Jagannath Rath Yatra 2022: ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆಯ ಬಗ್ಗೆ ನಿಮಗೆ ಗೊತ್ತಿಲ್ಲದ 8 ಆಸಕ್ತಿದಾಯಕ ಸಂಗತಿಗಳು..!

ಪುರಿಯಲ್ಲಿ ಆಚರಿಸಲಾಗುವ ಜಗನ್ನಾಥ ರಥಯಾತ್ರೆಯು ಶುಕ್ರವಾರ, ಜುಲೈ 1 ರಂದು ಪ್ರಾರಂಭವಾಗುತ್ತದೆ. ಜಗನ್ನಾಥನ ವಿಗ್ರಹವನ್ನು ಸಾಗಿಸಲು ವಿಶೇಷ ರಥಗಳನ್ನು ಬಳಸಲಾಗುತ್ತದೆ.

Jagannath Rath Yatra 2022: ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆಯ ಬಗ್ಗೆ ನಿಮಗೆ ಗೊತ್ತಿಲ್ಲದ 8 ಆಸಕ್ತಿದಾಯಕ ಸಂಗತಿಗಳು..!
ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 01, 2022 | 9:05 AM

ಭುವನೇಶ್ವರ: ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆಯೂ (Jagannath Rath Yatra) ಒಡಿಶಾದ ಪುರಿಯಲ್ಲಿ ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ಒಡಿಶಾದ ಶ್ರೀ ಕ್ಷೇತ್ರ ಪುರಿಧಾಮದಲ್ಲಿ ರಥಯಾತ್ರೆಯನ್ನು ನಡೆಸಲಾಗುತ್ತದೆ. ಈ ರಥಯಾತ್ರೆಯ ಸಮಯದಲ್ಲಿ ಜಗನ್ನಾಥನು ತನ್ನ ಚಿಕ್ಕಮ್ಮ ಗುಂಡಿಚಾನ ಮನೆಯ ಕಡೆಗೆ ತನ್ನ ರಥವನ್ನು ಏರುತ್ತಾನೆ ಎಂದು ಹೇಳಲಾಗುತ್ತದೆ. ಜಗನ್ನಾಥನ ಕಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯ ರಥಗಳನ್ನು ಸಹ ನಮಗೆ ನೋಡಲು ಸಿಗುತ್ತವೆ.  ಶಂಖ, ಕಹಳೆ, ಡೊಳ್ಳು ಬಾರಿಸುವ ಮೂಲಕ ರಥಯಾತ್ರೆ ಆಚರಿಸುವ ಅಪಾರ ಜನಸಮೂಹವು ಮೂರು ರಥಗಳನ್ನು ಎಳೆಯುತ್ತಾರೆ. ಜಗನ್ನಾಥ ರಥಯಾತ್ರೆ ಕಣ್ತುಂಬಿಕೊಳ್ಳಲು ಜನಸಾಗರವೆ ಹರಿದು ಬರುತ್ತದೆ. ಈ ಋತುವಿನಲ್ಲಿ, ಪುರಿ ಜಗನ್ನಾಥ ರಥಯಾತ್ರೆಯು (ಶುಕ್ರವಾರ) ಜುಲೈ 1 ರಂದು ಆರಂಭವಾಗಿ ಜುಲೈ 9ಕ್ಕೆ ಮುಕ್ತಾಯಗೊಳ್ಳಲಿದೆ.

ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆಯ ಕೆಲವು ರೋಚಕ ಸಂಗತಿಗಳು ಹೀಗಿವೆ: 

  1. ಪ್ರಖ್ಯಾತ್ ಭಗವಾನ್​​ ಜಗನ್ನಾಥನ ರಥವನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದ್ದು, ಅದರ ನಿರ್ಮಾಣ ಹಂತದಲ್ಲಿ ಒಂದು ಮೊಳೆಯನ್ನು ಸಹ ಬಳಸಲಾಗುವುದಿಲ್ಲ.
  2. ರಥವನ್ನು ನಿರ್ಮಿಸಲು ದಶಪಲ್ಲ ಎಂಬ ನಿರ್ದಿಷ್ಟ ಅರಣ್ಯದಿಂದ ಮರವನ್ನು ಸಂಗ್ರಹಿಸಲಾಗುತ್ತದೆ. ಈ ರಥವನ್ನು  ಶ್ರೀಮಂದಿರದಲ್ಲಿ ಕೆಲಸ ಮಾಡುವ ಬಡಗಯಿಂದ ಮಾತ್ರ ತಯಾರಿಸಲಾಗುತ್ತದೆ.
  3. ಜಗನ್ನಾಥ ರಥವು 16 ಚಕ್ರಗಳನ್ನು ಹೊಂದಿದ್ದು, ಇದನ್ನು ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ನಿರ್ಮಿಸಲಾಗಿದೆ. ಭಗವಾನ್ ಜಗನ್ನಾಥನ ರಥದ ಗಾತ್ರವು ಇತರ ಎರಡು ರಥಗಳಿಗಿಂತ ಸ್ವಲ್ಪ ದೊಡ್ಡದಾಗಿದೆ. ಜಗನ್ನಾಥನ ರಥದೊಂದಿಗೆ ಬಲಭದ್ರ ಮತ್ತು ಸುಭದ್ರರ ರಥಗಳು ಇರುತ್ತವೆ.
  4. ಜಗನ್ನಾಥನ ರಥಗಳನ್ನ ನಂದಿಘೋಷ, ಬಲಭದ್ರ ಮತ್ತು ಸುಭದ್ರನ ರಥಗಳೆಂದು ಕರೆಯುತ್ತಾರೆ.
  5. ಜ್ಯೇಷ್ಠ ಪೂರ್ಣಿಮೆಯಂದು ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು 108 ಹೂಜಿ ನೀರಿನಲ್ಲಿ ತೊಳೆಯಲಾಗುತ್ತದೆ. ಈ ವಿಧಾನವನ್ನು ಸಹಸ್ತ್ರಧಾರ ಸ್ನಾನ ಎಂದು ಕರೆಯಲಾಗುತ್ತದೆ.
  6. ಈ ವರ್ಷ ಆಷಾಢ ಶುಕ್ಲ ದ್ವಿತೀಯ ತಿಥಿಯು ಜೂನ್ 30 ರಂದು ಬೆಳಿಗ್ಗೆ 10:49 ಕ್ಕೆ ಪ್ರಾರಂಭವಾಗಿ, ಜುಲೈ 1 ರಂದು ಮಧ್ಯಾಹ್ನ 1:09 ಕ್ಕೆ ಮುಕ್ತಾಯಗೊಳ್ಳಲಿದೆ. ಜುಲೈ 1ರ ಶುಕ್ರವಾರದಂದು ಈ ಉದಯ ತಿಥಿಯ ಜಗನ್ನಾಥ ರಥಯಾತ್ರೆಯು ಪ್ರಾರಂಭವಾಗುತ್ತದೆ.
  7. ಏಳು ದಿನಗಳವರೆಗೆ, ಜಗನ್ನಾಥನು ತನ್ನ ಚಿಕ್ಕಮ್ಮನ ಮನೆಯಲ್ಲಿರುತ್ತಾನೆಂದು ಪ್ರತೀತಿ. ನಂತರ ಎಂಟನೆಯ ದಿನವಾದ ಆಷಾಢ ಶುಕ್ಲ ದಶಮಿಯಂದು ರಥಗಳು ಹಿಂತಿರುಗುತ್ತವೆ. ಇದಕ್ಕೆ ಬಹುದ ಯಾತ್ರೆ ಎಂದು ಕರೆಯುತ್ತಾರೆ.
  8. ಪ್ರಸಾದವನ್ನು ಮಹಾಪ್ರಸಾದ್ ಎಂದು ಉಲ್ಲೇಖಿಸುವ ಏಕೈಕ ದೇವಾಲಯವೆಂದರೆ ಅದು ಜಗನ್ನಾಥ ದೇವಾಲಯ. ಜಗನ್ನಾಥ ದೇವಾಲಯದಲ್ಲಿರುವ ಅಡುಗೆ ಕೋಣೆಯನ್ನು ವಿಶ್ವದಲ್ಲೇ ಅತಿ ದೊಡ್ಡದು ಎಂದು ಭಾವಿಸಲಾಗುತ್ತದೆ. ಏಳು ಮರದ ಪಾತ್ರೆಗಳಲ್ಲಿ ಅಥವಾ ಮಣ್ಣಿನ ಪಾತ್ರೆಗಳಲ್ಲಿ, ಈ ಮಹಾಪ್ರಸಾದವನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: Jagannath Rath Yatra 2022: ಇಂದಿನಿಂದ ಪೂರಿ ಜಗನ್ನಾಥ ರಥಯಾತ್ರೆ: ಹರಿದು ಬರುತ್ತಿದೆ ಜನಸಾಗರ, 2 ವರ್ಷಗಳ ನಂತರ ತೇರು ಕಣ್ತುಂಬಿಕೊಳ್ಳುವ ಕಾತರ

Published On - 9:01 am, Fri, 1 July 22

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್