AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat: ಸುಮ್ಮನಿರು ಎಂದಿದ್ದಕ್ಕೆ ಜೈಲಿನೊಳಗೆ ಬಟ್ಟೆ ಬಿಚ್ಚಿ ನಿಂತ ವಿಕೃತ ಕೈದಿ; ಮಹಿಳಾ ಪೊಲೀಸ್​​ ಬಗ್ಗೆ ಅಶ್ಲೀಲ ಮಾತು

ಆರೋಪಿ ಜೈಲಿನಲ್ಲಿ ಇದ್ದರೂ ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದ. ಅದನ್ನು ನೋಡಿದ ಮಹಿಳಾ ಪೊಲೀಸ್​ ಸಿಬ್ಬಂದಿಯೊಬ್ಬರು ಸುಮ್ಮನೆ ಇರುವಂತೆ ಹೇಳಿದರು.

Gujarat: ಸುಮ್ಮನಿರು ಎಂದಿದ್ದಕ್ಕೆ ಜೈಲಿನೊಳಗೆ ಬಟ್ಟೆ ಬಿಚ್ಚಿ ನಿಂತ ವಿಕೃತ ಕೈದಿ; ಮಹಿಳಾ ಪೊಲೀಸ್​​ ಬಗ್ಗೆ ಅಶ್ಲೀಲ ಮಾತು
ಲಾಕಪ್ ಚಿಲಕ ತೆಗೆದು ಆರೋಪಿ ಪರಾರಿ! ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಘಟನೆ
TV9 Web
| Edited By: |

Updated on: Sep 12, 2021 | 12:22 PM

Share

ಸೂರತ್​: ಜೈಲಿನೊಳಗಿದ್ದ ಕೈದಿಯೊಬ್ಬ ಏಕಾಏಕಿ ತನ್ನ ಬಟ್ಟೆಯನ್ನೆಲ್ಲ ಕಳಚಿ ನಿಂತು, ಮಹಿಳಾ ಪೊಲೀಸ್ ಸಿಬ್ಬಂದಿಯ ಜತೆ ಅಶ್ಲೀಲವಾಗಿ ವರ್ತಿಸಿದ ಘಟನೆ ಗುಜರಾತ್​​ನ ಸೂರತ್​ನಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಸುರೇಶ್​ ನಂದ್​ವಾನಿ (55). ತಲೋದರಾ ಗ್ರಾಮದ ನಿವಾಸಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲೆ, ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಈತನನ್ನು ಶುಕ್ರವಾರ ಬಂಧಿಸಿ, ಸಲಾಬತ್ಪುರ ಪೊಲೀಸ್​ ಸ್ಟೇಶನ್​​ನಲ್ಲಿ ಜೈಲಿಗೆ ಹಾಕಲಾಗಿತ್ತು.  

ಆರೋಪಿ ಜೈಲಿನಲ್ಲಿ ಇದ್ದರೂ ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದ. ಅದನ್ನು ನೋಡಿದ ಮಹಿಳಾ ಪೊಲೀಸ್​ ಸಿಬ್ಬಂದಿಯೊಬ್ಬರು ಸುಮ್ಮನೆ ಇರುವಂತೆ ಹೇಳಿದರು. ಆದರೆ ಸುಮ್ಮನೆ ಇರುವುದನ್ನು ಬಿಟ್ಟು, ತನ್ನ ಬಟ್ಟೆಯನ್ನೆಲ್ಲ ಕಳಚಿ ಹಾಕಿದ. ಆ ಮಹಿಳಾ ಪೊಲೀಸ್​ ಸಿಬ್ಬಂದಿಯೆಡೆಗೆ ಅಶ್ಲೀಲವಾಗಿ ಕಾಮೆಂಟ್​ ಕೊಡಲು ಪ್ರಾರಂಭಿಸಿದೆ. ಅದನ್ನು ನೋಡಿದ ಸ್ಟೇಶನ್​ ಸಿಬ್ಬಂದಿ ಬಟ್ಟೆ ಹಾಕಿಕೊಳ್ಳುವಂತೆ ಅವನಿಗೆ ಹೇಳಿದರೂ ಕೇಳದೆ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದಾನೆ. ಆಗ ಠಾಣಾಧಿಕಾರಿ ಎಂ.ವಿ.ಕಿಕಾನಿ ಮತ್ತು ಸಿಬ್ಬಂದಿ ಲಾಕ್​ಅಪ್​ ಒಳಗೇ ಹೋಗಿ ಆರೋಪಿಯನ್ನು ಹೆದರಿಸಿದ್ದಾರೆ. ನಂತರ ಅವನು ಬಟ್ಟೆಯನ್ನು ಹಾಕಿಕೊಂಡಿದ್ದಾನೆ. ಬಳಿಕ ಸುರೇಶ್​ ನಂದ್​ವಾನಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್​​ ಕೂಡ ದಾಖಲಿಸಲಾಗಿದೆ.

ಉತ್ತರಪ್ರದೇಶದಲ್ಲೂ ಇಂಥದ್ದೇ ಘಟನೆ ಮಹಿಳಾ ಪೊಲೀಸ್​ ಸಿಬ್ಬಂದಿಗೆ ಯುವಕನೊಬ್ಬ ಅಶ್ಲೀಲ ಮಾತುಗಳಿಂದ ನಿಂದಿಸಿದ ಘಟನೆ ಉತ್ತರ ಪ್ರದೇಶದ ಲಖನೌನ ಅಲಿಗಂಜ್​​ನಲ್ಲಿ ಕೂಡ ನಡೆದಿದೆ. ಆತ ಅಶ್ಲೀಲ ಕಾಮೆಂಟ್​ ಮಾಡಿದ್ದಲ್ಲದೆ ಅವರಿಗೆ ಕಬ್ಬಿಣದ ರಾಡ್​ನಿಂದ ಹಲ್ಲೆಯನ್ನೂ ಮಾಡಿದ್ದಾರೆ. ಆ ಯುವಕನನ್ನೂ ಬಂಧಿಸಲಾಗಿದೆ.  ಈ ಪ್ರದೇಶದಲ್ಲಿ ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ವೊಬ್ಬರು ಯೂನಿಫಾರ್ಮ್​ನಲ್ಲಿ ಗಸ್ತು ತಿರುಗುತ್ತಿದ್ದರು. ಅವರನ್ನು ನೋಡಿದ ಯುವಕ ಮೊದಲು ಅಶ್ಲೀಲವಾಗಿ, ಕೆಟ್ಟ ಭಾಷೆಯಲ್ಲಿ ನಿಂದಿಸಿದ. ಆ ಪೊಲೀಸ್​ ಸಿಬ್ಬಂದಿ ಅದನ್ನು ವಿರೋಧಿಸಿ ಹೆದರಿಸಲು ಪ್ರಯತ್ನಿಸಿದರು. ಆದರೆ ಆತ ಕಬ್ಬಿಣದ ರಾಡ್​ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.  ತೀವ್ರವಾಗಿ ಗಾಯಗೊಂಡ ಮಹಿಳಾ ಕಾನ್​ಸ್ಟೆಬಲ್​​ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಾಷ್ಟ್ರೀಯ ಮಟ್ಟದ ಖೋ ಖೋ ಕ್ರೀಡಾಪಟುವಿನ ಶವ ರೈಲ್ವೆ ಹಳಿ ಬಳಿ ಪತ್ತೆ; ಇದು ಅತ್ಯಾಚಾರ ಎಂದ ಕುಟುಂಬ

Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?