AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಫುಟ್ನಿಕ್ ವಿ ಲಸಿಕೆಯ ಪ್ರಥಮ ದೊಡ್ಡ ದಾಸ್ತಾನು ಸೋಮವಾರದಂದು ಭಾರತಕ್ಕೆ ಆಗಮಿಸಲಿದೆ: ಮೂಲಗಳು

ಭಾರತದಲ್ಲಿ ಕೋವಿಡ್-19 ಸೋಂಕಿನ ವಿರುದ್ಧ ತುರ್ತು ಸಂದರ್ಭಗಳಲ್ಲಿ ಬಳಸಲು ಸ್ಫುಟ್ನಿಕ್ ವಿ ಲಸಿಕೆ ಏಪ್ರಿಲ್​ನಲ್ಲಿ ಅನುಮೋದನೆ ಪಡೆದಿದ್ದು ಇಲ್ಲಿ ಉಪಯೋಗಿಸಲ್ಪಡುತ್ತಿರುವ ಮೂರನೆ ಲಸಿಕೆ ಇದಾಗಿದೆ.

ಸ್ಫುಟ್ನಿಕ್ ವಿ ಲಸಿಕೆಯ ಪ್ರಥಮ ದೊಡ್ಡ ದಾಸ್ತಾನು ಸೋಮವಾರದಂದು ಭಾರತಕ್ಕೆ ಆಗಮಿಸಲಿದೆ: ಮೂಲಗಳು
ಸ್ಫುಟ್ನಿಕ್ ವಿ ಲಸಿಕೆ
ಅರುಣ್​ ಕುಮಾರ್​ ಬೆಳ್ಳಿ
|

Updated on: May 31, 2021 | 11:29 PM

Share

ನವದೆಹಲಿ:  ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಯ ಮೊದಲ ದೊಡ್ಡ ದಾಸ್ತಾನು ಭಾರತವನ್ನು ಸೋಮವಾರ ರಾತ್ರಿ ತಲುಪಲಿದೆಯೆಂದು ಉನ್ನತಮಟ್ಟದ ಮೂಲಗಳಿಂದ ಗೊತ್ತಾಗಿದೆ. ಭಾರತಕ್ಕೆ ಲಸಿಕೆ ಮಾರಾಟ ಮಾಡಲು ಗುತ್ತಿಗೆ ಪಡೆದಿರುವ ಸಂಸ್ಥೆಯು ಮುಂದಿನೆರಡು ತಿಂಗಳುಗಳ ಅವಧಿಯಲ್ಲಿ 1.8 ಕೋಟಿ ಡೋಸ್​ಗಳನ್ನು ಸರಬರಾಜು ಮಾಡಲಿದೆ. ಇದಕ್ಕೆ ಮೊದಲು ಎರಡು ಬ್ಯಾಚ್​ಗಳಲ್ಲಿ 2,10,000 ಡೋಸ್​ಗಳನ್ನು ರಷ್ಯಾ ಸರಬರಾಜು ಮಾಡಿತ್ತು ಮತ್ತು ಮಿಕ್ಕಿದ್ದನ್ನು ಮೇ ತಿಂಗಳ ಅಂತ್ಯದೊಳಗೆ ರವಾನಿಸಲಾಗುವುದೆಂದು ಹೇಳಲಾಗಿತ್ತು. ಅದರ ಅನ್ವಯ ಸೋಮವಾರ ರಾತ್ರಿ ಆ ಕನ್​ಸೈನ್​ಮೆಂಟ್ ಭಾರತವನ್ನು ತಲುಪಲಿದೆ ಎಂದು ನಂಬಲರ್ಹ ಮೂಲಗಳಿಂದ ಗೊತ್ತಾಗಿದೆ. ಇದೇ ಮೂಲಗಳ ಪ್ರಕಾರ ಈ ಮೂವತ್ತು ಲಕ್ಷ ಡೋಸ್​ಗಳ ಪೈಕಿ ಹೆಚ್ಚಿನವನ್ನುಬಲ್ಕ್ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದ್ದು ಭಾರತದಲ್ಲೇ ಅವುಗಳನ್ನು ತುಂಬಿಸಲಾಗುವುದು. ಇದಾದ ನಂತರ ಜೂನ್​ನಲ್ಲಿ 50 ಲಕ್ಷ ಡೋಸ್​ ಮತ್ತು ಜುಲೈನಲ್ಲಿ 1ಕೋಟಿ ಡೋಸ್​ಗಳು ರಷ್ಯಾದಿಂದ ಭಾರತಕ್ಕೆ ಆಮದಾಗಲಿವೆ.

ಭಾರತದಲ್ಲಿ ಕೋವಿಡ್-19 ಸೋಂಕಿನ ವಿರುದ್ಧ ತುರ್ತು ಸಂದರ್ಭಗಳಲ್ಲಿ ಬಳಸಲು ಸ್ಫುಟ್ನಿಕ್ ವಿ ಲಸಿಕೆ ಏಪ್ರಿಲ್​ನಲ್ಲಿ ಅನುಮೋದನೆ ಪಡೆದಿದ್ದು ಇಲ್ಲಿ ಉಪಯೋಗಿಸಲ್ಪಡುತ್ತಿರುವ ಮೂರನೆ ಲಸಿಕೆ ಇದಾಗಿದೆ. ರಷ್ಯಾದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆಯು ಅವುಗಳ ಸರಬರಾಜಿಗೆ ಭಾರತದ ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಪಾರ್ಮಾಸ್ಯೂಟಿಕಲ್ ಕಂಪನಿಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಇವೆರಡು ಸಂಸ್ಥೆಗಳು ಹಲವರು ಕಂಪನಿಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು ಪ್ರತಿವರ್ಷ ಲಸಿಕೆಯ 85 ಕೋಟಿ ಡೋಸ್​ಗಳನ್ನು ತಯಾರಿಸಲಿವೆ.

ರಷ್ಯಾದ ಡೈರೆಕ್ಟ್ ಇನ್ವೆಸ್ಟ್​ಮೆಂಟ್​ ಫಂಡ್​ (ಆರ್​ಡಿಐಎಫ್) ಮತ್ತು ಪೆನೇಸಿಯಾ ಬಯೋಟೆಕ್ ಸಂಸ್ಥೆಗಳು ಲಸಿಕೆ ತಯಾರಿಕೆಗೆ ಸಂಬಂಧಿಸಿದ ಟೆಕ್ನಾಲಜಿಯನ್ನು ಭಾರತಕ್ಕೆ ವರ್ಗಾಯಿಸಿದ ನಂತರ ಈ ಬೇಸಿಗೆಯಿಂದ ಪೂರ್ಣ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಬಗ್ಗೆ ಘೋಷಣೆ ಮಾಡಿದ್ದವು. ಆದರೆ ಈ ಸಂಸ್ಥೆಗಳು ಆಗಸ್ಟ್​ನಿಂದ ಅದನ್ನು ಉತ್ಪಾದಿಸುವುದಾಗಿ ಈಗ ಹೇಳುತ್ತಿವೆ.

ಹಿಮಾಚಲ ಪ್ರದೇಶದ ಬಡ್ಡಿ ಎಂಬಲ್ಲಿ ಪೆನೇಸಿಯಾ ಬಯೋಟೆಕ್ ತಯಾರಿಕಾ ಘಟಕ ಹೊಂದಿದ್ದು ಲಸಿಕೆಯ ಮೊದಲ ಬ್ಯಾಚ್ ಅಲ್ಲಿ ಉತ್ಪಾದನೆಯಾದ ನಂತರ, ಗುಣಮಟ್ಟ ಪರೀಕ್ಷೆಗೆ ರಷ್ಯಾದಲ್ಲಿರುವ ಗಮಾಲಿಯಾ ಸೆಂಟರ್​ಗೆ ಅದನ್ನು ಕಳಿಸಲಾಗುವುದು. ಅದಾದ ನಂತರವೇ ಲಸಿಕೆಯನ್ನು ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಲಾಗುವುದು.

ರಷ್ಯಾಗೆ ಭಾರತದ ರಾಯಭಾರಿ ಡಿಬಿ ವೆಂಕಟೇಶ್ ವರ್ಮಾ ಹೇಳುವ ಪ್ರಕಾರ ಸ್ಫುಟ್ನಿಕ್ ವಿ ಲಸಿಕೆಯ ಶೇಕಡಾ 70 ರಷ್ಟು ಉತ್ಪಾದನೆ ಭಾರತದಲ್ಲೇ ಆಗಲಿದ್ದು ಇಲ್ಲಿಂದಲೇ ಅದನ್ನು ಬೇರೆ ದೇಶಗಳೀಗೆ ಕಳಿಸಲಾಗುವುದು. ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯಗಳು ಇನ್ನು ಪೂರ್ಣಗೊಂಡಿಲ್ಲವಾದರೂ ಸದರಿ ಸಹಭಾಗಿತ್ವದ ರಷ್ಯನ್ ಭಾಗವು ಲಸಿಕೆಯ ಸಿಂಗಲ್ ಡೋಸ್ ಪ್ರಕಾರವಾಗಿರುವ ಸ್ಫುಟ್ನಿಕ್ ಲೈಟ್​ಗೆ ವಿಧಿಬದ್ಧ ಅನುಮೋದನೆಗಾಗಿ ಮನವಿ ಮಾಡಿದೆ

ಲಭ್ಯವಿರುವ ಮಾಹಿತಯನ್ವಯ ಸ್ಫುಟ್ನಿಕ್ ಲೈಟ್​ ಸಿಂಗಲ್ ಶಾಟ್ ಲಸಿಕೆಯು ಶೇಕಡಾ 79.4 ಪರಿಣಾಮಕತ್ವ ಶಕ್ತಿ ಹೊಂದಿದೆ ಮತ್ತು ರಷ್ಯಾದಲ್ಲಿ ಇದನ್ನು ಡಿಸೆಂಬರ್ 2020 ಮತ್ತ ಏಪ್ರಿಲ್ 2021 ರವರಗೆ ನಡೆದ ಸಾಮೂಹಿಕ ಲಸಿಕಾ ಆಭಿಯಾನದಲ್ಲಿ ಉಪಯೋಗಿಸಲಾಗಿತ್ತು.

ಕೊವಿಡ್-19 ಸೋಂಕಿನ ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹಬ್ಬಿ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಅಲ್ಲಾಡಿಸಲಾರಂಭಿಸಿದ ನಂತರ ರಷ್ಯಾದ ಡೆವಲಪರ್ಸ್ ಭಾರತದಲ್ಲಿ ತಯಾರಾಗುತ್ತಿರವ ಲಸಿಕೆಗೆ ದೇಶದಲ್ಲೇ ಭಾರೀ ಪ್ರಮಾಣದ ಬೇಡಿಕೆ ಮತ್ತು ತೀವ್ರ ಸ್ವರೂಪದ ಅಭಾವ ತಲೆದೋರಿದ್ದರಿಂದ ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಯೋಜನೆಯನ್ನು ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಈಗ ಜಾರಿಯಲ್ಲಿರುವ ಲಸಿಕಾ ಅಭಿಯಾನಕ್ಕೆ ಭಾರತ ಸರ್ಕಾರ ಹೆಚ್ಚು ಒತ್ತು ಮತ್ತು ಪ್ರಾಮುಖ್ಯತೆ ನೀಡಿರುವುರಿಂದ ಲಸಿಕೆಯ ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಅದು ವರ್ಷಾಂತ್ಯದವರಗೆ ಪುನರಾರಂಭಗೊಳ್ಳುವ ಸಾಧ್ಯತೆ ಇಲ್ಲವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Sputnik V: ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಒಂದು ಡೋಸ್​ಗೆ 995.40 ರೂ; ಭಾರತದಲ್ಲಿ ಉತ್ಪಾದನೆ ಆರಂಭವಾದ ನಂತರ ಬೆಲೆ ತಗ್ಗುವ ಸಾಧ್ಯತೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ