AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 4ರಂದು ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ; ಹರ್ದೋಯ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ಹೆಚ್ಚಿನ ಮತದಾನದ ಪ್ರಮಾಣವನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಜನರು ಟಿಎಂಸಿ ವಿರುದ್ಧ ಮತ ಚಲಾಯಿಸಲು ಬಯಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಬಂಗಾಳದಲ್ಲಿ ಇದು ಬಿಜೆಪಿಯ ಗೆಲುವನ್ನು ಸೂಚಿಸುತ್ತದೆ. ಬಂಗಾಳದ ಮತದಾರರು ಈಗ ಭಯವಿಲ್ಲದೆ ಮತ ಚಲಾಯಿಸುತ್ತಿದ್ದಾರೆ. ಈ ಬಾರಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇ 4ರಂದು ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ; ಹರ್ದೋಯ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ
PM Modi In UP
ಸುಷ್ಮಾ ಚಕ್ರೆ
|

Updated on: Apr 29, 2026 | 4:20 PM

Share

ಹರ್ದೋಯ್, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೀರತ್ ಮತ್ತು ಪ್ರಯಾಗ್‌ರಾಜ್ ನಡುವಿನ ಎಕ್ಸ್‌ಪ್ರೆಸ್‌ವೇ ಗಂಗಾ ಮಾತೆಯ ಆಶೀರ್ವಾದವಾಗಿದ್ದು, ಜನರು ಎರಡೂ ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಹೆದ್ದಾರಿ ಉತ್ತರ ಪ್ರದೇಶದ ಜೀವನಾಡಿ ಎಂದು ಬಣ್ಣಿಸಿದರು.

ಇದೇ ವೇಳೆ ಪಶ್ಚಿಮ ಬಂಗಾಳ ಚುನಾವಣೆಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಎರಡನೇ ಹಂತದಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದಾರೆ. ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ ಭಯದ ವಾತಾವರಣವಿಲ್ಲದೆ ಮತದಾನವನ್ನು ನಡೆಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕೇತವೆಂದು ಕರೆದ ಅವರು, ಮತದಾನ ಪ್ರಕ್ರಿಯೆಯಲ್ಲಿ ಬಂಗಾಳದ ಜನರು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಶ್ಲಾಘಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಗೆ ಟಿಎಂಸಿಗೆ ಬೆಂಬಲಿಗರಿಂದ ಮುತ್ತಿಗೆ; ಮತಗಟ್ಟೆ ಬಳಿ ಲಾಠಿ ಚಾರ್ಜ್

“ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದಂತೆಯೇ ಜನರು ತಮ್ಮ ಮತಗಳನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೀರ್ಘ ಸರತಿ ಸಾಲುಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಂಗಾಳದಲ್ಲಿ ಮತದಾನವು ಭಯವಿಲ್ಲದ ವಾತಾವರಣದಲ್ಲಿ ನಡೆಯುತ್ತಿದೆ” ಎಂದು ಪ್ರಧಾನಿ ಉತ್ತರ ಪ್ರದೇಶದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಗುಜರಾತ್ ನಾಗರಿಕ ಚುನಾವಣೆಗಳಲ್ಲಿ ಬಿಜೆಪಿಯ ಅದ್ಭುತ ವಿಜಯವನ್ನು ಅವರು ಶ್ಲಾಘಿಸಿದರು. ಬಿಜೆಪಿ ಈ ಬಾರಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಹೇಳಿದರು. “ಈ 5 ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಹ್ಯಾಟ್ರಿಕ್ ವಿಜಯಗಳನ್ನು ಸಾಧಿಸಲಿದೆ ಎಂದು ನನಗೆ ವಿಶ್ವಾಸವಿದೆ. ಮೇ 4ರ ಫಲಿತಾಂಶಗಳು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸುತ್ತವೆ. ಅವು ದೇಶದ ಅಭಿವೃದ್ಧಿಯ ವೇಗಕ್ಕೆ ಹೊಸ ಶಕ್ತಿಯನ್ನು ತುಂಬುತ್ತವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿಯಾದ ಪ್ರವಾಸಿ ಬಸ್
ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿಯಾದ ಪ್ರವಾಸಿ ಬಸ್
ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​​: ಮೂವರು ಪೊಲೀಸರ ಅಮಾನತು
ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​​: ಮೂವರು ಪೊಲೀಸರ ಅಮಾನತು
ನಿಯಂತ್ರಣ ತಪ್ಪಿ ಸೈಕಲ್ ಸವಾರನ ಮೇಲೆ ಹರಿದ ಟ್ರ್ಯಾಕ್ಟರ್
ನಿಯಂತ್ರಣ ತಪ್ಪಿ ಸೈಕಲ್ ಸವಾರನ ಮೇಲೆ ಹರಿದ ಟ್ರ್ಯಾಕ್ಟರ್
ಕಿರಿದಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು; ಸಿಸಿಟಿವಿಯಲ್ಲಿ ಸೆರೆ
ಕಿರಿದಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು; ಸಿಸಿಟಿವಿಯಲ್ಲಿ ಸೆರೆ
KIADB ಭೂಸ್ವಾಧೀನ ವಿರೋಧಿಸಿ ಹೋರಾಟದ ವೇಳೆ ರೈತರು, ಪೊಲೀಸರ ನಡುವೆ ಘರ್ಷಣೆ
KIADB ಭೂಸ್ವಾಧೀನ ವಿರೋಧಿಸಿ ಹೋರಾಟದ ವೇಳೆ ರೈತರು, ಪೊಲೀಸರ ನಡುವೆ ಘರ್ಷಣೆ
ಪಿಡಿಒ ನಿರ್ಲಕ್ಷ್ಯಕ್ಕೆ ಉದ್ಯೋಗ ಖಾತ್ರಿ ಕಾರ್ಮಿಕ ಬಲಿ!
ಪಿಡಿಒ ನಿರ್ಲಕ್ಷ್ಯಕ್ಕೆ ಉದ್ಯೋಗ ಖಾತ್ರಿ ಕಾರ್ಮಿಕ ಬಲಿ!
ರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ!
ರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ!
ಕನ್ನಡ- ಮರಾಠಿ ಭಾಷಾ ಬಾಂಧವ್ಯದ ಬಗ್ಗೆ ಸುಧಾಮೂರ್ತಿ ಅವರ ಮನದಾಳದ ಮಾತು!
ಕನ್ನಡ- ಮರಾಠಿ ಭಾಷಾ ಬಾಂಧವ್ಯದ ಬಗ್ಗೆ ಸುಧಾಮೂರ್ತಿ ಅವರ ಮನದಾಳದ ಮಾತು!
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು