ವಿಮಾನದಲ್ಲಿ ಸ್ಫೋಟ; ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ
ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಓವರ್‌ಹೆಡ್ ಬಿನ್‌ನಲ್ಲಿ ಇರಿಸಲಾಗಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟವಾಗಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಇಂದು ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ. ಅಕ್ಟೋಬರ್ 11ರಂದು ದೆಹಲಿಯಿಂದ ಚೆನ್ನೈಗೆ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ ವಿಮಾನ 6E 6115ರಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ನಿಂದ ಹೊಗೆ ಕಾಣಿಸಿಕೊಂಡ ಕಾರಣದಿಂದ ಹೈದರಾಬಾದ್‌ಗೆ ತಿರುಗಿಸಲಾಯಿತು.

ಹೈದರಾಬಾದ್, ಅಕ್ಟೋಬರ್ 11: ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಒಳಗಡೆ ಪವರ್ ಬ್ಯಾಂಕ್ ಸ್ಫೋಟವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಈ ವಿಮಾನವು ಹಾರಾಟದಲ್ಲಿದ್ದ ವೇಳೆ ಪ್ರಯಾಣಿಕರ ಬಳಿಯಿದ್ದ ಪವರ್ ಬ್ಯಾಂಕ್ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದಬಂದಿದೆ.
ಈ ಕುರಿತು ಅಪಾಯವನ್ನು ಗ್ರಹಿಸಿದ ವಿಮಾನದ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಯಶಸ್ವಿಯಾಗಿ ಭೂಸ್ಪರ್ಶ ಮಾಡಿಸಲಾಗಿದೆ. ಪ್ರಯಾಣಿಕರು ಚೆನ್ನೈಗೆ ತಮ್ಮ ಪ್ರಯಾಣವನ್ನು ಮುಂದುವರಿಸಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ 5 ಹೊಸ ರೂಟ್‌ಗಳಿಗೆ ವಿಮಾನ ಸೇವೆ ಆರಂಭ!
ಇದೇ ವೇಳೆ, ಅಕ್ಟೋಬರ್ 7ರಂದು ಪಾಟ್ನಾದಿಂದ ಲಕ್ನೋಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನಕ್ಕೆ ಸುಮಾರು 17,000 ಅಡಿ ಎತ್ತರದಲ್ಲಿ ಭಾರಿ ಸಿಡಿಲು ಅಪ್ಪಳಿಸಿರುವ ಘಟನೆ ವರದಿಯಾಗಿದೆ. ಕೆಟ್ಟ ಹವಾಮಾನದ ನಡುವೆ ನಡೆದ ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 104 ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ.
VIDEO | Hyderabad: Smoke detected in Chennai-bound Indigo flight from Delhi; plane diverted to Hyderabad, lands safely. Inside visuals from the plane.
(Source: Third Party)
(Full video available on PTI Videos – https://t.co/d8jp61yd2p) https://t.co/RSt6vbeTpB
— Press Trust of India (@PTI_News) October 11, 2026
ಪ್ರಯಾಣಿಕರು ಸುರಕ್ಷಿತ:
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ಸಂಸ್ಥೆ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ. ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ಸಿಬ್ಬಂದಿ ತೋರಿದ ಸಮಯಾನುಕೂಲತೆ ಮತ್ತು ದಿಟ್ಟ ನಿರ್ಧಾರದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ: ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 309 ಜನರಿಗೆ ಗಾಯ, ಹೌತಿಗಳ ವಿರುದ್ಧ ಕ್ರಮಕ್ಕೆ ಟ್ರಂಪ್ ಚಿಂತನೆ
ಪಾಟ್ನಾದಿಂದ ಮಧ್ಯಾಹ್ನ 3.10ಕ್ಕೆ ಹೊರಟಿದ್ದ ಇಂಡಿಗೋ ವಿಮಾನ 6E925 ಲಕ್ನೋ ತಲುಪುವ ಸಮೀಪದಲ್ಲಿ ಸಿಡಿಲು ಬಡಿದ ಪರಿಣಾಮ ಮುಂಭಾಗ ಜಖಂಗೊಂಡಿತು. ತಕ್ಷಣವೇ ಎಚ್ಚೆತ್ತ ಪೈಲಟ್ ವಿಮಾನವನ್ನು ಮಧ್ಯಾಹ್ನ 4.05ರ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ತುರ್ತು ಭೂಸ್ಪರ್ಶ ಮಾಡಿಸಿದರು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Sun, 11 October 26




