ದೀಪಾವಳಿಗೂ ಮುನ್ನವೇ ಮತ್ತೆ ಗ್ಯಾಸ್ ಛೇಂಬರ್ ಆಯ್ತು ದೆಹಲಿ!

ದೆಹಲಿ: ರಾಷ್ಟ್ರ ರಾಜಧಾನಿಗೆ ಮತ್ತೆ ಮಾಲಿನ್ಯ ಅನ್ನೋ ಭೂತ ವಕ್ಕರಿಸಿದೆ. ರೋಗಿಗಳು ಉಸಿರಾಡಲು ಪರದಾಡ್ತಿದ್ರೆ, ಉಳಿದವ್ರು ನಮಗೆ ರೋಗ ಬಾರದೇ ಇರಲಿ ಅಂತಾ ಊರು ಬಿಟ್ಟು ಹೋಗ್ತಿದ್ದಾರೆ. ಸಾಮಾನ್ಯವಾಗಿ ದೆಹಲಿ ಹೆಸರು ಎತ್ತಿದ್ರೆ ಸಾಕು ರಾಷ್ಟ್ರ ರಾಜಧಾನಿ ಅನ್ನೋದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನ ನಿತ್ಯ ವಾಯುಮಾಲಿನ್ಯದಿಂದ ಅನುಭವಿಸುವ ಸಮಸ್ಯೆಗಳೇ ಕಣ್ಣಮುಂದೆ ಬರುತ್ತೆ. ಅದ್ರಲ್ಲೂ ಚಳಿಗಾಲ ಬಂತು ಅಂದ್ರೆ ಸಾಕು, ದೆಹಲಿ ನಿವಾಸಿಗಳಲ್ಲಿ ಭಯ ಶುರುವಾಗುತ್ತೆ. ಯಾಕಂದ್ರೆ, ಅತಿಯಾದ ವಾಯುಮಾಲಿನ್ಯದಿಂದ ಇಲ್ಲಿನ ಮಂದಿ ತತ್ತರಿಸಿದ್ದಾರೆ. ಈ ಬಾರಿಯೂ ಕಳೆದ […]

ದೀಪಾವಳಿಗೂ ಮುನ್ನವೇ ಮತ್ತೆ ಗ್ಯಾಸ್ ಛೇಂಬರ್  ಆಯ್ತು ದೆಹಲಿ!
Follow us
ಸಾಧು ಶ್ರೀನಾಥ್​
|

Updated on:Oct 26, 2019 | 5:22 PM

ದೆಹಲಿ: ರಾಷ್ಟ್ರ ರಾಜಧಾನಿಗೆ ಮತ್ತೆ ಮಾಲಿನ್ಯ ಅನ್ನೋ ಭೂತ ವಕ್ಕರಿಸಿದೆ. ರೋಗಿಗಳು ಉಸಿರಾಡಲು ಪರದಾಡ್ತಿದ್ರೆ, ಉಳಿದವ್ರು ನಮಗೆ ರೋಗ ಬಾರದೇ ಇರಲಿ ಅಂತಾ ಊರು ಬಿಟ್ಟು ಹೋಗ್ತಿದ್ದಾರೆ.

ಸಾಮಾನ್ಯವಾಗಿ ದೆಹಲಿ ಹೆಸರು ಎತ್ತಿದ್ರೆ ಸಾಕು ರಾಷ್ಟ್ರ ರಾಜಧಾನಿ ಅನ್ನೋದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನ ನಿತ್ಯ ವಾಯುಮಾಲಿನ್ಯದಿಂದ ಅನುಭವಿಸುವ ಸಮಸ್ಯೆಗಳೇ ಕಣ್ಣಮುಂದೆ ಬರುತ್ತೆ. ಅದ್ರಲ್ಲೂ ಚಳಿಗಾಲ ಬಂತು ಅಂದ್ರೆ ಸಾಕು, ದೆಹಲಿ ನಿವಾಸಿಗಳಲ್ಲಿ ಭಯ ಶುರುವಾಗುತ್ತೆ. ಯಾಕಂದ್ರೆ, ಅತಿಯಾದ ವಾಯುಮಾಲಿನ್ಯದಿಂದ ಇಲ್ಲಿನ ಮಂದಿ ತತ್ತರಿಸಿದ್ದಾರೆ. ಈ ಬಾರಿಯೂ ಕಳೆದ ಬಾರಿಯ ಪರಿಸ್ಥಿತಿ ಉಂಟಾಗಿದ್ದು, ದೆಹಲಿಯನ್ನ ದಟ್ಟ ಹೊಗೆ ಆವರಿಸಿದೆ.

ಋತುಮಾನದಲ್ಲೇ ಕಳಪೆ ಗುಣಮಟ್ಟದ ವಾಯು..! ದೀಪಾವಳಿ ಆರಂಭಕ್ಕೂ ಮುನ್ನವೇ ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದೆ. ಹೊಗೆ ಕಾಟಕ್ಕೆ ಜನರೆಲ್ಲಾ ತತ್ತರಿಸಿ ಹೋಗಿದ್ದಾರೆ. ಶ್ವಾಸಕೋಸದ ಸಮಸ್ಯೆಗಳು, ಚರ್ಮರೋಗಗಳು ಜನರನ್ನ ಇನ್ನಿಲ್ಲದಂತೆ ಭಾದಿಸುತ್ತಿವೆ. ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಗೆ ಜನ ಹೈರಾಣಾಗಿದ್ದಾರೆ. ಅದ್ರಲ್ಲೂ, ದೆಹಲಿಯಲ್ಲಿ ಉಸಿರಾಡೋದೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಜೀವ ಉಳಿಸಿಕೊಳ್ಳಲು ಜನ ಊರು ಬಿಟ್ಟು ಹೋಗುತ್ತಿದ್ದಾರೆ. ಇದು ದೆಹಲಿಗೆ ಮಾತ್ರ ಸೀಮಿತವಾಗಿಲ್ಲ, ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಸೇರಿ ಪ್ರಧಾನಿ ಪ್ರತಿನಿಧಿಸುತ್ತಿರುವ ವಾರಣಾಸಿ ನಗರಗಳಲ್ಲೂ ಮಾಲಿನ್ಯ ಮಿತಿಮೀರಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಎಚ್ಚೆತ್ತ ಸರ್ಕಾರ..! ದೆಹಲಿಯಲ್ಲಿ ಪಟಾಕಿ ಹಾವಳಿಯಿಂದ ಮಾಲಿನ್ಯ ಇನ್ನಷ್ಟು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಚಾಟಿ ಬೀಸಿತ್ತು. ಹೀಗಾಗಿ, ಸ್ಥಳೀಯ ಆಡಳಿತಗಳು ಪಟಾಕಿ ಮೇಲೆ ನಿಗಾ ಇರಿಸಿವೆ. ಇದರ ಪರಿಣಾಮ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಗ್ರೀನ್ ಕ್ರ್ಯಾಕರ್ಸ್ ಅಥವಾ ಹಸಿರು ಪಟಾಕಿ ಉತ್ಪಾದನೆ ಮಾಡ್ತಿದ್ರೂ, ಶಿವಕಾಶಿಯಲ್ಲಿ ಪಟಾಕಿ ಉತ್ಪಾದನೆ ಜೋರಾಗಿಲ್ಲ. ಮತ್ತೊಂದ್ಕಡೆ ಆರೋಗ್ಯ ರಕ್ಷಣೆಗೆ ಒತ್ತು ನೀಡುತ್ತಿರುವ ಜನ, ಪಟಾಕಿಗಳಿಂದ ದೂರ ಉಳಿಯುತ್ತಿದ್ದಾರೆ.

Published On - 6:48 am, Sat, 26 October 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್