ಹ್ಯಾಟ್ರಿಕ್ ಗೆಲುವಿನ ಬಳಿಕ ಹೆಚ್ಚಾಯ್ತು ವರ್ಚಸ್ಸು, ಕೇಜ್ರಿವಾಲ್ ಗೆ ಭರವಸೆ ಈಡೇರಿಸೋದೇ ಚಾಲೆಂಜ್
ದೆಹಲಿ: ಮೊನ್ನೆಯಷ್ಟೇ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಾರ್ಟಿ ಮುಂದೆ ಈಗ ಜನರಿಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಬೇಕಾದ ಸವಾಲು ಇದೆ. ಆಪ್ ಪಕ್ಷವು ಪ್ರಣಾಳಿಕೆಯ ಜೊತೆಗೆ ಹತ್ತು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಆ ಎಲ್ಲಾ ಭರವಸೆಗಳನ್ನು ಈಡೇರಿಸಬೇಕಾದ ಸವಾಲು, ಅನಿವಾರ್ಯತೆ ಇದೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ವರ್ಚಸ್ಸೂ ಹೆಚ್ಚಾಗಿದೆ. ಫೆಬ್ರವರಿ 16ರಂದು ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣವಚನ: ದಿಲ್ಲಿ ದಂಗಲ್ನಲ್ಲಿ 70 ಕ್ಷೇತ್ರಗಳ ಪೈಕಿ 62 ಕ್ಷೇತ್ರ ಗೆದ್ದು ಆಪ್ ಪಕ್ಷ ವಿಜಯಪತಾಕೆ ಹಾರಿಸಿಬಿಡ್ತು. […]
ದೆಹಲಿ: ಮೊನ್ನೆಯಷ್ಟೇ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಾರ್ಟಿ ಮುಂದೆ ಈಗ ಜನರಿಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಬೇಕಾದ ಸವಾಲು ಇದೆ. ಆಪ್ ಪಕ್ಷವು ಪ್ರಣಾಳಿಕೆಯ ಜೊತೆಗೆ ಹತ್ತು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಆ ಎಲ್ಲಾ ಭರವಸೆಗಳನ್ನು ಈಡೇರಿಸಬೇಕಾದ ಸವಾಲು, ಅನಿವಾರ್ಯತೆ ಇದೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ವರ್ಚಸ್ಸೂ ಹೆಚ್ಚಾಗಿದೆ.
ಫೆಬ್ರವರಿ 16ರಂದು ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣವಚನ: ದಿಲ್ಲಿ ದಂಗಲ್ನಲ್ಲಿ 70 ಕ್ಷೇತ್ರಗಳ ಪೈಕಿ 62 ಕ್ಷೇತ್ರ ಗೆದ್ದು ಆಪ್ ಪಕ್ಷ ವಿಜಯಪತಾಕೆ ಹಾರಿಸಿಬಿಡ್ತು. ಆ ಖುಷಿ ಸಂತಸ ಆಪ್ ಕಾರ್ಯಕರ್ತರಲ್ಲಿ ಇನ್ನೂ ಹಾಗೆ ಇದೆ. ಫೆಬ್ರವರಿ 16ರಂದು ಅರವಿಂದ್ ಕೇಜ್ರಿವಾಲ್, ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಆದ್ರೆ, ಇಂಥಾ ಟೈಮಲ್ಲಿ ನಾಯಕರಿಗೆ ದೊಡ್ಡ ಸವಾಲು ಎದುರಾಗಿದೆ. ಮುಂದಿನ 5 ವರ್ಷಗಳಲ್ಲಿ ಜನರಿಗೆ ಕೊಟ್ಟಿರುವ ಗ್ಯಾರಂಟಿ ಭರವಸೆ ಈಡೇರಿಸಲೇಬೇಕಾದ ಚಾಲೆಂಜ್ ಇದೆ.
ಆಪ್ಗೆ ‘ಚಾಲೆಂಜ್’: ದಿನ 24 ಗಂಟೆಯೂ ವಿದ್ಯುತ್ ಕರೆಂಟ್ ನೀಡೋದಾಗಿ ಆಪ್ ಹೇಳಿತ್ತು. ಅಲ್ದೆ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣ ಮತ್ತು ಅರೋಗ್ಯ ಸೇವೆ ನೀಡೋದಾಗಿ ಹೇಳಿತ್ತು. ಅಲ್ದೆ, ಕಸಮುಕ್ತ ನಗರವನ್ನಾಗಿ ನಿರ್ಮಾಣ ಮಾಡುವ ಭರವಸೆ ನೀಡಿದ್ರು. ಇದ್ರ ಜತೆಗೆ ಸ್ಟೂಡೆಂಟ್ಸ್ಗೆ ಸಾರಿಗೆ ನಿಗಮದ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡೋದಾಗಿ ಹೇಳಿದ್ರು. ಇದಷ್ಟೇ ಅಲ್ದೆ, ದೆಹಲಿ ಮಾಲಿನ್ಯ ನಿಯಂತ್ರಣ ಹಾಗೂ ಯಮುನಾ ನದಿ ಸ್ವಚ್ಛಗೊಳಿಸೋ ಬಗ್ಗೆ ಗ್ಯಾರಂಟಿ ಕೊಟ್ಟಿದ್ರು.
3ನೇ ಬಾರಿ ಗೆದ್ದ ಬಳಿಕ ಹೆಚ್ಚಾಯ್ತು ಆಪ್ ವರ್ಚಸ್ಸು..! ಬೆಟ್ಟದಂತಾ ಸವಾಲಿನ ಮಧ್ಯೆ ಆಪ್ ವರ್ಚಸ್ಸು ಹೆಚ್ಚಾಗುತ್ತಿದೆ. ಆಮ್ ಆದ್ಮಿ ಪಕ್ಷ, ಸದಸ್ಯತ್ವ ಅಭಿಯಾನವನ್ನು ಜೋರಾಗಿ ಭರ್ಜರಿಯಾಗಿ ಮಾಡಲು ಹೊರಟಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ಮಿಸ್ ಕಾಲ್ ಕೊಡಿ, ಎಎಪಿ ಸದಸ್ಯರಾಗಿ ಅಂತಾ ಮೊಬೈಲ್ ನಂಬರ್ ಅನ್ನು ನಾಯಕರು ನೀಡಿದ್ದಾರೆ.
ನಂಬರ್ಗೆ ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚುನಾವಣಾ ರಿಸಲ್ಟ್ ಬಂದ 24 ಗಂಟೆಗಳಲ್ಲಿ 11 ಲಕ್ಷ ಜನರು ಪೊರಕೆ ಪಕ್ಷ ಸೇರಿದ್ದಾರೆ. ಇದ್ರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ.