Navratri 2026: ಸ್ಕಂದಮಾತೆಯ ಆಶಿರ್ವಾದ ಪಡೆಯಲು ನವರಾತ್ರಿಯ ಐದನೇ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು?
ನವರಾತ್ರಿಯ ಐದನೇ ದಿನದಂದು, ದುರ್ಗಾ ದೇವಿಯ ಐದನೇ ರೂಪವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಲಭಿಸುತ್ತದೆ ಮತ್ತು ಯಶಸ್ಸಿನ ಹಾದಿ ತೆರೆಯುತ್ತದೆ. ಜೊತೆಗೆ ದೇವಿಯ ಅನುಗ್ರಹದಿಂದ ಭಕ್ತರು ಆಧ್ಯಾತ್ಮಿಕ ಶಾಂತಿ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ. ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಆರಾಧನೆಯ ಸಂದರ್ಭದಲ್ಲಿ ಯಾವ ಬಣ್ಣದ ಬಟ್ಟೆಯನ್ನು ಭಕ್ತರು ಧರಿಸಿದರೆ ಶ್ರೇಷ್ಠ ಎಂಬುದನ್ನೊಮ್ಮೆ ನೋಡೋಣ ಬನ್ನಿ.

ನವರಾತ್ರಿಯ (Navratri) ಪ್ರತಿಯೊಂದು ದಿನವೂ ಸಹ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಈ ಒಂಬತ್ತು ದಿನಗಳಲ್ಲಿ, ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ದೇವಿಯನ್ನು ಆರಾಧನೆ ಮಾಡುವಾಗ ಪ್ರತಿ ದಿನವೂ ಒಂದು ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನು ಧರಿಸುವ ಸಂಪ್ರದಾಯವೂ ಇದೆ. ನವರಾತ್ರಿಯ ಐದನೇ ದಿನದಂದು, ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಲಭಿಸುತ್ತದೆ ಮತ್ತು ಯಶಸ್ಸಿನ ಹಾದಿ ತೆರೆಯುತ್ತದೆ. ಹಾಗಾಗಿ ಸ್ಕಂದ ಮಾತೆಯ ಆಶಿರ್ವಾದವನ್ನು ಪಡೆಯಲು ಭಕ್ತರು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಸ್ಕಂದಮಾತೆಯನ್ನು ಪೂಜಿಸುವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು, ಸ್ಕಂದಮಾತೆಗೆ ಯಾವ ಬಣ್ಣವೆಂದರೆ ಬಲು ಇಷ್ಟ ಎಂಬುದರ ಮಾಹಿತಿಯನ್ನು ತಿಳಿಯಿರಿ.
ನವರಾತ್ರಿಯ 5 ನೇ ದಿನ ಯಾವ ಬಣ್ಣದ ಬಟ್ಟೆ ಧರಿಸುವುದು ಸೂಕ್ತ?
ನವರಾತ್ರಿ ಹಬ್ಬವನ್ನು ದೇಶಾದ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ದೇವಿಯ ಒಂಬತ್ತು ರೂಪಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ದೇವಿಯನ್ನು ಆರಾಧನೆ ಮಾಡುವುದರ ಜೊತೆಗೆ ಸ್ಕಂದಮಾತೆಯ ನೆಚ್ಚಿನ ಬಣ್ಣದ ಬಟ್ಟೆಯನ್ನು ತೊಟ್ಟು ದೇವಿಯನ್ನು ಪೂಜಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ನವರಾತ್ರಿಯ ಐದನೇ ದಿನದಂದು ಸ್ಕಂದ ಮಾತೆಯ ಪೂಜೆಯ ಸಮಯದಲ್ಲಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಹಳದಿ ಬಣ್ಣವು ಹೊಳಪು, ಆಶಾವಾದ ಮತ್ತು ಸಂತೋಷದೊಂದಿಗೆ ಸಂಬಂಧವನ್ನು ಹೊಂದಿದ್ದು, ನವರಾತ್ರಿಯ ಐದನೇ ದಿನದಂದು ಹಳದಿ ಬಟ್ಟೆಗಳನ್ನು ಧರಿಸಿ, ದೇವಿಯ ಮುಂದೆ ದೀಪ ಹಚ್ಚಿ, ಹೂವುಗಳು ಮತ್ತು ನೈವೇದ್ಯವನ್ನು ಅರ್ಪಿಸಿ ದೇವಿಯ ಮಂತ್ರಗಳನ್ನು ಪಠಿಸುವುದು ಅತ್ಯಂತ ಫಲಪ್ರದ ಎಂದು ಹೇಳಲಾಗುತ್ತದೆ.
ಸ್ಕಂದಮಾತೆಗೆ ಯಾವ ವಸ್ತುಗಳನ್ನು ಅರ್ಪಿಸಬೇಕು:
ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಮನಃಶುದ್ಧಿಯಾಗುತ್ತದೆ. ಭಕ್ತರು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಸ್ಕಂದ ಮಾತೆಯು ತನ್ನ ಭಕ್ತರನ್ನು ಸ್ವಂತ ಮಕ್ಕಳಂತೆ ರಕ್ಷಿಸುತ್ತಾಳೆ, ಪ್ರೀತಿ ವಾತ್ಸಲ್ಯವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಪೂಜೆಯ ಸಮಯದಲ್ಲಿ ಸ್ಕಂದಮಾತೆಗೆ ಬಾಳೆಹಣ್ಣನ್ನು ಅರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಬಾಳೆಹಣ್ಣಿನ ಸಿಹಿ ಖಾದ್ಯಗಳನ್ನು ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬಹುದು. ಇದಲ್ಲದೆ ಹಣ್ಣುಗಳು, ಸಿಹಿತಿಂಡಿ, ಪಾಯಸವನ್ನು ದೇವಿಗೆ ಅರ್ಪಿಸಬಹುದು. ಜೊತೆಗೆ ಸ್ಕಂದ ಮಾತೆಗೆ ಕಮಲದ ಹೂವು, ಗುಲಾಬಿ, ದಾಸವಾಳ ಹೂವುಗಳನ್ನು ಸಹ ಅರ್ಪಿಸಬಹುದು.
ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಈ ಬಣ್ಣದ ಬಟ್ಟೆಯನ್ನು ಧರಿಸುವುದು ತುಂಬಾನೇ ಶ್ರೇಷ್ಠವಂತೆ
ಸ್ಕಂದಮಾತೆಯ ಪೂಜಾ ವಿಧಾನ:
ನವರಾತ್ರಿಯ ಐದನೇ ದಿನದಂದು, ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ ಹಳದಿ ಬಣ್ಣದ ಹೊಸ ಬಟ್ಟೆಯನ್ನು ತೊಟ್ಟು, ದೀಪ ಬೆಳಗಿ ಸ್ಕಂದ ಮಾತೆಯನ್ನು ಪೂಜಿಸಬೇಕು. ಜೊತೆಗೆ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳು ಮತ್ತು ಹೂವುಗಳನ್ನು ದೇವಿಗೆ ಅರ್ಪಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




