Transgender World : ತಳಸಮುದಾಯಗಳ ಯಾವ ಕಸುಬೂ ಜ್ಞಾನವ್ಯವಸ್ಥೆಯಾಗಿ ಬೆಳೆಯಲು ಈ ಬ್ರಾಹ್ಮಣೀಕರಣ ಬಿಟ್ಟಿಲ್ಲ

Food Culture : ‘ಬೀಫ್‌ ಬಗ್ಗೆ ಇಶ್ಟೊಂದು ಹಿಂದೂ ದರ್ಮದ ವಿಚಾರಗಳನ್ನ ಹೇಳ್ತಾರಲ್ಲ... ನಾವು ದಲಿತರು ಮತ್ತೆ ಮುಸ್ಲಿಮರು ಸುಮ್ನೆ ಒಂದು ಹಸುನ ತಂದು ಕಡಿಯೋದಿಲ್ಲ. ಅದಕ್ಕೆ ವಯಸ್ಸಾದ ಮೇಲೆ ನಾವು ಅದನ್ನು ಕಡಿಯೋದು. ಸುಮ್ಸುಮ್ನೆ ಹಸುನ ಕಡಿಯಕ್ಕೆ ನಮಗೇನು ಹುಚ್ಚಾ?’ ರೂಮಿ ಹರೀಶ್

Transgender World : ತಳಸಮುದಾಯಗಳ ಯಾವ ಕಸುಬೂ ಜ್ಞಾನವ್ಯವಸ್ಥೆಯಾಗಿ ಬೆಳೆಯಲು ಈ ಬ್ರಾಹ್ಮಣೀಕರಣ ಬಿಟ್ಟಿಲ್ಲ
Follow us
ಶ್ರೀದೇವಿ ಕಳಸದ
|

Updated on:Feb 01, 2022 | 11:12 AM

ರೂಮಿ ಕಾಲಂ | Rumi Column : ಬಿಟ್ಟು ತೆಲಂಗಾಣದಲ್ಲಿರುವ ನನ್ನ ಸ್ನೇಹಿತ, ನ್ಯೂರೋ ಬಯಾಲಜಿಸ್ಟು. ಅವನು ಹೈದ್ರಾಬಾದ್‌ ಯುನಿವರ್ಸಿಟಿಯಲ್ಲಿ ಪಾಠ ಮಾಡೋದಕ್ಕಿಂತ ಆ ಯೂನಿವರ್ಸಿಟಿಯಲ್ಲಿರೋ ಕಾರ್ಮಿಕರನ್ನು ಸಂಘಟಿಸುತ್ತಿದ್ದ. ಅವನು ರೋಹಿತ್‌ ವೇಮುಲನ ಕ್ಲೋಸ್‌ ಫ್ರೆಂಡ್.‌ ನಾನು ಅವನ ಮನೆಗೆ ಈ ಚರ್ಚೆಗಳನ್ನು ಮಾಡಿ ದಾಕಲಿಸಲು ಹೋಗಿದ್ದೆ. ಅವನೇ ನನಗೆ ಜನರನ್ನು ಪರಿಚಯಿಸಿದ್ದು. ಹಾಗೇ ಒಂದು ಪಾರ್ಟಿಯಲ್ಲಿ ರೋಹಿತ್‌ನ ಮಾತಾಡಿಸಿದ್ದೆ. ಆದ್ರೆ ಅವ ಚರ್ಚೆಗೆ ಸಿಗಲಿಲ್ಲ. ಆದ್ರೆ ಚರ್ಚೆಗೆ ತುಂಬಾ ಬೇರೆ ಜನ ಸಿಕ್ಕಿದರು. ಅದರಲ್ಲಿ ಒಬ್ಬರು ಗೋಗು ಶ್ಯಾಮಳ. ಗೋಗು ನಂಗೆ ತುಂಬಾ ಪ್ರಿಯರಾಗಿಬಿಟ್ಟರು. ನಾನು ಅವರ ಮನೆಗೆ ಹೋಗಿದ್ದ ದಿವಸ ಅವರು ಅವರ ಮನೆಯಲ್ಲಿ ಒಬ್ಬಟ್ಟು ಮಾಡ್ತಾ ನನ್‌ ಜೊತೆ ಬೀಫ್‌ ಅನ್ನು ಸೈನ್ಟಿಫಿಕ್‌ ಆಗಿ ಹೇಗೆ ಕಡೀತಾರೆ, ಮಟನ್‌ ಹೇಗೆ ಸೈನ್ಟಿಫಿಕ್‌ ಆಗಿ ಕಡಿತಾರೆ ಅಂತ ವಿವರಿಸ್ತಾ ಹೇಳಿದ್ರು, “ಯಾವುದೇ ಶೋಶಿತ ಸಮುದಾಯಗಳ ಜ್ಞಾನವನ್ನ ಜ್ಞಾನ ಅಂತಾನೇ ನೋಡಲ್ಲ? ಮಂತ್ರದಲ್ಲಿ, ಬರಹದಲ್ಲಿ ಇದ್ದ ತಕ್ಷಣ ಅದು ಮಹತ್ತರ ಆದ್ರೆ ಮಾತಿನಲ್ಲಿ ಅಂದ್ರೆ ಓರಲ್‌ ಟ್ರೆಡಿಶನ್‌, ಪ್ರಾಕ್ಟಿಕಲ್‌ ಆಗಿ ಬದುಕುವ ಯಾವ ವಿಶಯವೂ ಯುನಿವರ್ಸಿಟಿಯಲ್ಲಿ ತಿಳಿಸೋದಿಲ್ಲ. ಹೇಳಿ ಕೋಡೋದಿಲ್ಲ. ಸಂಸ್ಕೃತದಲ್ಲಿ ಬಂದ ತಕ್ಷಣ ಅದು ವಿದ್ಯೆ.

ರೂಮಿ ಹರೀಶ್, ಟ್ರಾನ್ಸ್​ ಮ್ಯಾನ್ (Rumi Harish)

*

(ಅಲೆ – 9)

ಸುನಿಲ್‌ ನನ್ನ ಸ್ನೇಹಿತ, ಜೊತೆಗಾರ ಮತ್ತೆ ಬಹಳ ಸ್ವಂತಿಕೆಯಿಂದ ಚಿಂತನೆ ಮಾಡೋವ್ನು. ೨೦೧೩ರಲ್ಲಿ ಒಂದ್‌ ಯೋಚನೆ ಮಾಡ್ದ. ನಮಗೆ ಸಂವಿಧಾನದಲ್ಲಿ ಯಾರಿಗೇ ಆಗಲಿ ತಾರತಮ್ಯ ಆಗಬಾರದು ಅಂತ ಇದೆ. ಅದು ಆರ್ಟಿಕಲ್‌ ೧೫ರಲ್ಲಿ ವಿವರವಾಗಿ ಹೇಳಿದ್ದಾರೆ ಬಾಬಾಸಾಹೇಬರು. ಆದ್ರೆ ತಾರತಮ್ಯ ಆದ್ರೆ ಅದಕ್ಕೆ ಏನು ಪರಿಹಾರ ಅನ್ನಕ್ಕೆ ಕಾನೂನು ಇಲ್ಲ. ಈ ವಿಚಾರ ಸುನಿಲು ನಾನು ಒಟ್ಟಿಗೆ ಮೊದಲನೆ ಸಂಶೋದನೆ ಮಾಡಿದಾಗ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುವ ತಾರತಮ್ಯದ ಕುರಿತು ಸುಮಾರು ಸಮುದಾಯದವರ ಹತ್ತಿರ ಮಾತನಾಡಿ ಅದನ್ನು ಬರೆದು ಒಂದು ವರದಿ ಮಾಡಿದ್ದೆವು. ಆಗ ಅಂದ್ರೆ ೨೦೧೩ರಲ್ಲಿ ಈ ವಿಶಯವನ್ನು ಮುಂದುವರೆಸಲು ಯೋಚನೆ ಮಾಡುತ್ತಿರುವಾಗ ಸುನಿಲ್‌ ಮತ್ತೆ ನಾನು ಒಂದಿನ ರಾತ್ರಿ ಕುಡೀತಾ ಈ ತಾರತಮ್ಯದ ವಿದಗಳನ್ನು ಪಟ್ಟಿ ಮಾಡಿದ್ವಿ. ಯಾರಿಗೆಲ್ಲಾ ತಾರತಮ್ಯ ಆಗುತ್ತೆ, ಯಾವ ಯಾವ ಕಾರಣಕ್ಕೆ ಆಗುತ್ತೆ, ತಾರತಮ್ಯ ಆಗುವ ವಿದಾನಗಳು ಮತ್ತು ಇದರ ಒಳ ಕನೆಕ್ಷನ್‌ಗಳನ್ನ ರಾತ್ರಿಯಿಡೀ ಕುಳಿತು ಲಿಂಕ ಮಾಡಿದ್ವಿ.

ಮಾರ್ನೆ ದಿನ ಎದ್‌ ತಕ್ಷಣ ಸುನಿಲ್‌ ಹೇಳ್ದ, ನಾವು ಯಾಕೆ ಒಟ್ಟಾರೆ ಎಲ್ಲಾ ರೀತಿಯ ತಾರತಮ್ಯ ನಿಶೇದಿಸುವ ಒಂದು ಬಿಲ್‌ ತಯಾರಿಸುವ ಬಗ್ಗೆ ಯೋಚಿಸಬಾರದು? ಆ ಕಾಯ್ದೆಯಲ್ಲಿ ಬಾರತದ ತಳ ಸಮುದಾಯಗಳ ಅನುಬವಗಳನ್ನು ಒಂದೆಡೆ ಸೇರಿಸುವುದರೊಂದಿಗೆ ನಮ್ಮ ಯೋಚನೆ, ಕಲ್ಪನೆಗಳನ್ನೂ ಸೇರಿಸಿ, ಸ್ತಳಿಯ ವಿಸೇಸಗಳನ್ನು ದಾಕಲಿಸಿ ವಕೀಲರ ಗುಂಪಿಗೆ ಕೊಟ್ಟರೆ ಅವರು ದಾಕಲೆಗಳ ಆದಾರದ ಮೇಲೆ ಒಂದು ಬಿಲ್‌ ತಯಾರಿಸಬಹುದು ಎಂದು. ೨೦೧೪ ರಿಂದ ತೊಡಗಿದ ಈ ಕೆಲಸ ಇನ್ನೂ ನಡೀತಾನೇ ಇದೆ. ನಾವು ದಕ್ಷಿಣ ಬಾರತ ಸುತ್ತಿ ಸುಮಾರು ೧೪೦ ಜನರ ಹತ್ತಿರ ಮಾತನಾಡಿದ ಚರ್ಚೆಗಳನ್ನು ದಾಕಲಿಸಿದ್ದೇವೆ. ಇನ್ನೂ ಈ ವಿಶಯದಲ್ಲಿ ಕೆಲಸ ಮಾಡ್ತಾ ಇದ್ದೀವೆ. ಈಗ ಈ ವಿಶ್ಯ ಯಾಕೆ ಹೇಳ್ತಿದ್ದೀನಿ ಅಂದ್ರೆ ಒಂದಶ್ಟು ಚರ್ಚೆಗಳು ಬಹಳ ಇಂಟ್ರೆಸ್ಟಿಂಗ್ ಆಗಿವೆ.

ನಮ್‌ ಮನೆಗೆ ಬರುವ ನನ್‌ ದೋಸ್ತ್‌ ಒಬ್ರು ಸೆಕ್ಸ್‌ ವರ್ಕ್​ ಮಾಡ್ತಾರೆ. ಅವರು ಹೇಳ್ತಿದ್ರು… “ಎಲ್ಲಾರೂ ಅಂದ್ಕೊಂಡು ಬಿಡ್ತಾರೆ ಸೆಕ್ಸ್‌ ಕೆಲಸ ತುಂಬಾ ಸುಲಬ ಅಂತ, ಮತ್ತೆ ಅದು ಹೀನಾಯ ಕೆಲಸ, ಅನೈತಿಕ, ಮಹಿಳೆಯರ ಶೋಶಣೆ ಅಂತೆಲ್ಲಾ. ಮೊದಲನೆಯದಾಗಿ ಬಡತನದಲ್ಲೂ ಮದುವೆ ಮಾಡೋದನ್ನ ಮಾತ್ರ ಬಿಡಲ್ಲ. ಮದ್ವೆ ಮಾಡಿದ್‌ ಮೇಲೆ ಅಪ್ಪ ಅಮ್ಮನಿಗೆ ಜವಾಬ್ದಾರಿ ಕಳೀತು. ಗಂಡನೋ, ಅತ್ತೆನೋ ತಳ್ಳಿದ್ರು. ಹೀಗೆ ಲೈನಿಗೆ ಬಂದಾಗ ಮೊದಲು ನಡೆದಿದ್ದೆಲ್ಲಾ ರೇಪು, ಆಮೇಲೆ, ಕಸುಬು ಕಲಿತೆ. ಹೇಗೆ ನಿಲ್ಬೇಕು, ಹೇಗೆ ಗಿರಾಕಿಗಳನ್ನ ಕರೀಬೇಕು, ಗಿರಾಕಿಗಳು ಕಾನ್ಡೋಂ ಉಪಯೋಗಿಸದೇ ಇದ್ರೆ ನಾವು ಹೇಗೆ ಸೇಫ್‌ ಆಗಿರ್ಬೇಕು, ಅದಕ್ಕಾಗಿ ಏನು ಮಾಡ್ಬೇಕು… ಹೀಗೆ ಈ ಕಸುಬಿನ ಹಲವು ವಿಶಯಗಳನ್ನೂ ಕಲಿತು ಘನತೆಯಿಂದ ಯಾರ ಮೇಲೂ ಡಿಪೆಂಡ್‌ ಆಗದೆ ಜೀವಿಸಿ ಮಕ್ಕಳನ್ನು ಬೆಳೆಸಿ ಓದಿಸಿ ಅವರು ಒಂದು ನೆಲೆ ಕಂಡುಕೊಬೇಕು ಅಂತಂದ್ರೆ… ನಾವು ಪಡೋ ಪಾಡು ಅಶ್ಟಿಶ್ಟಲ್ಲ. ಸುಮ್ನೆ ಕೂತು ಶೋಶಣೆ ಶೋಶಣೆ… ಅಂತ ಹೇಳೋ ಬದ್ಲು ಒಂದು ಹೆಣ್ಣನ್ನು ತಂದೆ ತಾಯಿಯ ಮನೆಯಲ್ಲಿ ಹೇಗೆ ಶೋಶಿಸ್ತಾರೆ, ಗಂಡನ ಮನೆಯಲ್ಲಿ ಹೇಗೆ ಶೋಶಿಸ್ತಾರೆ, ಸಮಾಜದಲ್ಲಿ ಹೇಗೆ ಶೋಶಿಸ್ತಾರೆ ಅನ್ನೋದನ್ನು ತಿಳ್ಕೊಂದ್ರೆ ಅದನ್ನು ತಡೆಯೋಕೆ ಆಗಲ್ವಾ?

ನಿಜ, ತಳಸಮುದಾಯಗಳ ಯಾವ ಕಸುಬೂ ಒಂದು ನಾಲೆಡ್ಜ್‌ ಸಿಸ್ಟಂ ಆಗಿ ಬೆಳೆಯಲು… ಈ ಬ್ರಾಮಣೀಕರಣ ಬಿಟ್ಟಿಲ್ಲ. ಮಾಂಸ ಕಟ್‌ ಮಾಡ್ತಾರಲ್ಲ ಅದೂ ಒಂದು ಸೈನ್ಸ್‌ ಅಂತ ಯಾಕೆ ಒಂದು Curriculum ಬೆಳೆಸುವುದಿಲ್ಲ. ಅದೇ ಶಾಸ್ತ್ರೀಯ ಸಂಗೀತಕ್ಕೆ ಇರೋ ವಿಶ್ವವಿದ್ಯಾಲಯಗಳು ಸಿನಿಮಾ ಸಂಗೀತಕ್ಕೆ ಯಾಕಿಲ್ಲ. ಇಂತಹ ಸಂಗೀತ ಯುನಿವರ್ಸಿಟಿಗಳಲ್ಲಿ ತಬಲ ಅಥವ ಮೃದಂಗ ಹೇಳಿಕೊಡ್ತಾರೆ ಆದ್ರೆ ತಮಟೆ, ಮುಖವೀಣೆ ಯಾಕೆ ಹೇಳಿಕೊಡಲ್ಲ.

ಯುನಿವರ್ಸಿಟಿಯಲ್ಲಿ ಕಲಿಯುವ ವಿಶಯ ಯಾವುದು ಮತ್ತು ಯಾವುದು ಅಲ್ಲ ಅಂತ ತೀರ್ಮಾನ ಮಾಡಿರೋದು ಯಾರು? ಎಶ್ಟು ವರ್ಶಗಳ ನಂತರ ಕೃಶಿ ಮಾಡೋದು ಯೂನಿವರ್ಸಿಟಿಯಲ್ಲಿ ಒಂದು ಕಲಿಕೆಯ ವಿಶಯವಾಗಿ ಬಂತು?

ಆಗ ನಾನು ತೆಲಂಗಾಣಗೆ ಹೋಗಿದ್ದೆ. ನಮ್ ಬಿಟ್ಟು ಮನೆಗೆ. ಬಿಟ್ಟು ನನ್ನ ಸ್ನೇಹಿತ, ಒಬ್ಬ ನ್ಯೂರೋ ಬಯಾಲಜಿಸ್ಟು. ಅವನು ಹೈದ್ರಾಬಾದ್‌ ಯುನಿವರ್ಸಿಟಿಯಲ್ಲಿ ಪಾಠ ಮಾಡೋದಕ್ಕಿಂತ ಆ ಯೂನಿವರ್ಸಿಟಿಯಲ್ಲಿರೋ ಕಾರ್ಮಿಕರನ್ನು ಸಂಘಟಿಸುತ್ತಿದ್ದ. ಅವನು ರೋಹಿತ್‌ ವೇಮುಲನ ಕ್ಲೋಸ್‌ ಫ್ರೆಂಡ್.‌ ನಾನು ಅವನ ಮನೆಗೆ ಈ ಚರ್ಚೆಗಳನ್ನು ಮಾಡಿ ದಾಕಲಿಸಲು ಹೋಗಿದ್ದೆ. ಅವನೇ ನನಗೆ ಜನರನ್ನು ಪರಿಚಯಿಸಿದ್ದು. ಹಾಗೇ ಒಂದು ಪಾರ್ಟಿಯಲ್ಲಿ ರೋಹಿತ್‌ನ ಮಾತಾಡಿಸಿದ್ದೆ. ಆದ್ರೆ ಅವ ಚರ್ಚೆಗೆ ಸಿಗಲಿಲ್ಲ. ಆದ್ರೆ ಚರ್ಚೆಗೆ ತುಂಬಾ ಬೇರೆ ಜನ ಸಿಕ್ಕಿದರು. ಅದರಲ್ಲಿ ಒಬ್ಬರು ಗೋಗು ಶ್ಯಾಮಳ. ಗೋಗು ನಂಗೆ ತುಂಬಾ ಪ್ರಿಯರಾಗಿಬಿಟ್ಟರು. ನಾನು ಅವರ ಮನೆಗೆ ಹೋಗಿದ್ದ ದಿವಸ ಅವರು ಅವರ ಮನೆಯಲ್ಲಿ ಒಬ್ಬಟ್ಟು ಮಾಡ್ತಾ ನನ್‌ ಜೊತೆ ಬೀಫ್‌ ಅನ್ನು ಸೈನ್ಟಿಫಿಕ್‌ ಆಗಿ ಹೇಗೆ ಕಡೀತಾರೆ, ಮಟನ್‌ ಹೇಗೆ ಸೈನ್ಟಿಫಿಕ್‌ ಆಗಿ ಕಡಿತಾರೆ ಅಂತ ವಿವರಿಸ್ತಾ ಹೇಳಿದ್ರು, “ಯಾವುದೇ ಶೋಶಿತ ಸಮುದಾಯಗಳ ಜ್ಞಾನವನ್ನ ಜ್ಞಾನ ಅಂತಾನೇ ನೋಡಲ್ಲ? ಮಂತ್ರದಲ್ಲಿ, ಬರಹದಲ್ಲಿ ಇದ್ದ ತಕ್ಷಣ ಅದು ಮಹತ್ತರ ಆದ್ರೆ ಮಾತಿನಲ್ಲಿ ಅಂದ್ರೆ ಓರಲ್‌ ಟ್ರೆಡಿಶನ್‌, ಪ್ರಾಕ್ಟಿಕಲ್‌ ಆಗಿ ಬದುಕುವ ಯಾವ ವಿಶಯವೂ ಯುನಿವರ್ಸಿಟಿಯಲ್ಲಿ ತಿಳಿಸೋದಿಲ್ಲ. ಹೇಳಿ ಕೋಡೋದಿಲ್ಲ. ಸಂಸ್ಕೃತದಲ್ಲಿ ಬಂದ ತಕ್ಷಣ ಅದು ವಿದ್ಯೆ. ಸಾಮಾನ್ಯ ಬಾಶೆಯಲ್ಲಿ ಅಂದ್ರೆ, ಆಟೋ ಓಡಿಸೋದೂ ಒಂದು ಸೈನ್ಸು ಆದ್ರೆ ಅದನ್ನ ಡ್ರೈವಿಂಗ್ ಸ್ಕೂಲ್‌ ಅಂತಾರೆ.

ಇನ್ನು ಬೀಫ್‌ ಬಗ್ಗೆ ಇಶ್ಟೊಂದು ಹಿಂದೂ ದರ್ಮದ ವಿಚಾರಗಳನ್ನ ಹೇಳ್ತಾರಲ್ಲ… ನಾವು ದಲಿತರು ಮತ್ತೆ ಮುಸ್ಲಿಮರು ಸುಮ್ನೆ ಒಂದು ಹಸುನ ತಂದು ಕಡಿಯೋದಿಲ್ಲ. ನಮ್ಮ ಸಮಾಜದಲ್ಲಿ ಹಸು ಹಾಲಿಗೆ, ಕೃಶಿಗೆ ಬೇಕಾಗುತ್ತೆ. ಅದಕ್ಕೆ ವಯಸ್ಸಾದ ಮೇಲೆ ಮತ್ತೆ ಅದು ಬದುಕಕ್ಕಾಗದಾಗ ನಾವು ಅದನ್ನು ಕಡಿಯೋದು. ಸುಮ್ಸುಮ್ನೆ ಹಸುನ ಕಡಿಯಕ್ಕೆ ನಮಗೇನು ಹುಚ್ಚಾ. ಎತ್ತು, ಹಸು, ಕೋಳಿ, ಆಡು, ಮೇಕೆ ಹಂದಿ, ಮೀನು ಮತ್ತು ಇತರ ಮಾಂಸಗಳು ನಿಮಗೆ ದೇವರಿರಬಹುದು ಆದ್ರೆ ನಮ್‌ ಸಮುದಾಯಗಳಿಗೆ ಅವು ಜೀವನ, ಜೀವನದ ಶೈಲಿ, ಜೀವನದ ಊಟ, ನಮ್ಮ ಸಮಾಜದ ಭಾಗ.

Rumi Column Transman Rumi Harish discussed LDBTQ Community and Discrimination

ಪ್ರಾತಿನಿಧಿಕ ಚಿತ್ರ

ಹೀಗೆಲ್ಲಾ ಹೇಳುವ ಗೋಗುಳನ್ನು ನಮ್ ಬೆಂಗಳೂರಿಗೆ ಕರೆಸಿದ್ವಿ. ಕಾಸ್ಟ್‌ ಡಿಸ್ಕ್ರಿಮಿನೇಶನ್‌ ಬಗ್ಗೆ ಮಾತನಾಡಿದಳು. ಅವಳು ಹೇಳಿದ್ದು, ಕಾಸ್ಟ್‌ ಡಿಸ್ಕ್ರಿಮಿನೇಶನ್‌ ಅನ್ನೋದು ನರನರಗಳಲ್ಲಿ ಊರಿದೆ. ತುಂಬಾ ಸಟಲ್‌ ಆಗಿ ಆಗುತ್ತೆ ಗೊತ್ತೂ ಆಗಲ್ಲ. ಇದು ಡಿಸ್ಕ್ರಿಮಿನೇಶನ್‌, ಇದು ಅಟ್ರಾಸಿಟಿ, ಇದು ಅಬ್ಯೂಸ್‌ ಅಂತ ಗೊತ್ತಾಗೋಶ್ಟರಲ್ಲಿ ಆಗಿಬಿಡುತ್ತದೆ. ಅದು ಒಂದು ಮಾನಸಿಕ ರೋಗ. ಸಮಾಜ ರಚಿಸಿರುವ ಲೀಗಲ್‌ ಮಾನಸಿಕ ರೋಗ. ನಮ್ಮ ವಿಪರ್ಯಾಸ ಅಂದ್ರೆ ಸಂವಿಧಾನ ಹೇಳೋದಿಕ್ಕೂ ನಾವು ಬದುಕೋದಿಕ್ಕೂ ಬಹಳ ವ್ಯತ್ಯಾಸಗಳಿವೆ.

ನಾನು ಏನೋ ಥಿಯರಿ ಹೇಳಲು ಹೊರಟೆ… ಡೈರೆಕ್ಟ್‌ ಡಿಸ್ಕ್ರಿಮಿನೇಶನ್‌, ಇನ್‌ಡೈರೆಕ್ಟ್‌ ಡಿಸ್ಕ್ರಿಮಿನೇಶನ್‌, ವರ್ಟಿಕಲ್‌ ಹಾರಿಜಾ಼ಂಟಲ್‌ ಡಿಸ್ಕ್ರಿಮಿನೇಶನ್‌ ಅಂತ ಆಗ ಗೋಗು ಹೇಳಿದ್ದು, “ನೀವು ಎಶ್ಟು ಥಿಯರಿ ಹೇಳಿದ್ರು ತಾರತಮ್ಯ ಅನ್ನೋದು ನಡೆಯುವಾಗ ಆಗೋದು ನಮ್ಮ ಘನತೆಗೆ ಧಕ್ಕೆ. ಯಾಕಂದ್ರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಅಂಚಿಗೆ ದೂಡಲ್ಪಟ್ಟವರಾಗಿರುತ್ತೇವೆ. ಅದು ಬಹುಸಂಖ್ಯಾತವಾದದ ನೈತಿಕತೆಯ ಸಂವಿಧಾನದ್ದಲ್ಲ ಬಹುಸಂಖ್ಯಾತವಾದದ ನೈತಿಕತೆಯ ಬಲಿಪಶುಗಳಾಗಿರುತ್ತೇವೆ.

ಘನತೆ, ಸಮಾನತೆ ಮತ್ತು ತಾರತಮ್ಯ ಆಗದಿರುವುದಕ್ಕೆ ಸಂಬಂದವಿದೆ ಅಂತ ಈಗ ಸುನಿಲ್‌ ತುಂಬಾ ಸೀರಿಯಸ್‌ ಆಗಿ ಹುಚ್ಚನ್‌ ಥರ ಕೆಲಸ ಮಾಡ್ತಾ ಇದ್ದಾನೆ. ಯಾರ ಘನತೆ ತುಂಬಾ ಸುಲಭವಾಗಿ ಉಲ್ಲಂಘನೆ ಮಾಡಬಹುದೋ ಅವರಿಗೆ ಸಮಾನತೆ ಸಿಗುವ ಭ್ರಮೆ ಇರುತ್ತದೆ. ಆದ್ದರಿಂದ ತಾರತಮ್ಯ ಸುಲಭವಾಗಿ ಆಗುತ್ತದೆ. ನಾನು ಇದೆಲ್ಲದನ್ನ ತಗೊಂಡು ಸುನಿಲ್‌ ಹೇಳಿರೋ ಕೆಲಸ ಮಾಡ್ತಾ ಇದ್ದೀನಿ.

(ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com)

(ಕೊನೆಯ ಅಲೆ : 15.2.2022)

ಹಿಂದಿನ ಅಲೆ : Transgender World : ರೂಮಿ ಕಾಲಂ : ಎಮೋಷನಲ್ ಟ್ರಿಪ್ ಅಂತ ತಿಳೀಬೇಡಿ, ಇದು ಸರ್ಕಾರದ ಜವಾಬ್ದಾರಿ

Published On - 11:02 am, Tue, 1 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ