AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ

ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಪುನರುಚ್ಛರಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಜೆಪಿ ನಡ್ಡಾ ಕೂಡ ಸ್ಪಷ್ಟನೆ ನೀಡಿದ್ದಾರೆ.

ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ
JP Nadda
ಸುಷ್ಮಾ ಚಕ್ರೆ
|

Updated on:Jul 23, 2026 | 7:01 PM

Share

ನವದೆಹಲಿ, ಜುಲೈ 23: ಕೇಂದ್ರ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದ್ದು, ತಮ್ಮ ನಿವಾಸಕ್ಕೆ ಅಥವಾ ಅಧಿಕೃತ ಕಚೇರಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. “ಚರ್ಚೆಗೆ ನಾವು ಸಿದ್ಧರಿದ್ದೇವೆ. ನಮ್ಮ ನಿವಾಸಕ್ಕಾಗಲಿ ಅಥವಾ ನಮ್ಮ ಅಧಿಕೃತ ಕಚೇರಿಗಾಗಲಿ ಬನ್ನಿ” ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು ನಿನ್ನೆ ಮಧ್ಯಾಹ್ನದಿಂದ ಸಿಜೆಪಿ (CJP) ಪ್ರತಿನಿಧಿಗಳಿಗೆ ಈಗಾಗಲೇ 4 ಅಧಿಕೃತ ಆಹ್ವಾನಗಳನ್ನು ಕಳುಹಿಸಿಕೊಟ್ಟಿದ್ದು, ಯಾವುದೇ ಸಮಯದಲ್ಲಿಯಾದರೂ ಮಾತುಕತೆಗೆ ಮುಕ್ತವಾಗಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ ಕೇವಲ ಒಂದು ಗಂಟೆಯ ನಂತರ ಜೆಪಿ ನಡ್ಡಾ ಅವರಿಂದ ಈ ಹೇಳಿಕೆ ಬಂದಿದೆ.

ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಲು ಮತ್ತು ಪ್ರಸ್ತುತ ಎದುರಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸರ್ಕಾರ ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಜೆಪಿ ನಡ್ಡಾ ಸ್ಪಷ್ಟಪಡಿಸಿದ್ದಾರೆ. ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆಯ ಮೂಲಕವೇ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ವಿದ್ಯಾರ್ಥಿ ಸಂಘಟನೆಗಳಲ್ಲಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್​ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ

ವಿಷಯವನ್ನು ರಾಜಕೀಯಗೊಳಿಸದಂತೆ ಮನವಿ:

ಪೇಪರ್ ಸೋರಿಕೆ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ಎಂದು ವಿಪಕ್ಷಗಳಿಗೆ ನಡ್ಡಾ ಮನವಿ ಮಾಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವು ಈ ಪರೀಕ್ಷೆಗಳ ಮೇಲೆ ಅವಲಂಬಿತವಾಗಿದ್ದು, ಈ ವಿಷಯದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದಕ್ಕಿಂತ ಸಮಸ್ಯೆಯ ಮೂಲ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಸಂಸತ್ತಿನಲ್ಲಿ ಈ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಲು ಸರ್ಕಾರ ತಯಾರಾಗಿದ್ದು, ವಿಪಕ್ಷಗಳು ಎಷ್ಟು ಸಮಯ ಬಯಸಿದರೂ ಚರ್ಚೆಗೆ ನೀಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಕಠಿಣ ಕ್ರಮದ ಭರವಸೆ:

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದ ಯಾವುದೇ ಅಪರಾಧಿಯನ್ನು ಸರ್ಕಾರ ಬಿಡುವುದಿಲ್ಲ ಎಂದು ಜೆಪಿ ನಡ್ಡಾ ಭರವಸೆ ನೀಡಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಯಾವುದೇ ಸ್ಥಳದಲ್ಲಿ, ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿ ಸಿಜೆಪಿಗೆ ಕೇಂದ್ರ ಸರ್ಕಾರ ಆಹ್ವಾನ

ಜುಲೈ 20ರಂದು ಜೆ.ಪಿ. ನಡ್ಡಾ ತಮ್ಮ ನಿವಾಸದಲ್ಲಿ ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ ಕೆಲವೇ ದಿನಗಳ ನಂತರ ಈ ಹೊಸ ಆಹ್ವಾನ ನೀಡಲಾಗಿದೆ. ಆ ಸಭೆಯ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪೇಪರ್ ಲೀಕ್‌ನಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬಿಡುಗಡೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದ್ದರು. ಜೆಪಿ ನಡ್ಡಾ ಅವರು ಆ ಬೇಡಿಕೆಗಳನ್ನು ಹಿರಿಯ ನಾಯಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರೂ, ನಂತರ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರಿದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Thu, 23 July 26

Follow Us
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!