ಮದ್ಯ ಕಾನೂನು ತಿದ್ದುಪಡಿ ಅನುಮೋದಿಸಿದ ಬಿಹಾರ ಸಚಿವ ಸಂಪುಟ; ಮೊದಲ ಬಾರಿ ತಪ್ಪೆಸಗಿದವರಿಗೆ ದಂಡ,ಜೈಲು ಶಿಕ್ಷೆ ಇಲ್ಲ

ಪ್ರಸ್ತಾವಿತ ತಿದ್ದುಪಡಿಗಳು ಮದ್ಯದ ವ್ಯಾಪಾರಿಗಳು ಮತ್ತು ಕಳ್ಳಸಾಗಣೆದಾರರ ಮೇಲೆ ಹೆಚ್ಚು ಗಮನಹರಿಸುತ್ತವೆ.  ಅವರ ಆಸ್ತಿಯನ್ನು ವಿಚಾರಣೆಯ ಹಂತಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಉದ್ದೇಶಿತ ಬದಲಾವಣೆಗಳ ಪ್ರಕಾರ ಮದ್ಯದ ವ್ಯಾಪಾರಕ್ಕಾಗಿ ಬಳಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಂತರ ಹರಾಜು ಮಾಡಬಹುದು.

ಮದ್ಯ ಕಾನೂನು ತಿದ್ದುಪಡಿ ಅನುಮೋದಿಸಿದ ಬಿಹಾರ ಸಚಿವ ಸಂಪುಟ; ಮೊದಲ ಬಾರಿ ತಪ್ಪೆಸಗಿದವರಿಗೆ ದಂಡ,ಜೈಲು ಶಿಕ್ಷೆ ಇಲ್ಲ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 09, 2022 | 1:58 PM

ಪಟನಾ: ಬಿಹಾರ ಸಚಿವ ಸಂಪುಟ ಮಂಗಳವಾರ ಬಿಹಾರ ನಿಷೇಧ ಮತ್ತು ಅಬಕಾರಿ ಕಾಯಿದೆ, 2016 ರ(Bihar Prohibition and Excise Act, 2016,) ಪ್ರಸ್ತಾವಿತ ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ತಿದ್ದುಪಡಿ ಪ್ರಕಾರ ಮೊದಲ ಬಾರಿಗೆ ಮದ್ಯ ಸೇವನೆ ಮಾಡಿದವರಿಗೆ ಬಂಧನದ ಬದಲು ದಂಡ ಕಟ್ಟುವ ಶಿಕ್ಷೆ ಇರುತ್ತದೆ. ಪ್ರಸ್ತಾವಿತ ತಿದ್ದುಪಡಿಗಳ ಪ್ರಕಾರ ಬಂಧಿತ ಮದ್ಯದ ವ್ಯಾಪಾರಿಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಆಗಾಗ್ಗೆ ಮದ್ಯ ಸೇವನೆಯ ತಪ್ಪೆಸಗುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪ್ರಸ್ತಾವಿತ ತಿದ್ದುಪಡಿಗಳನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಿಧಾನಸಭೆಗೆ ತರುವ ಸಾಧ್ಯತೆಯಿದೆ. ಅವು ಜಾರಿಯಾದರೆ ನಾಲ್ಕನೇ ಬಾರಿ ಕಾಯ್ದೆಗೆ ತಿದ್ದುಪಡಿಯಾಗಲಿದೆ. ಮೊದಲ ಬಾರಿಗೆ ಕುಡಿಯುವವರಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಸರ್ಕಾರವು ಇನ್ನೂ ಬಹಿರಂಗಪಡಿಸದಿದ್ದರೂ, ಜೈಲುಗಳು ತುಂಬುವುದನ್ನು ತಪ್ಪಿಸುವುದು ಈ ಸಡಿಲಿಕೆಯ ಹಿಂದಿನ ಮೂಲಭೂತ ಆಲೋಚನೆಯಾಗಿರುವುದರಿಂದ ಅದು “ಸಮಂಜಸವಾಗಿದೆ” ಎಂದು ಮೂಲಗಳು ತಿಳಿಸಿವೆ. ಮೊದಲ ಬಾರಿಗೆ ಅಪರಾಧಿಗಳು ದಂಡವನ್ನು ಪಾವತಿಸಲು ವಿಫಲವಾದರೆ, ತಿದ್ದುಪಡಿಗಳ ಪ್ರಕಾರ, ಅವರು ಒಂದು ವರ್ಷ ಸರಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.  ಪ್ರಸ್ತಾವಿತ ತಿದ್ದುಪಡಿಯು ಮದ್ಯದ ಖರೀದಿಯ ಮೂಲವನ್ನು ಯಶಸ್ವಿಯಾಗಿ ಗುರುತಿಸಿದರೆ, ಪೊಲೀಸ್ ಮತ್ತು ಅಬಕಾರಿ ಇಲಾಖೆಯು ಸಡಿಲಿಕೆಯನ್ನು (ದಂಡದ ಮನ್ನಾ ಸೇರಿದಂತೆ) ಪರಿಗಣಿಸಲಾಗುತ್ತದೆ.

ಪ್ರಸ್ತಾವಿತ ತಿದ್ದುಪಡಿಗಳು ಮದ್ಯದ ವ್ಯಾಪಾರಿಗಳು ಮತ್ತು ಕಳ್ಳಸಾಗಣೆದಾರರ ಮೇಲೆ ಹೆಚ್ಚು ಗಮನಹರಿಸುತ್ತವೆ.  ಅವರ ಆಸ್ತಿಯನ್ನು ವಿಚಾರಣೆಯ ಹಂತಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಉದ್ದೇಶಿತ ಬದಲಾವಣೆಗಳ ಪ್ರಕಾರ ಮದ್ಯದ ವ್ಯಾಪಾರಕ್ಕಾಗಿ ಬಳಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಂತರ ಹರಾಜು ಮಾಡಬಹುದು. ಆದರೆ, ಚಿಕ್ಕ ವಾಹನಗಳನ್ನು ಜಪ್ತಿ ಮಾಡಲಾಗುವುದಿಲ್ಲ.

ಸರ್ಕಾರ ಕಾನೂನನ್ನು ಜಾರಿಗೆ ತಂದಿರುವ ರೀತಿ ಟೀಕೆಗಳ ನಡುವೆಯೇ ತಿದ್ದುಪಡಿಗಳನ್ನು ತರಲಾಗುತ್ತಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಕಳೆದ ತಿಂಗಳು ಇದು “ದೂರದೃಷ್ಟಿಯ ಕೊರತೆ”ಗೆ ಉದಾಹರಣೆ ಎಂದು  ಹೇಳಿದ್ದಾರೆ . ಹೈಕೋರ್ಟಿನಲ್ಲಿ “ಜಾಮೀನು ಅರ್ಜಿಗಳು ತುಂಬಿವೆ. ಸರಳ ಜಾಮೀನು ಅರ್ಜಿ ಇತ್ಯರ್ಥವಾಗಲು ಒಂದು ವರ್ಷ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದರು.

20,000 ಬಾಕಿ ಇರುವ ಜಾಮೀನು ಅರ್ಜಿಗಳೊಂದಿಗೆ ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಬಂಧನಗಳು ಕಾನೂನಿನ ಅಡಿಯಲ್ಲಿವೆ ಎಂದು ದಾಖಲೆಗಳು ತೋರಿಸುತ್ತವೆ. ಬಿಹಾರದ 59 ಜೈಲುಗಳು 47,000 ಸಾಮರ್ಥ್ಯವನ್ನು ಹೊಂದಿವೆ ಆದರೆ ಈಗ ಸುಮಾರು 70,000 ಕೈದಿಗಳನ್ನು ಹೊಂದಿದ್ದು, ಸುಮಾರು 25,00 ಮಂದಿ ವಿರುದ್ಧ ಮದ್ಯದ ಕಾನೂನಿನಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಸ್ತಾವಿತ ತಿದ್ದುಪಡಿಗಳಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಮದ್ಯ ದುರಂತ ಸಾವುಗಳಲ್ಲಿ ಇತ್ತೀಚಿನ ಏರಿಕೆಯಾಗಿದೆ. ನವೆಂಬರ್ 2021 ಮತ್ತು ಮಧ್ಯ ಜನವರಿ 2022 ರ ನಡುವೆ ನಳಂದಾ, ಸರನ್, ಪಶ್ಚಿಮ ಚಂಪಾರಣ್ ಮತ್ತು ಗೋಪಾಲ್‌ಗಂಜ್‌ನಲ್ಲಿ 50 ಕ್ಕಿಂತ ಹೆಚ್ಚು ಮಂದಿ ಕಳ್ಳಭಟ್ಟಿ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಒಂದರ ಬೆನ್ನಿಗೆ ಮತ್ತೊಂದು ಭಯಹುಟ್ಟಿಸುವ ಘಟನೆ; ಹೆದರಿ ಠಾಣೆಯಲ್ಲೇ ಶಾಂತಿಪೂಜೆ ಮಾಡಿಸಿದ ಪೊಲೀಸರು

Published On - 1:57 pm, Wed, 9 March 22