AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೂನ್‌ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ

ಹಿಂದಿನಿಂದಲೂ ನಮ್ಮ ಭಾರತದಲ್ಲಿ ಆಹಾರವನ್ನು ಸ್ಪೂನ್‌ ಬದಲು ಕೈಗಳಲ್ಲಿಯೇ ಸೇವಿಸಲಾಗುತ್ತದೆ. ಆದರೆ ಇಂದು ಅನೇಕರು ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಆಹಾರವನ್ನು ಸ್ಪೂನ್‌ನಲ್ಲಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಆಹಾರವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಕೈಯಲ್ಲಿ ತಿನ್ನುವುದು. ಇದು ಇಂದ್ರೀಯಗಳನ್ನು ತೃಪ್ತಿಪಡಿಸುವುದಲ್ಲದೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಕೈಗಳಿಂದ ಆಹಾರ ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದರ ಪೂರ್ಣ ವಿವರ ಇಲ್ಲಿದೆ.

ಸ್ಪೂನ್‌ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 05, 2026 | 8:12 PM

Share

ಮುಖ್ಯಾಂಶಗಳು

  • ಕೈಗಳಿಂದ ತಿನ್ನುವುದು ಕೇವಲ ಸಾಂಸ್ಕೃತಿಕ ಅಭ್ಯಾಸವಲ್ಲ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ
  • ಕೈಗಳಿಂದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ
  • ಕೈಗಳಿಂದ ಆಹಾರ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ನಮ್ಮಲ್ಲಿ ಅನಾದಿ ಕಾಲದಿಂದಲೂ ಕೈಯಲ್ಲಿಯೇ ಆಹಾರ (food) ಸೇವಿಸುವ ಪದ್ಧತಿಯಿದೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮಲ್ಲಿ ಇಂದು ಅನೇಕರು ಕೈ ಬದಲು ಸ್ಪೂನ್‌, ಫೋರ್ಕ್‌ ಬಳಕೆ ಮಾಡುತ್ತಾರೆ. ಇನ್ನೂ ತಮಾಷೆಯ ವಿಷಯ ಏನಪ್ಪಾ ಅಂದ್ರೆ ಕೆಲವರು ಯಾರು ಏನೆನ್ನುತ್ತಾರೆ ಅನ್ನೋ ಕಾರಣಕ್ಕೆ ಕೈಯಲ್ಲಿ ಊಟ ಸವಿಯಲು ನಾಚಿಕೆ ಪಟ್ಟು, ಸ್ಟೈಲ್‌ ಆಗಿ ಸ್ಫೂನ್‌ ಬಳಸಿ ಊಟ ಸೇವಿಸುತ್ತಾರೆ.  ಆದ್ರೆ ಏನು ಗೊತ್ತಾ ಸ್ಪೂನ್‌ಗಿಂತ ಕೈಯಲ್ಲಿ ಆಹಾರ ಸೇವಿಸೋದು ಬೆಸ್ಟ್‌ ಅಂತೆ. ಏಕೆಂದರೆ ಇದು ಆಹಾರವನ್ನು ಆನಂದಿಸಲು ಅನುವು ಮಾಡಿಕೊಡುವುದಲ್ಲದೆ, ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಹಾಗಿದ್ದರೆ ಕೈಗಳಿಂದ ಆಹಾರವನ್ನು ಸೇವಿಸುವ ಅಭ್ಯಾಸದಿಂದ ದೊರಕುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಕೈಗಳಿಂದ ಆಹಾರ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು?

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಆಯುರ್ವೇದದ ಪ್ರಕಾರ, ನಿಮ್ಮ ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ದೇಹದ ಐದು ಅಂಶಗಳು (ಅಗ್ನಿ, ನೀರು, ಗಾಳಿ, ಭೂಮಿ ಮತ್ತು ಆಕಾಶ) ಸಮತೋಲನಗೊಳ್ಳುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ಕೈಗಳಿಂದ ಊಟ ಮಾಡುವ ಈ ಅಭ್ಯಾಸವು ನಿಧಾನವಾಗಿ ತಿನ್ನುವುದನ್ನು ಮತ್ತು ಉತ್ತಮವಾಗಿ ಅಗಿಯುವುದನ್ನು ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ: ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ಮೆದುಳಿಗೆ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಸಂಕೇತಗಳು ರವಾನೆಯಾಗುತ್ತವೆ. ನಿಮ್ಮ ಕೈಗಳಿಂದ ತಿನ್ನುವುದರಿಂದ ಆಹಾರದ ಪ್ರಮಾಣ ಮತ್ತು ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು, ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೈಹಿಕ ಮತ್ತು ಮಾನಸಿಕ ಸಮತೋಲನ: ಆಯುರ್ವೇದದಲ್ಲಿ, ಕೈಗಳಿಂದ ತಿನ್ನುವುದು ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಏಕೆಂದರೆ ಬೆರಳುಗಳ ಸ್ಪರ್ಶವು ಮೆದುಳಿಗೆ ಸಂಕೇತ ನೀಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೆದುಳು ಮತ್ತು ಆಹಾರದ ಸಂಪರ್ಕ:  ಕೈಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚುವುದಲ್ಲದೆ,  ಕೈಗಳಿಂದ ತಿನ್ನುವುದರಿಂದ ಮೆದುಳಿಗೆ ಆಹಾರದ ವಿನ್ಯಾಸ, ತಾಪಮಾನ ಮತ್ತು ನೋಟವನ್ನು ಚೆನ್ನಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಆಹಾರದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುತ್ತದೆ, ಇದು ಮೆದುಳಿನ ಜೀರ್ಣಕಾರಿ ಸಂಕೇತಗಳನ್ನು ಸಕ್ರಿಯಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸುವುದು ಉತ್ತಮ

ರಕ್ತ ಪರಿಚಲನೆ ಸುಧಾರಿಸುತ್ತದೆ: ಕೈಯಿಂದ ಊಟ ಮಾಡುವುದರಿಂದ ಕೈಗಳ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಲ್ಲದೆ, ಕೈಗಳ ಸರಾಗ ಚಲನೆಯು ರಕ್ತದ ಹರಿವನ್ನು ಹೆಚ್ಚು ಸರಾಗಗೊಳಿಸುತ್ತದೆ. ಅಲ್ಲದೆ ಕೈಗಳಿಂದ ಆಹಾರ ಸೇವಿಸುವಾಗ ಎಲ್ಲಾ ಬೆರಳುಗಳು ಮುದ್ರೆಯಾಕಾರ ಪಡೆಯುತ್ತದೆ. ಇದನ್ನು ರಮಣ ವಾಯು ಮುದ್ರೆ ಎಂದು ಕರೆಯುತ್ತಾರೆ. ಈ ಮುದ್ರೆ ದೇಹದಲ್ಲಿ ಕಾಣಿಸಿಕೊಳ್ಳುವ ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ: ನಾವು ನಮ್ಮ ಕೈಗಳಿಂದ ಊಟ ಮಾಡಿದಾಗ, ನಮ್ಮ ಬಾಯಿ ಮತ್ತು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ನಮ್ಮನ್ನು ಆರೋಗ್ಯವಾಗಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು