ಚಂದ್ರನಲ್ಲಿ ಇರುಳು ಕಳೆದು ಮತ್ತೆ ಬೆಳಗಾಗುತ್ತಿದೆ, ವಿಕ್ರಮ್, ಪ್ರಗ್ಯಾನ್ ಮೇಲೆ ಮತ್ತೆ ಹೆಚ್ಚಿದ ನಿರೀಕ್ಷೆ
ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದೆ, ಸ್ಲೀಪ್ ಮೋಡ್ನಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಎಚ್ಚರಗೊಳ್ಳುವ ಸಾಧ್ಯತೆ ಇದೆ. ಭೂಮಿಯಿಂದ ಸುಮಾರು ಮೂರು ಲಕ್ಷದ 75 ಸಾವಿರ ಕಿಲೋಮೀಟರ್ ದೂರದಲ್ಲಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಿದ ಚಂದ್ರಯಾನ-3(Chandrayaan 3) ರ ಲ್ಯಾಂಡರ್ ಮತ್ತು ರೋವರ್ ಮತ್ತೊಮ್ಮೆ ಎಚ್ಚರಗೊಳ್ಳುವ ನಿರೀಕ್ಷೆಯಿದೆ.

ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದೆ, ಸ್ಲೀಪ್ ಮೋಡ್ನಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಎಚ್ಚರಗೊಳ್ಳುವ ಸಾಧ್ಯತೆ ಇದೆ. ಭೂಮಿಯಿಂದ ಸುಮಾರು ಮೂರು ಲಕ್ಷದ 75 ಸಾವಿರ ಕಿಲೋಮೀಟರ್ ದೂರದಲ್ಲಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಿದ ಚಂದ್ರಯಾನ-3(Chandrayaan 3) ರ ಲ್ಯಾಂಡರ್ ಮತ್ತು ರೋವರ್ ಮತ್ತೊಮ್ಮೆ ಎಚ್ಚರಗೊಳ್ಳುವ ನಿರೀಕ್ಷೆಯಿದೆ.
ಚಂದ್ರನ ಮೇಲೆ 14 ದಿನಗಳ ರಾತ್ರಿಯ ನಂತರ, ಸೆಪ್ಟೆಂಬರ್ 22 ರಂದು ಬೆಳಕು ಅಂತಿಮವಾಗಿ ದಕ್ಷಿಣ ಧ್ರುವ ಪ್ರದೇಶವನ್ನು ತಲುಪುತ್ತದೆ. ಇಲ್ಲಿ, ಚಂದ್ರಯಾನ ಇಳಿದ ಶಿವಶಕ್ತಿ ಪಾಯಿಂಟ್‌ನಲ್ಲಿ, ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಸ್ಲೀಪ್ ಮೋಡ್‌ನಲ್ಲಿ ನಿಂತಿದ್ದಾರೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಮತ್ತೊಮ್ಮೆ ತಮ್ಮ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದ ತಕ್ಷಣ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.
ವಿಜ್ಞಾನಿಗಳು ಚಂದ್ರಯಾನ-3ರೊಂದಿಗಿನ ಸಂಪರ್ಕವನ್ನು ಮರು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ. ಬುಧವಾರದಂದು ಇಸ್ರೋ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಈ ಬಗ್ಗೆ ಅಪ್‌ಡೇಟ್ ನೀಡಿದೆ. ಇಸ್ರೋ ಹೇಳಿದೆ, “ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯವನ್ನು ನಿರೀಕ್ಷಿಸಲಾಗಿದೆ. ಶೀಘ್ರದಲ್ಲೇ ವಿಕ್ರಮ್ ಮತ್ತು ಪ್ರಗ್ಯಾನ್ ಅವರು ಅಗತ್ಯವಿರುವ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುತ್ತವೆ.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡ, ಶಿವಶಕ್ತಿ ಪಾಯಿಂಟ್‌ನಲ್ಲಿ ಲ್ಯಾಂಡರ್ ಮತ್ತು ರೋವರ್ ಪೇಲೋಡ್‌ಗಳು ಸೂರ್ಯೋದಯದ ನಂತರ ಮತ್ತೆ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಅವರು ಭರವಸೆ ಹೊಂದಿದ್ದಾರೆ ಎಂದು ಹೇಳಿದರು. ಇಸ್ರೋ ತಂಡವು ಸೆಪ್ಟೆಂಬರ್ 21 ಮತ್ತು 22 ರಂದು ಮತ್ತೆ ಸಂವಹನ ನಡೆಸಲು ಪ್ರಯತ್ನಿಸುತ್ತದೆ. ಎರಡೂ ಸಾಧನಗಳು ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: 14 ದಿನಗಳ ಕಾರ್ಯಾಚರಣೆಯ ಬಳಿಕ ಸುಪ್ತಾವಸ್ಥೆಗೆ ಜಾರಿದ ಪ್ರಗ್ಯಾನ್: ರೋವರ್ ಮತ್ತೊಮ್ಮೆ ಎದ್ದು ‘ಹಲೋ’ ಎನ್ನಬಹುದೇ?
ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ನಂತರ ಇತಿಹಾಸವನ್ನು ಸೃಷ್ಟಿಸಿತು. ಅದರ ಪೇಲೋಡ್‌ಗಳು ಅಲ್ಲಿ ಒಂದು ಚಂದ್ರನ ದಿನ ಅಂದರೆ 14 ಭೂಮಿಯ ದಿನಗಳು ಅದ್ಭುತವಾಗಿ ಕೆಲಸ ಮಾಡಿದವು. ಚಂದ್ರನ ಮಣ್ಣಿನಲ್ಲಿ ಸಲ್ಫರ್, ಕಬ್ಬಿಣ ಮತ್ತು ಆಮ್ಲಜನಕ ಸೇರಿದಂತೆ ಇತರ ಖನಿಜಗಳ ಉಪಸ್ಥಿತಿಯನ್ನು ಖಚಿತಪಡಿಸುವುದರೊಂದಿಗೆ, ಲ್ಯಾಂಡರ್ ಮತ್ತು ವಿಕ್ರಮ್ ಪರಸ್ಪರ ಅದ್ಭುತವಾದ ಛಾಯಾಚಿತ್ರಗಳನ್ನು ತೆಗೆದುಕೊಂಡು ಭೂಮಿಗೆ ಕಳುಹಿಸಿದವು. ಇದಲ್ಲದೆ, ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಗಳು ಸಹ ದಾಖಲಾಗಿವೆ.
ಲ್ಯಾಂಡರ್ ಮತ್ತು ವಿಕ್ರಮ್‌ನಲ್ಲಿ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕು ಬೀಳುವ ಮೂಲಕ ಬ್ಯಾಟರಿಗಳು ಚಾರ್ಜ್ ಆಗುತ್ತವೆ. ಭೂಮಿಯ ಮೇಲಿನ -150 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಅವುಗಳನ್ನು ಪರೀಕ್ಷಿಸಲಾಗಿದ್ದರೂ, ಚಂದ್ರನ ತಾಪಮಾನವು ರಾತ್ರಿಯಲ್ಲಿ -200 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಲುಪುತ್ತದೆ. ಇದರಿಂದಾಗಿ ಈ ಬ್ಯಾಟರಿಗಳು ಡೆಡ್ ಆಗುವ ಸಾಧ್ಯತೆ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ