AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಟ್ರಿಕ್ಸ್‌ ಮುಖಾಂತರ ಮನೆ ಗೋಡೆಯ ಮೇಲಿನ ಕಲೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸಬಹುದು

ಗೋಡೆಗಳ ಮೇಲೆ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮಳೆಗಾಲದಲ್ಲಿನ ತೇವಾಂಶದಿಂದಾಗಿ ಕಲೆಗಳು ಉಂಟಾಗುತ್ತವೆ. ಅಲ್ಲದೆ ಮಕ್ಕಳು ಪೆನ್‌, ಪೆನ್ಸಿಲ್‌ ಮತ್ತು ಬಣ್ಣಗಳಿಂದ ಗೋಡೆಗಳ ಮೇಲೆ ಚಿತ್ರ ಬರೆದುಬಿಡುತ್ತಾರೆ. ಈ ಕಲೆಗಳು ಮನೆಯ ಅಂದವನ್ನೇ ಹಾಳು ಮಾಡುತ್ತದೆ. ಹೀಗೆ ಹೆಚ್ಚು ಕಲೆಗಳು ಕಾಣಿಸಿಕೊಂಡಾಗ ಹೆಚ್ಚಿನವರು ಮನೆಗೆ ಹೊಸದಾಗಿ ಪೈಂಟ್‌ ಮಾಡುತ್ತಾರೆ. ಆದ್ರೆ ಏನ್‌ ಗೊತ್ತಾ, ಪ್ರತಿ ಬಾರಿಯೂ ಪೈಂಟ್‌ ಮಾಡ್ಬೇಕೆಂದಿಲ್ಲ, ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಗೋಡೆಯ ಮೇಲಿನ ಕಲೆಗಳನ್ನು ನಿವಾರಿಸಬಹುದು.

ಈ ಟ್ರಿಕ್ಸ್‌ ಮುಖಾಂತರ  ಮನೆ ಗೋಡೆಯ ಮೇಲಿನ ಕಲೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸಬಹುದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Oct 20, 2026 | 5:54 PM

Share

ಗೋಡೆಯ (walls) ಮೇಲೆ ಕಲೆಗಳಿದ್ದರೆ, ಇದರಿಂದ ಮನೆಯ ಅಂದವೇ ಹಾಳಾಗಿಬಿಡುತ್ತದೆ. ಮಳೆಗಾಲದಲ್ಲಿ, ಗೋಡೆಗಳು ತೇವಾಂಶದಿಂದಾಗಿ ಒದ್ದೆಯಾಗುತ್ತವೆ, ಇದು ಕಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ ಹೊಗೆ, ಎಣ್ಣೆಯ ಕಲೆಗಳು ಮತ್ತು ಮಸಾಲೆಗಳಿಂದಾಗಿ ಅಡುಗೆಮನೆಯ ಗೋಡೆಗಳು ಕೆಟ್ಟದಾಗಿ ಕಾಣಲು ಪ್ರಾರಂಭಿಸುತ್ತವೆ. ಇನ್ನೂ ಮಕ್ಕಳು ಪೆನ್ಸಿಲ್‌, ವಿವಿಧ ಬಣ್ಣಗಳಿಂದ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಾರೆ. ಇದರಿಂದಲೂ ಗೋಡೆಯ ಸೌಂದರ್ಯ ಹಾಳಾಗುತ್ತದೆ. ಇದನ್ನು ತೊಡೆದುಹಾಕಲು ಹೆಚ್ಚಿನವರು ಪ್ರತಿ ಬಾರಿ ಪೈಂಟ್‌ ಮಾಡುತ್ತಾರೆ. ಹಾಗೆ ಮಾಡುವುದರಿಂದ ಬಹಳಷ್ಟು ಹಣ ಖರ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಮನೆಮದ್ದುಗಳ ಸಹಾಯದಿಂದ ಗೋಡೆಯ ಮೇಲಿನ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು.

ಗೋಡೆಯ ಮೇಲಿನ ಕಲೆ ನಿವಾರಿಸಲು ಅಡಿಗೆ ಸೋಡಾ ಸಹಕಾರಿ:

ಗೋಡೆಯ ಮೇಲಿನ ಕಲೆಗಳನ್ನು ನಿವಾರಿಸಲು ಅಡಿಗೆ ಸೋಡಾ ತುಂಬಾನೇ ಸಹಕಾರಿ. ಒಂದು ಟೀಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮೃದುವಾದ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಕಲೆ ಇರುವ ಜಾಗಕ್ಕೆ ನಿಧಾನವಾಗಿ ಉಜ್ಜಿ. ನಂತರ ಒಣ ಬಟ್ಟೆಯಿಂದ ಒರೆಸಿ. ಇದರಿಂದ ಪೆನ್ಸಿಲ್ ಮತ್ತು ಕ್ರಯೋನ್ ಗುರುತುಗಳು ನಿಮಿಷಗಳಲ್ಲಿ ಮಾಯವಾಗುತ್ತವೆ.

ವಿನೆಗರ್, ಬಿಸಿನೀರು ಕೂಡ ಗೋಡೆಯ ಮೇಲಿನ ಕಲೆಗಳನ್ನು ನಿವಾರಿಸಲು ಸಹಕಾರಿ:

ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರು, ಎರಡು ಕಪ್‌ ವಿನೆಗರ್‌ ಮತ್ತು ನಿಂಬೆಯ ಸಾರಭೂತ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಕೆಟ್‌ ನೀರಿಗೆ ಈ ಮಿಶ್ರಣವನ್ನು ಸೇರಿಸಿ,  ಮೈಕ್ರೋಫೈಬರ್ ಬಟ್ಟೆಯನ್ನು ಅದ್ದಿ, ಅದನ್ನು ಕಲೆಯಿರುವ ಜಾಗಕ್ಕೆ ಚೆನ್ನಾಗಿ ತಿಕ್ಕಿ. ಇದು ಗೋಡೆಯ ಮೇಲಿನ ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಟೂತ್‌ಪೇಸ್ಟ್‌ನಿಂದಲೂ ಗೋಡೆಯ ಮೇಲಿನ ಕಲೆಯನ್ನು ನಿವಾರಿಸಬಹುದು:

ಟೂತ್‌ಪೇಸ್ಟ್ ಕೇವಲ ಹಲ್ಲುಗಳಿಗೆ ಮಾತ್ರವಲ್ಲ, ಗೋಡೆಗಳಿಂದ ಕಲೆಗಳನ್ನು ತೆಗೆದುಹಾಕಲು ಸಹ ಪರಿಣಾಮಕಾರಿಯಾಗಿದೆ. ಸ್ವಲ್ಪ ಪ್ರಮಾಣದ ಟೂತ್‌ಪೇಸ್ಟ್ ಅನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ಮತ್ತು ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಪೆನ್ಸಿಲ್, ಕ್ರಯೋನ್ ಮತ್ತು ಸ್ಕೆಚ್ ಪೆನ್ ಗುರುತುಗಳನ್ನು ತೆಗೆದುಹಾಕಲು ಈ ವಿಧಾನವು ತುಂಬಾ ಪರಿಣಾಮಕಾರಿ.

ಇದನ್ನೂ ಓದಿ: ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳು ಸಹಕಾರಿ

ವಿನೆಗರ್ ಮತ್ತು ನಿಂಬೆಹಣ್ಣು ಗೋಡೆಯ ಮೇಲಿನ ಕಲೆಗಳನ್ನು ನಿವಾರಿಸುತ್ತದೆ:

ವಿನೆಗರ್ ಮತ್ತು ನಿಂಬೆಹಣ್ಣಿನ ಮಿಶ್ರಣವು ಗೋಡೆಗಳನ್ನು ಸ್ವಚ್ಛಗೊಳಿಸಲು ತುಂಬಾ ಉಪಯುಕ್ತವಾಗಿದೆ. ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದಲ್ಲಿ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ. ಕಲೆ ಇರುವ ಜಾಗಕ್ಕೆ ಸಿಂಪಡಿಸಿ ಮತ್ತು ಕೆಲವು ನಿಮಿಷಗಳ ನಂತರ ಒಣ ಬಟ್ಟೆಯಿಂದ ಒರೆಸಿ. ಕಲೆ ತೀರಾ ಹಳೆಯದಾಗಿದ್ದರೆ, ನೀವು ನಿಂಬೆ ರಸವನ್ನು ಸೇರಿಸಬಹುದು.

ಸೋಪ್‌ ಕೂಡ ಗೋಡೆಯ ಕಲೆಗಳನ್ನು ನಿವಾರಿಸುತ್ತದೆ:

ಗೋಡೆಯ ಮೇಲಿನ ಸಣ್ಣ ಕಲೆಗಳನ್ನು ನಿವಾರಿಸಲು ಸೌಮ್ಯವಾದ ಸೋಪ್‌ ಅನ್ನು ಬಳಸಬಹುದು. ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಸೋಪ್ ಅಥವಾ ಡಿಟರ್ಜೆಂಟ್ ಲಿಕ್ವಿಡ್‌ ಹಾಕು ಅದರಲ್ಲಿ ಮೃದುವಾದ ಬಟ್ಟೆಯನ್ನು ನೆನೆಸಿ, ಬಟ್ಟೆಯಲ್ಲಿ ಕಲೆಯಾದ ಪ್ರದೇಶವನ್ನು ನಿಧಾನವಾಗಿ ಉಜ್ಜಿ, ನಂತರ ಸ್ವಚ್ಛವಾದ, ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದು ಕಲೆಗಳನ್ನು ನಿವಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ