World Emoji Day: ಎಮೋಜಿ ಇತಿಹಾಸದ ಬಗ್ಗೆ ನಿಮಗೆ ಗೊತ್ತೆ?

ವಿಶ್ವದಾದ್ಯಂತ ಜುಲೈ 17 ರಂದು ಜನರು ವಿಶ್ವ ಎಮೋಜಿ ದಿನವನ್ನು ಆಚರಿಸುತ್ತಾರೆ. ನಮ್ಮ ಸಂಭಾಷಣೆಗಳಲ್ಲಿ ಎಮೋಜಿಗಳ ಬಳಕೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 2014 ರಿಂದ ಪ್ರತಿ ವರ್ಷ ವಿಶ್ವ ಎಮೋಜಿ ದಿನವನ್ನು ಜುಲೈ 17 ರಂದು ಆಚರಿಸಲಾಗುತ್ತದೆ.

World Emoji Day: ಎಮೋಜಿ ಇತಿಹಾಸದ ಬಗ್ಗೆ ನಿಮಗೆ ಗೊತ್ತೆ?
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2024 | 12:07 PM

ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ. ಈ ವಾಕ್ಯಕ್ಕೆ ತಕ್ಕಂತೆ ಎಮೋಜಿಗಳು ಲಿಖಿತ ಪದಗಳನ್ನು ದೊಡ್ಡ ಪ್ರಮಾಣದಲ್ಲಿ ವಿನಿಮಯಗೊಳಿಸಿದೆ. ಜನರು ತಮ್ಮ ಭಾವನೆಗಳು, ಪ್ರತಿಕ್ರಿಯೆಗಳು ಅಥವಾ ಪದಗಳನ್ನು ಹೇಳಲಾಗದ ವಿಷಯಗಳನ್ನು ವ್ಯಕ್ತಪಡಿಸಲು ಅಥವಾ ಸಂವಹನ ಮಾಡಲು ಎಮೋಜಿಗಳನ್ನು ಬಳಸುತ್ತಾರೆ. ಇನ್ಸ್ಟಾಗ್ರಾಮ್, ವಾಟ್ಸಾಪ್, ಫೇಸ್ಬುಕ್ ಮತ್ತು ಟ್ವಿಟರ್ನಂತಹ ಡಿಜಿಟಲ್ ಪ್ಲಾಟ್ಫಾರ್ಮ್​ಗಳಲ್ಲಿ ಎಮೋಜಿಗಳು ನಮ್ಮ ಸಂವಹನವನ್ನು ಸುಲಭಗೊಳಿಸಿದೆ.

ವಿಶ್ವದಾದ್ಯಂತ ಜುಲೈ 17 ರಂದು ಜನರು ವಿಶ್ವ ಎಮೋಜಿ ದಿನವನ್ನು ಆಚರಿಸುತ್ತಾರೆ. ನಮ್ಮ ಸಂಭಾಷಣೆಗಳಲ್ಲಿ ಎಮೋಜಿಗಳ ಬಳಕೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 2014 ರಿಂದ ಪ್ರತಿ ವರ್ಷ ವಿಶ್ವ ಎಮೋಜಿ ದಿನವನ್ನು ಜುಲೈ 17 ರಂದು ಆಚರಿಸಲಾಗುತ್ತದೆ. ಏಕೆಂದರೆ ಟೆಕ್ ಜಗತ್ತಿನಲ್ಲಿ ಈ ದಿನವು, ಕೆಲವು ಮಹತ್ವವನ್ನು ಹೊಂದಿದೆ.

ಎಮೋಜಿಯ ಇತಿಹಾಸ ಮೊದಲು ಎಮೋಜಿಯನ್ನು ಎಮೋಟಿಕಾನ್ ಎಂದು ಕರೆಯಲಾಗುತ್ತಿತ್ತು. ಆ ನಂತರ ಎಮೋಜಿಯಾಯಿತು. ಎಮೋಜಿ ಎಂದರೇ ‘ಚಿತ್ರ ಪದ’. ಎಮೋಜಿಗಳನ್ನು 1999 ರಲ್ಲಿ ಜಪಾನಿನ ಟೆಲಿಕಾಂ ಕಂಪನಿ ಎನ್​ಟಿಟಿ ಡೊಕೊಮೊದಲ್ಲಿ ಕೆಲಸ ಮಾಡುವಾಗ ಶಿಗೆಟಕಾ ಕುರಿಟಾ ಎಂಬುವವರು ಅಭಿವೃದ್ಧಿಪಡಿಸಿದರು. ಸ್ಮಾರ್ಟ್ ಫೋನ್​ಗಳು ದೈನಂದಿನ ಜೀವನದ ಒಂದು ಭಾಗವಾದಾಗ 2010ರ ಆಸುಪಾಸಿನಲ್ಲಿ ಎಮೋಜಿಗಳು ಜನಪ್ರಿಯವಾದವು.

ನಂತರ ಗೂಗಲ್, ಫೇಸ್ಬುಕ್ ಮತ್ತು ಟ್ವಿಟರ್​ನಂತಹ ಜಾಗತಿಕ ಬ್ರ್ಯಾಂಡ್​ಗಳು ತಮ್ಮದೇ ಆದ ಎಮೋಜಿಗಳ ಆವೃತ್ತಿಗಳನ್ನು ರಚಿಸಲು ಪ್ರಾರಂಭಿಸಿದವು. ವಿಶ್ವ ಎಮೋಜಿ ದಿನವನ್ನು ಜೆರೆಮಿ ಬರ್ಜ್ ರಚಿಸಿದ ಕಾರಣ ಅವರನ್ನು ಎಮೋಜಿ ಪೀಡಿಯಾದ ಸ್ಥಾಪಕ ಎಂದೂ ಕರೆಯುತ್ತಾರೆ. 2007 ರಲ್ಲಿ ಐಫೋನ್ ಬಿಡುಗಡೆಯಾದಾಗ, ಇದು ಜಪಾನಿನ ಪ್ರೇಕ್ಷಕರನ್ನು ಗುರಿಯಾಗಿಸಲು ಎಮೋಜಿ ಕೀಬೋರ್ಡ್ ಅನ್ನು ಒಳಗೊಂಡಿತ್ತು. ನಂತರ ಅಮೇರಿಕನ್ ಬಳಕೆದಾರರು ಎಮೋಜಿ ಕೀಬೋರ್ಡ್ ಅನ್ನು ಕಂಡುಕೊಂಡಾಗ ಯಶಸ್ಸು ಕಂಡಿತು.

ಇದನ್ನೂ ಓದಿ: ಮೊಹರಂ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ಕೋರಿ ಇತ್ತೀಚಿಗೆ ಬಿಡುಗಡೆಯಾದ ಎಮೋಜಿಗಳು ಇತ್ತೀಚಿಗೆ ಟ್ರಾನ್ಸ್ಜೆಂಡರ್ ಫ್ಲ್ಯಾಗ್, ಬಬಲ್ ಟೀ, ಮತ್ತು ಬಾಟಲ್-ಫೀಡಿಂಗ್ ಸೇರಿದಂತೆ 110 ಕ್ಕೂ ಹೆಚ್ಚು ಹೊಸ ಎಮೋಜಿಗಳನ್ನು ಎಮೋಜಿ 13.0 ರಲ್ಲಿ ಯೂನಿಕೋಡ್ ಕನ್ಸೋರ್ಟಿಯಂ ಸೇರಿಸಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ