AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಿಎಂಕೆ, ಎಐಎಡಿಎಂಕೆ, ಬಿಜೆಪಿ ನಡುವೆ ಗುಪ್ತ ಒಪ್ಪಂದ’; ತಮಿಳುನಾಡು ಸಿಎಂ ಜೋಸೆಫ್ ವಿಜಯ್ ವಾಗ್ದಾಳಿ

ತಮಿಳುನಾಡಿನಲ್ಲಿ ಮುಂಬರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಸತತ ವೀಕ್ಷಣೆ ಮತ್ತು ಟೀಕೆಗಳಿಗೆ ತಿರುಗೇಟು ನೀಡಿದ ಅವರು, ತಮ್ಮ ಸರ್ಕಾರದ ಆಡಳಿತ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹಾಗೂ ಡಿಎಂಕೆ ನಾಯಕತ್ವಕ್ಕೆ ನೇರ ಸವಾಲು ಹಾಕಿದ ಸಿಎಂ ವಿಜಯ್, ಡಿಎಂಕೆ ಆಡಳಿತಾವಧಿಯ ಹಳೆಯ ಭ್ರಷ್ಟಾಚಾರ ತನಿಖೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

‘ಡಿಎಂಕೆ, ಎಐಎಡಿಎಂಕೆ, ಬಿಜೆಪಿ ನಡುವೆ ಗುಪ್ತ ಒಪ್ಪಂದ’; ತಮಿಳುನಾಡು ಸಿಎಂ ಜೋಸೆಫ್ ವಿಜಯ್ ವಾಗ್ದಾಳಿ
ಸಿಎಂ ವಿಜಯ್Image Credit source: PTI
ಸುಷ್ಮಾ ಚಕ್ರೆ
|

Updated on: Sep 25, 2026 | 7:58 PM

Share

ಚೆನ್ನೈ, ಸೆಪ್ಟೆಂಬರ್ 25: ತಮಿಳುನಾಡಿನ ಮಧುರಾಂತಕಂ ಉಪಚುನಾವಣಾ ಕ್ಷೇತ್ರದಲ್ಲಿ ತಮ್ಮ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ನಡುವೆ ರಹಸ್ಯ ಒಪ್ಪಂದ ಮತ್ತು ಒಳಸಂಚು ಇದೆ ಎಂದು ಆರೋಪಿಸಿದ ಅವರು, ದುಷ್ಟ ಶಕ್ತಿಗಳ ವಿರುದ್ಧ ಟಿವಿಕೆ ಪಕ್ಷಕ್ಕೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸ್ಟಾಲಿನ್ ಹಾಗೂ ಎಐಎಡಿಎಂಕೆ ಮೌನಕ್ಕೆ ಟೀಕೆ:

“ಆ ಡೀಲ್ ಏನು ಎಂಬುದನ್ನು ಇಡೀ ತಮಿಳುನಾಡು ಕೇಳುತ್ತಿದೆ. ಸ್ಟಾಲಿನ್ ಸರ್, ಬಾಯಿ ಬಿಡಿ! ನಿಮ್ಮೊಂದಿಗೆ ಕೈಜೋಡಿಸಿರುವ ಎಐಎಡಿಎಂಕೆ ಕೂಡ ಈ ವಿಷಯದಲ್ಲಿ ಬಾಯಿ ಬಿಡುತ್ತಿಲ್ಲ. ಈ ವಿಚಾರದಲ್ಲೂ ನಿಮ್ಮ ನಡುವೆ ಒಳಸಂಚು ಹಾಗೂ ಗುಪ್ತ ಒಪ್ಪಂದವಿದೆಯೇ?” ಎಂದು ಸಿಎಂ ವಿಜಯ್ ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸ್ಟಾಲಿನ್ ಸರ್ಕಾರದ ಉಪಾಹಾರ ಯೋಜನೆಗೆ ಕಾಮರಾಜ್​ ಹೆಸರು: 8ನೇ ತರಗತಿವರೆಗೆ ವಿಸ್ತರಿಸಿದ ಸಿಎಂ ವಿಜಯ್ ಸರ್ಕಾರ

ಗ್ರಾನೈಟ್ ಉದ್ಯಮಿ ಆರ್‌. ವೀರಮಣಿ ಎಂಬಾತ ಬಾಲಕಿಯರ ಮೇಲೆ ನಡೆಸಿದ ಭೀಕರ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಶಾಮೀಲಾಗಿವೆ ಎಂದು ವಿಜಯ್ ಆರೋಪಿಸಿದ್ದಾರೆ. ಈ ಉದ್ಯಮಿ ವರ್ಷಗಳಿಂದ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದರೂ, ಹಿಂದಿನ ಡಿಎಂಕೆ ಆಡಳಿತಾವಧಿಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ತುಳಿದು, ಇಡೀ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂದಿದ್ದಾರೆ.

“ನನ್ನ ಹೆತ್ತ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗಲೂ ನಾನು ಸಹಿಸಿಕೊಂಡಿದ್ದೆ. ಆದರೆ, ತಮಿಳುನಾಡಿನ ನನ್ನ ಅಕ್ಕ-ತಂಗಿಯರು ಮತ್ತು ತಾಯಂದಿರ ಬಗ್ಗೆ ಅಸಭ್ಯವಾಗಿ ಮಾತನಾಡಿದರೆ ಅದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್; ಫ್ಯಾನ್ಸ್ ಫಿದಾ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ವಿದ್ಯುತ್ ಸೌಲಭ್ಯ ಯೋಜನೆಗಳನ್ನು ಡಿಎಂಕೆ ಆಡಳಿತದ ಇತಿಹಾಸಕ್ಕೆ ಹೋಲಿಸಿದ ಅವರು, ಜನಸಾಮಾನ್ಯರಿಗೆ ತಲುಪಿಸಿದ ನೈಜ ಸೇವೆಗಳನ್ನು ಎತ್ತಿಹಿಡಿದರು. “ಜೀವನ ಎಂಬುದು ಒಂದು ಚಕ್ರ. ತಮಿಳುನಾಡಿನಲ್ಲಿ ಮುಂಬರುವ ಚುನಾವಣೆ ಮತ್ತು ರಾಜಕೀಯ ಸ್ಪರ್ಧೆಯು ನಮ್ಮ ತಮಿಳಗ ವೆಟ್ರಿ ಕಳಗಂ ಮತ್ತು ಡಿಎಂಕೆ ನಡುವೆ ಮಾತ್ರ ನೇರವಾಗಿ ನಡೆಯಲಿದೆ” ಎಂದು ಸಿಎಂ ವಿಜಯ್ ಘೋಷಿಸಿದ್ದಾರೆ.

ಚೆನ್ನೈನ ತಿರುವನ್ಮಿಯೂರ್‌ನ ಗಾಂಧಿ ಗ್ರಾಮ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಸ್ತರಿತ ‘ಪೆರುಂತಲೈವರ್ ಕಾಮರಾಜರ್ ಉಚಿತ ಉಪಹಾರ ಯೋಜನೆ’ಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಚಾಲನೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಿಎಂ ವಿಜಯ್, ಸ್ವತಃ ಮಕ್ಕಳಿಗೆ ಊಟ ಬಡಿಸಿ, ಅವರೊಂದಿಗೆ ಕುಳಿತು ಉಪಹಾರ ಸೇವಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More