ದೆಹಲಿ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ದೆಹಲಿ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6ರವರೆಗೂ ಮಾತ್ರ ರಾಜಕೀಯ ಪಕ್ಷಗಳಿಗೆ ಬಹಿರಂಗ ಪ್ರಚಾರ ನಡೆಸಲು ಅವಕಾಶ ಇದೆ. ದೆಹಲಿ ಜನರ ಮನವೊಲಿಸಲು ಮೂರು ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸಲಿವೆ. ದೆಹಲಿ ಚುನಾವಣೆ ಬಹಿರಂಗ ಪ್ರಚಾರ ಇಂದು ಅಂತ್ಯ: ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಕಳೆದ ಒಂದು ತಿಂಗಳಿನಿಂದ ಬಿರುಸಿನ ಪ್ರಚಾರ ನಡೆಸಿರುವ ರಾಜಕೀಯ ಪಕ್ಷಗಳು ಇವತ್ತು ಕೂಡ ಕೊನೆ ಕ್ಷಣದವರೆಗೂ […]
ದೆಹಲಿ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6ರವರೆಗೂ ಮಾತ್ರ ರಾಜಕೀಯ ಪಕ್ಷಗಳಿಗೆ ಬಹಿರಂಗ ಪ್ರಚಾರ ನಡೆಸಲು ಅವಕಾಶ ಇದೆ. ದೆಹಲಿ ಜನರ ಮನವೊಲಿಸಲು ಮೂರು ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸಲಿವೆ.
ದೆಹಲಿ ಚುನಾವಣೆ ಬಹಿರಂಗ ಪ್ರಚಾರ ಇಂದು ಅಂತ್ಯ: ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಕಳೆದ ಒಂದು ತಿಂಗಳಿನಿಂದ ಬಿರುಸಿನ ಪ್ರಚಾರ ನಡೆಸಿರುವ ರಾಜಕೀಯ ಪಕ್ಷಗಳು ಇವತ್ತು ಕೂಡ ಕೊನೆ ಕ್ಷಣದವರೆಗೂ ಮತದಾರರ ಮನವೊಲಿಸುವ ಕಸರತ್ತು ನಡೆಸಲಿವೆ.
ದೆಹಲಿಯಲ್ಲಿ ಇವತ್ತು ಕೂಡ ಕಾಂಗ್ರೆಸ್, ಬಿಜೆಪಿ ಹಾಗೂ ಆಪ್ ಪಕ್ಷಗಳು ಚುನಾವಣಾ ಱಲಿ ನಡೆಸುತ್ತಿವೆ. ಘಟಾನುಘಟಿ ನಾಯಕರು ಬೀದಿಗಿಳಿದು ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ನಾಳೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶ ಇದೆ. ರಾಜಕೀಯ ಪಕ್ಷಗಳು ದಿಲ್ಲಿ ಜನರ ದಿಲ್ ಗೆಲ್ಲಲು ಹರಸಾಹಸ ಮಾಡ್ತಿವೆ.
ಧರ್ಮ ಆಧಾರಿತ ಪ್ರಚಾರ, ಶಾಹೀನ್ ಬಾಗ್ ಹೋರಾಟಗಳೇ ಪ್ರಚಾರದಲ್ಲಿ ಸದ್ದು ಮಾಡಿದ್ದವು. ಸಿಎಂ ಅರವಿಂದ್ ಕೇಜ್ರಿವಾಲ್ ಟೆರರಿಸ್ಟ್ ಎಂದು ಬಿಜೆಪಿಯ ಪ್ರವೇಶ್ ವರ್ಮಾ ಹಾಗೂ ಪ್ರಕಾಶ್ ಜಾವಡೇಕರ್ ಕರೆದಿದ್ದು ವಿವಾದಕ್ಕೆ ಗುರಿಯಾಗಿತ್ತು. ಅನುರಾಗ್ ಠಾಕೂರ್, ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿರಿ ಎಂದು ಜನರಿಂದಲೇ ಹೇಳಿಸಿದ್ದರಿಂದ ಚುನಾವಣಾ ಆಯೋಗದಿಂದ ಪ್ರಚಾರದ ನಿಷೇಧಕ್ಕೊಳಗಾಗಿದ್ದರು. ನಾನು ಟೆರರಿಸ್ಟ್ ಹೌದೋ..? ಅಲ್ಲವೋ..? ಅನ್ನೋದನ್ನು ಜನರೇ ನಿರ್ಧರಿಸಲಿ ಅಂತಾ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು, ಅಮಿತ್ ಶಾ, ಜೆ.ಪಿ.ನಡ್ಡಾ ಇಬ್ಬರೂ ದೆಹಲಿ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.. ಈ ಬಾರಿ ಆಪ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕೋಕೆ ಕೇಸರಿ ಪಡೆ ಫುಲ್ ವರ್ಕೌಟ್ ಮಾಡ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಪ್ ಪಕ್ಷವು 70 ಕ್ಷೇತ್ರಗಳ ಪೈಕಿ 45 ರಿಂದ 55 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಬಿಜೆಪಿ ಪಕ್ಷವು 10 ರಿಂದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಟಿವಿ9 ಭಾರತ್ ವರ್ಷ್ ಹಾಗೂ ಸಿಸಿರೋ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಒಟ್ನಲ್ಲಿ, ದೆಹಲಿ ಅಸೆಂಬ್ಲಿ ಚುನಾವಣೆಯು ಈ ಬಾರಿ ಕೇಜ್ರಿವಾಲ್ ವರ್ಸಸ್ ಅಮಿತ್ ಶಾ ಎನ್ನುವಂತಾಗಿದೆ. ದೆಹಲಿ ದಂಗಲ್ ನಲ್ಲಿ ಯಾರು ಗೆಲ್ಲುತ್ತಾರೆ, ದಿಲ್ಲಿ ಜನರ ದಿಲ್ ಯಾರು ಗೆಲ್ಲುತ್ತಾರೆ ಅನ್ನೋದೇ ಈಗಿರುವ ಕುತೂಹಲ.