International Moon Day 2024: ಚಂದ್ರನ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು

ಇಂದು ಮಾನವನು ಅಂದುಕೊಳ್ಳಲಾರದ ಮಟ್ಟಿಗೆ ಸಾಧನೆ ಮಾಡಿದ್ದಾನೆ. ಅದರಲ್ಲೂ ಈ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವಂತಾಗಿದೆ. ಅಂತಹ ಘಟನೆಯಲ್ಲಿ ಅದು 1964ರ ಜುಲೈ 20 ರಂದು, ಭೂಮಿಯ ಏಕೈಕ ಉಪಗ್ರಹ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವನು ಹೆಜ್ಜೆ ಇಟ್ಟಿದ್ದನು. ಇದರ ಸವಿ ನೆನಪಿಗಾಗಿ ಪ್ರತಿ ವರ್ಷ ಜುಲೈ 20ರಂದು ವಿಶ್ವ ಚಂದ್ರನ ದಿನವಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

International Moon Day 2024: ಚಂದ್ರನ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು
ವಿಶ್ವ ಚಂದ್ರನ ದಿನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 20, 2024 | 10:14 AM

ಇತಿಹಾಸದ ಪುಟಗಳನ್ನು ತೆರೆದಾಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾನವನ ಸಾಧನೆಗಳು ರೋಮಾಂಚನಕಾರಿಯಾಗಿದೆ. ಈಗಾಗಲೇ ನಂಬಲು ಸಾಧ್ಯವಾಗದ ಅದೆಷ್ಟೋ ಘಟನೆಗಳು ನಡೆದಿವೆ. ಅದರಲ್ಲಿ ಮನುಷ್ಯನು ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ಕ್ಷಣವು ಒಂದಾಗಿದೆ. 1969 ಜುಲೈ 20ರಂದು ನೀಲ್​ ಆರ್ಮ್​ಸ್ಟ್ರಂಗ್​ ಮತ್ತು ಬುಜ್​ ಅಲ್ಡ್ರಿನ್​ ಅವರು ಚಂದ್ರನ ಅಂಗಳಕ್ಕೆ ಹೆಜ್ಜೆ ಇಟ್ಟರು. ಈ ಮಹತ್ತರ ಸಾಧನೆಯ ಸವಿನೆನಪಿಗಾಗಿ ಜುಲೈ 20 ರಂದು ವಿಶ್ವ ಚಂದ್ರನ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಚಂದ್ರನ ದಿನದ ಇತಿಹಾಸ

ವಿಶ್ವಸಂಸ್ಥೆಯು 2021ರಲ್ಲಿ ತನ್ನ “ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ’ ನಿರ್ಣಯದಲ್ಲಿ ಚಂದ್ರನ ಮೇಲೆ ಮಾನವನು ಮೊದಲ ಹೆಜ್ಜೆಯನ್ನು ಇಟ್ಟ ದಿನವನ್ನು ಅಂತಾರಾಷ್ಟ್ರೀಯ ಚಂದ್ರನ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಿತು. ಅಂದಿನಿಂದ ಪ್ರತಿ ವರ್ಷ ಜುಲೈ 20 ರಂದು ವಿಶ್ವ ಚಂದ್ರನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸುವುದು ಏಕೆ, ಏನಿದರ ಮಹತ್ವ?

ಚಂದ್ರನ ಬಗೆಗಿನ ಕುತೂಹಲಕಾರಿ ಸಂಗತಿಗಳು

  1. ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯಾದ ಸ್ವಲ್ಪ ಸಮಯದ ನಂತರದಲ್ಲಿ ಮಂಗಳದ ಗಾತ್ರದ ಬಂಡೆಯು ಭೂಮಿಗೆ ಡಿಕ್ಕಿ ಹೊಡೆದಾಗ ಚಂದ್ರನ ಉಗಮವಾಯಿತು.
  2. ಭೂಮಿಗೆ ಹೋಲಿಕೆ ಮಾಡಿದರೆ ಚಂದ್ರನು ಗಾತ್ರವು ಭೂಮಿಯ ನಾಲ್ಕನೇ ಒಂದರಷ್ಟಿದೆ. ಚಂ ವ್ಯಾಸ 2,159 ಮೈಲಿ (3,476 ಕಿಲೋಮೀಟರ್) ಆಗಿದೆ. ಭೂಮಿಯ ತೂಕ ಚಂದ್ರನ ತೂಕಕ್ಕಿಂತ 80 ಪಟ್ಟು ಹೆಚ್ಚಿದೆ.
  3. ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವೆಂದರೆ ಅದುವೇ ಚಂದ್ರ. ಇದು ಸೌರವ್ಯೂಹದಲ್ಲಿ ಐದನೇ ಅತಿ ದೊಡ್ಡ ನೈಸರ್ಗಿಕ ಉಪಗ್ರಹ ಎನ್ನಲಾಗಿದೆ.
  4. ರಾತ್ರಿಯ ಆಕಾಶಕ್ಕೆ ಹೋಲಿಕೆ ಮಾಡಿದರೆ ಚಂದ್ರನು ತುಂಬಾ ಬಿಳಿಯಾಗಿರುವಂತೆ ಕಾಣುತ್ತದೆ. ಆದರೆ ಚಂದ್ರನ ಮೇಲ್ಮೈ ತುಂಬಾನೇ ಕಪ್ಪಾಗಿದೆ.
  5. ಚಂದ್ರನು ಭೂಮಿ ಎನ್ನುವ ಗ್ರಹದಿಂದ ಪ್ರತಿ ವರ್ಷ ಸುಮಾರು 3.8 ಸೆಂ.ಮೀ ದೂರ ಸಾಗುತ್ತಿದ್ದಾನೆ.
  6. ಚಂದ್ರನ ಮೇಲೆ ಭೂಕಂಪಗಳು ಸಂಭವಿಸುತ್ತವೆಯಂತೆ. ಈ ಕಂಪನಗಳನ್ನು ಮೂನ್ ಕ್ವೇಕ್ ಎಂದು ಕರೆಯಲಾಗುತ್ತದೆ. ಅವು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಉಂಟಾಗುತ್ತವೆ. ಈ ಕಂಪನಗಳು ಸರಿಸುಮಾರು ಅರ್ಧ ಗಂಟೆಯ ಕಾಲ ಇರುತ್ತವೆ ಎನ್ನಲಾಗಿದೆ.
  7. ಚಂದ್ರನ ಮೇಲೆ ರಾತ್ರಿಯ ವೇಳೆ ತಾಪಮಾನ -298 ಡಿಗ್ರಿ ಫ್ಯಾರನ್‌ಹೀಟ್ (-183 ಡಿಗ್ರಿ ಸೆಲ್ಸಿಯಸ್) ಇದ್ದರೆ, ಹಗಲಿನಲ್ಲಿ 224 ಡಿಗ್ರಿ ಫ್ಯಾರನ್‌ಹೀಟ್ (106 ಡಿಗ್ರಿ ಸೆಲ್ಸಿಯಸ್) ಇರುತ್ತದೆ. ಹಗಲು ಮತ್ತು ರಾತ್ರಿಗಳ ನಡುವೆ ಚಂದ್ರನ ತಾಪಮಾನದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ