ಕಾಂಗ್ರೆಸ್​ಗೆ ಮರುಜೀವ ನೀಡಿದ ದಕ್ಷಿಣ ಭಾರತ; ಗಾಂಧಿ ಕುಟುಂಬದ ಪಾಲಿನ ಸಂಜೀವಿನಿ ಕರ್ನಾಟಕ, ಕೇರಳ

ಗಾಂಧಿ ಕುಟುಂಬದ ಪಾಲಿಗೆ ದಕ್ಷಿಣ ಭಾರತ ಅಕ್ಷರಶಃ ಸಂಜೀವಿನಿಯಾಗಿದೆ. ರಾಜಕೀಯದಲ್ಲಿ ಸಂಕಷ್ಟ ಎದುರಾದಾಗಲೆಲ್ಲ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿಕೊಂಡಿದ್ದು ದಕ್ಷಿಣ ಭಾರತವನ್ನೇ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕರ್ನಾಟಕದಿಂದ ರಾಜಕೀಯ ಮರುಜೀವ ಪಡೆದರೆ ರಾಹುಲ್ ಗಾಂಧಿಗೆ ಕೇರಳ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು. ಇದೀಗ ಪ್ರಿಯಾಂಕಾ ಗಾಂಧಿ ಕೂಡ ದಕ್ಷಿಣ ಭಾರತದ ರಾಜ್ಯವಾದ ಕೇರಳದಲ್ಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್​ಗೆ ಮರುಜೀವ ನೀಡಿದ ದಕ್ಷಿಣ ಭಾರತ; ಗಾಂಧಿ ಕುಟುಂಬದ ಪಾಲಿನ ಸಂಜೀವಿನಿ ಕರ್ನಾಟಕ, ಕೇರಳ
ಇಂದಿರಾ ಗಾಂಧಿ- ಸೋನಿಯಾ ಗಾಂಧಿ- ರಾಹುಲ್ ಗಾಂಧಿ- ಪ್ರಿಯಾಂಕಾ ಗಾಂಧಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 24, 2024 | 9:23 AM

ಬೆಂಗಳೂರು: ರಾಮಾಯಣದ ಲಂಕಾ ಯುದ್ಧದ ಸಮಯದಲ್ಲಿ ರಾವಣನ ಮಗ ಮೇಘನಾದನ ದಿವ್ಯ ಆಯುಧದಿಂದ ಮೂರ್ಛೆ ಹೋದ ಲಕ್ಷ್ಮಣನ ಪ್ರಾಣವನ್ನು ಉಳಿಸಲು ಹನುಮಂತ ಉತ್ತರದ ಹಿಮಾಲಯದಿಂದ ದಕ್ಷಿಣದ ಲಂಕೆಗೆ ಸಂಜೀವಿನಿ ಗಿಡಮೂಲಿಕೆಯನ್ನು ತಂದಿದ್ದನೆಂಬ ಕತೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಇದಾದ ನಂತರವಷ್ಟೇ ಲಕ್ಷ್ಮಣನಿಗೆ ಎರಡನೇ ಬದುಕು ಸಿಕ್ಕಿತು. ಆದರೆ, ಭಾರತದ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಬಿಕ್ಕಟ್ಟು ಹೆಚ್ಚಾದಾಗಲೆಲ್ಲಾ ಅದಕ್ಕೆ ಪರಿಹಾರ ಸಿಕ್ಕಿದ್ದು ಉತ್ತರ ಭಾರತದಿಂದಲ್ಲ. ಅದರ ಬದಲು ದಕ್ಷಿಣ ಭಾರತದಿಂದ ಕಾಂಗ್ರೆಸ್​ನ ಗಾಂಧಿ ಕುಟುಂಬಕ್ಕೆ ಹಲವು ಬಾರಿ ರಾಜಕೀಯದಲ್ಲಿ ಮರುಜೀವ ಸಿಕ್ಕಿದೆ. ಕಾಂಗ್ರೆಸ್‌ ಇತಿಹಾಸದಲ್ಲಿ ದಕ್ಷಿಣ ಭಾರತ ಬಹಳ ಮುಖ್ಯ ಪಾತ್ರ ವಹಿಸಿದೆ. ರಾಜಕೀಯ ಸಂಕಷ್ಟಕ್ಕೆ ಸಿಲುಕಿದ್ದ ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರೆಗೆ ಎಲ್ಲರಿಗೂ ಹೊಸ ಶಕ್ತಿ ನೀಡಿರುವ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳ ಗಾಂಧಿ ಕುಟುಂಬದ ರಾಜಕೀಯ ಪ್ರತಿಷ್ಠೆ ಉಳಿಸುವ ಕೆಲಸ ಮಾಡಿದೆ. ಇದೀಗ ಪ್ರಿಯಾಂಕಾ ಗಾಂಧಿ ಕೂಡ ದಕ್ಷಿಣ ಭಾರತದಿಂದಲೇ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ದಕ್ಷಿಣ ಭಾರತ ಮೊದಲಿನಿಂದಲೂ ಕಾಂಗ್ರೆಸ್‌ಗೆ ಸುರಕ್ಷಿತ ಮಾರ್ಗವಾಗಿದೆ. 2 ಸ್ಥಾನಗಳಲ್ಲಿ ಸಂಸದರಾಗಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ರಾಜೀನಾಮೆಯಿಂದ ವಯನಾಡ್ ಕ್ಷೇತ್ರ ತೆರವಾಗಿತ್ತು. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ದಕ್ಷಿಣ ಭಾರತದ ವಯನಾಡ್ ಕ್ಷೇತ್ರದಿಂದ ಚುನಾವಣಾ ಪಾದಾರ್ಪಣೆ ಮಾಡಿದ್ದಾರೆ. ವಯನಾಡ್ ಸ್ಥಾನವನ್ನು ಬಿಟ್ಟುಕೊಟ್ಟ ರಾಹುಲ್ ಗಾಂಧಿ ಅಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ವ್ಯಕ್ತಪಡಿಸಿದ್ದರು. ಅವರು ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವಾಗ ಅವರಿಗೆ ಶಕ್ತಿ ನೀಡಲು ವಯನಾಡಿನ ಜನರು ಶ್ರಮಿಸಿದ್ದರು ಎಂದು ಅವರು ಹೇಳಿದರು. ಆದರೆ, ಗಾಂಧಿ ಕುಟುಂಬಕ್ಕೆ ಮತ್ತು ಕಾಂಗ್ರೆಸ್‌ಗೆ ದಕ್ಷಿಣ ಭಾರತ ರಾಜಕೀಯ ಜೀವದಾನ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಸೋನಿಯಾ ಗಾಂಧಿ, ಇಂದಿರಾ ಗಾಂಧಿ ಕೂಡ ದಕ್ಷಿಣ ಭಾರತವನ್ನೇ ತಮ್ಮ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದ್ದರು.

1977ರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿತ್ತು. ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್‌ ನುಚ್ಚುನೂರಾಗಿತ್ತು. ಆದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಸಿದ್ಧಿಯನ್ನು ಉಳಿಸಿಕೊಂಡಿತ್ತು. 1977ರ ಚುನಾವಣೆಯಲ್ಲಿ ಜನತಾ ಪಕ್ಷ ಶೇ.41.32 ಮತಗಳೊಂದಿಗೆ 295 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಶೇ.34.52 ಮತಗಳೊಂದಿಗೆ 154 ಸ್ಥಾನಗಳನ್ನು ಗೆದ್ದುಕೊಂಡಿತು. ಒಟ್ಟು 154 ಸ್ಥಾನಗಳ ಪೈಕಿ ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಕಾಂಗ್ರೆಸ್ 92 ಸ್ಥಾನಗಳನ್ನು ಗೆದ್ದಿತ್ತು.

ಇಂದಿರಾ ಗಾಂಧಿ ಅದೃಷ್ಟ ಬದಲಾಯಿಸಿದ ಚಿಕ್ಕಮಗಳೂರು:

ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಗೆಲ್ಲಲು ಕಷ್ಟವಾದಾಗ, ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರವು ಅವರ ರಾಜಕೀಯ ಜೀವನಕ್ಕೆ ಜೀವಸೆಲೆಯಾಗಿತ್ತು. ಸ್ವತಃ ಇಂದಿರಾ ಗಾಂಧಿಯವರು ಸಮಾಜವಾದಿ ನಾಯಕ ರಾಜ್ ನಾರಾಯಣ್ ವಿರುದ್ಧ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ ಇಂದಿರಾಗಾಂಧಿಯವರಿಗೆ ಮಾತ್ರವಲ್ಲದೆ ಕಾಂಗ್ರೆಸ್ಸಿಗೂ ರಾಜಕೀಯ ಭದ್ರಕೋಟೆಯಾಗಿ ಪರಿಣಮಿಸಿತು. 1978ರಲ್ಲಿ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಿದರು. ನಂತರ 1980ರಲ್ಲಿ ಅವರು ಅಧಿಕಾರಕ್ಕೆ ಮರಳಿದರು.

ಇದನ್ನೂ ಓದಿ: ಅಧಿಕಾರದಲ್ಲಿರುವವರು ದ್ವೇಷ ಹರಡುತ್ತಿದ್ದಾರೆ; ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರಿನಿಂದ ಹಾಲಿ ಸಂಸದ ಡಿ.ಬಿ.ಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದಿರಾಗಾಂಧಿ ಕಾಲಿಟ್ಟಾಗ ಅಂದಿನ ಸಿಎಂ ವೀರೇಂದ್ರ ಪಾಟೀಲರನ್ನು ಎದುರಿಸುವುದು ಅವರ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಅವರು ಬಿರುಸಿನ ಪ್ರಚಾರ ನಡೆಸಿ ಇಡೀ ರಾಜಕೀಯ ವಾತಾವರಣವನ್ನೇ ಬದಲಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ದೇವರಾಜ್ ಅರಸ್ ಇಂದಿರಾಗಾಂಧಿ ಅವರಿಗೆ ಘೋಷಣೆ ಕೂಗಿದರು. ಇದು ಚಿಕ್ಕಮಂಗಳೂರಿನಲ್ಲಿ ಪ್ರತಿಧ್ವನಿಸಿತು. ಇಂದಿರಾಗಾಂಧಿ 77 ಸಾವಿರ ಮತಗಳ ಭಾರೀ ಅಂತರದಿಂದ ಗೆದ್ದರು.

3 ವರ್ಷಗಳ ನಂತರ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್‌ನಲ್ಲಿ ಉತ್ತಮ ರಾಜಕೀಯ ವಾತಾವರಣ ನಿರ್ಮಾಣವಾಯಿತು. 1980ರಲ್ಲಿ ಇಂದಿರಾ ಗಾಂಧಿ ಮತ್ತೊಮ್ಮೆ ದೇಶದ ಪ್ರಧಾನಿಯಾದರು. ಇದಾದ ನಂತರ ಇಂದಿರಾ ಗಾಂಧಿಯವರು ದಕ್ಷಿಣ ಭಾರತವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಇಂದಿರಾ ಗಾಂಧಿಯವರು 1980ರಲ್ಲಿ ತೆಲಂಗಾಣದ ಮೇದಕ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಸ್ಥಾನಗಳಿಂದ ಸ್ಪರ್ಧಿಸಿದರು. ಇಂದಿರಾ ಎರಡೂ ಲೋಕಸಭಾ ಸ್ಥಾನಗಳನ್ನು ಗೆದ್ದರು. ಆದರೆ ಅವರು ರಾಯ್ ಬರೇಲಿಗೆ ರಾಜೀನಾಮೆ ನೀಡಿ ಮೇದಕ್ ಸ್ಥಾನವನ್ನು ತಾವೇ ಇಟ್ಟುಕೊಂಡಿದ್ದರು. ಇದರಿಂದ ಇಂದಿರಾಗಾಂಧಿಯವರ ದಕ್ಷಿಣದ ಒಲವು ತಿಳಿಯುತ್ತದೆ.

ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಪಕ್ಷದತ್ತ ಮುಖ ಮಾಡಿದರು. ಉತ್ತರದಿಂದ ದಕ್ಷಿಣದವರೆಗೆ ಎಲ್ಲರೂ ಅವರನ್ನು ಬೆಂಬಲಿಸಿದರು. ಆದರೆ 1989ರಲ್ಲಿ ಉತ್ತರ ಭಾರತದಿಂದ ಕಾಂಗ್ರೆಸ್‌ ನಿರ್ನಾಮವಾಯಿತು. ಆದರೆ ದಕ್ಷಿಣ ತನ್ನ ಘನತೆಯನ್ನು ಉಳಿಸಿಕೊಂಡಿದೆ. ನಂತರ 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿತು. ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಎದುರಾಗಿತ್ತು. ಸೋನಿಯಾ ಗಾಂಧಿ ಆರಂಭದಲ್ಲಿ ಪಕ್ಷದ ನೇತೃತ್ವ ವಹಿಸಲು ನಿರಾಕರಿಸಿದರು. ಆದರೆ, ಎಲ್ಲರ ಒತ್ತಾಯದ ನಂತರ ಪಕ್ಷದ ಅಧ್ಯಕ್ಷರಾದರು. ಆಗ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಇದನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಆ ನಂತರ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಬಲ ಸಿಕ್ಕಿದ್ದು ದಕ್ಷಿಣ ಭಾರತದಿಂದ.

ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ:

1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳ್ಳಾರಿಯಲ್ಲಿ ಅವರ ಎದುರಾಳಿಯಾಗಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಕೇವಲ 30 ದಿನಗಳಲ್ಲಿ ಕನ್ನಡ ಕಲಿತರು. ಸೋನಿಯಾ ಗಾಂಧಿ ಅವರು ತಮ್ಮ ಸಾರ್ವಜನಿಕ ಸಭೆಗಳಲ್ಲಿ ಹಿಂದಿಯಲ್ಲಿ ಮಾತನಾಡುವಾಗ ಸುಷ್ಮಾ ಸ್ವರಾಜ್ ಕನ್ನಡದಲ್ಲಿ ಮಾತನಾಡಿ ಜನರ ಮನಸು ಗೆದ್ದರು. ಸೋನಿಯಾ ಗಾಂಧಿಗೆ ಇದು ಮೊದಲ ಚುನಾವಣೆಯಾದರೂ ಸುಷ್ಮಾ ಸ್ವರಾಜ್ ಪರವಾದ ಅಲೆ ಕಾಂಗ್ರೆಸ್​ಗೆ ಆತಂಕ ಹೆಚ್ಚಿಸಿತು. ಆದರೆ, ಆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ವಿರುದ್ಧ ಸೋನಿಯಾ ಗಾಂಧಿ ಗೆಲುವು ಸಾಧಿಸಿದರು. ಬಳ್ಳಾರಿ ಕ್ಷೇತ್ರವು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸುಷ್ಮಾ ಸ್ವರಾಜ್ ನಿಮ್ಮ ಮನೆ ಮಗಳು, ಸೋನಿಯಾ ಗಾಂಧಿ ವಿದೇಶಿ ಸೊಸೆ ಎಂದು ಜನರ ಬಳಿ ಹೇಳಿಕೊಂಡು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿದರೂ ಸೋನಿಯಾ ಗಾಂಧಿ ಗೆಲ್ಲುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್ ಸೋಲು; ರಾಹುಲ್ ಗಾಂಧಿ ಮನೆಗೆ 1 ಕೆಜಿ ಜಿಲೇಬಿ ಕಳುಹಿಸಿದ ಬಿಜೆಪಿ

ದಕ್ಷಿಣದ ರಾಜಕೀಯ ಕಾಂಗ್ರೆಸ್ ಅನ್ನು ರಾಜಕೀಯ ಎತ್ತರಕ್ಕೆ ಕೊಂಡೊಯ್ದಿತು. 1996ರ ನಂತರ ಸೋನಿಯಾ ಗಾಂಧಿಯವರು 10 ವರ್ಷಗಳ ಕಾಲ ಅಧಿಕಾರದಿಂದ ರಾಜಕೀಯ ವನವಾಸವನ್ನು ಎದುರಿಸಿದ ನಂತರ 2004ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದರು. ದಕ್ಷಿಣದ ರಾಜ್ಯಗಳು, ವಿಶೇಷವಾಗಿ ಆಂಧ್ರಪ್ರದೇಶ ಕೇಂದ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2004 ಮತ್ತು 2009ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆ ಗೌರವ ಸೋನಿಯಾ ಗಾಂಧಿ ಅವರಿಗೆ ಸಲ್ಲುತ್ತದೆ.

2014ರಲ್ಲಿ ದೇಶದ ರಾಜಕೀಯ ಮತ್ತೊಂದು ತಿರುವು ಪಡೆದು ಉತ್ತರ ಭಾರತದಿಂದ ಕಾಂಗ್ರೆಸ್ ನಿರ್ನಾಮವಾಯಿತು. ನರೇಂದ್ರ ಮೋದಿ ಆಡಳಿತದಲ್ಲಿ ಕಾಂಗ್ರೆಸ್‌ನ ರಾಜಕೀಯ ಗ್ರಾಫ್ ದುರ್ಬಲಗೊಂಡಾಗ ಗಾಂಧಿ ಕುಟುಂಬದ ಕೋಟೆಯೂ ಕುಸಿಯಿತು. 2014ರಲ್ಲಿ ಕಾಂಗ್ರೆಸ್ 50 ಸ್ಥಾನಗಳಿಗಿಂತ ಕೆಳಗಿಳಿದಿತ್ತು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಇದಾದ ಬಳಿಕ 2019ರಲ್ಲಿ ಉತ್ತರ ಭಾರತದಿಂದ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿತ್ತು. ಅಮೇಥಿ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು. ಆದರೆ, ರಾಹುಲ್ ಗಾಂಧಿ ಅವರು ಅಮೇಥಿಯೊಂದಿಗೆ ವಯನಾಡ್‌ನಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದರು.

ವಯನಾಡಿನಲ್ಲಿ ರಾಹುಲ್ ಗಾಂಧಿ ರಾಜಕೀಯ:

ಅಮೇಥಿಯಿಂದ ರಾಹುಲ್ ಗಾಂಧಿ ಸೋತರೂ ವಯನಾಡ್ ಅವರನ್ನು ಉಳಿಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ ಬೆಳೆಯಲು ದಾರಿ ತೋರಿಸಿತು. ಕೇರಳದ ವಯನಾಡಿನಿಂದ ಚುನಾವಣೆಗೆ ಸ್ಪರ್ಧಿಸುವ ಚಾರಿತ್ರಿಕ ದೃಷ್ಟಿಕೋನದಿಂದ ರಾಹುಲ್ ರಾಜಕಾರಣವನ್ನು ಅವಲೋಕಿಸಿದರೆ ಮೋದಿ ಆಡಳಿತದಲ್ಲಿ ಮುಳುಗಿದ್ದ ಕಾಂಗ್ರೆಸ್ ರಾಜಕಾರಣ ವಯನಾಡಿನಿಂದಾಗಿ ಮತ್ತೆ ಮರುಜೀವ ಪಡೆದಿತ್ತು. 2019ರಲ್ಲಿ ಕೇರಳದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿತು ಮತ್ತು ಪಕ್ಷದ ಸ್ಥಾನಗಳು 50ರ ಗಡಿ ದಾಟಿತು. ರಾಹುಲ್ ಗಾಂಧಿ 2024 ರಲ್ಲಿ ರಾಯ್ ಬರೇಲಿ ಮತ್ತು ವಯನಾಡ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿತು, ಇದರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪ್ರಮುಖ ಪಾತ್ರ ವಹಿಸಿವೆ. ಕರ್ನಾಟಕ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ರಾಹುಲ್ ಗಾಂಧಿ 2019 ಮತ್ತು 2024ರ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದು ಕಾಂಗ್ರೆಸ್‌ಗೆ ಲಾಭ ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣದಲ್ಲಿ ತನ್ನ ಹಿಡಿತವನ್ನು ಯಾವುದೇ ಸಂದರ್ಭದಲ್ಲೂ ಸಡಿಲಿಸಬಾರದು ಎಂದು ಕಾಂಗ್ರೆಸ್ ಭಾವಿಸಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಿಂದ ಹಿಂದೆ ಸರಿದ ನಂತರ, ಕೇರಳ ಮತ್ತು ದಕ್ಷಿಣವನ್ನು ಒಟ್ಟಿಗೆ ಇಡಲು ಪ್ರಿಯಾಂಕಾ ಗಾಂಧಿ ಅವರನ್ನು ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ.

ಬಿಜೆಪಿಯ ರಾಜಕೀಯ ಬೇರುಗಳು ಉತ್ತರ ಭಾರತದಲ್ಲಿ ಬಹಳ ಪ್ರಬಲವಾಗಿವೆ. ಆದರೆ ದಕ್ಷಿಣ ಭಾರತ ಕಾಂಗ್ರೆಸ್‌ಗೆ ಸುರಕ್ಷಿತ ಮಾರ್ಗವಾಗಿದೆ. ಕಳೆದ ಬಾರಿಯೂ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಗೆದ್ದಿದ್ದರು. ತಮ್ಮ ಇಮೇಜ್ ಬದಲಿಸಲು, ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದರು. ಅದರ ನಂತರ ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಲಾಭವಾಯಿತು. ಈ ಬಾರಿ ರಾಹುಲ್ ಗಾಂಧಿ ಉತ್ತರ ಕ್ಷೇತ್ರದಿಂದ ಗೆದ್ದು ತನ್ನೊಂದಿಗೆ ಉಳಿಸಿಕೊಳ್ಳುತ್ತಿರುವಾಗ, ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತವನ್ನು ಕೇವಲ ಆಯ್ಕೆಯಾಗಿ ಇಟ್ಟುಕೊಂಡಿದೆ ಎಂಬ ಸಂದೇಶ ರವಾನೆಯಾಗಬಾರದು ಎಂಬ ಕಾರಣಕ್ಕೆ ಪ್ರಿಯಾಂಕಾ ಗಾಂಧಿಯನ್ನು ವಯನಾಡಿನಿಂದ ಕಣಕ್ಕಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ