ್ತದೆ.
ನೀವು ಭಾವನಾತ್ಮಕವಾಗಿ ಬಲಿಷ್ಠರಾಗಿರುವ 6 ಚಿಹ್ನೆಗಳು
1. ಇತರರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡು ಪ್ರತಿಕ್ರಿಯಿಸುವುದು ಅಯ್ಯೋ ಯಾರಿಗೆ ಬೇಜಾರಾದರೇನು ನಾನು ಹೀಗೆ ಮಾತನಾಡುವುದು ಎಂದು ಮೊಂಡುತನ ತೋರುವ ಜನರಿದ್ದಾರೆ. ಇದರಿಂದ ನಿಮ್ಮ ಸಂಬಂಧವೂ ಹಾಳಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಏನನ್ನಾದರೂ ಮಾತನಾಡುವ ಮೊದಲು ಇತರರ ಮಾತುಗಳನ್ನು ಆಲಿಸಿ ಮತ್ತು ಅವರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಬೇಕು.
2. ತರ್ಕಬದ್ಧವಾಗಿ ಯೋಚಿಸುವುದು
ಭಾವನಾತ್ಮಕವಾಗಿ ಪ್ರಬುದ್ಧರು ಎಲ್ಲದರ ಹಿಂದೆ ತರ್ಕವನ್ನು ಕಂಡುಕೊಳ್ಳುತ್ತಾರೆ, ಅವರು ಮೂಢನಂಬಿಕೆಗಳನ್ನು ಮೀರಿ ತಮ್ಮ ಆಲೋಚನೆಗಳು ಮತ್ತು ನಿರ್ಣಯಗಳನ್ನು ಮಾಡುತ್ತಾರೆ. ಯಾವುದೋ ವಿಷಯದ ಬಗ್ಗೆ ಅವರನ್ನು ಮೋಸಗೊಳಿಸುವುದು ಮತ್ತು ದಾರಿ ತಪ್ಪಿಸುವ ಅವಕಾಶಗಳು ತುಂಬಾ ಕಡಿಮೆ.
3. ತಾಳ್ಮೆಯಿಂದಿರುವುದು ಮತ್ತು ಆಲಿಸುವುದು ಭಾವನಾತ್ಮಕವಾಗಿ ಪ್ರಬುದ್ಧರಾಗಿರುವವರು ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಹೆಚ್ಚು ನಂಬುತ್ತಾರೆ. ತನ್ನ ಕಣ್ಣೆದುರು ಕಂಡಿದ್ದನ್ನು ಮಾತ್ರ ಸತ್ಯ ಎಂದು ನಂಬುತ್ತಾರೆ, ಸಕಾರಾತ್ಮಕ ಗುಣಗಳನ್ನು ಮಾತ್ರ ಅವರು ತೆಗೆದುಕೊಳ್ಳುತ್ತಾರೆ. ಜಗಳ, ವಾದಗಳಿಂದ ಸಾಧ್ಯವಾದಷ್ಟು ದೂರವಿರುತ್ತಾರೆ. ಯೋಚಿಸಿದ ಬಳಿಕವೇ ಎಲ್ಲವನ್ನೂ ಮಾಡುತ್ತಾರೆ.
4. ಇತರರ ಭಾವನೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಭಾವನಾತ್ಮಕವಾಗಿ ಪ್ರಬುದ್ಧರಾಗಿರುವವರು, ಬೇರೆಯವರ ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಯಾರು ಯಾಕಾಗಿ ಅವರೊಂದಿಗೆ ಸ್ನೇಹ ಮಾಡಿರಬಹುದು, ಯಾರಾದರೂ ತಪ್ಪಾಗಿ ಮಾತನಾಡಿದರೆ ಯಾಕಾಗಿ ಈ ರೀತಿ ಮಾತನಾಡಿದ್ದಾರೆ ಎಂಬುದರ ಕುರಿತು ಆಲೋಚಿಸುತ್ತಾರೆ, ಕಾರಣಗಳನ್ನು ಹುಡುಕುವ ತಾಳ್ಮೆ ಅವರಿಗಿರುತ್ತದೆ.
5. ಒಬ್ಬರೇ ಇದ್ದರೂ ಖುಷಿಯಾಗಿರುತ್ತಾರೆ ಮಾನಸಿಕವಾಗಿ ಪ್ರಬುದ್ಧರಾಗಿರುವವರು ಗುಂಪಿನಲ್ಲಿರಲು ಇಷ್ಟಪಡುವುದಿಲ್ಲ, ಒಬ್ಬರೇ ಇದ್ದರೂ ಖುಷಿಯಾಗಿರುತ್ತಾರೆ. ಆಗಾಗ ಪುಸ್ತಕಗಳನ್ನು ಓದುತ್ತಾರೆ, ಸಂಗೀತವನ್ನು ಆಲಿಸುತ್ತಾರೆ.
6 . ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ತಿಳಿಯುವ ಕುತೂಹಲ ಬೇರೆಯವರು ನನ್ನ ಬಗ್ಗೆ ಏನನ್ನು ಯೋಚಿಸುತ್ತಿರಬಹುದು ಎಂದು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಯಾವಾಗಲೂ ತಮ್ಮ ನಡವಳಿಕೆಯ ಬಗ್ಗೆ ಇತರರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಬಹುದು. ತಮ್ಮನ್ನು ತಾವು ಉತ್ತಮಗೊಳಿಸುವ ಪ್ರವೃತ್ತಿಯು ಯಾವಾಗಲೂ ಅವರನ್ನು ಇತರರಿಂದ ಪ್ರತ್ಯೇಕವಾಗಿಯೇ ಇರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




