AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸೂರು-ಬೊಮ್ಮಸಂದ್ರ ನಡುವೆ ಮೆಟ್ರೋ ಸಂಪರ್ಕ, ಗೋದಾವರಿ-ಕಾವೇರಿ ನದಿ ಜೋಡಣೆ; ಮೋದಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ ಸಿಎಂ ವಿಜಯ್

ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದ್ದಾರೆ. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಪ್ರಧಾನಿ ಮೋದಿಯವರ ಮುಂದೆ ಹಲವು ಬೇಡಿಕೆಗಳ ಪಟ್ಟಿಯನ್ನಿಟ್ಟಿದ್ದಾರೆ. ‘ಸಮಗ್ರ ಶಿಕ್ಷಾ ಅಭಿಯಾನ’ ಯೋಜನೆಯಡಿ ರಾಜ್ಯಕ್ಕೆ ಬರಬೇಕಾಗಿರುವ 5,110 ಕೋಟಿ ರೂ. ಬಾಕಿ ಅನುದಾನ ಬಿಡುಗಡೆ, ಮೆಟ್ರೋ ಮಾರ್ಗ ವಿಸ್ತರಣೆ, ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರ ನಡುವೆ ಅಂತಾರಾಜ್ಯ ಮೆಟ್ರೋ ಸಂಪರ್ಕ ಕಲ್ಪಿಸುವುದು, ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ತ್ವರಿತಗೊಳಿಸಿ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.

ಹೊಸೂರು-ಬೊಮ್ಮಸಂದ್ರ ನಡುವೆ ಮೆಟ್ರೋ ಸಂಪರ್ಕ, ಗೋದಾವರಿ-ಕಾವೇರಿ ನದಿ ಜೋಡಣೆ; ಮೋದಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ ಸಿಎಂ ವಿಜಯ್
ಪ್ರಧಾನಿ ಮೋದಿ- ಸಿಎಂ ವಿಜಯ್ Image Credit source: PTI
ಸುಷ್ಮಾ ಚಕ್ರೆ
|

Updated on: Oct 11, 2026 | 5:34 PM

Share

ಚೆನ್ನೈ, ಅಕ್ಟೋಬರ್ 11: ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚೆನ್ನೈನಲ್ಲಿ ವೇದಿಕೆ ಹಂಚಿಕೊಂಡ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ. ಚೆನ್ನೈನಲ್ಲಿ ಇಂದು ಪ್ರಧಾನಿ ಮೋದಿ 13,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ವಿಜಯ್ ಜಂಟಿಯಾಗಿ 3,700 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಿದರು.

ಸಿಎಂ ವಿಜಯ್ ಸಲ್ಲಿಸಿದ ಬೇಡಿಕೆಗಳು:

‘ಸಮಗ್ರ ಶಿಕ್ಷಾ ಅಭಿಯಾನ’ (SSA) ಯೋಜನೆಯಡಿ ತಮಿಳುನಾಡಿಗೆ ಬರಬೇಕಾಗಿರುವ 5,110 ಕೋಟಿ ರೂ.ಗಳ ಬಾಕಿ ಅನುದಾನವನ್ನು ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ-ತಮಿಳುನಾಡಿಗೆ ಮೆಟ್ರೋ ಸಂಪರ್ಕ:

ಚೆನ್ನೈ ನಗರದಾದ್ಯಂತ ಸಾರಿಗೆ ಸಂಪರ್ಕ ಹೆಚ್ಚಿಸಲು ಚೆನ್ನೈ ಮೆಟ್ರೋ ಹಂತ-3ಕ್ಕೆ ಶೀಘ್ರ ಅನುಮೋದನೆ ನೀಡಬೇಕು, ಕೊಯಮತ್ತೂರು ಮತ್ತು ಮಧುರೈ ನಗರಗಳಿಗೆ ಹೊಸ ಮೆಟ್ರೋ ಯೋಜನೆಗಳನ್ನು ಮಂಜೂರು ಮಾಡಬೇಕು ಹಾಗೂ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಅಂತಾರಾಜ್ಯ ಮೆಟ್ರೋ ಲಿಂಕ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತಮಿಳುನಾಡು- ಕರ್ನಾಟಕ ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ತಮಿಳುನಾಡಿನ ಹೊಸೂರಿನಿಂದ ಬೊಮ್ಮಸಂದ್ರದವರೆಗೆ ಅಂತರ್ ರಾಜ್ಯ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೂ ಅನುಮೋದನೆ ಕೋರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ‘ಸಿಎಂ ವಿಜಯ್ ಜೊತೆಗೂಡಿ ಕೆಲಸ ಮಾಡುತ್ತೇವೆ’; ಚೆನ್ನೈನಲ್ಲಿ ಪ್ರಧಾನಿ ಮೋದಿ ಭರವಸೆ

ಗೋದಾವರಿ – ಕಾವೇರಿ ನದಿ ಜೋಡಣೆ:

ದಕ್ಷಿಣ ಭಾರತದ ರಾಜ್ಯಗಳ ನಡುವೆ ನೀರಿನ ಅಭಾವವನ್ನು ನೀಗಿಸಲು ಹಾಗೂ ಸಮಾನ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ‘ಗೋದಾವರಿ-ಕಾವೇರಿ-ಗುಂಡಾರ್’ ನದಿ ಜೋಡಣೆ ಯೋಜನೆಯನ್ನು ತ್ವರಿತಗೊಳಿಸಿ, ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ ಎಂದು ಘೋಷಿಸುವಂತೆ ಮರುಪರಿಶೀಲನಾ ವಿನಂತಿ ಮಾಡಿದರು.

2026ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾದ ಚೆನ್ನೈ-ಬೆಂಗಳೂರು ಮತ್ತು ಚೆನ್ನೈ-ಹೈದರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ಸಿಎಂ ವಿಜಯ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?