‘ಫೋಟೋಗಳು ರಾಜಕೀಯ ನಿಲುವು ಹೊಂದಿದ್ದವು’; ರಹಾನ್ ವಾದ್ರಾ ಪ್ರದರ್ಶನ ವಿವಾದಕ್ಕೆ ಬಿಕಾನೇರ್ ಹೌಸ್ ಸ್ಪಷ್ಟನೆ
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರಹಾನ್ ವಾದ್ರಾ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಿಂದ ಕೆಲವು ಫೋಟೋಗಳನ್ನು ತೆಗೆದುಹಾಕಲು ಸೂಚಿಸಿದ ವಿಚಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಗಳ ಫೋಟೋಗಳನ್ನು ಪ್ರದರ್ಶನದಿಂದ ತೆಗೆದುಹಾಕಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, "ಸರ್ಕಾರಕ್ಕೆ ಹೆದರಿಕೆಯಾಗಿದೆ" ಎಂದು ಆಪಾದಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, "ಗಾಂಧಿ ಕುಟುಂಬವು ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ" ಎಂದು ಪ್ರತ್ಯಾರೋಪ ಮಾಡಿದೆ.

ನವದೆಹಲಿ, ಅಕ್ಟೋಬರ್ 22: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರಹಾನ್ ವಾದ್ರಾ ಅವರ ಫೋಟೋ ಪ್ರದರ್ಶನದಲ್ಲಿನ ಫೋಟೋಗಳನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಸ್ಪಷ್ಟನೆ ನೀಡಿದೆ. ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಫೋಟೋಗಳು ವನ್ಯಜೀವಿ ಅಥವಾ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ. ಅದು ರಾಜಕೀಯ ಸಂದೇಶಗಳನ್ನು ಹೊಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಪ್ರದರ್ಶನ ಉದ್ಘಾಟನೆಗೊಳ್ಳುವ ಕೆಲವೇ ಗಂಟೆಗಳ ಮುನ್ನ ರಾಜಸ್ಥಾನ ಸರ್ಕಾರ ನಿರ್ವಹಿಸುತ್ತಿರುವ ಬಿಕಾನೇರ್ ಹೌಸ್‌ನಲ್ಲಿ ತಮ್ಮ ಬಹುತೇಕ ಫೋಟೋಗಳನ್ನು ಬಲವಂತವಾಗಿ ತೆಗೆಯಲಾಗಿದೆ ಎಂದು ರಹಾನ್ ವಾದ್ರಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಕಾನೇರ್ ಹೌಸ್ ಅಧಿಕಾರಿಗಳು, “ಇಲ್ಲಿ ನಡೆಯುವ ಪ್ರದರ್ಶನಗಳು ಕೇವಲ ಸಂಸ್ಕೃತಿ ಮತ್ತು ವನ್ಯಜೀವಿಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಆದರೆ ಈ ಬಾರಿ ರಹಾನ್ ಅವರ ಫೋಟೋಗಳು ಈ ಎರಡೂ ವಿಭಾಗಗಳಿಗೆ ಒಳಪಡದೆ ರಾಜಕೀಯ ಒಳಾರ್ಥವನ್ನು ಹೊಂದಿದ್ದವು” ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಪುತ್ರನ ಫೋಟೋ ಪ್ರದರ್ಶನಕ್ಕೆ ಕತ್ತರಿ: ವಿದ್ಯಾರ್ಥಿ ಚಳವಳಿಯ 74 ಚಿತ್ರಗಳನ್ನು ತೆರವುಗೊಳಿಸಿದ ಬಿಕಾನೆರ್ ಹೌಸ್
ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಬಿಕಾನೇರ್ ಹೌಸ್ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮೀಸಲಾಗಿರುವ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಪ್ರದರ್ಶನಗಳು ಸಂಸ್ಥೆಯ ನಿಯಮಾವಳಿಗಳಿಗೆ ಬದ್ಧವಾಗಿರಬೇಕು. ನಿಯಮಗಳಿಗೆ ಬದ್ಧವಾಗಿರುವ ಇತರ ಫೋಟೋಗಳ ಪ್ರದರ್ಶನ ಮುಂದುವರಿದಿದೆ” ಎಂದು ಸ್ಪಷ್ಟಪಡಿಸಿದೆ.
VIDEO | Delhi: Artist and photographer Raihan Vadra, son of Priyanka Gandhi Vadra and Robert Vadra, says the Bikaner House administration pulled down several of his photographs of recent Delhi protests ahead of his solo exhibition.
He says, “Yesterday at 6.00 PM, I was approached by the Bikaner House management over the phone, saying that some of the photos I was planning to display were objectionable and against their policy. I said, okay, let me know what the photos are, give me the reasoning, give it to me in writing, because I am not inclined to remove those photos immediately until you give me a full explanation. I didn’t hear back from them till yesterday afternoon. Yesterday afternoon, they told me first that their team came to see the show and complimented me on the photos. Then later in the afternoon, I got a call from the Deputy Resident Commissioner, who said we have to remove all those photos. I said, please give it to me in writing. They were refusing to give it to us in writing. Then the Principal Resident Commissioner came. He walked through the show with me and basically said that the context and timing of displaying these pictures was incorrect and that I had not shared these pictures with them before. I said that I had shared a layout with these images a week earlier. They then said that the layout was not legible and they couldn’t read it. I said, but then you could have told me six days ago. You’re telling me four hours before my show, what am I going to do?”
(Full video available on PTI Videos – https://t.co/bIyFWTfmBd)
— Press Trust of India (@PTI_News) October 22, 2026
‘ನೋ ಐಡಿಯಾ ಈಸ್ ಫೈನಲ್’ ಪ್ರದರ್ಶನ:
26 ವರ್ಷದ ರಹಾನ್ ವಾದ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ ಶೀರ್ಷಿಕೆಯ ಈ ಪ್ರದರ್ಶನವು ಬುಧವಾರ ಉದ್ಘಾಟನೆಗೊಂಡಿತು. ಉದ್ಘಾಟನೆಗೂ ಕೆಲವೇ ಗಂಟೆಗಳ ಮುನ್ನ ಫೋಟೋಗಳ ರಾಜಕೀಯ ಸ್ವರೂಪವನ್ನು ಪ್ರಶ್ನಿಸಿ ತೆಗೆದುಹಾಕುವಂತೆ ತಿಳಿಸಲಾಯಿತು ಎಂದು ರಹಾನ್ ಆರೋಪಿಸಿದ್ದಾರೆ. 2025ರ ಜೂನ್ 30ರಂದೇ ಈ ಪ್ರದರ್ಶನದ ಯೋಜನೆಗೆ ಅನುಮೋದನೆ ದೊರೆತಿತ್ತು ಎಂದು ತಿಳಿಸಿದ ರಹಾನ್, “ಈ ಫೋಟೋಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರು ಮತ್ತು ಭದ್ರತಾ ಪಡೆಯ ಕೇವಲ ದೃಶ್ಯ ದಾಖಲೆಯಾಗಿದ್ದು, ಇದರಲ್ಲಿ ಯಾವುದೇ ನಿಂದನಾತ್ಮಕ ಅಥವಾ ಪ್ರಚೋದನಕಾರಿ ಅಂಶಗಳಿರಲಿಲ್ಲ” ಎಂದು ಹೇಳಿದ್ದಾರೆ. ಆದರೂ ತಮ್ಮ ಶೇ. 50ರಷ್ಟು ಕಲಾಕೃತಿಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
VIDEO | Delhi: Artist and photographer Raihan Vadra, the son of Priyanka Gandhi Vadra and Robert Vadra, on Thursday said the Bikaner House administration pulled down many of his pictures of the recent Delhi protests ahead of a solo exhibition.
Speaking to PTI about the possible reasons behind his photographs being taken down, he says, “I had to tell them that an art institution should not have such a policy. I mean, most art is political, right? You cannot function as an artistic institution and then say that political content is not allowed. But that was my interpretation. Either that, or they should have reviewed the images a week earlier. I had shared a layout with them a week before, and they responded to it. I told them this, but yesterday they said that they had not been able to view the layout. I said, ‘That was on October 15. You had six days to tell me that you couldn’t view the layout and ask me to send it again. You’re telling me just four hours before my show that you couldn’t see the layout. Now, 70 photographs have to be removed. What am I supposed to do?’ And then, you have to expect a reaction, right? You cannot expect me to sit quietly in a corner and say, ‘Okay, thank you for removing my photographs’. Three years of my work is now just sitting in a corner, and the walls are empty.”
(Full video available on PTI Videos – https://t.co/bIyFWTfmBd)
— Press Trust of India (@PTI_News) October 22, 2026
ಇದನ್ನೂ ಓದಿ: ‘ನಾನೇನೂ ಟ್ರಾವೆಲ್ ಏಜೆಂಟ್ ಅಲ್ಲ’; ರಾಹುಲ್ ಗಾಂಧಿಯ ವಿಯೆಟ್ನಾಂ ಪ್ರವಾಸದ ಪ್ರಶ್ನೆಗೆ ಶಶಿ ತರೂರ್ ಖಡಕ್ ಉತ್ತರ
ಬಿಕಾನೇರ್ ಹೌಸ್‌ನ ಪ್ರಧಾನ ಆಯುಕ್ತ ರೋಹಿತ್ ಕುಮಾರ್ ಅವರು ಪ್ರದರ್ಶನ ಕೊಠಡಿಗಳನ್ನು ವೀಕ್ಷಿಸಿದ ನಂತರ ರಾಜಸ್ಥಾನ ಸರ್ಕಾರದ ಉನ್ನತಾಧಿಕಾರಿಗಳಿಗೆ ಕರೆ ಮಾಡಿ, ಮಧ್ಯಾಹ್ನ 3.30ರೊಳಗೆ ರಾಜಕೀಯ ಸ್ವರೂಪದ ಫೋಟೋಗಳನ್ನು ತೆಗೆಯದಿದ್ದರೆ ಇಡೀ ಕಾರ್ಯಕ್ರಮವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದರು ಎಂದು ರಹಾನ್ ದೂರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
