AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋರ್​ವೆಲ್ ಕೊರೆಯಲು ಹೋಗಿ ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ ಸೃಷ್ಟಿ

ಪುಣೆಯಲ್ಲಿ ಬೋರ್‌ವೆಲ್ ಕೊರೆಯುವಾಗ ಮೆಟ್ರೋ ಸುರಂಗ ಮಾರ್ಗದಲ್ಲಿ 6 ಇಂಚಿನ ರಂಧ್ರ ಸೃಷ್ಟಿಯಾದ ಘಟನೆ ವರದಿಯಾಗಿದೆ. ಈ ನಿರ್ಲಕ್ಷ್ಯದ ಕೃತ್ಯದಿಂದ ಮೆಟ್ರೋ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದ್ದು, ಗುತ್ತಿಗೆದಾರ ಮತ್ತು ಮನೆ ಮಾಲೀಕರ ವಿರುದ್ಧ ಖಡಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೆಟ್ರೋ ಮಾರ್ಗಗಳ ಬಳಿ ಕೊರೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೋರ್​ವೆಲ್ ಕೊರೆಯಲು ಹೋಗಿ ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ ಸೃಷ್ಟಿ
ಮೆಟ್ರೋImage Credit source: Railway PRO
ನಯನಾ ರಾಜೀವ್
|

Updated on:Mar 25, 2026 | 1:09 PM

Share

ಪುಣೆ, ಮಾರ್ಚ್​ 25: ಮೆಟ್ರೋ(Metro) ಮಾರ್ಗದ ಮೇಲೆ ಬೋರ್​ವೆಲ್ ಕೊರೆಯಲು ಹೋಗಿ ಕೆಳಗೆ ಸುರಂಗ ಮಾರ್ಗದಲ್ಲಿ 6 ಇಂಚುಗಳಷ್ಟು ರಂಧ್ರ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಖಡಕ್ ಪೊಲೀಸರು ಬೋರ್‌ವೆಲ್ ಗುತ್ತಿಗೆದಾರ ಮತ್ತು ಮನೆಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಾಜಿ ರಸ್ತೆಯ ಬಳಿ ಘಟನೆ ನಡೆದಿದೆ. ಶಿವಾಜಿನಗರ ಮತ್ತು ಸ್ವರ್ಗೇಟ್ ನಡುವಿನ ಭೂಗತ ಕಾರಿಡಾರ್‌ನ ಭಾಗವಾಗಿರುವ ಮಂಡೈ ಮೆಟ್ರೋ ನಿಲ್ದಾಣದ ಬಳಿಯ ಸುರಂಗ ರಚನೆಗೆ ಕೊರೆಯುವಿಕೆಯು ಹಾನಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ.

ಕೊರೆಯುವಿಕೆಯು 80 ರಿಂದ 100 ಅಡಿ ಆಳದಲ್ಲಿರುವ ಮೆಟ್ರೋ ಸುರಂಗದಲ್ಲಿ ಸುಮಾರು ಆರು ಇಂಚು ವ್ಯಾಸದ ರಂಧ್ರವನ್ನು ಸೃಷ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರೆಯುವಿಕೆಯು ಮೆಟ್ರೋ ಮಾರ್ಗದ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ, ಬೋರ್​ವೆಲ್ ಕೊರೆಯುವಿಕೆಯನ್ನು ಸ್ಥಗಿತಗೊಳಿಸಿದ್ದಾರೆ.ಮೆಟ್ರೋ ಅಧಿಕಾರಿ ಶಾಂತನು ಗೋರಟ ಅವರು ಮಾತನಾಡಿ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 ಮತ್ತು 324 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ, ಇದು ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ಕೃತ್ಯಗಳಿಗೆ ಇದು ಸಂಬಂಧಿಸಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಗುತ್ತಿಗೆದಾರ ಮತ್ತು ಮನೆಮಾಲೀಕ ಇಬ್ಬರೂ ಅಲ್ಲೇ ಕೆಲಗಡೆ ಮೆಟ್ರೋ ಸುರಂಗ ಮಾರ್ಗ ಇರುವ ಬಗ್ಗೆ ಅರಿತಿದ್ದರು, ಆದರೂ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುರಂಗ ಮಾರ್ಗಗಳ ಬಳಿ ಕೊರೆಯುವ ಬಗ್ಗೆ ಈಗಾಗಲೇ ಏಜೆನ್ಸಿಗಳು ಮತ್ತು ನಾಗರಿಕರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಮಹಾ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಸುರಂಗ ಮಾರ್ಗಗಳ ಉದ್ದಕ್ಕೂ ಬೋರ್‌ವೆಲ್‌ಗಳನ್ನು ಅಗೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ನಾವು ಅಂತರ್ಜಲ ಸಮೀಕ್ಷಾ ಸಂಸ್ಥೆ ಮತ್ತು ನಾಗರಿಕ ಆಡಳಿತಕ್ಕೆ ಸೂಚನೆ ನೀಡುತ್ತಿದ್ದೆವು. ನಮಗೆ 24 ಅಡಿ ಆಳದಲ್ಲಿ ನೀರಿನ ವರತೆ ಇರುವುದು ಗೊತ್ತಾಗಿತ್ತು, ಆದರೆ ಅದು ಮೆಟ್ರೋ ಸುರಂಗ ಮಾರ್ಗವನ್ನು ಕೊರೆಯಬಹುದು ಎನ್ನುವ ಊಹೆ ನಮಗಿರಲಿಲ್ಲ. ನಾವು ಅಪರಾಧಿಗಳಲ್ಲ. ಅಧಿಕಾರಿಗಳು ನಮ್ಮೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಬೇಕಿತ್ತು ಎಂದು ಮನೆ ಮಾಲೀಕ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:52 pm, Wed, 25 March 26

Follow Us
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ