ಮನ್ ಕಿ ಬಾತ್ಗೆ 100ರ ಸಂಭ್ರಮ; ಇಲ್ಲಿವರೆಗೆ ಮೋದಿಯವರ ಮನದ ಮಾತಿನಲ್ಲಿ ಹೇಳಿದ, ಕೇಳಿದ ಸಂಗತಿಗಳಿವು
Mann Ki Baat: ಪ್ರಧಾನಮಂತ್ರಿಯವರು ನೀಡಿದ ಸಾಮಾಜಿಕ ಸಂದೇಶಗಳು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದ ಟ್ರೆಂಡ್ ಆಗುತ್ತವೆ. ಕೆಲವೇ ವಾರಗಳಲ್ಲಿ ಸಾಮೂಹಿಕ ಆಂದೋಲನ (ಜನ ಆಂದೋಲನ) ಆಗುತ್ತವೆ.ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ, ಕೋವಿಡ್-19 ಲಸಿಕೆ ಮತ್ತು ಹರ್ ಘರ್ ತಿರಂಗಾ ಕೆಲವು ಅದ್ಭುತ ಉದಾಹರಣೆಗಳಾಗಿವೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆರಂಭಿಸಿದ ಮನ್ ಕಿ ಬಾತ್ಗೆ (Mann Ki Baat)ಶತಕದ ಸಂಭ್ರಮ. 2014 ಅಕ್ಟೋಬರ್ ನಲ್ಲಿ ಆರಂಭವಾದ ಮನ್ ಕಿ ಬಾತ್ ನ 100ನೇ ಸಂಚಿಕೆ 2023 ಏಪ್ರಿಲ್ 30ರಂದು ಪ್ರಸಾರವಾಗಲಿದೆ. ಈ ಹೊತ್ತಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Singh Thakur) ಹಿಂದೂಸ್ತಾನ್ ಟೈಮ್ಸ್ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ಮನದ ಮಾತಿನಲ್ಲಿ ಪ್ರಧಾನಿ ಮೋದಿಯವರ ಮಾತನಾಡುವ ಶೈಲಿ, ಅವರು ಆಯ್ದುಕೊಂಡ ವಿಷಯ, ಹೇಳಿದ ರೀತಿ ಮತ್ತು ಜನರು ಅದನ್ನು ಯಾವ ರೀತಿ ಸ್ವೀಕರಿಸಿದರು ಎಂಬುದರ ಬಗ್ಗೆ ಠಾಕೂರ್ ತಮ್ಮ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ. ಲೇಖನದ ಆಯ್ದ ಭಾಗ ಇಲ್ಲಿದೆ.
ಜನಸಾಮಾನ್ಯರೊಂದಿಗೆ ತ್ವರಿತ ಬಾಂಧವ್ಯವನ್ನು ಸ್ಥಾಪಿಸುವ ಅಸಾಧಾರಣ ಪ್ರತಿಭಾನ್ವಿತ ಸಂವಹನಕಾರ ಎಂದು ಮೋದಿ ಗುರುತಿಸಲ್ಪಟ್ಟಿದ್ದಾರೆ. ಪ್ರಾಮಾಣಿಕತೆಯಿಂದ ಕೂಡಿದ ಅವರ ಮಾತು ಕಳೆದ ಎಂಟು ವರ್ಷಗಳಿಂದ ಜನರೊಂದಿಗಿನ ನಂಬಿಕೆ ಆಧಾರಿತ ಸಂಬಂಧ ಇವೆಲ್ಲವೂ ಸಮೂಹ ಸಂವಹನಕಾರರಾಗಿ ಅವರ ಯಶಸ್ಸಿಗೆ ಕೊಡುಗೆ ನೀಡುತ್ತವೆ. ಇದು ಪಿಎಂ ಮೋದಿಯವರ ಜನಕೇಂದ್ರಿತ ಅಭಿವೃದ್ಧಿಯ ಮಾದರಿಯಾಗಿದ್ದು ಅದಕ್ಕೆ ಅಪಾರ ಜನಮನ್ನಣೆ ಸಿಕ್ಕಿದೆ. ಅಕ್ಟೋಬರ್ 2014 ರಲ್ಲಿ ಪ್ರಾರಂಭಿಸಲಾದ ಮನ್ ಕಿ ಬಾತ್ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತದೆ.ರೇಡಿಯೋ ಭಾಷಣವಾಗಿ ಪ್ರಾರಂಭವಾದ ಇದು ಗ ಬಹು ಭಾಷೆಗಳಲ್ಲಿ ವಿವಿಧ ವೇದಿಕೆಗಳಿಂದ ಪ್ರಸಾರವಾಗಿದೆ.
ಗ್ರಾಮದ ಅರಳಿಕಟ್ಟೆಯಲ್ಲಿ ಕೂತು ಮಾತನಾಡಿದಂತಿರುತ್ತದೆ ಮೋದಿ ಮಾತು
ಮನ್ ಕಿ ಬಾತ್ ನಲ್ಲಿ ಮೋದಿಯವರು ಮಾತನಾಡುವುದನ್ನು ಗಮನಿಸಿದರೆ ನಿಮಗೆ ಅಲ್ಲಿ ಎರಡು ಮೋದಿ ಕಾಣಬಹುದು. ಪ್ರಬಲ, ಶಕ್ತಿಯುತ, ಉದ್ದೇಶಗಳನ್ನು ಸಂವಹನ ಮಾಡುವ ಮೋದಿ ಮತ್ತು ಮೃದು ಮಾತುಗಳಿಂದ ಮಾತನಾಡುವ, ಕಾಳಜಿಯ ಮಾತನಾಡುವ ಮೋದಿಯನ್ನು ನೀವಿಲ್ಲಿ ಕಾಣುತ್ತೀರಿ. ನೀವು ಕಣ್ಣು ಮುಚ್ಚಿ ಮನ್ ಕಿ ಬಾತ್ ಕೇಳುತ್ತಿದ್ದರೆ, ಮೋದಿ ಜಿ ಹಳ್ಳಿಯ ಅರಳಿಕಟ್ಟೆಯಲ್ಲಿ ಕುಳಿತು ಜನರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅನಿಸಿ ಬಿಡುತ್ತದೆ. ಅಗತ್ಯವಿರುವಲ್ಲಿ ಅವರು ಸಲಹೆಯನ್ನು ನೀಡುತ್ತಾರೆ. ಉತ್ತಮ ಕೆಲಸ ಮಾಡಿದವರನ್ನು ಅವರು ಶ್ಲಾಘಿಸುತ್ತಾರೆ. ಇತ್ತೀಚೆಗೆ, ಅವರು ತಮ್ಮ ಪ್ರೀತಿಪಾತ್ರರ ಅಂಗಾಂಗಗಳನ್ನು ದಾನ ಮಾಡಲು ಧೈರ್ಯದಿಂದ ನಿರ್ಧರಿಸಿದ ಅಪಘಾತದ ಸಂತ್ರಸ್ತರ ಕುಟುಂಬಗಳೊಂದಿಗೆ ತಮ್ಮ ಸಂಭಾಷಣೆಯನ್ನು ಹಂಚಿಕೊಂಡರು. ಅಂಗಾಂಗ ದಾನದ ಉದಾತ್ತ ಕಲ್ಪನೆಯನ್ನು ಪ್ರಚಾರ ಮಾಡಲು ಮೋದಿಜಿ ಆ ಸಂಭಾಷಣೆಯನ್ನು ಬಳಸಿಕೊಂಡರು.
ಹವಾಮಾನ ವೈಪರೀತ್ಯಗಳನ್ನು ನಿಭಾಯಿಸುವುದರಿಂದ ಹಿಡಿದು ಆರೋಗ್ಯ ಮತ್ತು ನೈರ್ಮಲ್ಯದವರೆಗೆ ಸಾಮಾನ್ಯ ಜನರನ್ನು ಅವರ ಒಳ್ಳೆಯ ಕಾರ್ಯಗಳಿಗಾಗಿ ಅಭಿನಂದಿಸುವವರೆಗೆ ಅಂತಹ ಹಲವಾರು ಉದಾಹರಣೆಗಳನ್ನು ನಾವು ಮನ್ ಕಿ ಬಾತ್ ನಲ್ಲಿ ಕಾಣಬಹುದು. ಇಲ್ಲಿ ಮನುಷ್ಯರ ನಿಜವಾದ ಕತೆಗಳಿವೆ, ಅನುಭವದ ಮಾತುಗಳಿವೆ. ಮನ್ ಕಿ ಬಾತ್‌ನ ಪ್ರತಿಯೊಂದು ಸಂಚಿಕೆಯು ಏಕೆ ಹೆಚ್ಚು ಜನಪ್ರಿಯವಾಗಿದೆ ಮತ್ತು ಹೆಚ್ಚಿನ ಪ್ರತಿಕ್ರಿಯೆಯನ್ನು ಯಾಕೆ ಪಡೆಯುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ಯಾಕೆಂದರೆ ಇದು ಜನರ ಕಾಳಜಿಯ ಬಗ್ಗೆ ಪ್ರತಿಧ್ವನಿಸುತ್ತದೆ.
ಇದನ್ನೂ ಓದಿ: ನಂದಿನಿ ಬೆಸ್ಟ್ ಎಂದ ರಾಹುಲ್ ಗಾಂಧಿ; ಕೇರಳದಲ್ಲಿ ಇದರ ಮಾರಾಟ ಸುಗಮವಾಗುವಂತೆ ಮಾಡಿ ಎಂದ ತೇಜಸ್ವಿ ಸೂರ್ಯ
ಮನ್ ಕಿ ಬಾತ್‌ನ ಮೊದಲ ಸಂಚಿಕೆಯು ಅಕ್ಟೋಬರ್ 3, 2014 ರಂದು ಪ್ರಸಾರವಾಯಿತು. ಇದು ಏಪ್ರಿಲ್ 30, 2023 ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸುತ್ತದೆ. 262 ಕೇಂದ್ರಗಳು ಮತ್ತು 375 ಕ್ಕೂ ಹೆಚ್ಚು ಖಾಸಗಿ ಮತ್ತು ಸಮುದಾಯ ಕೇಂದ್ರಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೇಡಿಯೊ ನೆಟ್‌ವರ್ಕ್ ಆಲ್ ಇಂಡಿಯಾ ರೇಡಿಯೊ ಮೂಲಕ ಮನದ ಮಾತು ಜನರಿಗೆ ತಲುಪುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಮಾತ್ರವಲ್ಲದೆ ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟು, ತ್ಯಾಜ್ಯ ನಿರ್ವಹಣೆಯಂತಹ ಸವಾಲಿನ ಸಮಸ್ಯೆಗಳ ಬಗ್ಗೆಯೂ ಮೋದಿ ಇಲ್ಲಿ ಮಾತನಾಡುತ್ತಾರೆ.
52 ಭಾಷೆಗಳಲ್ಲಿ ಪ್ರಸಾರ
ಪ್ರಸಾರ ಭಾರತಿ 11 ವಿದೇಶಿ ಭಾಷೆಗಳು ಸೇರಿದಂತೆ 52 ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಮನ್ ಕಿ ಬಾತ್‌ನ ಅನುವಾದ ಮತ್ತು ಪ್ರಸಾರವನ್ನು ಮಾಡುತ್ತದೆ. ಮನ್ ಕಿ ಬಾತ್ ಭಾರತದ ರೇಡಿಯೊ ಕಾರ್ಯಕ್ರಮವಾಗಿದ್ದು, ಇದನ್ನು ಟಿವಿ ಚಾನೆಲ್‌ಗಳು ಏಕಕಾಲದಲ್ಲಿ ಪ್ರಸಾರ ಮಾಡುತ್ತವೆ. ದೂರದರ್ಶನ ನೆಟ್‌ವರ್ಕ್‌ನ 34 ಚಾನೆಲ್‌ಗಳು ಮತ್ತು 100 ಕ್ಕೂ ಹೆಚ್ಚು ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು ಈ ವಿನೂತನ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸುತ್ತದೆ. ಬದುಕಿನಲ್ಲಿ ಬದಲಾವಣೆ ತಂದವರು ಮತ್ತು ಸಾಧಕರವನ್ನು ಪರಿಚಯಿಸುವ ಲೇಖವಿರುವ ಕಿರುಪುಸ್ತಕವನ್ನು ಫೆಬ್ರವರಿ 2022 ರಿಂದ ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ. ಇದು ಡಿಜಿಟಲ್ ಮೂಲಕ 60 ಮಿಲಿಯನ್ ಜನರನ್ನು ತಲುಪುತ್ತದೆ.
ಪ್ರಧಾನಮಂತ್ರಿ ಮತ್ತು ನಾಗರಿಕರ ನಡುವೆ ನೇರ ಸಂಪರ್ಕವನ್ನು ನಿರ್ಮಿಸುವುದು ಮನ್ ಕಿ ಬಾತ್‌ನ ಪ್ರಾಥಮಿಕ ಉದ್ದೇಶವಾಗಿದೆ. ಪ್ರತಿ ತಿಂಗಳು ಪ್ರಧಾನಿಗೆ ರಾಷ್ಟ್ರದಾದ್ಯಂತ ಲಕ್ಷಾಂತರ ಪತ್ರಗಳು ಬರುತ್ತವೆ. ಕಾರ್ಯಕ್ರಮದ ಸಮಯದಲ್ಲಿ ಜನರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವುದು ಸಹ ಸಾಮಾನ್ಯವಾಗಿದೆ. ಚುನಾಯಿತ ನಾಯಕ ಮತ್ತು ಜನಸಾಮಾನ್ಯರ ನಡುವಿನ ಇಂತಹ ಸಂವಹನ ವಿಧಾನವು ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಜನರ ನಂಬಿಕೆಯನ್ನು ಗಮನಾರ್ಹವಾಗಿ ಬಲಪಡಿಸುತ್ತದೆ.
ಜನ ಆಂದೋಲನದ ಪರಿಣಾಮಕಾರಿ ಸಾಧನವಾದ ಮನ್ ಕಿ ಬಾತ್
ಎಂಟು ವರ್ಷಗಳಲ್ಲಿ 99 ಸಂಚಿಕೆಗಳ ಯಶಸ್ವಿ ಪಯಣ ನಂತರ, ಮನ್ ಕಿ ಬಾತ್ ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾತ್ರವಲ್ಲದೆ ಸಾಮಾಜಿಕ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆಯೂ ಗಮನ ಹರಿಸಿದೆ. ಅದರ ಆರಂಭದಿಂದಲೂ, ಮನ್ ಕಿ ಬಾತ್ ಜನ ಆಂದೋಲನದ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ. ಪ್ರಧಾನಮಂತ್ರಿಯವರು ನೀಡಿದ ಸಾಮಾಜಿಕ ಸಂದೇಶಗಳು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದ ಟ್ರೆಂಡ್ ಆಗುತ್ತವೆ. ಕೆಲವೇ ವಾರಗಳಲ್ಲಿ ಸಾಮೂಹಿಕ ಆಂದೋಲನ (ಜನ ಆಂದೋಲನ) ಆಗುತ್ತವೆ. ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ, ಕೋವಿಡ್-19 ಲಸಿಕೆ ಮತ್ತು ಹರ್ ಘರ್ ತಿರಂಗಾ ಕೆಲವು ಅದ್ಭುತ ಉದಾಹರಣೆಗಳಾಗಿವೆ. ಇತ್ತೀಚೆಗೆ, ಮನ್ ಕಿ ಬಾತ್‌ನ 88 ನೇ ಸಂಚಿಕೆಯಲ್ಲಿ, ಪ್ರಧಾನಿಯವರು ನೀರಿನ ಸಂರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದ್ದು ನಾಗರಿಕರು ತಮ್ಮ ಪ್ರದೇಶದಲ್ಲಿ ಅಮೃತ್ ಸರೋವರಗಳನ್ನು ನಿರ್ಮಿಸುವಂತೆ ಒತ್ತಾಯಿಸಿದರು. ಕೆಲವೇ ತಿಂಗಳುಗಳಲ್ಲಿ, ಸಂದೇಶವನ್ನು ಜನ ಆಂದೋಲನವಾಗಿ ಪರಿವರ್ತಿಸಲಾಯಿತು.
89ನೇ ಸಂಚಿಕೆಯಲ್ಲಿ,ಭಾರತದಲ್ಲಿ ಯುನಿಕಾರ್ನ್‌ಗಳ ಸಂಖ್ಯೆ 100 ತಲುಪಿದೆ ಎಂದು ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದರು. 91ನೇ ಸಂಚಿಕೆಯು ಹರ್ ಘರ್ ತಿರಂಗ ಅಭಿಯಾನದ ಸಾಮೂಹಿಕ ಭಾಗವಹಿಸುವಿಕೆ ಯಶಸ್ಸನ್ನು ಆಚರಿಸಿತು. ಮನ್ ಕಿ ಬಾತ್ ನ್ನು ಮೋದಿ ಕಲ್ಯಾಣ ಯೋಜನೆಗಳು ಮತ್ತು ನೀತಿಗಳನ್ನು ಪ್ರತಿ ಸ್ತರದಲ್ಲಿನ ಜನರಿಗೆ ಕೊಂಡೊಯ್ಯಲು ಮತ್ತು ಜಾಗೃತಿ ಮೂಡಿಸಲು ಬಳಸಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿಯೂ ಸಹ, ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಮಾಹಿತಿ ನೀಡುವಲ್ಲಿ ಮತ್ತು ಲಸಿಕೆಯನ್ನು ಪಡೆಯಲು ಅವರನ್ನು ಪ್ರೇರೇಪಿಸುವಲ್ಲಿ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಿದೆ. ಭಾರತದ ಲಸಿಕೆ ಮತ್ತು ಅದರ ಯಶಸ್ಸಿಗೆ ಮನ್ ಕಿ ಬಾತ್ ಪ್ರಧಾನ ಕಾರಣ ಎಂಬುದನ್ನು ಇಲ್ಲಿ ಹೇಳಲೇಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 17 April 23