Personality Test: ನಿಮ್ಮಿಷ್ಟದ ಬಣ್ಣವೇ ಹೇಳುತ್ತೆ, ನಿಮ್ಮ ವ್ಯಕ್ತಿತ್ವದ ರಹಸ್ಯ
ವ್ಯಕ್ತಿಯ ಅಭ್ಯಾಸಗಳು, ನಡವಳಿಕೆಗಳು ಅತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತೋರಿಸುವಂತೆ, ನಮ್ಮ ನೆಚ್ಚಿನ ಬಣ್ಣದ ಮುಖಾಂತರ ನಮ್ಮ ಸೀಕ್ರೆಟ್ ಪರ್ಸನಾಲಿಟಿ ಹೇಗಿದೆ ಎಂಬುದನ್ನು ನಾವೇ ತಿಳಿದುಕೊಳ್ಳಬಹುದು. ಕೆಂಪು, ಕಪ್ಪು, ಬಿಳಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಬಣ್ಣ ಅಂದ್ರೆ ಸಖತ್ ಇಷ್ಟ ಇರುತ್ತವೆ. ಈ ನೆಚ್ಚಿನ ಬಣ್ಣದ ಮುಖಾಂತರವೇ ನೀವು ನಿಮ್ಮ ಲೈಫ್ ಸೀಕ್ರೆಟ್ಗಳನ್ನು ತಿಳಿಯಬಹುದು.

ಪ್ರತಿಯೊಬ್ಬರೂ ಸಹ ಬಣ್ಣಗಳನ್ನು (color) ಪ್ರೀತಿಸುತ್ತಾರೆ. ಎಲ್ಲರಿಗೂ ಒಂದೊಂದು ಫೇವರೆಟ್ ಕಲರ್ ಇರುತ್ತೆ. ಕೆಲವರಿಗೆ ಕಪ್ಪು ಬಣ್ಣ ಸಖತ್ ಇಷ್ಟವಾದ್ರೆ, ಇನ್ನೂ ಕೆಲವರಿಗೆ ಗುಲಾಬಿ ಬಣ್ಣ ಎಂದ್ರೆ ತುಂಬಾನೇ ಇಷ್ಟವಾಗುತ್ತದೆ. ಹೀಗೆ ಒಬ್ಬೊಬ್ಬರು ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಹೀಗೆ ನೀವು ಇಷ್ಟಪಡುವ ಬಣ್ಣದ ಮೂಲಕವೂ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಬಹುದು. ಹೌದು ಕೂದಲು, ಕೈಬೆರಳು, ಮೂಗಿನ ಆಕಾರ ಸೇರಿದಂತೆ ದೇಹ ಲಕ್ಷಣದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳುವಂತೆ, ಬಣ್ಣದ ಮೂಲಕವೂ ನೀವು ಎಂತಹ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಬಹುದು. ನಿಮ್ಮ ಫೇವರೆಟ್ ಕಲರ್ ಮೂಲಕ ನಿಮ್ಮ ಲೈಫ್ ಸೀಕ್ರೆಟ್ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಕೆಂಪು ಬಣ್ಣ:
ಕೆಂಪು ಬಣ್ಣವನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಅವರು ಸಂಬಂಧಗಳ ವಿಷಯಕ್ಕೆ ಬಂದಾಗ, ಅವರು ತುಂಬಾ ಬದ್ಧರಾಗಿರುತ್ತಾರೆ. ಅವರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಇವರು ಧೈರ್ಯಶಾಲಿ ಸ್ವಭಾವದವರು ಮತ್ತು ಉತ್ಸಾಹದಿಂದ ಜೀವನ ನಡೆಸುವ ವ್ಯಕ್ತಿಗಳಾಗಿರುತ್ತಾರೆ.
ಹಸಿರು ಬಣ್ಣ:
ಹಸಿರು ಬಣ್ಣವನ್ನು ಇಷ್ಟಪಡುವ ಜನರನ್ನು ದೂರದೃಷ್ಟಿಯುಳ್ಳವರು ಮತ್ತು ಹೆಚ್ಚು ಬುದ್ಧಿವಂತರು ಎಂದು ಪರಿಗಣಿಸಲಾಗುತ್ತದೆ. ಅವರು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಿಮಗೂ ಈ ಬಣ್ಣ ಇಷ್ಟವಿದ್ದರೆ ನೀವು ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತೀರಿ ಮತ್ತು ಅವರ ಅಭಿವೃದ್ಧಿಯನ್ನೂ ಬೆಂಬಲಿಸುತ್ತೀರಿ ಎಂದರ್ಥ.
ಹಳದಿ ಬಣ್ಣ:
ಹಳದಿ ಬಣ್ಣವನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಮೋಜು-ಪ್ರಿಯರು ಮತ್ತು ಅವರು ಹರ್ಷಚಿತ್ತದಿಂದ ಇರುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಮಾತನಾಡುವುದನ್ನು ಆನಂದಿಸುತ್ತಾರೆ. ಈ ಗುಣವು ಅವರಿಗೆ ಬೇಗನೆ ಸ್ನೇಹಿತರನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನೀಲಿ ಬಣ್ಣ:
ನಿಮ್ಮ ನೆಚ್ಚಿನ ಬಣ್ಣ ನೀಲಿಯಾಗಿದ್ದರೆ, ನೀವು ನಂಬಿಕೆ ಮತ್ತು ನಿಷ್ಠೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೀರಿ ಎಂದರ್ಥ. ಇದಲ್ಲದೆ ನೀಲಿ ಬಣ್ಣವನ್ನು ಇಷ್ಟಪಡುವವರು ಶಾಂತ ಸ್ವಭಾವದವರು, ವಿಶ್ವಾಸಾರ್ಹ ಮತ್ತು ಸ್ನೇಹಪರರಾಗಿರುತ್ತಾರೆ. ಇವರು ಯಾವಾಗಲೂ ಶಾಂತಿಯುತ ವಾತಾವರಣವನ್ನು ಇಷ್ಟಪಡುತ್ತಾರೆ, ಮತ್ತು ಜೀವನದಲ್ಲಿ ಸ್ಥಿರತೆಯನ್ನು ಆನಂದಿಸುತ್ತಾರೆ.
ಕಪ್ಪು ಬಣ್ಣ:
ಅನೇಕ ಜನರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾರೆ. ಅಂತಹ ಜನರು ತಮ್ಮನ್ನು ತಾವು ಅತ್ಯಂತ ಶಕ್ತಿಶಾಲಿಗಳೆಂದು ಬಿಂಬಿಸಿಕೊಳ್ಳಲು ಬಯಸುತ್ತಾರೆ. ಇವರು ದೃಢನಿಶ್ಚಯ ಮತ್ತು ಆತ್ಮವಿಶ್ವಾಸ ಹೊಂದಿದ್ದಾರೆ. ಇವರು ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಅಲ್ಲದೆ ಇವರು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಇದನ್ನೂ ಓದಿ: ಶ್ವಾನಗಳು ಮಧ್ಯರಾತ್ರಿ ವಿಚಿತ್ರವಾಗಿ ಬೊಗಳೋದೇಕೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ
ಗುಲಾಬಿ ಬಣ್ಣ:
ಪಿಂಕ್ ಕಲರ್ ನಿಮಗೆ ಇಷ್ಟವೆಂದಾದರೆ, ನೀವು ಸಹಾನುಭೂತಿಯುಳ್ಳ ವ್ಯಕ್ತಿಯೆಂದು ಅರ್ಥ. ವಿಶಾಲ ಹೃದಯದವರಾದ ನೀವು ಪ್ರತಿಯೊಂದು ವಿಚಾರದಲ್ಲೂ ತುಂಬಾನೇ ದಯೆಯನ್ನು ಹೊಂದಿರುತ್ತೀರಿ. ನಿಮ್ಮ ಈ ಕಾಳಜಿಯ ಸ್ವಭಾವ ಜನರನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡುತ್ತದೆ. ಒಟ್ಟಾರೆಯಾಗಿ ನೀವು ನಿಮ್ಮ ಸಹಾನುಭೂತಿ ಮತ್ತು ಮೃದು ಸ್ವಭಾವಕ್ಕೆ ಹೆಸರುವಾಸಿಯಾಗಿದ್ದೀರಿ.
ಬಿಳಿ ಬಣ್ಣ:
ಬಿಳಿ ಬಣ್ಣವನ್ನು ಇಷ್ಟಪಡುವವರು ಸರಳತೆಯನ್ನು ಪ್ರೀತಿಸುವವರಾಗಿರುತ್ತಾರೆ. ಇವರು ಗದ್ದಲವಿರುವ ಕಡೆ ಇರಲು ಇಷ್ಟಪಡುವುದಿಲ್ಲ. ಇವರು ಶಾಂತಿಪ್ರಿಯರಾಗಿದ್ದು, ಶಾಂತವಾಗಿರುವ ಪರಿಸರವನ್ನು ಇಷ್ಟಪಡುತ್ತಾರೆ. ಮತ್ತು ಜೀವನದಲ್ಲಿ ಸ್ಪಷ್ಟವಾಗಿರಲು ಬಯಸುತ್ತಾರೆ. ಇವರು ಸಹಾನುಭೂತಿಯುಳ್ಳವರಾಗಿದ್ದು, ಇತರರಿಗೆ, ಸಹಾಯ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.
ನೇರಳೆ ಬಣ್ಣ:
ನೇರಳೆ ಬಣ್ಣವನ್ನು ಇಷ್ಟಪಡುವ ಜನರು ಇತರರ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಕೇಳಲು ಇಷ್ಟಪಡುತ್ತಾರೆ. ಇವರು ಸ್ವಭಾವತಃ ಬುದ್ಧಿವಂತರು ಮತ್ತು ಹಾಸ್ಯಮಯರು. ನಿಮಗೂ ನೇರಳೆ ಬಣ್ಣ ಇಷ್ಟವಿದ್ದರೆ ನೀವು ಸ್ವಭಾವತಃ ಸ್ವತಂತ್ರರು ಎಂದರ್ಥ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




