AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್​ ಕಲ್ಯಾಣ್​ ಜನಸೇನಾ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಪ್ರಾದೇಶಿಕ ಪಕ್ಷದ ಮಾನ್ಯತೆ

ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಭಾರತೀಯ ಚುನಾವಣಾ ಆಯೋಗ ಪ್ರಾದೇಶಿಕ ಪಕ್ಷದ ಮಾನ್ಯತೆ ನೀಡಿದೆ. ಚುನಾವಣಾ ಆಯೋಗವು ಕಾಯ್ದಿರಿಸಿದಂತೆ ಪಕ್ಷವು ಈಗ ಪಕ್ಷದ ಶಾಶ್ವತ ಅಧಿಕೃತ ಚುನಾವಣಾ ಚಿಹ್ನೆಯಾಗಿ ಗಾಜಿನ ಲೋಟ ವನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಸಾಧಿಸಿದ ಐತಿಹಾಸಿಕ ವಿಜಯದೊಂದಿಗೆ ಇತಿಹಾಸ ಸೃಷ್ಟಿಸಿದ ಜನಸೇನಾ ಪಕ್ಷದ ಶಾಶ್ವತ ಚಿಹ್ನೆಯಾಗಿ ಗಾಜಿನ ಚಿಹ್ನೆಯನ್ನು ಗುರುತಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಪವನ್​ ಕಲ್ಯಾಣ್​ ಜನಸೇನಾ ಪಕ್ಷಕ್ಕೆ  ಚುನಾವಣಾ ಆಯೋಗದಿಂದ ಪ್ರಾದೇಶಿಕ ಪಕ್ಷದ ಮಾನ್ಯತೆ
ಪವನ್ ಕಲ್ಯಾಣ್ Image Credit source: Pakka Telugu
ನಯನಾ ರಾಜೀವ್
| Edited By: |

Updated on:Jan 23, 2025 | 10:03 AM

Share

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಧಿಕೃತವಾಗಿ ‘ಮಾನ್ಯತೆ ಪಡೆದ ರಾಜಕೀಯ ಪಕ್ಷ’ ಎಂಬ ಸ್ಥಾನಮಾನವನ್ನು ನೀಡಿದೆ. ಈ ಕುರಿತು ಪಕ್ಷವು ಬುಧವಾರ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಈ ಘೋಷಣೆ ಮಾಡಿದೆ. ಚುನಾವಣಾ ಆಯೋಗವು ಕಾಯ್ದಿರಿಸಿದಂತೆ ಪಕ್ಷವು ಈಗ ಪಕ್ಷದ ಶಾಶ್ವತ ಅಧಿಕೃತ ಚುನಾವಣಾ ಚಿಹ್ನೆಯಾಗಿ “ಗಾಜಿನ ಲೋಟ” ವನ್ನು ಹೊಂದಿದೆ.

ಈ ಮಾನ್ಯತೆಯ ಬಗ್ಗೆ ಮಂಗಳವಾರ ಪತ್ರದ ಮೂಲಕ ಸಂವಹನ ನಡೆಸಲಾಗಿದೆ ಎಂದು ಜನಸೇನಾ ಪಕ್ಷ ಬಹಿರಂಗಪಡಿಸಿದೆ. ಜನಸೇನಾ ಮಾನ್ಯತೆ ಪಡೆದ ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಚುನಾವಣೆಯಲ್ಲಿ ಸಾಧಿಸಿದ ಐತಿಹಾಸಿಕ ವಿಜಯದೊಂದಿಗೆ ಇತಿಹಾಸ ಸೃಷ್ಟಿಸಿದ ಜನಸೇನಾ ಪಕ್ಷದ ಶಾಶ್ವತ ಚಿಹ್ನೆಯಾಗಿ ಗಾಜಿನ ಚಿಹ್ನೆಯನ್ನು ಗುರುತಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ಪವನ್ ಕಲ್ಯಾಣ್ ಅವರ ಹೋರಾಟವು ಜನಸೇನಾ ಪಕ್ಷವನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷವೆಂದು ಅಂಗೀಕರಿಸುವಲ್ಲಿ ಕೊನೆಗೊಂಡಿತು” ಎಂದು ಅದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ‌. ದ್ಯ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನಸೇನಾ ಪಕ್ಷವು ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ತನ್ನ ಬೆಳೆಯುತ್ತಿರುವ ಪ್ರಭಾವವನ್ನು ತೋರಿಸುತ್ತದೆ. ಈ ಯಶಸ್ಸು ಪಕ್ಷಕ್ಕೆ ರಾಜ್ಯ ಮಟ್ಟದ ಪಕ್ಷವಾಗಿ ಮನ್ನಣೆ ನೀಡಿತು.

ಮತ್ತಷ್ಟು ಓದಿ: ‘ಮಾತು ಕೇಳಯ್ಯ’ ಎನ್ನುತ್ತಿದ್ದಾರೆ ಪವನ್ ಕಲ್ಯಾಣ್

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಪಕ್ಷವು ಈ ಮಾಹಿತಿಯನ್ನು ನೀಡಿದೆ. ಈ ಸಂದರ್ಭದಲ್ಲಿ ಅವರು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಪ್ರಸ್ತುತ ತಮಿಳುನಾಡಿನಲ್ಲಿ ಡಿಎಂಕೆ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ, ಬಿಹಾರದಲ್ಲಿ ಜೆಡಿಯು ಮತ್ತು ತೆಲಂಗಾಣದಲ್ಲಿ ಟಿಆರ್‌ಎಸ್ ರಾಜ್ಯಮಟ್ಟದ ರಾಜಕೀಯ ಪಕ್ಷಗಳಾಗಿವೆ.

1968 ರಲ್ಲಿ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ECI ಪಕ್ಷವನ್ನು ರಾಷ್ಟ್ರೀಯ/ರಾಜ್ಯ ಪಕ್ಷವೆಂದು ಗುರುತಿಸುತ್ತದೆ., ರಾಜ್ಯ ಪಕ್ಷವಾಗಿ ಗುರುತಿಸಿಕೊಳ್ಳಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವೊಂದಕ್ಕೆ ಕನಿಷ್ಠ ಶೇ.6ರಷ್ಟು ಮತಗಳಿಕೆ ಹಾಗೂ ಕನಿಷ್ಠ ಇಬ್ಬರು ಶಾಸಕರ ಬೇಕು.

ಅಥವಾ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಸೀಟುಗಳ ಕನಿಷ್ಠ ಶೇಕಡಾ ಮೂರು ಅಥವಾ ಮೂರು ಸ್ಥಾನಗಳು, ಯಾವುದು ಹೆಚ್ಚು. ಅಥವಾ, ಅದು ಪ್ರತಿ 25 ಸದಸ್ಯರಿಗೆ ಕನಿಷ್ಠ ಒಬ್ಬ ಸಂಸದರನ್ನು ಹೊಂದಿರಬೇಕು ಅಥವಾ ಲೋಕಸಭೆಯಲ್ಲಿ ರಾಜ್ಯಕ್ಕೆ ನಿಗದಿಪಡಿಸಿದ ಯಾವುದೇ ಭಾಗ ಅಥವಾ ಆ ರಾಜ್ಯದಿಂದ ಇತ್ತೀಚಿನ ಅಸೆಂಬ್ಲಿ ಅಥವಾ ಸಾರ್ವತ್ರಿಕ ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮಾನ್ಯ ಮತಗಳಲ್ಲಿ ಕನಿಷ್ಠ 8 ಪ್ರತಿಶತವನ್ನು ಹೊಂದಿರಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:00 am, Thu, 23 January 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ