ಒಮಿಕ್ರಾನ್ ಕಡಿಮೆ ತೀವ್ರತೆಯ ರೋಗವನ್ನು ಉಂಟುಮಾಡಬಹುದು: ಡಾ.ಸೌಮ್ಯಾ ಸ್ವಾಮಿನಾಥನ್
ನಿರೀಕ್ಷಿಸಿದಂತೆ, ಟಿ ಸೆಲ್ ಇಮ್ಯುನಿಟಿ ಒಮಿಕ್ರಾನ್ ವಿರುದ್ಧ ಉತ್ತಮವಾಗಿ ಹೋರಾಡುತ್ತದೆ. ಇದು ತೀವ್ರವಾದ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ಲಸಿಕೆಯನ್ನು ಹೊಂದಿಲ್ಲದಿದ್ದರೆ ದಯವಿಟ್ಟು ಲಸಿಕೆಯನ್ನು ಪಡೆಯಿರಿ" ಎಂದು ಡಾ ಸ್ವಾಮಿನಾಥನ್ ಟ್ವೀಟ್ ಮಾಡಿದ್ದಾರೆ
ಒಮಿಕ್ರಾನ್ನಿಂದಾಗಿ (omicron) ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ ಅವರಲ್ಲಿ ಹೆಚ್ಚಿನವರು ಲಸಿಕೆ ಹಾಕದವರು. ಒಮಿಕ್ರಾನ್ನ ಬಿಸಿ ಅನುಭವಿಸಲು ಆರಂಭಿಸಿರುವ ದೇಶಗಳಿಗೆ ಎಚ್ಚರಿಕೆಯನ್ನು ಧ್ವನಿಸುತ್ತಾ ಮಾಡನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ (Dr Soumya Swaminathan) ಒಮಿಕ್ರಾನ್ ಕಡಿಮೆ ತೀವ್ರತರವಾದ ರೋಗವನ್ನು ಉಂಟುಮಾಡಬಹುದಾದರೂ, ಒಂದು ದೊಡ್ಡ ಸಂಖ್ಯೆಯ ಒಂದು ಸಣ್ಣ ಶೇಕಡಾ ಇನ್ನೂ ದೊಡ್ಡದಾಗಿದೆ. ಇದು ಆರೋಗ್ಯ ವ್ಯವಸ್ಥೆಗೆ ಹೊರೆಯಾಗಬಹುದು ಎಂದಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ ಡಾ ಸ್ವಾಮಿನಾಥನ್, ಒಮಿಕ್ರಾನ್, ಡೆಲ್ಟಾ ಅಥವಾ ಕೊವಿಡ್ ಯಾವುದೇ ರೂಪಾಂತರ ಆಗಿರಲಿ ವ್ಯಾಕ್ಸಿನೇಷನ್, ಆಸ್ಪತ್ರೆಗೆ ದಾಖಲು ಮತ್ತು ಸಾವಿನಿಂದ ರಕ್ಷಿಸುತ್ತದೆ ಎಂದು ಹೇಳಿದರು. ಒಮಿಕ್ರಾನ್ನಿಂದಾಗಿ ದೈನಂದಿನ ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಹಠಾತ್ ಹೆಚ್ಚಳವನ್ನು ಕಾಣುತ್ತಿರುವುದರಿಂದ ಈ ಎಚ್ಚರಿಕೆ ಬಂದಿದೆ. ಶುಕ್ರವಾರ ಬೆಳಗಿನ ಹೊತ್ತಿಗೆ, ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯು 1,270 ರಷ್ಟಿದೆ. ಒಮಿಕ್ರಾನ್ ಈಗಾಗಲೇ ದೇಶದಲ್ಲಿ ಡೆಲ್ಟಾ ರೂಪಾಂತರವನ್ನು ಬದಲಿಸಲು ಪ್ರಾರಂಭಿಸಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಸುಮಾರು 80 ಪ್ರತಿಶತ ಪ್ರಕರಣಗಳು ಈಗ ಒಮಿಕ್ರಾನ್ ಎಂದು ವರದಿಗಳು ಹೇಳಿವೆ.
“ನಿರೀಕ್ಷಿಸಿದಂತೆ, ಟಿ ಸೆಲ್ ಇಮ್ಯುನಿಟಿ ಒಮಿಕ್ರಾನ್ ವಿರುದ್ಧ ಉತ್ತಮವಾಗಿ ಹೋರಾಡುತ್ತದೆ. ಇದು ತೀವ್ರವಾದ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ಲಸಿಕೆಯನ್ನು ಹೊಂದಿಲ್ಲದಿದ್ದರೆ ದಯವಿಟ್ಟು ಲಸಿಕೆಯನ್ನು ಪಡೆಯಿರಿ” ಎಂದು ಡಾ ಸ್ವಾಮಿನಾಥನ್ ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಿನ ಒಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಅಪಾಯಗಳು ತುಂಬಾ ಹೆಚ್ಚಿವೆ ಮತ್ತು ರೂಪಾಂತರವು ಯುಎಸ್ ಮತ್ತು ಯುಕೆಯಲ್ಲಿ ಡೆಲ್ಟಾವನ್ನು ಹಿಂದಿಕ್ಕಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಭಾರತವು ಕೇವಲ ಮೂರು ದಿನಗಳ ಹಿಂದೆ ಪ್ರಾರಂಭವಾದ ಹಠಾತ್ ಉಲ್ಬಣವನ್ನು ನೋಡುತ್ತಿದೆ ಎಂದು ಕೇಂದ್ರವು ಗುರುವಾರ ಗಮನಿಸಿದೆ. ಹಬ್ಬದ ಋತುವಿನಲ್ಲಿ ಒಮಿಕ್ರಾನ್ ಹರಡದಂತೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರವು, ದೇಶವು ಉಲ್ಬಣವನ್ನು ನಿಭಾಯಿಸಲು ಸಿದ್ಧವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಭಾರತದ ಉಲ್ಬಣವು ಒಮಿಕ್ರಾನ್ ನಿಂದಾಗಿರುವ ಜಾಗತಿಕ ಉಲ್ಬಣದ ಭಾಗವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕೊವಿಡ್ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದರೂ, ಸಾವಿನ ಪ್ರಮಾಣ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವಾಲಯ ಗಮನಿಸಿದೆ. ಇದು ಭಾರತದ ವ್ಯಾಪಕವಾದ ಲಸಿಕೆ ವ್ಯಾಪ್ತಿ ಅಥವಾ ಹೊಸ ರೂಪಾಂತರದ ಸ್ವರೂಪ ಅಥವಾ ಎರಡರ ಕಾರಣದಿಂದಾಗಿರಬಹುದು.
#WATCH Omicron infection numbers are high – occurring in both vaccinated& unvaccinated.But it appears that vaccines proving to be protective. The need for critical care doesn’t seem to be going up. It’s a good sign: WHO chief scientist Soumya Swaminathan(29.12)
(Source: Reuters) pic.twitter.com/GqHC3McnIU
— ANI (@ANI) December 29, 2021
ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗುರುತಿಸಲಾದ ಒಮಿಕ್ರಾನ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಮೊದಲ ಒಮಿಕ್ರಾನ್ ಪ್ರಕರಣಗಳು ಡಿಸೆಂಬರ್ 2 ರಂದು ಪತ್ತೆಯಾಗಿವೆ ಮತ್ತು ಒಂದು ತಿಂಗಳೊಳಗೆ, ಈ ರೂಪಾಂತರವು 1,000 ಕ್ಕೂ ಹೆಚ್ಚು ಜನರಿಗೆ ಹರಡಿತು. ಅವರ ಮಾದರಿಗಳನ್ನು ಜೀನೋಮ್ ಅನುಕ್ರಮ ಮಾಡಲಾಗಿದೆ. ಎಲ್ಲಾ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿಲ್ಲವಾದ್ದರಿಂದ ರೂಪಾಂತರದ ನಿಜವಾದ ಹರಡುವಿಕೆಯು ಇದಕ್ಕಿಂತ ಹೆಚ್ಚಿರಬಹುದು ಎಂದು ಅನೇಕ ತಜ್ಞರು ನಂಬಿದ್ದಾರೆ.
ಇದನ್ನೂ ಓದಿ: Omicron: ಒಮಿಕ್ರಾನ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ಕೇಸುಗಳ ಸಂಖ್ಯೆ ಕುಸಿತ