ಭಾರತಕ್ಕೆ ಆಗಮಿಸಿದ ಜೋ ಬೈಡನ್ಗೆ ಬಿಗಿ ಭದ್ರತೆ; ಆಸ್ಪತ್ರೆ ಬಳಿ ಇರುವ ಹೋಟೆಲ್ನಲ್ಲೇ ವಾಸ್ತವ್ಯ
ಅಮೆರಿಕ ಅಧ್ಯಕ್ಷರ ಭದ್ರತಾ ಪ್ರೋಟೋಕಾಲ್‌ನಲ್ಲಿ ಮುಖ್ಯವಾದ ಒಂದು ವಿಷಯವೆಂದರೆ ಅಧ್ಯಕ್ಷರು ತಂಗುವ ಹೋಟೆಲ್‌ನಿಂದ ಯಾವುದೇ ಪ್ರಮುಖ ಆಸ್ಪತ್ರೆಯ ಅಂತರವು 10 ನಿಮಿಷಗಳಿಗಿಂತ ಹೆಚ್ಚಿರಬಾರದು. ಅಧ್ಯಕ್ಷರ ಸಿಬ್ಬಂದಿ ಹತ್ತಿರದ ಎಲ್ಲಾ ಆಸ್ಪತ್ರೆಗಳ ಪಟ್ಟಿಯನ್ನು ಹೊಂದಿದ್ದಾರೆ, ನಂತರ ಯಾವುದೇ ತುರ್ತು ಸಂದರ್ಭದಲ್ಲಿ ಅಧ್ಯಕ್ಷರನ್ನು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಗಳ ಟ್ರಾಮಾ ಸೆಂಟರ್‌ಗಳನ್ನು ಅಲರ್ಟ್‌ನಲ್ಲಿ ಇರಿಸಲಾಗಿದೆ.
ದೆಹಲಿ ಸೆಪ್ಟೆಂಬರ್ 08: ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden )ಅಮೆರಿಕದಲ್ಲಿದ್ದರೂ ಬೇರೆ ಯಾವುದೇ ದೇಶದಲ್ಲಿದ್ದರೂ ಎಲ್ಲೆಡೆ ಅವರಿಗೆ ಬಿಗಿ ಭದ್ರತೆ ಇದ್ದೇ ಇರುತ್ತದೆ. ಜಿ-20 ಶೃಂಗಸಭೆಗಾಗಿ (G20 Summit) ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಆಗಮಿಸಿದ್ದು, ಇಲ್ಲಿಯೂ ಅವರ ಭದ್ರತೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಮೆರಿಕದ ಅಧ್ಯಕ್ಷರ ಭದ್ರತೆಗಾಗಿ ಹಲವು ವಿಧದ ಪ್ರೋಟೋಕಾಲ್‌ಗಳಿವೆ, ಅದನ್ನು ಅನುಸರಿಸುವುದು ಅವಶ್ಯಕ.
ಅಮೆರಿಕ ಅಧ್ಯಕ್ಷರ ಭದ್ರತಾ ಪ್ರೋಟೋಕಾಲ್‌ನಲ್ಲಿ ಮುಖ್ಯವಾದ ಒಂದು ವಿಷಯವೆಂದರೆ ಅಧ್ಯಕ್ಷರು ತಂಗುವ ಹೋಟೆಲ್‌ನಿಂದ ಯಾವುದೇ ಪ್ರಮುಖ ಆಸ್ಪತ್ರೆಯ ಅಂತರವು 10 ನಿಮಿಷಗಳಿಗಿಂತ ಹೆಚ್ಚಿರಬಾರದು. ಅಧ್ಯಕ್ಷರ ಸಿಬ್ಬಂದಿ ಹತ್ತಿರದ ಎಲ್ಲಾ ಆಸ್ಪತ್ರೆಗಳ ಪಟ್ಟಿಯನ್ನು ಹೊಂದಿದ್ದಾರೆ, ನಂತರ ಯಾವುದೇ ತುರ್ತು ಸಂದರ್ಭದಲ್ಲಿ ಅಧ್ಯಕ್ಷರನ್ನು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಗಳ ಟ್ರಾಮಾ ಸೆಂಟರ್‌ಗಳನ್ನು ಅಲರ್ಟ್‌ನಲ್ಲಿ ಇರಿಸಲಾಗಿದೆ.
ಐಟಿಸಿ ಮೌರ್ಯದಲ್ಲಿ ತಂಗಲಿದ್ದಾರೆ ಬೈಡನ್
ಯುಎಸ್ ಅಧ್ಯಕ್ಷ ಜೋ ಬೈಡ ದೆಹಲಿಯ ಧೌಲಾ ಕುವಾನ್ ಬಳಿ ಇರುವ ಹೋಟೆಲ್ ಐಟಿಸಿ ಮೌರ್ಯದಲ್ಲಿ ತಂಗಲಿದ್ದಾರೆ. ಇಲ್ಲಿಂದ ಅನೇಕ ದೊಡ್ಡ ಆಸ್ಪತ್ರೆಗಳ ಅಂತರ ಬಹಳ ಕಡಿಮೆ. ಈ ಆಸ್ಪತ್ರೆಗಳ ಹೊರಗೆ ಏಜೆಂಟರನ್ನು ಸಹ ಇರಿಸಲಾಗುತ್ತದೆ, ಅವರು ಅಗತ್ಯವಿದ್ದರೆ, ವೈದ್ಯರೊಂದಿಗೆ ಮುಂಚಿತವಾಗಿ ಮಾತನಾಡಬಹುದು ಮತ್ತು ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಬಹುದು. ಅಂತಹ ತುರ್ತು ಸಂದರ್ಭಗಳಲ್ಲಿ, ಅಧ್ಯಕ್ಷರ ಕಾರಿನಲ್ಲಿ ರಕ್ತದ ಪ್ಯಾಕೆಟ್ ಅನ್ನು ಸಹ ಇರಿಸಲಾಗುತ್ತದೆ. ಆಸ್ಪತ್ರೆ ತಲುಪುವ ಮುನ್ನ ರಕ್ತ ಬೇಕಾದರೆ ಕಾರಿನಲ್ಲಿಯೇ ರಕ್ತಪೂರಣ ಮಾಡಬಹುದು.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ಭದ್ರತೆಗೆ ಸಂಬಂಧಿಸಿದಂತೆ ಇಂತಹ ಹಲವು ಆಸಕ್ತಿದಾಯಕ ಪ್ರೋಟೋಕಾಲ್‌ಗಳಿವೆ.ಒಂದು ಪ್ರೋಟೋಕಾಲ್ ಅಧ್ಯಕ್ಷರು ತೆರೆದ ಪ್ರದೇಶದಲ್ಲಿ ಎಷ್ಟು ಸಮಯದವರೆಗೆ ಇರಬಹುದೆಂದು ಹೇಳುತ್ತದೆ. ಅಧ್ಯಕ್ಷರನ್ನು ಯಾವುದೇ ತೆರೆದ ಸ್ಥಳದಲ್ಲಿ 45 ನಿಮಿಷಗಳಿಗಿಂತ ಹೆಚ್ಚು ಕಾಲ ಇರುವಂತಿಲ್ಲ.
ಜಿ20 ನಾಯಕರ ಶೃಂಗಸಭೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಅವರು ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಯ ವಿಷಯದಲ್ಲಿ ನಿಕಟ ಸಹಕಾರದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಜತೆಗೆ, ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಜೂನ್‌ನಲ್ಲಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ನಂತರದ ಮೊದಲ ದ್ವಿಪಕ್ಷೀಯ ಸಭೆ ಇದಾಗಿದ್ದು, ಮಹತ್ವದ್ದಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಭಾರತ್ ಮಂಟಪ ಮುಂಭಾಗದಲ್ಲಿ ಸ್ಥಾಪಿಸಿರುವ ನಟರಾಜ ಮೂರ್ತಿ ಚಿತ್ರ; ಎಕ್ಸ್ ಖಾತೆಯ ಕವರ್ ಇಮೇಜ್ ಬದಲಿಸಿದ ಮೋದಿ
ಜೂನ್‌ನಲ್ಲಿ ನಡೆದಿದ್ದ ದ್ವಿಪಕ್ಷೀಯ ಸಭೆಯಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವಂತಹ ನಿರ್ಣಾಯಕ ನಿರ್ಧಾರ ಕೈಗೊಳ್ಳಲಾಗಿತ್ತು. ಜತೆಗೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪಾಲುದಾರಿಕೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳಿಗೆ ಸಂಬಂಧಿಸಿ ಈವರೆಗೆ ಏನೇನು ಪ್ರಗತಿಯಾಗಿದೆ ಎಂಬ ಬಗ್ಗೆ ಉಭಯ ನಾಯಕರು ಈಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸುವ ನಿರೀಕ್ಷೆ ಇದೆ. ಜತೆಗೆ, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಮುಂದುವರಿಸುವುದು ಹೇಗೆಂಬ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಭಾರತೀಯ ಮಾಜಿ ರಾಜತಾಂತ್ರಿಕ ಅರುಣ್ ಸಿಂಗ್ ತಿಳಿಸಿರುವುದಾಗಿ ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಸಿಂಗ್ ಅವರು 2015-16ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
ಈ ದ್ವಿಪಕ್ಷೀಯ ಸಭೆ ಬಹಳ ಮಹತ್ವದ್ದಾಗಿದೆ. ಬೈಡನ್ ಜಿ20 ಗಾಗಿ ಬರುತ್ತಿದ್ದಾರೆ. ಆದರೆ ಅವರು ಮತ್ತು ಭಾರತದ ಪ್ರಧಾನ ಮಂತ್ರಿ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಚರ್ಚಿಸಲು ಎದುರುನೋಡುತ್ತಿದ್ದಾರೆ ಎಂಬ ಅಂಶವು ಗಮನಾರ್ಹವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ