AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Styling Tips: ನವರಾತ್ರಿ ಹಬ್ಬದಂದು ಆಕರ್ಷಕವಾಗಿ ಕಾಣಬೇಕೆಂದರೆ ಈ ಡ್ರೆಸ್ಸಿಂಗ್ ಐಡಿಯಾ ನೀವು ಪ್ರಯತ್ನಿಸಲೇಬೇಕು

ಈ ಬಾರಿಯ ನವರಾತ್ರಿ ಹಬ್ಬ ಇಂದಿನಿಂದ ಶುರುವಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಯಾವೆಲ್ಲಾ ಬಗೆಯ ಉಡುಪುಗಳನ್ನು ಧರಿಸಬೇಕು ಎಂಬ ಗೊಂದಲದಲ್ಲಿದ್ದೀರಾ? ಹಾಗಾದರೆ ಹಬ್ಬದಲ್ಲಿ ನೀವು ಆಕರ್ಷಕವಾಗಿ ಕಾಣಬೇಕೆಂದರೆ ಈ ಕೆಲವು ಡ್ರೆಸಿಂಗ್ ಐಡಿಯಾಗಳನ್ನು ಪ್ರಯತ್ನಿಸಬಹುದು.

Styling Tips: ನವರಾತ್ರಿ ಹಬ್ಬದಂದು ಆಕರ್ಷಕವಾಗಿ ಕಾಣಬೇಕೆಂದರೆ ಈ  ಡ್ರೆಸ್ಸಿಂಗ್ ಐಡಿಯಾ ನೀವು ಪ್ರಯತ್ನಿಸಲೇಬೇಕು
Navratri 2023Image Credit source: Fashna
ಮಾಲಾಶ್ರೀ ಅಂಚನ್​
| Edited By: |

Updated on:Oct 15, 2023 | 11:55 AM

Share

ಭಾರತದಲ್ಲಿ ಎಲ್ಲಾ ಹಬ್ಬಗಳಿಗೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಹಾಗೇನೆ ಎಲ್ಲಾ ಹಬ್ಬಗಳಲ್ಲೂ ಹೆಚ್ಚಾಗಿ ಮಹಿಳಾಮಣಿಗಳು ಹೊಸ ಸೀರೆಯುಟ್ಟು ಚೆಂದವಾಗಿ ಅಲಂಕಾರಗೊಂಡು ದೇವರ ಪೂಜೆಯನ್ನು ಮಾಡುತ್ತಾರೆ. ಹೆಂಗಳೆಯರಿಗೆ ಹಬ್ಬಕ್ಕೆ ತಯಾರಾಗುವುದೇ ಒಂದು ಖುಷಿ. ಇನ್ನೇನು ನವರಾತ್ರಿ ಹಬ್ಬ  ಶುರುವಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬದಲ್ಲಿ ನವದುರ್ಗೆಯರಿಗೆ ಪ್ರಿಯವಾದ ಬಣ್ಣದ ಉಡುಪನ್ನು ಧರಿಸುವುದು ವಾಡಿಕೆ. ಮೊದಲನೇ ದಿನದಂದು ಕೇಸರಿ, ಎರಡನೇ ದಿನ ಬಿಳಿ, ಮೂರನೇ ದಿನ ಕೆಂಪು, ನಾಲ್ಕನೇ ದಿನ ಕಡುನೀಲಿ, ಐದನೇ ದಿನ ಹಳದಿ, ಆರನೇ ದಿನ ಹಸಿರು, ಏಳನೇ ದಿನ ಬೂದು, ಎಂಟನೇ ದಿನ ನೇರಳೆ ಹಾಗೂ ಒಂಬತ್ತನೇ ದಿನ ಪಿಕಾಕ್ ಗ್ರೀನ್ ಬಣ್ಣದ ಉಡುಗೆಗಳನ್ನು ತೊಡಬೇಕು. ಮುಖ್ಯವಾಗಿ ಹಬ್ಬಗಳಲ್ಲಿ ಆಕರ್ಷಕವಾಗಿ ಕಾಣಲು ಸಂದರ್ಭಕ್ಕೆ ಅನುಗುಣವಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗಿರುವಾಗ ಈ ಹಬ್ಬದಲ್ಲಿ ಯಾವೆಲ್ಲಾ ಬಗೆಯ ಉಡುಪುಗಳನ್ನು ಧರಿಸಬೇಕು ಎಂಬ ಗೊಂದಲದಲ್ಲಿದ್ದೀರಾ? ಹಾಗಾದರೆ ಈ ಬಾರಿಯ ನವರಾತ್ರಿ ಹಬ್ಬದಲ್ಲಿ ನೀವು ಆಕರ್ಷಕವಾಗಿ ಕಾಣಬೇಕೆಂದರೆ ಈ ಕೆಲವು ಡ್ರೆಸಿಂಗ್ ಐಡಿಯಾಗಳನ್ನು ಪ್ರಯತ್ನಿಸಬಹುದು.

ಹಬ್ಬದ ದಿನ ಆಕರ್ಷಕವಾಗಿ ಕಾಣಲು ಬಯಸಿದರೆ ಈ ಕೆಲವು ಡ್ರೆಸ್ಸಿಂಗ್ ಐಡಿಯಾಗಳನ್ನು ನೀವು ಪ್ರಯತ್ನಿಸಿ:

ಕ್ಲಾಸಿಕ್ ರೇಶ್ಮೆ ಸೀರೆ:

ಯಾವುದೇ ಹಬ್ಬವಾದರೂ ಸರಿ, ಹಬ್ಬದ ಸಮಯದಲ್ಲಿ ಮಹಿಳೆಯರು ಲಕ್ಷಣವಾಗಿ ಸೀರೆ ಸೀರೆಯುಟ್ಟುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ. ಅದರಲ್ಲೂ ಈ ನವರಾತ್ರಿಯ ಹಬ್ಬದ ಸಮಯದಲ್ಲಿ ಹಸಿರು, ಕೆಂಪು, ಗಾಢ ನೀಲಿ ಅಥವಾ ಹಳದಿ ಬಣ್ಣದ ರೇಶ್ಮೆ ಸೀರೆಯನ್ನುಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕಾರಗೊಂಡರೆ, ನೀವು ಬಹಳ ಸುಂದರವಾಗಿ ಕಾಣುತ್ತೀರಿ. ರೇಶ್ಮೆ ಸೀರೆಯೊಂದಿಗೆ ನಿಮ್ಮ ನೋಟವನ್ನು ಹೆಚ್ಚಿಸಲು ಬಯಸಿದರೆ ಲಕ್ಷ್ಮಿ ಪೆಂಡೆಂಟ್ ಇರುವ ಉದ್ದನೆಯ ಸರ ಅಥವಾ ಕಾಸಿನ ಸರವನ್ನು ಧರಿಸಬಹುದು. ಕಿವಿಗೆ ಆಂಟಿಕ್ ಜುಮ್ಕ ಹಾಕಿಕೊಳ್ಳಬಹುದು. ಹಾಗೂ ನೀವು ನಿಮ್ಮ ಸೀರೆಯ ಬಣ್ಣಕ್ಕೆ ಅನುಗುಣವಾದ ಬಳೆಗಳನ್ನು ಧರಿಸಬಹುದು. ಕೈತುಂಬಾ ಬಳೆಗಳನ್ನು ತೊಡಲು ಇಷ್ಟವಿಲ್ಲದಿದ್ದವರು, ಒಂದು ದಪ್ಪನೆಯ ಆಂಟಿಕ್ ಬಳೆಯನ್ನು ಹಾಕಿಕೊಳ್ಳಬಹುದು.

ಲೆಹಂಗಾ:

ನವರಾತ್ರಿ ಹಬ್ಬಕ್ಕೆ ಒಂಬತ್ತು ದಿನವೂ ಸೀರೆಯನ್ನು ಉಡಲು ಇಷ್ಟಪಡದವರು, ಲೆಹೆಂಗಾವನ್ನು ಕೂಡಾ ಧರಿಸಬಹುದು. ನೀವು ನವರಾತ್ರಿಯ ಮೂರನೇ ದಿನದಂದು ಕೆಂಪು ಬಣ್ಣದ ಲೆಹಂಗಾವನ್ನು ಧರಿಸಬಹುದು. ಅಥವಾ ನಾಲ್ಕನೇ ದಿನದಂದು ಕಡು ನೀಲಿ ಬಣ್ಣದ ಅಥವಾ ಐದನೇ ದಿನದಂದು ಹಳದಿ ಬಣ್ಣದ ಲೆಹೆಂಗಾವನ್ನು ಧರಿಸಬಹುದು. ಈ ಉಡುಪಿನೊಂದಿಗೆ ಸಿಂಪಲ್ ಹೇರ್ ಸ್ಟೈಲ್ ಹಾಗೂ ಕಿವಿಗೆ ಭಾರವಾದ ಜುಮ್ಕಾವನ್ನು ಧರಿಸಬಹುದು.

ಇದನ್ನೂ ಓದಿ: ನವರಾತ್ರಿಯ ಉಪವಾಸದ ವೇಳೆ ಸಾತ್ವಿಕ ಆಹಾರ ಸೇವಿಸುವುದರಿಂದ ಏನು ಪ್ರಯೋಜನ?

ಅನಾರ್ಕಲಿ ಸೂಟ್:

ಆಕರ್ಷಕವಾಗಿ ಕಾಣಬೇಕು ಆದರೆ ಲೆಹೆಂಗಾದಂತಹ ಭಾರವಾದ ಬಟ್ಟೆಯನ್ನು ಧರಿಸಲು ಇಷ್ಟಪಡದಿದ್ದರೆ, ನೀವು ಅನಾರ್ಕಲಿ ಸೂಟ್ ಧರಿಸಬಹುದು. ಸಿಂಪಲ್ ಅನಾರ್ಕಲಿಯೊಂದಿಗೆ ಗ್ರ್ಯಾಂಡ್ ದುಪಟ್ಟಾವನ್ನು ಧರಿಸಿದಬಹುದು. ಇದು ಆರಾಮದಾಯಕ ಮಾತ್ರವಲ್ಲದೆ ನಿಮಗೆ ಸ್ಟೈಲಿಶ್ ನೋಟವನ್ನು ನೀಡುತ್ತದೆ. ಅನಾರ್ಕಲಿ ಸೂಟ್ ಧರಿಸುತ್ತೀರಿ ಎಂದಾದರೆ ಅದಕ್ಕೆ ಮ್ಯಾಚಿಂಗ್ ಆಗಿರುವ ಭಾರವಾದ ಕಿವಿಯೋಲೆಯನ್ನು ಧರಿಸಿ.

ಸಿಂಪಲ್ ಕುರ್ತಾ:

ಕೆಲವೊಬ್ಬರಿಗೆ ಗ್ರ್ಯಾಂಡ್ ಆಗಿ ಅಲಂಕಾರಗೊಳ್ಳುವುದೆಂದರೆ ಇಷ್ಟವಾಗುವುದಿಲ್ಲ, ಅಂತಹವರು ಸಿಂಪಲ್ ಕುರ್ತಾವನ್ನು ಧರಿಸಬಹುದು. ನೀವು ಉದ್ದನೆಯ ಪ್ರಿಂಟೆಡ್ ಅಥವಾ ಮಿರರ್ ವರ್ಕ್ ಇರುವಂತಹ ಸಂಪ್ರದಾಯಿಕ ಶೈಲಿಯ ಕುರ್ತಾದೊಂದಿಗೆ ಲೆಗ್ಗಿನ್ಸ್ ಕೂಡಾ ಧರಿಸಬಹುದು ಅಥವಾ ಜೀನ್ಸ್ ಪ್ಯಾಂಟ್ ಕೂಡಾ ಧರಿಸಬಹುದು. ನೀವು ಕುರ್ತಾ ಧರಸುತ್ತಿದ್ದಿರೆಂದಾದರೆ ನೀವು ಸಿಲ್ವರ್ ಬಣ್ಣದ ಕಿವಿಯೋಲೆ ಅಥವಾ ಜುಮ್ಕಾಗಳನ್ನು ಹಾಕಿಕೊಳ್ಳಿ.

ಶರಾರ ಸೆಟ್:

ಇತ್ತೀಚಿನ ದಿನಗಳಲ್ಲಿ ಶರಾರ ಉಡುಗೆಯು ಹೆಚ್ಚು ಟ್ರೆಂಡಿಗ್ನಲ್ಲಿದೆ. ನೀವು ಕೂಡಾ ಈ ಹಬ್ಬದ ಸಂದರ್ಭದಲ್ಲಿ ಶರಾರ ಉಡುಗೆಯನ್ನು ತೊಟ್ಟುಕೊಳ್ಳಬಹುದು. ಇದು ನಿಮಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಫ್ಲೋರಲ್ ಪ್ರಿಂಟ್ ಕುರ್ತಾದೊಂದಿಗೆ ಮ್ಯಾಂಚಿಂಗ್ ಬಣ್ಣದ ಶರಾರ ಧರಿಸಬಹುದು. ಲೈಟ್ ಮೇಕಪ್ ಜೊತೆಗೆ ಭಾರವಾದ ಕಿವಿಯೋಲೆಯನ್ನು ಹಾಗೂ ಕತ್ತಿಗೆ ಚೋಕರ್ ಹಾಕಿಕೊಂಡರೆ ಇದು ನಿಮಗೆ ಸೆಲೆಬ್ರಿಟಿ ನೋಟವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:53 am, Sun, 15 October 23

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ