ಜಪಾನ್ ಪ್ರಧಾನಿಗೆ ಕರ್ನಾಟಕದ ಶ್ರೀಗಂಧದಿಂದ ತಯಾರಿಸಿದ ಉಡುಗೊರೆ ನೀಡಿದ ಮೋದಿ: ವಿಶೇಷಗಳು ಹೀಗಿವೆ

ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುದ್ಧ ಶ್ರೀಗಂಧ ಮರದಿಂದ ತಯಾರಿಸಲ್ಪಟ್ಟ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜಪಾನ್ ಪ್ರಧಾನಿಗೆ ಕರ್ನಾಟಕದ ಶ್ರೀಗಂಧದಿಂದ ತಯಾರಿಸಿದ ಉಡುಗೊರೆ ನೀಡಿದ ಮೋದಿ: ವಿಶೇಷಗಳು ಹೀಗಿವೆ
ಜಪಾನ್ ಅಧ್ಯಕ್ಷರಿಗೆ ಬುದ್ಧನ ಪ್ರತಿಮೆ ನೀಡಿದ ಮೋದಿ
Follow us
ಗಂಗಾಧರ​ ಬ. ಸಾಬೋಜಿ
| Updated By: Ganapathi Sharma

Updated on:Mar 22, 2023 | 5:27 PM

ದೆಹಲಿ: ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಇಂದು (ಮಾ. 20) ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಭೇಟಿ ಬಳಿಕ ಇದೀಗ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಶಿದಾ ಭೇಟಿ ಮಾಡಿದ್ದು, ಜಪಾನ್- ಇಂಡಿಯಾ ಫೆಸಿಪಿಕ್ ಕಾರ್ಯತಂತ್ರ ಮತ್ತು ಅದರ ಹೊಸ ರಕ್ಷಣಾ ನಿಲುವು ಕುರಿತು ಚರ್ಚಿಸಿದ್ದಾರೆನ್ನಲಾಗುತ್ತಿದೆ. ಫ್ಯೂಮಿಯೊ ಕಿಶಿದಾ ಜಿ7 ಹಿರೋಷಿಮಾ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಫ್ಯೂಮಿಯೊ ಕಿಶಿದಾ ಅವರಿಗೆ ಶುದ್ಧ ಶ್ರೀಗಂಧ ಮರದಿಂದ ತಯಾರಿಸಲ್ಪಟ್ಟ ವಿಶೇಷವಾದ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕರ್ನಾಟಕದ ಕಲಾ ಪರಂಪರೆಯನ್ನು ವಿಶ್ವದೆಲ್ಲಡೆ ಪಸರಿಸಿದ್ದಾರೆ.

ಇದನ್ನೂ ಓದಿ: Japan PM Fumio Kishida: ಜಿ7 ಹಿರೋಷಿಮಾ ಶೃಂಗಸಭೆಗೆ ಪ್ರಧಾನಿ ಮೋದಿಗೆ ಔಪಚಾರಿಕ ಆಹ್ವಾನ ನೀಡಿದ ಜಪಾನ್ ಪ್ರಧಾನಿ

ಪ್ರಧಾನಿ ಮೋದಿ ಕೊಟ್ಟ ಉಡುಗೊರೆಯ ವಿಶೇಷತೆಗಳು

  • ಶ್ರೀಗಂಧದ ಕೆತ್ತನೆ ಕಲೆಯು ಪ್ರಾಚೀನ ಕರಕುಶಲತೆಗಳಲ್ಲಿ ಒಂದು. ಇದು ಹೆಚ್ಚಾಗಿ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಈ ಕರಕುಶಲತೆಗೆ ಶ್ರೀಗಂಧದ ಮರವನ್ನು ಬಳಸಲಾಗುತ್ತದೆ. ಶಿಲ್ಪಗಳು, ಪ್ರತಿಮೆಗಳು ಮತ್ತು ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಕರಕುಶಲಗಳು ಹೆಚ್ಚು ಸಂಕೀರ್ಣ ವಿನ್ಯಾಸವನ್ನು ಹೊಂದಿರುತ್ತವೆ.
  • ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದಲ್ಲೂ ಶ್ರೀಗಂಧದ ಮರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹಾಗಾಗಿ ಇದನ್ನು ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜೊತೆಗೆ ಇದರ ಬೆಲೆ ಕೂಡ ದುಬಾರಿ.
  • ಕರ್ನಾಟಕ ವಿಶ್ವದ ಕೆಲವು ಅತ್ಯುತ್ತಮ ಶ್ರೀಗಂಧದ ಕಾಡುಗಳ ನೆಲೆಯಾಗಿದೆ. ಹಾಗಾಗಿ ಕರ್ನಾಟಕವನ್ನು ಗಂಧದಗುಡಿ, ಶ್ರೀಗಂಧದ ನಾಡು ಎಂದು ಕರೆಯಲಾಗುತ್ತದೆ. ಶ್ರೀಗಂಧದ ಕೆತ್ತನೆ ಕಲೆಯು ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಶತಮಾನಗಳ ಈ ಸಾಂಸ್ಕೃತಿಕ ಪರಂಪರೆಯ ಆರಂಭಿಕ ಮೂಲವನ್ನು ಇಲ್ಲಿ ಕಾಣಬಹುದಾಗಿದೆ. ಕ್ರಿ.ಪೂ. 3 ನೇ ಶತಮಾನದಲ್ಲಿ, ಮರದ ವಿಗ್ರಹಗಳನ್ನು ತಯಾರಿಸಲು ಶ್ರೀಗಂಧವನ್ನು ಬಳಸಲಾಗುತ್ತಿತ್ತು.
  • ಕಾಲಾನಂತರದಲ್ಲಿ, ಶ್ರೀಗಂಧದ ಕೆತ್ತನೆಯು ನುರಿತ, ಅತ್ಯಾಧುನಿಕ ಕಲಾ ಪ್ರಕಾರವಾಗಿ ವಿಕಸನಗೊಂಡಿತು. ದೇವತೆಗಳ ಸಂಕೀರ್ಣ ಕೆತ್ತನೆ, ಭಾರತೀಯ ಪುರಾಣ ವ್ಯಕ್ತಿಗಳು, ಪ್ರಾಣಿಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಕುಶಲಕರ್ಮಿಗಳು ತಯಾರಿಸಲು ಆರಂಭಿಸಿದರು. 10ನೇ ಶತಮಾನದಿಂದ 14ನೇ ಶತಮಾನದವರೆಗೆ ಕರ್ನಾಟಕವನ್ನು ಆಳಿದ ಹೊಯ್ಸಳ ರಾಜವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಶ್ರೀಗಂಧದ ಕೆತ್ತನೆಯ ಬೆಳವಣಿಗೆಯನ್ನು ಗುರುತಿಸಬಹುದಾಗಿದೆ.
  • 17 ಮತ್ತು 18 ನೇ ಶತಮಾನದಲ್ಲಿ ಒಡೆಯರ್ ರಾಜವಂಶದ ಆಳ್ವಿಕೆಯಲ್ಲಿ ಶ್ರೀಗಂಧದ ಕೆತ್ತನೆ ಕಲೆಯು ಉತ್ತುಂಗವನ್ನು ತಲುಪಿತು. ಒಡೆಯರು ಕಲೆ ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿದರು. ಆ ಮೂಲಕ ಶ್ರೀಗಂಧದ ಕೆತ್ತನೆ ಒಂದು ಉತ್ತಮ ಕಲಾ ಪ್ರಕಾರವಾಗಿ ಅಭಿವೃದ್ಧಿ ಹೊಂದಿತು.
  • ಸದ್ಯ ಶ್ರೀಗಂಧದ ಮರ ಅತ್ಯಂತ ದುಬಾರಿ ಮತ್ತು ಅಮೂಲ್ಯ ಮರವಾಗಿದ್ದು, ಅಪರೂಪದಲ್ಲಿ ಅಪರೂಪವಾಗಿದೆ. ಕರ್ನಾಟಕ ರಾಜ್ಯವು ಶ್ರೀಗಂಧದ ಮರಗಳನ್ನು ಹೊಂದಿದೆ. ಶ್ರೀಗಂಧದ ಸಂಪನ್ಮೂಲವನ್ನು ಕಾಪಾಡಲು ಅಭಿವೃದ್ಧಿ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ.
  • ಶ್ರೀಗಂಧದ ಕೆತ್ತನೆ ಕರಕುಶಲತೆಯು ಹೆಚ್ಚು ನುರಿತ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಹೆಚ್ಚಿನ ತಾಳ್ಮೆ, ನಿಖರತೆ ಮತ್ತು ಸ್ಪಷ್ಟತೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕೆತ್ತನೆಗಾರರು ಉಳಿ, ಚಾಕು ಮತ್ತು ಗರಗಸ ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸುತ್ತಾರೆ. ಕೆತ್ತನೆ ಮುಗಿದ ಬಳಿಕ ಹೊಳಪು ನೀಡಲಾಗುತ್ತದೆ.
  • ಕರ್ನಾಟಕವು ಈ ಕರಕುಶಲತೆಯಲ್ಲಿ ಜಟಿಲತೆಗೆ ಹೆಸರುವಾಸಿಯಾಗಿದೆ. ಕುಶಲಕರ್ಮಿಗಳು ಪುರಾಣ, ಧರ್ಮ ಮತ್ತು ಪ್ರಕೃತಿ ಸೇರಿದಂತೆ, ಹಿಂದೂ ಮಹಾಕಾವ್ಯಗಳು ಹಾಗೂ ಪೌರಾಣಿಕ ದೃಶ್ಯಗಳಿಂದ ಸ್ಫೂರ್ತಿ ಪಡೆದು ತಯಾರಿಸಲಾಗುತ್ತದೆ.
  • ಶ್ರೀಗಂಧದ ಕೆತ್ತನೆಯ ಕಲೆಯೂ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಿದೆ. ಇದು ಇಂದು ಕೂಡ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದುತ್ತಲೇ ಇದೆ. ಈ ಕೆತ್ತನೆಗಳು ಅಲಂಕಾರಿಕ ವಸ್ತುಗಳು ಮಾತ್ರವಲ್ಲ, ಧಾರ್ಮಿಕವೂ ಆಗಿದೆ. ಜೊತೆಗೆ ಸಾಂಸ್ಕೃತಿಕ ಪ್ರಾಮುಖ್ಯತೆ ಮತ್ತು ಹೆಚ್ಚಾಗಿ ದೇವಾಲಯಗಳಲ್ಲಿ ಬಳಸಲಾಗುತ್ತದೆ.
  • ಬುದ್ಧನ ಪ್ರತಿಮೆ ಇಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ಭಾರತೀಯ ಸಂಸ್ಕೃತಿ, ಧರ್ಮ, ಮತ್ತು ಶ್ರೀಗಂಧದ ಕೆತ್ತನೆಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಆಧುನಿಕ ಭಾರತದಲ್ಲಿ ಶ್ರೀಗಂಧದ ಕೆತ್ತನೆ ಸಂಪ್ರದಾಯ ಕರ್ನಾಟಕ ಮುಂದುವರೆಸಿಕೊಂಡು ಬಂದಿದೆ. ಬುದ್ಧನ ಸೊಗಸಾದ ಪ್ರತಿಮೆ ತಯಾರಿಸುವುದು ಇಲ್ಲಿನ ಸ್ಥಳೀಯ ಕುಶಲಕರ್ಮಿಗಳ ಕಲಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ.
  • ಬುದ್ಧನ ಮೂರ್ತಿಯನ್ನು ಶುದ್ಧ ಶ್ರೀಗಂಧದಿಂದ ತಯಾರಿಸಲಾಗಿದೆ. ಇದು ಕೈಯಿಂದ ಕೆತ್ತನೆ ಮಾಡಿದ್ದು, ಸಾಂಪ್ರದಾಯಿಕ ವಿನ್ಯಾಸ ಮತ್ತು ನೈಸರ್ಗಿಕತೆಯಿಂದ ಕೂಡಿದ್ದು, ತಜ್ಞ ಕುಶಲಕರ್ಮಿಗಳಿಂದ ರಚಿಸಲಾಗಿದೆ. ಬುದ್ಧನು ಧ್ಯಾನ ಮುದ್ರೆ ಭಂಗಿಯಲ್ಲಿ ಬೋಧಿ ಮರದ ಕುಳಿತಿರುವುದನ್ನು ಕಾಣಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Mon, 20 March 23

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ