AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Election Results: ಮಧ್ಯಾಹ್ನದೊಳಗೆ ದೀದಿ ಟಾಟಾ ಬೈ-ಬೈ ಹೇಳ್ತಾರೆ; ಚುನಾವಣೆಗೂ ಮೊದಲೇ ಭವಿಷ್ಯ ನುಡಿದಿದ್ದರು ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕನಸಿನಲ್ಲೂ ಊಹಿಸಿರದಷ್ಟು ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳ ಇದೀಗ ಬಿಜೆಪಿಯ ತೆಕ್ಕೆಗೆ ಬೀಳುವುದು ಖಚಿತವಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಧಾನಸಭಾ ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದರು. ಮಧ್ಯಾಹ್ನ 1 ಗಂಟೆಯೊಳಗೆ ಮಮತಾ ಬ್ಯಾನರ್ಜಿ ಟಾಟಾ, ಬೈ-ಬೈ ಹೇಳಿ ಹೊರಡುತ್ತಾರೆ, ಫಲಿತಾಂಶ ಪ್ರಕಟವಾಗುವವರೆಗೂ ಕಾಯುವ ಅಗತ್ಯವೂ ಇಲ್ಲ ಎಂದು ಹೇಳಿದ್ದ ಅಮಿತ್ ಶಾ ಅವರ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.

West Bengal Election Results: ಮಧ್ಯಾಹ್ನದೊಳಗೆ ದೀದಿ ಟಾಟಾ ಬೈ-ಬೈ ಹೇಳ್ತಾರೆ; ಚುನಾವಣೆಗೂ ಮೊದಲೇ ಭವಿಷ್ಯ ನುಡಿದಿದ್ದರು ಅಮಿತ್ ಶಾ
Amit Shah And Mamata BanerjeeImage Credit source: PTI
ಸುಷ್ಮಾ ಚಕ್ರೆ
|

Updated on: May 04, 2026 | 3:07 PM

Share

ನವದೆಹಲಿ, ಮೇ 4: ಪಶ್ಚಿಮ ಬಂಗಾಳದ (West Bengal Assembly Elections Results) ಮಹಾರಾಣಿಯಾಗಿ ಮೆರೆದ ಮಮತಾ ಬ್ಯಾನರ್ಜಿ (Mamata Banerjee) ಅವರ ಯುಗಾಂತ್ಯವಾಗಿದೆ. 15 ವರ್ಷಗಳಿಂದ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಈ ಬಾರಿ ತೀವ್ರ ಮುಖಭಂಗ ಅನುಭವಿಸಿದೆ. ಬದಲಾವಣೆ ಬಯಸಿರುವ ಜನರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೇಸರಿ ಧ್ವಜ ಹಾರಿಸಲೇಬೇಕೆಂದು ಹಠ ತೊಟ್ಟಿದ್ದ ಬಿಜೆಪಿ ಈ ಬಾರಿ ಭಾರೀ ಪ್ರಚಾರ ಕಾರ್ಯ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಶ್ಚಿಮ ಬಂಗಾಳದ ಮೂಲೆ-ಮೂಲೆಯಲ್ಲೂ ಸಾಲು-ಸಾಲು ಪ್ರಚಾರದ ರ್ಯಾಲಿ ನಡೆಸಿದ್ದರು. ಅದರ ಪರಿಣಾಮವಾಗಿ ದೀದಿ ತೆರೆಮರೆಗೆ ಸರಿದಿದ್ದಾರೆ. ಇಂದಿನ ಫಲಿತಾಂಶದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಚುನಾವಣಾ ಪ್ರಚಾರದ ವೇಳೆಯೇ ಭವಿಷ್ಯ ನುಡಿದಿರುವ ವಿಡಿಯೋವೊಂದು ಮತ್ತೆ ಟ್ರೆಂಡಿಂಗ್​​ನಲ್ಲಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಗಡಿ ದಾಟಿದ್ದು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ. ಇದರ ನಡುವೆ ಕೇಂದ್ರ ಸಚಿವ ಅಮಿತ್ ಶಾ ಅವರು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತದ ಅಂತ್ಯದ ಭವಿಷ್ಯ ನುಡಿದಿರುವ ಹಳೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 148 ಸ್ಥಾನಗಳ ಬಹುಮತದ ಗಡಿಯನ್ನು ಬಿಜೆಪಿ ದಾಟಿದೆ. ಹೀಗಾಗಿ, ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಪಶ್ಚಿಮ ಮೇದಿನಿಪುರದ ಚಾಂಡಿಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಶಾ, “ಮೇ 4ರಂದು ಬೆಳಗ್ಗೆ ಮತ ಎಣಿಕೆ ಶುರುವಾಗುತ್ತದೆ. 8 ಗಂಟೆಗೆ ಬ್ಯಾಲೆಟ್ ಬಾಕ್ಸ್​ಗಳನ್ನು ತೆರೆಯಲಾಗುತ್ತದೆ. 9 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆ ಮುಗಿಯುತ್ತದೆ. 10 ಗಂಟೆಗೆ 2ನೇ ಸುತ್ತಿನ ಮತ ಎಣಿಕೆ ಮುಗಿಯುತ್ತದೆ. ಮಧ್ಯಾಹ್ನ 1 ಗಂಟೆಯೊಳಗೆ ದೀದಿ ಟಾಟಾ, ಬೈ-ಬೈ ಹೇಳಿ ಮನೆಗೆ ಹೊರಡುತ್ತಾರೆ. ಸಂಜೆ ಫಲಿತಾಂಶ ಪ್ರಕಟವಾಗುವ ಅಗತ್ಯವೂ ಇರುವುದಿಲ್ಲ. ಅವರ ಸಮಯ ಮುಗಿದಿದೆ” ಎಂದು ಲೇವಡಿ ಮಾಡಿದ್ದರು. ಆ ಮಾತು ಇದೀಗ ನಿಜವಾಗಿದೆ. ಮಧ್ಯಾಹ್ನದೊಳಗೇ ಬಿಜೆಪಿ ಬಹುಮತ ದಾಟಿದ್ದು, ಟಿಎಂಸಿಗೆ ಭಾರೀ ಮುಖಭಂಗವಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಜೆಪಿ 193 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೇವಲ 93 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಇದರೊಂದಿಗೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತ ಮತ್ತು ಅದಕ್ಕೂ ಮೊದಲು 34 ವರ್ಷಗಳ ಕಾಲ ಕಮ್ಯುನಿಸ್ಟರ ಆಳ್ವಿಕೆಯನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಏರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ