PM Modi in WITT Summit 2026: ಕಾಂಗ್ರೆಸ್ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ಭಾರತ ದೇಶದ ಅತಿದೊಡ್ಡ ಸುದ್ದಿ ಜಾಲವಾದ ಟಿವಿ9 ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ (WITT Summit 2026) ಇಂದು ಆರಂಭವಾಗಿದೆ. ಇಂದು ಮತ್ತು ನಾಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಿದ್ದಾರೆ. ನಾಳೆಯೂ ಶೃಂಗಸಭೆ ನಡೆಯಲಿದ್ದು, ಅನೇಕ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ಸೆಲಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ.

ನವದೆಹಲಿ, ಮಾರ್ಚ್ 23: ದೆಹಲಿಯಲ್ಲಿ ಇಂದಿನಿಂದ ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ಆರಂಭವಾಗಿದೆ. ಈ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi in WITT Summit) ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮಾಡಿದ ಪಾಪದ ಹೊರೆಗಳನ್ನು ನಾವು ಹೊತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಕಾಂಗ್ರೆಸ್ ದೇಶದ ಬಗ್ಗೆ ಯೋಚಿಸುವ ಬದಲು ಅಧಿಕಾರದ ಬಗ್ಗೆ ಮಾತ್ರ ಚಿಂತಿಸುತ್ತಿತ್ತು. ಕಾಂಗ್ರೆಸ್ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡಿತು. ವಿದ್ಯುತ್ ಉಳಿಸಲು ಅವರು ತಪ್ಪು ನಿರ್ಧಾರ ತೆಗೆದುಕೊಂಡರು. ಆ ತೈಲ ಬಾಂಡ್‌ಗಳ ಹೊರೆಯನ್ನು ನಮ್ಮ ಸರ್ಕಾರ ಇನ್ನೂ ಹೊರುತ್ತಲೇ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಳೆದ 5ರಿಂದ 6 ವರ್ಷಗಳಲ್ಲಿ ನಮ್ಮ ಸರ್ಕಾರವು ಕಾಂಗ್ರೆಸ್ಸಿನ ಪಾಪದ ಹೊರೆಯನ್ನು ನಮ್ಮ ಸರ್ಕಾರ ಹೊತ್ತುಕೊಂಡಿದೆ. ತೈಲ ಬಾಂಡ್ಗಳಿಂದ ಸಾಕಷ್ಟು ಸಮಸ್ಯೆಯಾಯಿತು. 1,48,000 ಕೋಟಿ ರೂ. ಬದಲಿಗೆ, ನಾವು 3 ಲಕ್ಷ ಕೋಟಿಗೂ ಹೆಚ್ಚು ಪಾವತಿಸಬೇಕಾಯಿತು. ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿರುದ್ಧ ಹೇಳಿಕೆಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಅವರು ಈ ಬಗ್ಗೆ ಮಾತ್ರ ಮೌನವಾಗಿದ್ದಾರೆ” ಎಂದು ಮೋದಿ ಟೀಕಿಸಿದ್ದಾರೆ.
ಇದನ್ನೂ ಓದಿ: PM Modi Speech in WITT Live: ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಟಿವಿ9 ನೆಟ್‌ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “2004 ಮತ್ತು 2010ರ ನಡುವೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳು ಬಿಕ್ಕಟ್ಟಿನಲ್ಲಿದ್ದವು. ಆ ಸಮಯದಲ್ಲಿ, ಕಾಂಗ್ರೆಸ್ 1,48,000 ಕೋಟಿ ರೂ. ಮೌಲ್ಯದ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡಿತು. ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹಾಕುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ವತಃ ಹೇಳಿದ್ದಾರೆ. ತೈಲ ಬಾಂಡ್ ನಿರ್ಧಾರ ತಪ್ಪು ಎಂದು ತಿಳಿದಿದ್ದರೂ ಸಹ ಆ ನಿರ್ಧಾರ ತೆಗೆದುಕೊಳ್ಳಲಾಯಿತು. ರಿಮೋಟ್ ಕಂಟ್ರೋಲ್ ಮೂಲಕ ಮನಮೋಹನ್ ಸಿಂಗ್ ಅವರ ಹಿಂದೆ ನಿಂತು ಸರ್ಕಾರವನ್ನು ನಡೆಸುತ್ತಿದ್ದವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಈ ತಪ್ಪು ನಿರ್ಧಾರವನ್ನು ತೆಗೆದುಕೊಂಡರು.ಆ ಬಾಂಡ್‌ಗಳ ಮರುಪಾವತಿ 2020ರ ನಂತರವೂ ಬಾಕಿ ಇತ್ತು. ಕಳೆದ ಐದರಿಂದ ಆರು ವರ್ಷಗಳಲ್ಲಿ ನಮ್ಮ ಸರ್ಕಾರ ಕಾಂಗ್ರೆಸ್ ಸರ್ಕಾರದ ಪಾಪಗಳನ್ನು ತೊಳೆಯಲು ಕೆಲಸ ಮಾಡಿದೆ. ನೀವು ಹಿಂದೆಂದೂ ಅಂತಹ ಲಾಂಡ್ರಿಯನ್ನು ನೋಡಿಲ್ಲ. 148,000 ಕೋಟಿ ರೂ.ಗಳ ಬದಲಿಗೆ ಭಾರತ ದೇಶವು 3 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಪಾವತಿಸಬೇಕಾಯಿತು. ಏಕೆಂದರೆ ಅದಕ್ಕೆ ಬಡ್ಡಿಯನ್ನು ಕೂಡ ಸೇರಿಸಲಾಯಿತು. ಇದರರ್ಥ ನಾವು ಸುಮಾರು ಎರಡು ಪಟ್ಟು ಮೊತ್ತವನ್ನು ಪಾವತಿಸಬೇಕಾಯಿತು” ಎಂದು ಹೇಳಿದ್ದಾರೆ.
#WATCH | Delhi: Speaking at the TV9 Network Summit, PM Narendra Modi says, “Just remember what happened between 2004 and 2010. During the Congress government, petrol, diesel, and gas prices were in crisis, and Congress was concerned not about the country but about its own power.… pic.twitter.com/Jlgws3OnJe
— ANI (@ANI) March 23, 2026
“ಇಡೀ ಜಗತ್ತು ಇತ್ತೀಚೆಗೆ AI ಜಾಗತಿಕ ಶೃಂಗಸಭೆಯನ್ನು ವೀಕ್ಷಿಸುತ್ತಿರುವಾಗ, ಕಾಂಗ್ರೆಸ್ ಸದಸ್ಯರು ತಮ್ಮ ಬಟ್ಟೆಗಳನ್ನು ಬಿಚ್ಚಿ ಅಲ್ಲಿಗೆ ಆಗಮಿಸಿದ್ದನ್ನು ಇಡೀ ಜಗತ್ತು ನೋಡಿದೆ. ಈ ಟಿವಿ9 ಶೃಂಗಸಭೆಯು ಭಾರತ ಮತ್ತು ಭಾರತೀಯರ ಮೇಲಿನ ವಿಶ್ವದ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷದ ಏಕೈಕ ಗುರಿ ಅಭಿವೃದ್ಧಿಯನ್ನು ಯಾವುದೇ ರೀತಿಯಲ್ಲಿ ವಿರೋಧಿಸುವುದಾಗಿದೆ. ನಾನು ಗುಜರಾತ್‌ನಲ್ಲಿದ್ದಾಗ, ಅವರು ರಾಜ್ಯದ ಇಮೇಜ್ ಅನ್ನು ಪ್ರಶ್ನಿಸಿದರು. ದೇಶಾದ್ಯಂತ ಅಭಿವೃದ್ಧಿ ಉಂಟಾದಾಗ ಅವರು ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಲಾರಂಭಿಸಿದರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Mon, 23 March 26
